Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೇಕ್‌ಫಾಸ್ಟ್‌ಗೆ ಡಿಫರೆಂಟ್ ಆಲೂಗಡ್ಡೆ ರೈಸ್..! ಥಟ್ ಅಂತ ಮಾಡಿ ನೋಡಿ..!!
ಮಧ್ಯಾಹ್ನ ಟಿಫಿನ್ ಬಾಕ್ಸ್‌ಗೆ ಏನಾದ್ರು ಒಳ್ಳೆಯ ಖಾದ್ಯ ಮಾಡಿ ಸವಿಯುವ ನಿಮ್ಮ ಆಲೋಚನೆ ಇದ್ದರೆ ಅದಕ್ಕೆ ಬೆಳಗ್ಗೆ ತಿಂಡಿಗೂ ಸೇರಿಸಿ ಮಾಡುವ ತಿಂಡಿಯನ್ನ ಹೆಚ್ಚಾಗಿ ಮಾಡುತ್ತೇವೆ. ಏಕೆಂದರೆ ಬೆಳಗ್ಗೆ ಒಂದು ಹೊತ್ತಿನಲ್ಲಿ ಮಾಡುವ ಖಾದ್ಯವು ಮೂರು ಹೊತ್ತು ಸವಿಯಲು ಬಂದರೆ ಸಮಯ ಉಳಿತಾಯವಾಗುತ್ತೆ. ಹೀಗಾಗಿ ಹಲವರು ರೈಸ್‌ನಿಂದ ಮಾಡುವಂತಹ ಹಲವು ಖಾದ್ಯಗಳ ಮಾಡುತ್ತಾರೆ.
ಹೀಗಾಗಿ ನಾವಿಂದು ಮನೆಯಲ್ಲಿ ಬೆಳಗ್ಗೆ ಮಾಡಿದ ಖಾದ್ಯ ಮಧ್ಯಾಹ್ನದ ಬಾಕ್ಸ್‌ಗೆ ಇಲ್ಲವೆ ಉಳಿದರೆ ಸಂಜೆ ಸ್ನ್ಯಾಕ್ಸ್‌ಗೂ ಬರಬೇಕು ಅಂತಹ ಖಾದ್ಯ ಮಾಡುವ ಕುರಿತು ತಿಳಿಯೋಣ. ನಾವಿಂದು ಒಂದು ಆಲೂಗಡ್ಡೆಯಿಂದ 10 ನಿಮಿಷದಲ್ಲಿ ಮಾಡುವಂತಹ ಆಲೂ ರೈಸ್ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಆಲೂ ರೈಸ್ ಅನ್ನು ಮಾಡುವುದು ತುಂಬಾನೆ ಸುಲಭ ರುಚಿ ಕೂಡ ಬೊಂಬಾಟ್ ಆಗಿರುತ್ತೆ.

ಹಾಗಾದ್ರೆ ಒಂದೇ ಒಂದು ಆಲೂಗಡ್ಡೆಯಿಂದ ರೈಸ್ ಮಾಡುವುದು ಹೇಗೆ? ಘಮ ಘಮಿಸುವ ಈ ರೈಸ್ ಮಾಡಿದ್ರೆ ಬೆಳಗ್ಗೆ ತಿಂಡಿಗೂ ಮಧ್ಯಾಹ್ನಕ್ಕೂ ಸವಿಯಬಹುದು. ಅಷ್ಟೊಂದು ರುಚಿಯಾಗಿರುತ್ತೆ. ಹಾಗಾದ್ರೆ ಆಲೂ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು, ಎಷ್ಟು ಸಮುಯದಲ್ಲಿ ಈ ಖಾದ್ಯ ರೆಡಿ ಮಾಡಬಹುದು, ಮಾಡಲು ಯಾವ ರೀತಿಯ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಲೂ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ - 1 ಬೌಲ್
- ಆಲೂಗಡ್ಡೆ - 1 ದೊಡ್ಡದು
- ಈರುಳ್ಳಿ-2
- ಬೆಳ್ಳುಳ್ಳಿ
- ಗರಂ ಮಸಾಲಾ ಪುಡಿ
- ಸಾಂಬಾರ್ ಪುಡಿ
- ಸಾಸಿವೆ
- ಜೀರಿಗೆ
- ಹುರಿಗಡಲೆ
- ಒಣ ಮೆಣಸಿನಕಾಯಿ
- ಕರಿಬೇವಿನ ಎಲೆಗಳು
- ಕೊತ್ತಂಬರಿ ಸೊಪ್ಪು
- ಎಣ್ಣೆ
- ಉಪ್ಪು
ಆಲೂ ರೈಸ್ ಮಾಡುವುದು ಹೇಗೆ?
