For Quick Alerts
ALLOW NOTIFICATIONS  
For Daily Alerts

ಬ್ಲ್ಯಾಕ್‌ ಫಾರೆಸ್ಟ್‌ ಕೇಕ್‌ ಮಾಡುವುದು ಹೇಗೆ?

Posted By:
|

ಕ್ರಿಸ್ಮಸ್‌, ನ್ಯೂ ಇಯರ್ ಎಲ್ಲಾ ಸಮೀಪಿಸುತ್ತಿದೆ. ಈ ವಿಶೇಷ ದಿನಗಳಲ್ಲಿ ಕೇಕ್‌ ಇರಲೇಬೇಕು. ಈ ಕೇಕ್ ಅನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು. ಇಲ್ಲಿ ನಾವು ಬ್ಲ್ಯಾಕ್‌ ಪಾರೆಸ್ಟ್‌ ಕೇಕ್‌ ಮಾಡುವುದು ಹೇಗೆ ಎಂದು ಹೇಳಿದ್ದೇವೆ.

 black forest cake recipe

ಇದನ್ನು ಮಾಡಲು ಸಮಯ ಸ್ವಲ್ಪ ಹೆಚ್ಚೇ ತಗುಲುತ್ತದೆ, ಆದರೆ 10-12 ಜನಕ್ಕೆ ಸವಿಯಲು ಈ ಕೇಕ್‌ ಮಾಡಿದರೆ ಬೆಸ್ಟ್‌. ಇನ್ನು ಮನೆಯ ಸದಸ್ಯರ ಅಥವಾ ನಿಮ್ಮ ಆಪ್ತರ ಹುಟ್ಟು ಹಬ್ಬವಿದ್ದಾಗ ಇದನ್ನು ನೀವು ತಯಾರಿಸಿ ಸರ್‌ಫ್ರೈಸ್ ಗಿಫ್ಟ್ ನೀಡಿ.

Black Forest Cake Recipe,ಬ್ಲ್ಯಾಕ್‌ ಫಾರೆಸ್ಟ್‌ ಕೇಕ್‌ ರೆಸಿಪಿ
Black Forest Cake Recipe,ಬ್ಲ್ಯಾಕ್‌ ಫಾರೆಸ್ಟ್‌ ಕೇಕ್‌ ರೆಸಿಪಿ
Prep Time
2 Hours0 Mins
Cook Time
35M
Total Time
2 Hours35 Mins

Recipe By: Reena TK

Recipe Type: sweet

Serves: 12

Ingredients
  • ಬೇಕಾಗುವ ಸಾಮಗ್ರಿ

    ಮೈದಾ ಹಿಟ್ಟು 220ಗ್ರಾಂ

    ಕೋಕಾಪುಡಿ (ಸಿಹಿ ಇಲ್ಲದ್ದು) 65 ಗ್ರಾಂ

    350 ಗ್ರಾಂ ಸಕ್ಕರೆ (ಪುಡಿ)

    2 ಚಮಚ ಬೇಕಿಂಗ್ ಸೋಡಾ

    1 ಚಮಚ ಬೇಕಿಂಗ್‌ ಪೌಡರ್

    1 ಚಮಚ ಉಪ್ಪು

    2 ಚಮಚ ಎಸ್‌ಪ್ರೆಸ್ಸೋ(espresso) ಪೌಡರ್ (optional)

    1/2 ಕಪ್ ವೆಜೆಟೇಬಲ್ ಆಯಿಲ್

    2 ಮೊಟ್ಟೆ

    180ಗ್ರಾಂ sour cream (ಫ್ರಿಡ್ಜ್‌ನಲ್ಲಿ ಇಡಬೇಡಿ)

    120ml ಮಜ್ಜಿಗೆ (ಫ್ರಿಡ್ಜ್‌ನಲ್ಲಿ ಇಡಬೇಡಿ)

