Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Breakfast Recipe: ಜೋಳದ ದೋಸೆ ಒಮ್ಮೆ ಮಾಡಿದ್ರೆ ನಿತ್ಯವೂ ಇದನ್ನೇ ಕೇಳೋದು ಪಕ್ಕ!!
ಬೆಳಗ್ಗೆ ತಿಂಡಿಗೆ ನೀವು ಹತ್ತು ಹಲವು ಬಗೆಯಲ್ಲಿ ದೋಸೆ ಖಾದ್ಯ ಮಾಡಿರುತ್ತೀರಿ. ಒಂದೊಂದು ದೋಸೆಯು ಒಂದೊಂದು ರೀತಿಯ ರುಚಿ ನೀಡುತ್ತವೆ. ಅದರಲ್ಲೂ ದೋಸೆ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ನಾವು ಸಹ ಸುಲಭದ ಹಾಗೆ ರುಚಿ ರುಚಿಯ ಹಲವು ರೀತಿಯ ದೋಸೆ ಮಾಡಿ ಸವಿದಿರುತ್ತೇವೆ. ಅದರಲ್ಲೂ ಬೆಳಗ್ಗೆ ತಿಂಡಿಗೆ ವಿಧ ವಿಧದ ದೋಸೆ ಮಾಡಿರುತ್ತೇವೆ. ಹಾಗೆ ಹೋಟೆಲ್‌ಗೆ ತೆರಳಿದಾಗಲು ಕೂಡ ದೋಸೆ ಆರ್ಡರ್ ಮಾಡಿ ಸವಿಯುವುದು ನೋಡಬಹುದು.
ಹಾಗೆ ದೋಸೆಯಲ್ಲಿ ಎಷ್ಟೊಂದು ವಿಧಗಳಿವೆ ಆ ಎಲ್ಲಾ ವಿಧಗಳು ಆಹಾರ ಪ್ರಿಯರಿಗೆ ಇಷ್ಟವಾಗುತ್ತೆ. ಹೀಗಾಗಿ ಮನೆಯಲ್ಲಿ ದೋಸೆ ಮಾಡಿದ್ರೆ ಆ ದಿನ ಬಹಳ ಅದ್ಭುತ ರುಚಿಯ ತಿಂಡಿ ಸವಿದ ನೆನೆಪು ಉಳಿಯುತ್ತೆ. ಹಾಗೆ ನಾವಿಂದು ದೋಸೆ ಮಾಡುವ ನಿಮ್ಮ ಬಯಕೆಯಲ್ಲಿ ಹೊಸ ರೆಸಿಪಿ ಹೇಳಲಿದ್ದೇವೆ. ಅದರಲ್ಲು ವಿಶೇಷ ರುಚಿಯ ಜೋಳದ ದೋಸೆ ಮಾಡುವ ಕುರಿತಾಗಿ ತಿಳಿಯೋಣ.

ಜೋಳದ ರೊಟ್ಟಿ ನೀವು ಸವಿದಿರಬಹುದು. ದೇಹಕ್ಕೆ ಬಹಳ ಉತ್ತಮವಾದ ಅಂಶಗಳ ಹೊಂದಿರುವ ರೊಟ್ಟಿ ಇದಾಗಿದೆ. ಹಾಗೆ ಜೋಳದ ರೊಟ್ಟಿ ಉತ್ತರ ಕರ್ನಾಟಕ ಭಾಗದಲ್ಲಿ ಬಹಳ ಫೇಮಸ್ ಆಗಿರುವ ಖಾದ್ಯ ಇದಾಗಿದೆ. ಹಾಗೆ ಈ ಜೋಳ ದೋಸೆ ಅದ್ಭುತ ರುಚಿಯಾಗಿರಲಿದೆ. ಆರೋಗ್ಯಕ್ಕೂ ಕೂಡ ಬಹಳ ಉತ್ತಮವಾಗಿದೆ.
