Breakfast Recipe: ಕ್ಯಾಂಟೀನ್ ಸ್ಟೈಲ್‌ನ ಖುಷ್ಬೂ ಇಡ್ಲಿ..! ಹೂವಿನಷ್ಟೇ ಮೃದುವಾದ ತಿಂಡಿ!

Posted By:

ಬೆಳಗ್ಗೆ ತಿಂಡಿಗೆ ನೀವು ಇಡ್ಲಿ ಮಾಡಿ ಸವಿಯೋದು ಕಾಮನ್, ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಈ ಇಡ್ಲಿ ಎಲ್ಲರ ಮನೆಯ ತಿಂಡಿ ಅನ್ನಬಹುದು. ಇಡ್ಲಿ ಆರೋಗ್ಯಕ್ಕೂ ಬಹಳ ಉತ್ತಮವಾದ ತಿಂಡಿ ಏಕೆಂದರೆ ಇಡ್ಲಿ ಮಾಡುವಾಗ ಕಡಿಮೆ ಎಣ್ಣೆ ಬಳಸುವುದು ನಿಮ್ಮ ದೇಹಕ್ಕೆ ಬಹಳ ಉತ್ತಮ. ಹಾಗೆ ಫೈಬರ್ ಹೆಚ್ಚಾಗಿರುವ ಪದಾರ್ಥ ಇದಾಗಿದೆ. ಇಡ್ಲಿಯೊಂದಿಗೆ ರುಚಿ ರುಚಿಯ ಸಾಂಬಾರ್ ಹಾಗೆ ರುಚಿ ರುಚಿಯ ಯಾವುದಾದರು ಚಟ್ನಿ ಇದ್ದರೆ ನಿಮಗೆ

ಇಡ್ಲಿ ಅಂದರೆ ಎಲ್ಲರ ಮನೆಯಲ್ಲು ಸಾಮಾನ್ಯವಾಗಿ ಒಂದೇ ವಿಧಾನದಲ್ಲಿ ಮಾಡುತ್ತಾರೆ. ಉದ್ದು, ಅಕ್ಕಿ ನೆನೆಸಿ ಅದನ್ನು ರುಬ್ಬಿ ಒಂದು ರಾತ್ರಿ ಬಿಟ್ಟು ಮಾರನೆ ದಿನ ಇಡ್ಲಿ ಮಾಡುವುದು ನೋಡಬಹುದು. ಆದ್ರೆ ವಿಶೇಷವಾಗಿ ನೀವು ಇಡ್ಲಿ ಸವಿದಿರಬಹುದು. ತಟ್ಟೆ ಇಡ್ಲಿ, ರವೆ ಇಡ್ಲಿ, ತರಕಾರಿ ಇಡ್ಲಿ, ಹಾಗೆ ವಿವಿಧ ರೀತಿಯ ಇಡ್ಲಿಯನ್ನು ನೀವು ಸವಿದಿರುತ್ತೀರಿ.

Canteen Style Kushbu Idli At

ಇಡ್ಲಿಯಲ್ಲಿ ಹತ್ತಾರು ಬಗೆ ಇವೆ. ಅದರಲ್ಲೂ ಮೃದುವಾಗಿ, ಹೂವಿನಂತೆ ಇಡ್ಲಿ ಬರಬೇಕು ಎಂಬುದು ಎಲ್ಲರ ಬಯಕೆ ಆಗಿರಲಿದೆ. ಇದಕ್ಕಾಗಿ ಹಿಟ್ಟು ಸರಿಯಾದ ಪ್ರಮಾಣದಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಅದ್ರಲ್ಲೂ ಮಲ್ಲಿಗೆ ಇಡ್ಲಿ, ಖಷ್ಬೂ ಇಡ್ಲಿ ಅಂದರೆ ಬಾಯಲ್ಲಿ ನೀರು ಬರುತ್ತೆ. ಇದು ಮೃದುವಾಗಿರುವ ಕಾರಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಮನೆಯಲ್ಲಿ ಸವಿಯಲು ಇಷ್ಟಪಡುತ್ತಾರೆ.

ಹಾಗಾದ್ರೆ ನಾವಿಂದು ಈ ಹೂವಿನಂತ ಖುಷ್ಬೂ ಇಡ್ಲಿ ಮನೆಯಲ್ಲಿ ಮಾಡೋದು ಹೇಗೆ? ಹೋಟೆಲ್‌, ಕ್ಯಾಂಕೀನ್‌ನಲ್ಲಿ ಸಿಗುವಂತಹ ಈ ಖುಷ್ಬೂ ಇಡ್ಲಿಯನ್ನು ಮನೆಯಲ್ಲೇ ಮಾಡಿ ಸವಿಯುವ ಬಗೆ ಹೇಗೆ ಅನ್ನೋದನ್ನು ತಿಳಿಯೋಣ. ಖುಷ್ಬೂ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.