    2 ಚಮಚ ವೆನಿಲ್ಲಾ ಎಕ್ಸ್‌ಟ್ರಾಕ್ಟ್

    2 ಚಮಚ ಡಾರ್ಕ್‌ ಸ್ವೀಟ್‌ ಚೆರ್ರಿ

    2 ಚಮಚ ಚೆರ್ರಿ ಲಿಕ್ಕರ್ ( kirsch or kirschwasser)

    * 1 ಕಪ್ ಹೆವಿ ವ್ಹಿಪ್ಪಿಂಗ್ ಕ್ರೀಮ್

    ಚಾಕೋಲೇಟ್‌ ಬಾರ್ 2 (ಚಿಕ್ಕದಾಗಿ ಕತ್ತರಿಸಿದ್ದು)

    1 ಚಮಚ ಕಾರ್ನ್ ಸಿರಪ್ (optional)

    ಮೇಲೆ ಕ್ರೀಮ್‌ಗೆ

    2 ಕಪ್ ಹೆವಿ ವ್ಹಿಪ್ಪಿಡ್‌ ಕ್ರೀಮ್

    1/4 ಕಪ್ ಸಕ್ಕರೆ ಪುಡಿ

    1 ಚಮಚ ವೆನಿಲ್ಲಾ ಎಕ್ಸ್‌ಟ್ರಾಕ್ಟ್

Red Rice Kanda Poha
How to Prepare
  • ಮಾಡುವುದು ಹೇಗೆ?

    * ಓವನ್‌ ಅನ್ನು 350 ಡಿಗ್ರಿ f ಉಷ್ಣತೆಗೆ ಪ್ರೀಹ್ಹೀಟ್‌ ಮಾಡಿ. ಈಗ 9 ಇಂಚಿನ ಕೇಪ್ ಪ್ಯಾನ್‌ಗೆ ಬೆಣ್ಣೆ ಸವರಿ, ನಂತರ ಪಾರ್ಚ್‌ಮೆಂಟ್‌ ಪೇಪರ್ ಹಾಕಿ ಅದರ ಮೇಲೆ ಬೆಣ್ಣೆ ಸವರಿ. ಪಾರ್ಚ್‌ಮೆಂಟ್‌ ಪೇಪರ್ ಕೇಕ್‌ ಸುಲಭದಲ್ಲಿ ತೆಗೆಯಲು ಸುಲಭವಾಗುವುದು.

    * ಈಗ ಒಂದು ಬೌಲ್‌ಗೆ ಮೈದಾ ಹಿಟ್ಟು, ಕೋಕಾ ಪುಡಿ, ಉಪ್ಪು ಮತ್ತು ಎಕ್ಸ್‌ಪ್ರೆಸ್ಸೋ ಪುಡಿ ಹಾಕಿ ಮಿಕ್ಸ್ ಮಾಡಿ ಒಂದು ಬದಿಯಲ್ಲಿ ಇಡಿ. ಈಗ ಮತ್ತೊಂದು ಬೌಲ್‌ಗೆ ಎಣ್ಣೆ, ಮೊಟ್ಟೆ, ಸೋರ್‌ ಕ್ರೀಮ್, ಮಜ್ಜಿಗೆ, ವೆನಿಲ್ಲಾ ಹಾಕಿ ಚೆನ್ನಾಗಿ ಕದಡಿ. ಈಗ ಮಿಕ್ಸ್ ಮಾಡಿಟ್ಟ ಮೈದಾ ಪುಡಿಯನ್ನು ಕದಡಿದ ಮಿಶ್ರಣಕ್ಕೆ ಹಾಕಿ ತಿರುಗಿಸಿ, ಗಂಟು ಕಟ್ಟ ಬಾರದು, ಈಗ ಬಿಸಿ ನೀರು ಅಥವಾ ಬ್ಲ್ಯಾಕ್‌ ಕಾಫಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

    * ಈಗ ಮಿಶ್ರಣವನ್ನು ಮೂರು ಪಾತ್ರೆಗೆ ಸಮವಾಗಿ ಹಾಕಿ 21-25 ನಿಮಿಷ ಬೇಯಿಸಿ, ನೀವೊಂದು ಟೂತ್‌ ಪಿಕ್ ತೆಗೆದು ಚುಚ್ಚಿ ನೋಡಿದಾಗ ಮಿಶ್ರಣ ಅದಕ್ಕೆ ಅಂಟದಿದ್ದರೆ ಕೇಕ್‌ ಬೆಂದಿದೆ ಎಂದು ಅರ್ಥ.