ಹಾಗಾದ್ರೆ ನಾವಿಂದು ಈ ಜೋಳದ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಜೋಳದ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಜೋಳದ ಹಿಟ್ಟು
- ಚಿರೋಟಿ ರವೆ
- ಉಪ್ಪು
- ಎಣ್ಣೆ
- ಸೋಡಾ ಪುಡಿ
- ಜೀರಿಗೆ
- ಮೊಸರು
ಜೋಳದ ಹಿಟ್ಟಿನಿಂದ ದೋಸೆ ಮಾಡುವುದು ಹೇಗೆ?
ಮೊದಲು ಒಂದು ಬೌಲ್‌ಗೆ 1 ಕಪ್ ಜೋಳದ ಹಿಟ್ಟು ಹಾಕಿಕೊಳ್ಳಿ ಹಾಗೆ ಇದಕ್ಕೆ ಅರ್ಧ ಕಪ್ ಚಿರೋಟಿ ರವೆ, 2 ಸ್ಪೂನ್ ಮೊಸರು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 1 ಕಪ್‌ನಷ್ಟು ನೀರು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಹೀಗೆ ಮಿಕ್ಸ್ ಮಾಡಿದ ನಂತರ ಮತ್ತೆ ಅರ್ಧ ಕಪ್ ನೀರು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಗಂಟು ಇಲ್ಲದಂತೆ ಚೆನ್ನಾಗಿ ಕಲಸಿಕೊಳ್ಳುತ್ತಾ ಮಿಕ್ಸ್ ಮಾಡಿಕೊಳ್ಳಿ.
ನಂತರ ಮತ್ತೆ ಅರ್ಧ ಕಪ್ ನೀರು ಹಾಕಿಕೊಂಡು ಕಲಸಿಕೊಳ್ಳಿ. 1 ಕಪ್ ಜೋಳದ ಹಿಟ್ಟು ಬಳಸಿದರೆ 2 ಕಪ್ ನೀರು ಹಾಕಬೇಕು. ಹೀಗೆ ಹಿಟ್ಟು ರೆಡಿ ಮಾಡಿಕೊಂಡು ಪಾತ್ರೆಗೆ ಮುಚ್ಚಿ ಕನಿಷ್ಠ 15 ನಿಮಿಷ ಆದರು ಬಿಡಬೇಕು. 15 ನಿಮಿಷದ ಬಳಿಕ ಮತ್ತೆ ಮಿಕ್ಸ್ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಹಿಟ್ಟು ಗಟ್ಟಿಯಾಗಿದ್ದರೆ ಮತ್ತೆ ನೀರು ಸೇರಿಸಿ ಮಿಶ್ರಣ ಮಾಡಬೇಕು.
ಒಟ್ಟಿನಲ್ಲಿ ನೀರು ದೋಸೆ ಮಾಡಲು ಬಳಸುವ ಹಿಟ್ಟಿನ ಹದಕ್ಕೆ ಈ ಹಿಟ್ಟನ್ನು ಕೂಡ ಹದ ಮಾಡಿಕೊಳ್ಳಿ. ಈಗ ದೋಸೆ ಹಿಟ್ಟಿಗೆ ಚಿಟಿಕೆ ಅಷ್ಟು ಸೋಡಾ ಪುಡಿಯನ್ನು ಸಹ ಹಾಕಿ ಮಿಕ್ಸ್ ಮಾಡಿ ಇಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಚ್ಚಿ ಕಾಯಲು ಬಿಡಿ. ಕಾವಲಿ ಚೆನ್ನಾಗಿ ಕಾದ ಬಳಿಕ ನೀವು ದೋಸೆ ಹಿಟ್ಟನ್ನು ಕಾವಲಿಗೆ ಹಾಕಿಕೊಳ್ಳಿ.
ನೀರು ದೋಸೆ ಹಾಕಿದ ಮಾದರಿಯಲ್ಲೇ ಈ ದೋಸೆಯನ್ನು ಕೂಡ ಹಾಕಿಕೊಳ್ಳಿ. ಒಂದು ಕಡೆ ಮಾತ್ರ ಚೆನ್ನಾಗಿ ಕರಿದುಕೊಳ್ಳಿ, ನಿಮಗೆ ಯಾವ ಹದಕ್ಕೆ ಬೇಕೋ ಆ ಹದಕ್ಕೆ ದೋಸೆ ಕರಿದುಕೊಳ್ಳಿ.



Click it and Unblock the Notifications