ಮೊದಲು ಒಂದು ಆಲೂಗಡ್ಡೆಯನ್ನು ಕತ್ತರಿಸಿಕೊಂಡು ನೀರಿನಲ್ಲಿ ಹಾಕಿ ಇಡಿ. ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಕಡಲೆ ಬೇಳೆ ಹಾಕಿ ಫ್ರೈ ಮಾಡಿ ನಂತರ ಬೆಳ್ಳುಳ್ಳಿ, ಒಣ ಮೆಣಸು, ಈರುಳ್ಳಿ ಹಾಕಿಕೊಂಡು 1 ನಿಮಿಷ ಪ್ರೈ ಮಾಡಿ.
ಈಗ ಕತ್ತರಿಸಿಕೊಂಡಿರುವ ಆಲೂಗಡ್ಡೆಯನ್ನು ಕೂಡ ಇದಕ್ಕೆ ಹಾಕಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 5 ನಿಮಿಷ ಲೋ ಫ್ಲೇಮ್‌ನಲ್ಲಿ ಫ್ರೈ ಮಾಡಿಕೊಳ್ಳಿ. ನಂತರ ಗರಂ ಮಸಾಲ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ. ತದನಂತರ ಇದಕ್ಕೆ ಮೊದಲೇ ಮಾಡಿಟ್ಟಿರುವ ಅನ್ನವನ್ನು ಇದಕ್ಕೆ ಹಾಕಿಕೊಂಡು ಕಲಸಿಕೊಳ್ಳಿ.
ಎಲ್ಲಾ ಮಸಾಲೆಗಳು ಅನ್ನಕ್ಕೆ ಹಿಡಿಯುವಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ 1 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯ ಆಲೂಗಡ್ಡೆ ರೈಸ್ ರೆಡಿಯಾಗುತ್ತದೆ. ಇದರ ಸುವಾಸನೆಯು ನಿಮ್ಮ ಬಾಯಿಯಲ್ಲಿ ನೀರು ತರಿಸುತ್ತೆ. ಹಾಗೆ ಮಧ್ಯಾಹ್ನದ ಬಾಕ್ಸ್‌ಗೂ ಇಲ್ಲವೆ ಊಟಕ್ಕೂ ಇದನ್ನೇ ಸವಿಯಲು ಮುಂದಾಗುತ್ತೀರಿ. ನೀವು ಕೂಡ ಮನೆಯಲ್ಲಿ ಒಮ್ಮೆ ಈ ರೆಸಿಸಿಯನ್ನು ಟ್ರೈ ಮಾಡಿ ನೋಡಿ ಅದರ ರುಚಿ ಸವಿಯಿರಿ.
ಕೆಲವರು ಇದಕ್ಕೆ ಟೊಮೆಟೋ ಕೂಡ ಸೇರಿಸಿಕೊಂಡು ಮಾಡುತ್ತಾರೆ. ಅದರ ರುಚಿ ಕೂಡ ಅದ್ಭುತವಾಗಿರುತ್ತೆ. ಆದ್ಚರೆ ಟೊಮೆಟೋ ಕೆಲವೊಮ್ಮೆ ಹುಳಿಯ ಅನುಭವ ನೀಡೋದ್ರಿಂದ ಟೊಮೆಟೋ ಬಳಸದೆ ಈ ಆಲೂ ರೈಸ್ ಮಾಡುವುದು ಉತ್ತಮ ರುಚಿ ನೀಡುತ್ತೆ.



Click it and Unblock the Notifications