Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಗೆಬಗೆಯ ತರಕಾರಿಗಳ ಸಿಪ್ಪೆ ಚಟ್ನಿ

* ತೇಜಸ್ವಿನಿ ಹೆಗಡೆ, ಬೆಂಗಳೂರು
ಕಸದಿಂದ ರಸತೆಗೆವಂತೆ ವಿವಿಧ ತರಕಾರಿಗಳ ಸಿಪ್ಪೆಯಿಂದಲೂ ಸ್ವಾದಿಷ್ಟವಾದ ಚಟ್ನಿಯನ್ನು ತಯಾರಿಸಬಹುದು. ಅದೆಷ್ಟೋ ತರಕಾರಿಗಳ ಸಿಪ್ಪೆಯನ್ನು ನಾವು ತ್ಯಾಜ್ಯವಸ್ತುವೆಂದು ಕಸದ ಡಬ್ಬಿಗೆ ಬಿಸಾಕುವುದು ಸಹಜವಾಗಿಬಿಟ್ಟಿದೆ. ಆದರೆ ನಿಜವಾದ ಸತ್ವವಿರುವುದೇ ಸಿಪ್ಪೆಯೊಳಗೆ. ಬೀಟ್ರೂಟ್, ಹೀರೇಕಾಯಿ, ಮಂಗಳೂರು ಸವತೇಕಾಯಿ(ಉತ್ತರ ಕನ್ನಡದ ಕಡೆ ಇದನ್ನು ಮೊಗೆಕಾಯಿ ಎನ್ನುತ್ತೇವೆ), ಕುಂಬಳಕಾಯಿ ತರಕಾರಿಗಳ ಸಿಪ್ಪೆಯಿಂದ ತಯಾರಿಸಿದ ಚಟ್ನಿ ಬಲು ರುಚಿಕರ. ಹಾಗೂ ಆರೋಗ್ಯಕರ ಕೂಡ. ಈ ತರಕಾರಿಗಳು ಬೇರೆ ಬೇರೆಯಾಗಿದ್ದರೂ ಅವುಗಳ ಸಿಪ್ಪೆಯಿಂದ ಚಟ್ನಿಯನ್ನು ತಯಾರಿಸುವ ವಿಧಾನ ಮಾತ್ರ ಒಂದೇ.
ಮೇಲಿನ ತರಕಾರಿಗಳ ಸಿಪ್ಪೆಯ ಉಪಯೋಗದಿಂದ ತರಕಾರಿಗಳ ಉಳಿತಾಯದ ಜೊತೆಗೆ ಪೌಷ್ಟಿಕತೆಯನ್ನೂ ಪಡೆದಂತೆ ಆಗುವುದು. ತರಕಾರಿಗಳ ಬೆಲೆ ಗಗನಕ್ಕೇರಿದಾಗಲೂ ಈ ಅಡುಗೆ ಬಹೋಪಯೋಗಿ. ಸಿಪ್ಪೆಯನ್ನು ಚೆನ್ನಾಗಿ ತೊಳೆದು ಫ್ರಿಜ್‌ನಲ್ಲಿಟ್ಟು ಒಂದು ದಿನ ಬಿಟ್ಟೂ ಚಟ್ನಿಯನ್ನು ತಯಾರಿಸಬಹುದಾಗಿದೆ. ಹಾಗಾಗಿ ಇನ್ನು ಮುಂದೆ ಸಿಪ್ಪೆಗಳನ್ನು ತಿಪ್ಪೆಗೆಸೆಯದಿರಿ. ಒಮ್ಮೆ ಚಟ್ನಿಯನ್ನು ತಯಾರಿಸಿ ನೋಡಿ. 'ಬಲು ರುಚಿಕರ ಈ ಚಟ್ನಿ, ತೇಜಸ್ವಿನಿ ಬರೆದಿದ್ದು ಒಳ್ಳೆಯದಾಯಿತು' ಎಂದು ನೀವೇ ಹೇಳುವಿರಿ !
