Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಹಬ್ಬಕ್ಕೆ ಮಾಡಿ ಸೋರೆಕಾಯಿ ಪಾಯಸ
ದೀಪಾವಳಿ ಹಬ್ಬ ಬಂತು....ನೀವು ಹಬ್ಬದ ಸಮಯದಲ್ಲಿ ಸಾಬುದಾನ, ಶ್ಯಾವಿಗೆ ಇಂಥ ಪಾಯಸ ಮಾಡುತ್ತಿದ್ದರೆ ಈ ಬಾರಿ ಸೋರೆಕಾಯಿ ಪಾಯಸ ಟ್ರೈ ಮಾಡಿ ನೋಡಿ. ಸೋರೆಕಾಯಿ ಪಾಯಸ ರುಚಿಯಲ್ಲಿ ಅದ್ಭುತವಾಗಿರುತ್ತೆ, ಅಲ್ಲದೆ ಇದನ್ನು ಮಾಡುವುದು ಕೂಡ ಕಷ್ಟಕರವಾಗಿಲ್ಲ. ತುಪ್ಪ ಸುಲಭವಾಗಿ ಪಾಯಸ ಮಾಡಬಹುದು. ನಾವಿಲ್ಲಿ 3-4 ಜನರಿಗೆ ಸವಿಯುವ ಅಳತೆಯಲ್ಲಿ ಪಾಯಸದ ರೆಸಿಪಿ ಹೇಳಿದ್ದೇವೆ. ನೀವು ಎಷ್ಟು ಜನರಿಗೆ ಮಾಡ್ಬೇಕೋ ಅದಕ್ಕೆ ತಕ್ಕಂತೆ ಸಾಮಗ್ರಿ ಸ್ವಲ್ಪ ಅಧಿಕ ಹಾಕಿದರೆ ಸಾಕು.

ಬನ್ನಿ ಸೋರೆಕಾಯಿ ಪಾಯಸ ಮಾಡುವುದು ಹೇಗೆ ಎಂದು ತಿಳಿಯೋಣ...
Recipe By: Reena TK
Recipe Type: Kheer
Serves: 4
-
ಬೇಕಾಗುವ ಸಾಮಗ್ರಿ
* 1 ಚಮಚ ತುಪ್ಪ
* 1 ಕಪ್ ಸಿಪ್ಪೆ ತೆಗೆದು ತುರಿದ ಸೋರೆಕಾಯಿ
* ಎರಡೂವರೆಕಪ್ ದಪ್ಪ ಹಾಲು (ಕೆನೆ ಸಹಿತ)
* ಚಿಟಕೆಯಷ್ಟು ಕೇಸರಿ
* ಸ್ವಲ್ಪ ಏಲಕ್ಕಿ
* 5 ಚಮಚ ದೊಡ್ಡ ಚಮಚ ಸಕ್ಕರೆ (ಸಿಹಿಗೆ ತಕ್ಕಷ್ಟು)
* ಗೋಡಂಬಿ, ದ್ರಾಕ್ಷಿ
* 1-2 ಚಮಚ ರೋಸ್ ವಾಟರ್
-
ಮಾಡುವ ವಿಧಾನ
* ದಪ್ಪ ತಳವಿರುವ ಪಾತ್ರೆ ಬಿಸಿ ಮಾಡಿ ಅದಕ್ಕೆ 1 ಚಮಚ ತುಪ್ಪ ಹಾಕಿ.
* ತುಪ್ಪ ಬಿಸಿಯಾದಾಗ ಅದರಲ್ಲಿ ತುರಿದ ಸೋರೆಕಾಯಿ ಹಾಕಿ ಸೌಟ್ನಿಂದ ಆಡಿಸುತ್ತಾ ಹುರಿಯಿರಿ. ಸೋರೆಕಾಯಿಯ ಹಸಿ ವಾಸನೆ ಹೋಗುವಷ್ಟು ಹೊತ್ತು ಹುರಿಯಿರಿ.
* ನಂತರ ಹಾಲು ಸೇರಿಸಿ, ಉರಿಯನ್ನು ಮೀಡಿಯಂನಲ್ಲಿಟ್ಟು ಸೌಟ್ನಿಂದ ಆಡಿಸಿ, ಸಕ್ಕರೆ ಸೇರಿಸಿ ಬೇಯಿಸಿ. ಆಗಾಗ ಸೌಟ್ನಿಂದ ಆಡಿಸುತ್ತಾ ಇರಬೇಕು. ಹಾಲು ಮೆಲ್ಲನೆ ಕುದಿ ಬರಲು ಪ್ರಾರಂಭವಾದಾಗ ರೋಸ್ ವಾಟರ್ ಹಾಕಿ, ಕೇಸರಿ ಸೇರಿಸಿ.
* ಹಾಲು ಕಡಿಮೆ ಉರಿಯಲ್ಲೇ ಕುದಿಯುತ್ತಾ ಇನ್ನೂ ಸ್ವಲ್ಪ ಮಂದವಾಗಬೇಕು, ಆಗ ಏಲಕ್ಕಿ ಪುಡಿ ಮಾಡಿ ಹಾಕಿ.
* ಬಳಿಕ ಗೋಡಂಬಿ-ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಸೇರಿಸಿದರೆ ಸೋರೆಕಾಯಿ ಪಾಯಸ ರೆಡಿ.
- ನೀವು ಇದಕ್ಕೆ ಕೋಯಾ ಸೇರಿಸಿದರೆ ಟೇಸ್ಟ್ ಮತ್ತಷ್ಟು ರುಚಿಯಾಗಿರುತ್ತೆ
- ಸರ್ವ್ - 4
- ಕೊಬ್ಬು - 7ಗ್ರಾಂ
- ಕಾರ್ಬ್ಸ್ - 37ಗ್ರಾಂ



Click it and Unblock the Notifications