Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸ್ವಾದಿಷ್ಟ ಬ್ರೇಕ್‌ಫಾಸ್ಟ್‌ಗಾಗಿ ಸೇಮಿಯಾ ಉಪ್ಮಾ ರೆಸಿಪಿ
ಉಪ್ಮಾ ಭಾರತೀಯ ಕ್ಲಾಸಿಕ್ ಬ್ರೇಕ್‌ಫಾಸ್ಟ್ ರೆಸಿಪಿಯಾಗಿದ್ದು ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಇದನ್ನು ಹೆಚ್ಚಾಗಿಯೇ ತಯಾರಿಸುತ್ತಾರೆ. ಇದನ್ನು ತಯಾರಿಸಲು ಸ್ವಲ್ಪ ಸಮಯ ಸಾಕು ಮತ್ತು ನಾಲಿಗೆಗೆ ಹಾಗೂ ದೇಹಕ್ಕೆ ಸ್ವಸ್ಥ್ಯ ಮತ್ತು ರುಚಿಕರವಾದ ರೆಸಿಪಿ ಇದಾಗಿದೆ.
ಬೆಳಗ್ಗಿನ ಉಪಹಾರಕ್ಕಾಗಿ ಟೇಸ್ಟೀ ಈರುಳ್ಳಿ ದೋಸೆ
ಇಂದಿನ ಸ್ವಾದಿಷ್ಟ ಉಪ್ಮಾವನ್ನು ರವೆಯಲ್ಲಿ ತಯಾರಿಸುವ ಬದಲು ಸೇಮಿಗೆಯಲ್ಲಿ ಸಿದ್ಧಪಡಿಸೋಣ. ಇದು ಸಾಮಾನ್ಯ ರವಾ ಉಪ್ಮಾಗಿಂತಲೂ ಹೆಚ್ಚು ರುಚಿಕಟ್ಟಾಗಿರುತ್ತದೆ ಮತ್ತು ನಿಮ್ಮ ಇಷ್ಟದ ತರಕಾರಿಗಳನ್ನು ಬಳಸಿ ಇದನ್ನು ಸುಲಭವಾಗಿ ನಿಮಗೆ ಸಿದ್ಧಪಡಿಸಬಹುದು.

ಹಾಗಿದ್ದರೆ ಈ ಸರಳವಾದ ಸೇಮಿಗೆ ಉಪ್ಮಾ ರೆಸಿಪಿಯನ್ನು ತಯಾರಿಸಲು ಸಿದ್ಧರಾಗಿ.
ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು
ಸಾಮಾಗ್ರಿಗಳು:
*ಸೇಮಿಯಾ (ವರ್ಮಿಸಿಲಿ) - 2 ಕಪ್‌ಗಳು
*ನೀರು - 1 1/2 ಕಪ್‌ಗಳು
*ಈರುಳ್ಳಿ - 1 (ಕತ್ತರಿಸಿದ್ದು)
*ಬಟಾಣಿ - 1/2 ಕಪ್
*ಕ್ಯಾರೇಟ್ - 1 (ಕತ್ತರಿಸಿದ್ದು)
*ಟೊಮೇಟೊ - 1 (ಕತ್ತರಿಸಿದ್ದು)
*ಹಸಿ ಮೆಣಸು - 2 (ಕತ್ತರಿಸಿದ್ದು)
*ಅರಶಿನ ಹುಡಿ - 1/4 ಸ್ಪೂನ್
*ಸಾಸಿವೆ - 1 ಸ್ಪೂನ್
*ಉದ್ದಿನ ಬೇಳೆ - 1 ಸ್ಪೂನ್
*ಚನ್ನಾ ದಾಲ್ - 1/2 ಸ್ಪೂನ್
*ಕರಿಬೇವಿನೆಲೆ - 6-7
*ಒಣ ಮೆಣಸು - 1
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 2 ಸ್ಪೂನ್
ನೀವು ಮಂಗಳೂರು ಬನ್ಸ್ ರೆಸಿಪಿಯ ರುಚಿ ನೋಡಿದಿರಾ?
ಮಾಡುವ ವಿಧಾನ:
1. ಪ್ಯಾನ್‌ನಲ್ಲಿ ಒಂದು ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ ಹಾಗೂ ಸೇಮಿಯಾವನ್ನು ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿಯಿರಿ.
2.ಚೆನ್ನಾಗಿ ಹುರಿದ ನಂತರ, ಸೇಮಿಯಾವನ್ನು ತಟ್ಟೆಗೆ ಹಾಕಿ ಮತ್ತು ಪಕ್ಕದಲ್ಲಿರಿಸಿ.
3.ಪ್ಯಾನ್‌ನಲ್ಲಿ ಒಂದು ಚಮಚ ಎಣ್ಣೆ ಹಾಕಿ ಮತ್ತು ಸಾಸಿವೆ, ಒಣ ಮೆಣಸು, ಉದ್ದಿನ ಬೇಳೆ, ಚನ್ನಾ ದಾಲ್, ಕರಿಬೇವಿನೆಲೆಯನ್ನು ಹಾಕಿ ಮತ್ತು ಸ್ವಲ್ಪ ನಿಮಿಷ ಹುರಿಯಿರಿ.
4.ಈರುಳ್ಳಿ ಸೇರಿಸಿ ಮತ್ತು ಮಧ್ಯಮ ಗಾತ್ರದಲ್ಲಿ 4-5 ನಿಮಿಷಗಳ ಕಾಲ ಹುರಿಯಿರಿ.
5.ಅರಶಿನ ಹುಡಿ, ಕತ್ತರಿಸಿದ ಕ್ಯಾರೇಟ್, ಬಟಾಣಿ, ಹಸಿಮೆಣಸು, ಉದ್ದಿನ ಬೇಳೆ, ಚನ್ನಾ ದಾಲ್, ಕರಿಬೇವಿನೆಲೆಯನ್ನು ಸೇರಿಸಿ 5-6 ನಿಮಿಷಗಳ ಕಾಲ ಹುರಿಯಿರಿ.
6.ಈಗ ಹುರಿದ ಸೇಮಿಯಾವನ್ನು ಸೇರಿಸಿ ನಂತರ ಉಪ್ಪು ಮತ್ತು ನೀರನ್ನು ಪ್ಯಾನ್‌ಗೆ ಹಾಕಿ. ಚೆನ್ನಾಗಿ ಮಿಶ್ರ ಮಾಡಿ.
7.ಸಣ್ಣ ಉರಿಯಲ್ಲಿ 8-10 ನಿಮಿಷಗಳ ಕಾಲ ಬೇಯಿಸಿ.
8.ಒಮ್ಮೆ ಆದ ನಂತರ, ಮುಚ್ಚಳ ತೆರೆಯಿರಿ ಮತ್ತು ನೀರು ಚೆನ್ನಾಗಿ ಇಂಗುವವರೆಗೆ ಕಾಯಿರಿ.
9.ನೀರು ಪೂರ್ತಿ ಇಂಗುವವರೆಗೆ ಕಾಯಿರಿ ಮತ್ತು ಬಿಸಿ ಬಿಸಿಯಾಗಿ ಅದನ್ನು ಬಡಿಸಿ.



Click it and Unblock the Notifications