    * ಈಗ ಕೇಕ್‌ ಅನ್ನುಓವನ್‌ನಿಂದ ತೆಗೆಯಿರಿ. ಈಗ ತಣ್ಣಗಾಗಲು ಬಿಡಿ.

    * ಚೆರ್ರಿ ಸಿರಪ್‌ ಹಾಗೂ ಚೆರ್ರಿ ಲಿಕ್ಕರ್ ಅನ್ನು ಒಂದು ಚಿಕ್ಕ ಪಾತ್ರೆಗೆ ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ. 60mlಇದ್ದದ್ದು 40ml ಆಗುವಷ್ಟು ಹೊತ್ತು ಕಾಯಿಸಿ. ಈಗ ಕೇಕ್‌ನ ಮೇಲೆ ಸವರಿ, ನಂತರ ಚೆರ್ರಿ ಇಟ್ಟು ಅಲಂಕಾರ ಮಾಡಿ.

    * ಈಗ ಚಾಕೋಲೇಟ್‌ ಹಾಗೂ ಕಾರ್ನ್‌ ಸಿರಪ್‌ ಅನ್ನು ಕಡಿಮೆ ಉರಿಯಲ್ಲಿ ಕರಗಿಸಿ, 10 ನಿಮಿಷ ತಣ್ಣಗಾಗಲು ಇಡಿ.

    * ಈಗ ಹೆವಿ ಕ್ರೀಮ್, ಸಕ್ಕರೆ ಪುಡಿ, ವೆನಿಲ್ಲಾ ರಸ ಹಾಕಿ ಚೆನ್ನಾಗಿ ಕದಡಿ.

    * ಒಂದು ಕೇಕ್ ತಟ್ಟೆಯ ಕೆಳ ಭಾಗದಲ್ಲಿಟ್ಟು ಅದರ ಮೇಲೆ ವ್ಹಿಪ್ಪಿಂಗ್ ಕ್ರೀಮ್ ಹಾಕಿ, ಚಾಕೋಲೇಟ್‌ ಸಿರಪ್‌ ಹಾಕಿ ಮತ್ತೊಂದು ಕೇಕ್ ಇಟ್ಟು ಅದರ ಮೇಲೆ ಹೀಗೆ ಕ್ರೀಮ್‌ ಹಾಕಿ ನಂತರ ಉಳಿದ ಕ್ರೀಮ್‌ ಅನ್ನು ಮೇಲೆ ಹಾಕಿ ಚೆರ್ರಿ ಹಣ್ಣಿನಿಂದ ಅಲಂಕರಿಸಿ 3-4 ಗಂಟೆ ಫ್ರಿಡ್ಜ್‌ನಲ್ಲಿಟ್ಟರೆ ಬ್ಲ್ಯಾಕ್‌ ಫಾರೆಸ್ಟ್ ಕೇಕ್‌ ರೆಡಿ.

Instructions
  • ನೀವು ಫ್ರಿಡ್ಜ್‌ನಲ್ಲಿಟ್ಟ ವಸ್ತುಗಳನ್ನು ಬಳಸುವುದಾದರೆ ರೂಮ್‌ನ ಉಷ್ಣತೆಗೆ ತಂದು ನಂತರ ಬಲಸಬೇಕು.
Nutritional Information
[ 4.5 of 5 - 50 Users]
X
Desktop Bottom Promotion