Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನುಚ್ಚಕ್ಕಿಯಿಂದ ಮಾಡುವ ಪಾಪಿಟ್ಟು: ಸವಿರುವಿಯ ಬ್ರೇಕ್‌ಫಾಸ್ಟ್
ನೀವು ಪಾಪಿಟ್ಟು ರುಚಿ ನೋಡಿದ್ದೀರಾ, ಇದು ಇಡ್ಲಿಗಿಂತ ಸ್ವಲ್ಪ ಭಿನ್ನ ರೆಸಿಪಿ, ಆದರೆ ಬ್ರೇಕ್‌ಫಾಸ್ಟ್‌ಗೆ ಸೂಪರ್ ರುಚಿ. ಚಟ್ನಿ, ಸಾರು ಜೊತೆ ತಿನ್ನಲು ಸೂಪರ್ ಆಗಿರುತ್ತದೆ, ಇದನ್ನು ನುಚ್ಚಕ್ಕಿ ಬಳಸಿ ಮಾಡಲಾಗುವುದು ಅಥವಾ ಕಡುಬು ತರಿ ಬಳಸಿ ಕೂಡ ರೆಡಿ ಮಾಡಬಹುದು. ಈ ಪಾಪಿಟ್ಟು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
ಸಲಹೆ: ಮಿಸ್ ಮಾಡದೆ ಟ್ರೈ ಮಾಡಿ ನೋಡಿ, ರುಚಿ ಬೊಂಬಾಟ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿ
ನುಚ್ಚಕ್ಕಿ 1 ಕಪ್
ತೆಂಗಿನ ತುರಿ 1/ 2 ಕಪ್
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
2 ಚಮಚ ತುಪ್ಪ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವಿನ ಎಲೆ
ಹಸಿ ಮೆಣಸು 2
ಮಾಡುವ ವಿಧಾನ
ಸ್ಟೆಪ್ 1
ನೀವು ಅಕ್ಕಿ ತೊಳೆದು 1/2 ಗಂಟೆ ನೆನೆ ಹಾಕಿ
ನೀವು ಒಂದು ಪಾತ್ರೆಗೆ ಅಕ್ಕಿ ಹಾಕಿ ಅದರ ಡಬಲ್ ನೀರು ಹಾಕಬೇಕು
ನೀವು ತಟ್ಟೆ ಅಥವಾ ಸ್ವಲ್ಪ ಅಗಲವಿರುವ ಟಿಫಿನ್ ಬಾಕ್ಸ್ ಆಯ್ಕೆ ಮಾಡಬಹುದು
ಅದರ ಮೇಲೆ ತೆಂಗಿನ ತುರಿ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ
ಸ್ಟೆಪ್ 2
ಇಡ್ಲಿ ಪಾತ್ರೆಯ ಒಂದು ತಟ್ಟೆ ಇಟ್ಟು ಅದರ ಮೇಲೆ ಈ ಪ್ಲೇಟ್ ಅಥವಾ ಪಾತ್ರೆ ಟ್ಟು
ಹಬೆಯಲ್ಲಿ 30 ನಿಮಿಷ ಬೇಯಿಸಿ
ಅಕ್ಕಿ ಸಂಪೂರ್ಣ ಬೆಂದು ತಟ್ಟೆ ಇಡ್ಲಿ ರೀತಿಯಾಗುವುದು.
ಈಗ ಉರಿಯಿಂದ ಇಳಿಸಿ
ಸ್ಟೆಪ್ 3
ಈಗ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ
ಮಾಡುವಾಗ ಅದರಲ್ಲಿ ಕರಿಬೇವು, ಹಸಿ ಮೆಣಸು ಹಾಕಿ ಆ ಮಿಶ್ರಣ ಬೆಂದ ಪಾಪಿಟ್ಟು ಮೇಲೆ
ಹಾಕಿ, 5 ನಿಮಿಷ ಬಿಟ್ಟು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.
ಸಾರು ಅಥವಾ ಕೆಂಪು ಚಟ್ನಿ ಜೊತೆ ಸವಿಯಿರಿ
ನೀವು ರೆಡಿಯಾದ ಪಾಪಿಟ್ಟು ಅನ್ನು ನೀವು ಸಾರು ಅಥವಾ ನೀರು ಚಟ್ನಿ ಜೊತೆ ಸವಿಯಿರಿ.
(ಗಟ್ಟಿ ಚಟ್ನಿಗೆ ಸ್ವಲ್ಪ ನೀರು ಸೇರಿಸಿ, ಒಗ್ಗರಣೆ ಹಾಕಿ)
ಮಟನ್, ಚಿಕನ್ ಸಾರಿಗೂ ಸೂಪರ್ ಆಗಿರುತ್ತದೆ. ನೀವು ನಾನ್‌ವೆಜ್ ಪ್ರಿಯರಾಗಿದ್ದರೆ ಇದನ್ನು ನಾನ್‌ವೆಜ್ ಗ್ರೇವಿ ಜೊತೆ ಕೂಡ ಸವಿಯಬಹುದು, ರುಚಿ ಸೂಪರ್ ಆಗಿರುತ್ತದೆ.
ಇತರ ಸಲಹೆ: ನುಚ್ಚಕ್ಕಿ ಇಲ್ಲದಿದ್ದರೆ ಅಕ್ಕಿಯನ್ನು
ತರಿತರಿಯಾಗಿ ಗ್ರೈಂಡ್ ಮಾಡಿ. ಕಡಬು ತರಿಯಂತೆ ತರಿತರಿಯಾಗಿ ಇರಬೇಕು.
ಇನ್ನು ಹುಳಿ ಮಿಶ್ರಿತ ಟೇಸ್ಟ್‌ನಲ್ಲಿ ಬಯಸುವುದಾದರೆ ನೀವು ತಯಾರಿಸುವಾಗ 1/2 ಕಪ್
ಅಕ್ಕಿಗೆ ಮುಕ್ಕಾಲು ಕಪ್ ನೀರು, 1/4 ಕಪ್ ಮೊಸರು ಸೇರಿಸಬಹುದು.
ಒಂದು ಕಪ್ ಅಕ್ಕಿಯನ್ನು ಒಂದೇ ತಟ್ಟೆಯಲ್ಲಿ ಹಾಕಬೇಡಿ, ತಟ್ಟೆ ಇಡ್ಲಿ ಮಾಡುವಾಗ
ಇಡುವಂತೆ ಇಡಿ.



Click it and Unblock the Notifications