Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Breakfast Recipe: ಎರಡು ಟೊಮೆಟೋ ಇದ್ರೆ ಈ ರೀತಿ ಸ್ಪೆಷಲ್ ಪೂರಿ ಮಾಡಿ!
Breakfast Recipe: ಬೆಳಗ್ಗೆ ತಿಂಡಿಗೆ ನೀವು ವಿಶೇಷ ರುಚಿಯಲ್ಲಿ ಯಾವುದಾದರು ತಿಂಡಿ ಮಾಡಿ ಸವಿಯುವ ನಿಮ್ಮ ಬಯಕೆ ಇದ್ದರೆ ನಾವಿಂದು ಸುಲಭವಾಗಿ ಮಾಡುವ ತಿಂಡಿಯ ಕುರಿತು ನಾವಿಂದು ತಿಳಿದುಕೊಳ್ಳೋಣ. ಅದ್ರಲ್ಲೂ ವಿಶೇಷವಾಗಿ ಎರಡು ಟೊಮೆಟೋಗಳ ಬಳಸಿ ಮಾಡುವಂತಹ ಪೂರಿಯ ಕುರಿತಾಗಿ ಇಂದು ತಿಳಿದುಕೊಳ್ಳೋಣ.
ಪೂರಿ ಎಲ್ಲರ ಮೆಚ್ಚಿನ ತಿಂಡಿಗಳಲ್ಲಿ ಒಂದು. ಹೋಟೆಲ್ ರುಚಿಯಲ್ಲಿ ಪೂರಿ ಸವಿದು ನಾವು ಸವಿಯುವುದು ನೋಡಬಹುದು. ಮನೆಯಲ್ಲಿ ಪೂರಿ ಮಾಡಿದ್ರೆ ಒಂದೂ ಉಳಿಯದಂತೆ ಎಲ್ಲರು ಸವಿಯುತ್ತಾರೆ. ಗೋಧಿ ಹಿಟ್ಟಿನಿಂದ ಮಾಡುವ ಪೂರಿ ಹಾಗೆ ತರಕಾರಿ ಸಾಗು ಮಾಡಿದ್ರೆ ಬೆಳಗ್ಗಿನ ಉಪಹಾರ ರುಚಿ ರುಚಿಯಾಗಿ ಇರಲಿದೆ.

ಇನ್ನು ಬೆಳಗ್ಗೆ ತಿಂಡಿ ಮಾಡಲು ಯಾವುದೇ ತರಕಾರಿ ಇಲ್ಲ, ಅಥವಾ ಪದಾರ್ಥಗಳು ಇಲ್ಲ ಎಂಬಂತಹ ಸಂದರ್ಭದಲ್ಲಿ ಈ ರೆಸಿಪಿಯನ್ನು ಸುಲಭವಾಗಿ ಮಾಡಿ ಮುಗಿಸಬಹುದು.
ಇನ್ನು ಬೆಳಗ್ಗೆ ತಿಂಡಿಗಾಗಿ ಮನೆಯಲ್ಲಿ ಟೊಮೆಟೋ ಬಳಸಿ ಮಾಡುವ ಈ ಪೂರಿ ಬಹಳ ರುಚಿಕರವಾಗಿರಲಿದೆ. ಹಾಗೆ ಮಾಡೋದು ಕೂಡ ಬಹಳ ಸುಲಭ. ಹಾಗಾದ್ರೆ ನಾವಿಂದು ಈ ಟೊಮೆಟೋ ಪೂರಿ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಟೊಮೆಟೋ ಪೂರಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ಪೂರಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಟೊಮೆಟೋ
- ಈರುಳ್ಳಿ
- ಗರಂ ಮಸಾಲೆ
- ಅರಶಿಣ ಪುಡಿ
- ಖಾರದ ಪುಡಿ
- ಉಪ್ಪು
- ಎಣ್ಣೆ
- ಗೋಧಿ ಹಿಟ್ಟು
ಟೊಮೆಟೋ ಪೂರಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ಹಾಗೆ ಟೊಮೆಟೋ ಕೂಡ ಹಾಕಿಕೊಳ್ಳಿ. ನಂತರ ಚೆನ್ನಾಗಿ 1 ನಿಮಿಷ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ಅರಶಿಣ ಪುಡಿ ಹಾಗೂ ಗರಂ ಮಸಾಲೆ, ಖಾರದ ಪುಡಿ ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 1 ನಿಮಿಷ ಮಿಕ್ಸ್ ಮಾಡಿಕೊಳ್ಳಬೇಕು.
ಈಗ 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಂಡ ಬಳಿಕ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಎಲ್ಲಾ ವಸ್ತುಗಳು ತಣ್ಣಗಾದ ಬಳಿಕ ಒಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ಇದಕ್ಕೆ ಎಷ್ಟು ಬೇಕೋ ಅಷ್ಟು ಗೋಧಿ ಹಿಟ್ಟನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಒಂದು ವೇಳೆ ಗಟ್ಟಿಯಾದರೆ ಸ್ವಲ್ಪ ಸ್ಲಲ್ಪ ನೀರು ಹಾಕಿಕೊಂಡು ಕೂಡ ಕಲಸಿಕೊಳ್ಳಬಹುದು.
ಇನ್ನು ಈ ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿಯೂ ಹಾಗೆ ಗಟ್ಟಿಯಾಗಿ ಬಂದರೆ ಸಾಕಾಗುತ್ತದೆ. ಈಗ ಹಿಟ್ಟನ್ನು ಪಾತ್ರೆಯಲ್ಲಿ 5 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಮತ್ತೆ ಹಿಟ್ಟನ್ನು ನಾದಿಕೊಳ್ಳಬೇಕು. ಈಗ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಂಡು ಚಪಾತಿ ಮಣೆಯಲ್ಲಿ ಲಟ್ಟಿಸಿಕೊಳ್ಳಬಹುದು. ಬಹಳ ತೆಳುವಾಗಿ ಲಟ್ಟಿಸಿಕೊಳ್ಳಬೇಡಿ.
ಲಟ್ಟಿಸಿಕೊಂಡ ಪೂರಿಯನ್ನು ಎಣ್ಣೆಗೆ ಬಿಟ್ಟು ಕರಿದುಕೊಳ್ಳಿ. ಎರಡೂ ಕಡೆ ಕರಿದುಕೊಳ್ಳಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಹಾಗೆ ಲಟ್ಟಿಸಿಕೊಳ್ಳಿ. ಇನ್ನು ಕರಿದುಕೊಂಡ ಪೂರಿಯನ್ನು ಸವಿಯಲು ನೀಡಿ. ಈ ಪೂರಿ ಸವಿಯಲು ಚಟ್ನಿ, ಸಾಗು, ಸಾಂಬಾರ್‌ನ ಅವಶ್ಯಕತೆ ಕೂಡ ಇಲ್ಲ. ಏಕೆಂದರೆ ಇದನ್ನು ಹಾಗೆ ಸವಿಯಬಬಹುದು. ನೀವು ಕೂಡ ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ಇದನ್ನು ಮಾಡಿ ನೋಡಿ. ಒಮ್ಮೆ ಇದರ ರುಚಿ ನೋಡಿದ್ರೆ ಪದೇ ಪದೇ ಮಾಡಿ ಸವಿಯುವುದು ಖಚಿತ.



Click it and Unblock the Notifications