For Quick Alerts
ALLOW NOTIFICATIONS  
For Daily Alerts

ವಾವ್! ಹಸಿವನ್ನು ನೀಗಿಸುವ ಮಸಾಲ ದೋಸೆ ರೆಸಿಪಿ!

|

ಹೋಟೆಲ್‌ಗೆ ಹೋದಾಗಲೆಲ್ಲ ನಮಗೆ ತಕ್ಷಣ ನೆನಪಾಗುವುದು ಮಸಾಲ ದೋಸೆ, ಏಕೆಂದರೆ ದೋಸೆ ವೆರೈಟಿಗಳಲ್ಲಿ ಇದು ಹೆಚ್ಚು ಜನಪ್ರಿಯವಾದುದರಿಂದ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಸ್ಟಫ್ ಮಾಡಿದ ಆಲೂಗಡ್ಡೆ ಇದಕ್ಕೆ ಉತ್ತಮ ಕಾಂಬಿನೇಶನ್. ಚಟ್ನಿ ಹಾಗೂ ಸಾಂಬಾರ್ ಜೊತೆ ಕೂಡ ಈ ದೋಸೆಯನ್ನು ಸೇವಿಸಲು ಇನ್ನಷ್ಟು ರುಚಿಕರವಾಗಿರುತ್ತದೆ.

ಮಸಾಲ ದೋಸೆಯನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಖಂಡಿತವಾಗಿಯೂ ಅಡುಗೆಯನ್ನು ಇಷ್ಟಪಡುವ ಪ್ರತಿಯೊಬ್ಬರೂ ಕೂಡ ದೋಸೆಯನ್ನು ಬಹಳಷ್ಟು ಇಷ್ಟಪಡುತ್ತಾರೆ. ಹಾಗಾದರೆ ಇನ್ನೇಕೆ ತಡ? ಬನ್ನಿ ಮಸಾಲ ದೋಸೆ ತಯಾರಿಸುವುದು ಹೇಗೆಂದು ಬೋಲ್ಡ್ ಸ್ಕೈ ನಿಮಗಾಗಿ ಹೇಳಿಕೊಡುತ್ತಿದೆ.

Tasty Masala dosa recipe

ನೀವೂ ಪ್ರಯತ್ನಿಸಿ ಗರಿಗರಿಯಾದ 10 ವಿಧದ ದೋಸೆ

ಬೇಕಾಗುವ ಸಾಮಾಗ್ರಿಗಳು:
*ಉದ್ದಿನ ಬೇಳೆ - 1/4 ಕಪ್
*ಅಕ್ಕಿ - 1 ಕಪ್
*ರುಚಿಗೆ ತಕ್ಕಷ್ಟು ಉಪ್ಪು
*ಬಟಾಟೆ - 3
*ಈರುಳ್ಳಿ- 2
*ಬೆಳ್ಳುಳ್ಳಿ- 1 ಸ್ಪೂನ್ (ಕತ್ತರಿಸಲಾಗಿರುವ)
*ಶುಂಠಿ - 1 ಸ್ಪೂನ್ (ಕತ್ತರಿಸಲಾಗಿರುವ)
* ಕೊತ್ತಂಬರಿ ಸೊಪ್ಪು - 1 ಸ್ಪೂನ್ (ಕತ್ತರಿಸಲಾಗಿರುವ)
* ಹಸಿ ಮೆಣಸು - 2
* ಸಾಸಿವೆ ಕಾಳು - 1 ಸ್ಪೂನ್
*ಟೊಮೆಟೊ - 2 (ಕತ್ತರಿಸಲಾಗಿರುವ)
* ಒಗ್ಗರಣೆಗೆ ಬೇವಿನ ಸೊಪ್ಪು (ಸ್ವಲ್ಪ)

ಮಾಡುವ ವಿಧಾನ:
1. ದೊಡ್ಡ ಪಾತ್ರೆಯಲ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಗಳನ್ನು ಸ್ವಲ್ಪ ಕಾಲ ನೆನೆಸಿ, ಒಂದು ರಾತ್ರಿಯ ವರೆಗೆ ಹುದುಗಲು ಇರಿಸಬೇಕು.
2. ಬಟಾಟೆಯನ್ನು ಬೇಯಿಸಿ, ಅದರ ಸಿಪ್ಪೆಯನ್ನು ಸುಲಿದು ಸಣ್ಣ ಪದರಗಳಾಗಿ ಕತ್ತರಿಸಬೇಕು.
3. ಬೆಳ್ಳುಳ್ಳಿ, ಕೊತ್ತೊಂಬರಿ ಸೊಪ್ಪು, ಹಸಿಮೆಣಸು ಹಾಗೂ ಸ್ವಲ್ಪ ಈರುಳ್ಳಿಯನ್ನು ಅರೆದು ಪೇಸ್ಟ್ ಮಾಡಿಕೊಳ್ಳಬೇಕು ಹಾಗೂ ಬಾಣಲೆಯಲ್ಲಿ ಎಣ್ಣಿ ಕಾಯಿಸಿ, ಸಾಸಿವೆ ಕಾಳುಗಳನ್ನು ಹಾಕಿ.
4. ಸಾಸಿವೆ ಚಟಪಟ ಶಬ್ದ ಆದಾಕ್ಷಣ ಉಳಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
5. ತದನಂತರ ಪಾತ್ರೆಗೆ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಬೆರಸಬೇಕು ಹಾಗೂ ಸ್ವಲ್ಪ ಹೊತ್ತು ಬೇಯಿಸಬೇಕು.
6. ಇನ್ನು ಟೊಮೆಟೊ ಬಟಾಟೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಒಗ್ಗರಣೆ ಸೊಪ್ಪನ್ನು ಹಾಕಿ ಸ್ಪಲ್ಪ ಹೊತ್ತು ಬೇಯಿಸಬೇಕು.
7. ಆನಂತರ ಉರಿಯುವ ಒಲೆಯ ಮೇಲೆ ಕಾವಲಿ ಇಟ್ಟು, ಕಾವಲಿಗೆ ಎಣ್ಣೆ ಸವರಿ, ಒಂದು ಸೌಟಿನಷ್ಟು ಹಿಟ್ಟನ್ನು ಹೆಂಚಿನ ಮೇಲೆ ಹಾಕಿ, ದೋಸೆಯ ಸುತ್ತ ಎಣ್ಣೆ ಸುರಿದು ಚೆನ್ನಾಗಿ ಕಾಯಿಸಬೇಕು.
8 ಇನ್ನು ದೋಸೆಯ ಮೇಲೆ ಮಸಾಲ ಹಾಕಿ, ಹಾಗೂ ಅದರೊಂದಿಗೆ ಅದನ್ನು ನಿಧಾನವಾಗಿ ಸುತ್ತಿದರೆ ಬಿಸಿಬಿಸಿಯಾದ ಮಸಾಲೆ ದೋಸೆ ತಿನ್ನಲು ರೆಡಿ!.

Story first published: Monday, April 28, 2014, 15:41 [IST]
X
Desktop Bottom Promotion