Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಳವಳ್ಳಿ ಅವರೆಕಾಳು, ಭಿಲಾಯ್ ಉಪ್ಪಿಟ್ಟು

ಬೇಕಾಗುವ ಪದಾರ್ಥಗಳೆಂದರೆ ಒಂದು ಲೋಟ ಯಾವುದಾದರು ಅಕ್ಕಿ. ಒಂದು ಲೋಟ ಅವರೆಕಾಳು. ಯಥಾಪ್ರಕಾರ ಒಗ್ಗರಣೆ ಸಾಮಾನುಗಳು. ಕೊತ್ತಂಬರಿ ಮತ್ತು ಹಸಿ ತೆಂಗಿನಕಾಯಿ ತುರಿ. ಚೂರು ಇಂಗು. ಈ ಉಪ್ಪಿಟ್ಟನ್ನು ಪ್ರೆಷರ್ ಕುಕ್ಕರಿನಲ್ಲೇ ಮಾಡಬೇಕು.
ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿಯಬೇಕು. ಅಕ್ಕಿಯ ಬಿಳುಪು ಮಾಯವಾಗಿ ಕಂದು ಬಣ್ಣಕ್ಕೆ ಹೊರಳುವವರೆಗೆ ಹುರಿಯಬೇಕು. ಹುರಿದ ನಂತರ ಅದನ್ನು ಆರಲು ಬಿಟ್ಟು ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ರುಬ್ಬಬೇಕು. ಅಕ್ಕಿ ಸಣ್ಣಸಣ್ಣ ಚೂರುಗಳಾಗುವಷ್ಟು, ಅಂದರೆ ದಪ್ಪ ರವೆ ಗಾತ್ರಕ್ಕೆ ರುಬ್ಬಿದರೆ ಸಾಕು. ಇನ್ನೊಂದು ಕಡೆ ಅವರೆಕಾಳನ್ನು ಬರೀ ನೀರಿನಲ್ಲಿ ಕುಕ್ಕರಿನಲ್ಲಿ ಬೇಯಿಸಿ ಇಟ್ಟುಕೊಂಡಿರಬೇಕು. ಅವರೆ ಬೇಗ ಬೇಯುವುದಿಲ್ಲವಾದ್ದರಿಂದ ಐದಾರು ವಿಷಲ್ ಬರುವವರೆಗೂ ಸ್ಟೌವ್ ಮೇಲೆ ಕುಕ್ಕರ್ ಇಟ್ಟಿರಬೇಕು.
ಇನ್ನೊಂದು ಕುಕ್ಕರಿನಲ್ಲಿ ಸ್ವಲ್ಪ ಎಣ್ಣೆ ಸ್ವಲ್ಪ ತುಪ್ಪ ಹಾಕಿರಿ. ಅದು ಬಿಸಿಯಾದ ನಂತರ ಅದಕ್ಕೆ ಜೀರಿಗೆ, ಕರಿಬೇವು, ಸಾಸಿವೆ, ಹಸಿಮೆಣಸಿನಕಾಯಿ, ಇಂಗು ಬೆರೆಸಿ ಒಗ್ಗರಣೆ ತಯಾರಿಸಿಕೊಳ್ಳಿರಿ. ಇದಕ್ಕೆ ಬೇಯಿಸಿದ ಅವರೆಕಾಳು ಮತ್ತು ಅದರಲ್ಲಿರುವ ಬಿಸಿ ನೀರನ್ನು ಸುರಿಯಿರಿ. ಅವರೆಕಾಳು ಉಪ್ಪಿಟ್ಟಿಗೆ ನೀರಿನ ಪ್ರಮಾಣ ಒಂದಕ್ಕೆ ಮೂರರಷ್ಟು ಇರಬೇಕು. ಅಂದರೆ, ಒಂದು ಲೋಟ ಅಕ್ಕಿ ರವೆಗೆ ಮೂರು ಲೋಟ ನೀರು.
ಕುದಿಯುತ್ತಿರುವ ಅವರೆಕಾಳು ಒಗ್ಗರಣೆ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿದ ನಂತರ ಮಾಡಿಟ್ಟುಕೊಂಡ ರವೆ ಹಾಕಿ ಚೆನ್ನಾಗಿ ಕದಡಿರಿ. ಉಪ್ಪಿಟ್ಟು ಗಂಟಾಗದಂತೆ ಎಚ್ಚರವಹಿಸಿ. ರವೆ ಕೂಡಿಕೊಂಡು ಉಪ್ಪಿಟ್ಟಿನ ಹದಕ್ಕೆ ಬರುವವರೆಗೆ ನಿರಂತರವಾಗಿ ಸೌಟಿನಿಂದ ಕಲಕುತ್ತಿರಬೇಕು. ಆನಂತರ ಕುಕ್ಕರಿನ ಮುಚ್ಚಳ ಮುಚ್ಚಿ ಮತ್ತೆ ಸ್ವಲ್ಪ ಹೊತ್ತು ಬೇಯಲು ಬಿಡಿ. ಮುಖ್ಯವಾದ ವಿಚಾರವೆಂದರೆ ಕುಕ್ಕರಿನ ವೈಟ್ ಇಡಬಾರದು.
ಐದಾರು ನಿಮಿಷ ಹಬೆಯಲ್ಲಿ ಬೆಂದ ನಂತರ ಅಕ್ಕಿರವೆ ಉಪ್ಪಿಟ್ಟು ಮೃದುವಾಗುತ್ತದೆ. ಈಗ ಕುಕ್ಕರನ್ನು ಕೆಳಗಿಳಿಸಿ ಮುಚ್ಚಳ ತೆಗೆದು ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ ಕಲಸಿರಿ. ಇದು ತುಂಬಾ ರುಚಿಕಟ್ಟಾಗಿರುತ್ತದೆ. ಇತರ ಉಪ್ಪಿಟ್ಟುಗಳಂತೆ ಇದೂ ಇರುತ್ತದೆ ಎಂದು ನಿಮಗೆ ಅನಿಸಿದರೂ ಸಹ ಇದರ ವಿಶೇಷ ಏನಪ್ಪಾ ಅಂದರೆ ಅಕ್ಕಿ ರವೆ ಮತ್ತು ಅವರೆಕಾಳು ಚೆನ್ನಾಗಿ ಬೆಂದು ಪರಸ್ಪರ ಉಪ್ಪಿಟ್ಟಿನಲ್ಲಿ ಬೆರೆತುಕೊಂಡಿರಬೇಕು.



Click it and Unblock the Notifications
