For Quick Alerts
ALLOW NOTIFICATIONS  
For Daily Alerts

ಪಾಕಶಾಲೆ:ಸೊಪ್ಪಿನ ರೊಟ್ಟಿ, ಮಜ್ಜಿಗೆ ರೊಟ್ಟಿ

By Staff
|

ಅಕ್ಕಿ ರೊಟ್ಟಿಯನ್ನು ನೀವು ಈಗಾಗಲೇ ಮಾಡಿರಬಹುದು. ಆದರೆ ಅಕ್ಕಿ ಹಿಟ್ಟನ್ನು ಉಪಯೋಗಿಸಿ ಮಜ್ಜಿಗೆ ರೊಟ್ಟಿ, ಸೊಪ್ಪಿನ ರೊಟ್ಟಿ ಮಾಡುವ ವಿಧಾನ ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ. ಸಾಧಾರಣವಾಗಿ ರಾಗಿ ರೊಟ್ಟಿ, ಅಕ್ಕಿ ರೊಟ್ಟಿ ಮಾಡುವಂತೆಯೇ ಮಜ್ಜಿಗೆ ರೊಟ್ಟಿಯನ್ನೂ ಸುಲಭವಾಗಿ ಮಾಡಬಹುದು. ಇದಕ್ಕೆ ಬೇಕಾಗುವ ಪದಾರ್ಥಗಳು ಸ್ವಲ್ಪ ಸೊಪ್ಪು ಹಾಗೂ ಮಜ್ಜಿಗೆ. ಈ ವಿಶೇಷ ರೊಟ್ಟಿಗಳನ್ನು ಮಾಡಿ ಸವಿದು ಮತ್ತಷ್ಟು ವಿಶೇಷ ರೊಟ್ಟಿಗಳಿದ್ದರೆ ನಮಗೂ ತಿಳಿಸಿ.

ಮಜ್ಜಿಗೆ ರೊಟ್ಟಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿ:
ಅಕ್ಕಿಹಿಟ್ಟು: 1 ಕಪ್
ಮಜ್ಜಿಗೆ : 2 ಕಪ್
ಈರುಳ್ಳಿ :1
ಹಸಿಖಾರ : ಸ್ವಲ್ಪ
ತೆಂಗಿನ ತುರಿ: ಸ್ವಲ್ಪ
ಉಪ್ಪು : ರುಚಿಗೆ ತಕ್ಕಷ್ಟು

Butter milk

ಪಾಕ ವಿಧಾನ:
ಒಂದು ಬಟ್ಟಲಲ್ಲಿ ಮಜ್ಜಿಗೆ ಹಾಕಿ ಒಲೆ ಮೇಲಿಡಿ. ಕುದಿ ಬಂದ ನಂತರ ಹಿಟ್ಟು ಹಾಕಿ 20 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಈರುಳ್ಳಿ ಹಾಕಿ ಹಿಟ್ಟನ್ನು ಚೆನ್ನಾಗಿ ನಾದಿ, ಪ್ಲಾಸ್ಟಿಕ್ ಪೇಪರ್ ಮೇಲೆ ತಟ್ಟಿ ಕಾವಲಿ ಮೇಲೆ ಬೇಯಿಸಿ.


ಸೊಪ್ಪಿನ ರೊಟ್ಟಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು:
ಅಕ್ಕಿಹಿಟ್ಟು: 1 ಕಪ್
ಈರುಳ್ಳಿ : 1
ಜೀರಿಗೆ :ಸ್ವಲ್ಪ
ಹಸಿಮೆಣಸು : 1
ತೆಂಗಿನ ತುರಿ: ಸ್ವಲ್ಪ
ಉಪ್ಪು : ರುಚಿಗೆ
ಮೆಂತ್ಯ ಸೊಪ್ಪು, ದಂಟಿನ ಸೊಪ್ಪು, ಸಬ್ಬಸ್ಸಿಗೆ ಸೊಪ್ಪು :ಸ್ವಲ್ಪಸ್ವಲ್ಪ
ಪಾಕ ವಿಧಾನ:
ಒಂದು ಬಟ್ಟಲಲ್ಲಿ ಎಲ್ಲ ಸಾಮಾಗ್ರಿಗಳನ್ನು ಹಾಕಿ, ನೀರು ಹಾಕಿ ರೊಟ್ಟಿ ತಟ್ಟುವ ಹದಕ್ಕೆ ಕಲಸಿಕೊಂಡು ಕಾವಲಿ ಮೇಲೆ ತಟ್ಟಿ.

(ದಟ್ಸ್ ಕನ್ನಡ ಪಾಕಶಾಲೆ)

English summary

How to make Butter milk Rotti - ಪಾಕಶಾಲೆ:ಸೊಪ್ಪಿನ ರೊಟ್ಟಿ, ಮಜ್ಜಿಗೆ ರೊಟ್ಟಿ

Here is the recipe for Butter milk Roti.
X
Desktop Bottom Promotion