ಖುಷ್ಬೂ ಇಡ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?

  • ಅಕ್ಕಿ
  • ಉದ್ದು
  • ಸಾಬೂದಾನಿ
  • ಅವಲಕ್ಕಿ
  • ಎಣ್ಣೆ

ಖುಷ್ಬೂ ಇಡ್ಲಿ ಮಾಡಲು ಹಿಟ್ಟು ಮಾಡಿಕೊಳ್ಳುವ ವಿಧಾನವೇನು?

  • ಮೊದಲು ಮೂರು ಕಪ್ ಅಕ್ಕಿಯನ್ನು ಒಂದು ಬೌಲ್‌ಗೆ ಹಾಕಿ ಅದಕ್ಕೆ ಅರ್ಧ ಕಪ್ ಉದ್ದಿನ ಬೇಳೆ, 2 ಸ್ಪೂನ್ ಸಾಬೂದಾನಿ, 3 ಸ್ಪೂನ್ ಅವಲಕ್ಕಿ ಹಾಕಿಕೊಂಡು ನೀರು ಹಾಕಿ 3 ಬಾರಿ ತೊಳೆದುಕೊಂಡು ಮತ್ತೆ ನೀರು ಹಾಕಿ 5ರಿಂದ 6 ಗಂಟೆಗಳ ಕಾಲ ನೆನೆಸಿಡಬೇಕು.
  • 6 ಗಂಟೆಯ ಬಳಿಕ ಇದನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಮಿಕ್ಸಿ ಜಾರ್‌ನಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ಇದೇ ರೀತಿ ರುಬ್ಬಿ ದೊಡ್ಡ ಪಾತ್ರೆಗೆ ಹಿಟ್ಟು ಹಾಕಿಟ್ಟುಕೊಳ್ಳಿ. ಬಳಿಕ ಕೈಯಿಂದ ಹಿಟ್ಟನ್ನು ಮಿಕ್ಸ್ ಮಾಡಬೇಕು. ನಂತರ ಮುಚ್ಚಳ ಮುಚ್ಚಿ ಒಂದು ರಾತ್ರಿ ಹಾಗೆಯೇ ಬಿಡಿ.
  • ಮಾರನೆ ದಿನ ಬೆಳಗ್ಗೆ ಹಿಟ್ಟನ್ನು ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಬೇಕು. ಈಗ ಇಡ್ಲಿ ಮಾಡುವ ಅಚ್ಚುಗಳಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳಿ. ಹಾಗೆ ಇಡ್ಲಿ ಬೇಯಿಸುವ ಕುಕ್ಕರ್‌ನಲ್ಲಿ ಇಟ್ಟು ಒಮ್ಮೆ 2 ನಿಮಿಷ ಹಾಗೆಯೆ ಖಾಲಿಯಾಗಿ ಬಿಸಿಮಾಡಿಕೊಳ್ಳಿ.
  • ಅನಂತರ ಮುಚ್ಚಳ ತೆಗೆದು ಈ ಅಚ್ಚುಗಳಿಗೆ ಸುಮಾರು ಮುಕ್ಕಾಲು ಭಾಗದಷ್ಟು ಈ ಇಡ್ಲಿ ಹಿಟ್ಟನ್ನು ಹಾಕಿಕೊಳ್ಳಬೇಕು. ಇಡ್ಲಿ ಹಿಟ್ಟು ಹಾಕಿದ ಬಳಿಕ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 8ರಿಂದ 10 ನಿಮಿಷ ಬಿಟ್ಟರೆ ಸಾಕಾಗುತ್ತದೆ. ಇಷ್ಟಾದರೆ ನಿಮ್ಮ ಮುಂದೆ ಖುಷ್ಬೂ ಇಡ್ಲಿ ರೆಡಿಯಾಗುತ್ತದೆ. ಹೆಚ್ಚು ಸಮಯ ಬೇಯಿಸಬೇಡಿ. ಹಾಗೆ ಅಳತೆಯಂತೆ ಎಲ್ಲಾ ಪದಾರ್ಥಗಳ ತೆಗೆದುಕೊಳ್ಳಿ.
[ of 5 - Users]
Story first published: Tuesday, October 28, 2025, 16:52 [IST]
X
Desktop Bottom Promotion