ಇಲ್ಲಿ ನಾನು ಬೀಟ್ರೂಟ್ ಸಿಪ್ಪೆಯಿಂದ ಚಟ್ನಿಯನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದೇನೆ. ಇದೇ ವಿಧಾನವನ್ನು ಅನುಸರಿಸಿ ನೀವು ಹೀರೇಕಾಯಿ, ಕುಂಬಳಕಾಯಿ, ಮಂಗಳೂರು ಸವತೆಕಾಯಿ ತರಕಾರಿಗಳ ಸಿಪ್ಪೆಯ ಚಟ್ನಿಯನ್ನೂ ತಯಾರಿಸಿರಿ.
ಬೀಟ್ರೂಟ್ ಚಟ್ನಿಗೆ ಬೇಕಾಗುವ ಸಾಮಗ್ರಿಗಳು:
* ಬೀಟ್ರೂಟ್ ಸಿಪ್ಪೆ : ಮೂರುಗಡ್ಡೆಯ ಸಿಪ್ಪೆ (ಪ್ರಮಾಣಕ್ಕನುಗುಣವಾಗಿ)
* ಕೆಂಪು ಮೆಣಸು : 4(ಖಾರಕ್ಕೆ ತಕ್ಕಂತೆ)
* ಹುಣಸೇ ಹಣ್ಣು : ಸಣ್ಣ ಚೂರು
* ಉದ್ದಿನ ಬೇಳೆ : 1/2 ಚಮಚ
* ಕೊತ್ತಂಬರಿ : 1/2 ಚಮಚ
* ಇಂಗು : ಕಡಲೇಕಾಳಿನಷ್ಟು
* ಎಣ್ಣೆ : 1 ಚಮಚ
* ತೆಂಗಿನಕಾಯಿ ತುರಿ : 1/4 ಭಾಗ
* ಉಪ್ಪು : ರುಚಿಗೆ ತಕ್ಕಷ್ಟು
* ಬೆಲ್ಲ : ರುಚಿಗೆ ತಕ್ಕಷ್ಟು (ಸಿಹಿ ಇಷ್ಟಪಡದವರಿಗೆ ಬೇಡ)
ಮಾಡುವ ವಿಧಾನ
* ಮೊದಲಿಗೆ ಬೀಟ್ರೂಟ್ ಸಿಪ್ಪೆಯನ್ನು ಚೆನ್ನಾಗಿ ತೊಳೆದು, ಕಡ್ಡಿಮೆಣಸು, ಉಪ್ಪು, ಹುಳಿ ಹಾಗೂ ಬೆಲ್ಲವನ್ನು ಹಾಕಿ ಚೆನ್ನಾಗಿ ಬೇಯಿಸಿ ತಣಿಸಿಟ್ಟುಕೊಳ್ಳಬೇಕು.
* ಕೊತ್ತುಂಬರಿ, ಉದ್ದಿನಬೇಳೆ ಹಾಗೂ ಇಂಗನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಬೇಕು.
*ತೆಂಗಿನಕಾಯಿಯ ತುರಿಗೆ ಹುರಿದಿಟ್ಟ ಮಿಶ್ರಣ ಹಾಗೂ ಚೆನ್ನಾಗಿ ಆರಿರುವ ಬೇಯಿಸಿದ ಸಿಪ್ಪೆಯನ್ನೂ ಹಾಕಿ ನುಣ್ಣಗೆ ರುಬ್ಬಬೇಕು.
ಈಗ ರುಚಿಕರ ಹಾಗೂ ಸತ್ವಯುತ ಚಟ್ನಿ ಬಿಸಿ ಅನ್ನಕ್ಕೆ, ಚಪಾತಿಗೆ ಹಾಗೂ ದೋಸೆಗೆ ಹಾಕಿಕೊಂಡು ತಿನ್ನಲು ತಯಾರು.



Click it and Unblock the Notifications
