Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
10ನೇ ಬಾರಿ ಬಿಹಾರ ಸಿಎಂ; ನಿತೀಶ್ ಕುಮಾರ್ ಒಟ್ಟು ಆಸ್ತಿ ಎಷ್ಟು? ಮೊದಲ ಬಾರಿ ಗೆದ್ದಿದ್ದು ಹೇಗೆ?
ಬಿಹಾರ ರಾಜಕೀಯ ಇತಿಹಾಸದಲ್ಲಿ ನಿತೀಶ್ ಕುಮಾರ್ ಹೆಸರು ದೊಡ್ಡ ಇತಿಹಾಸ ಬರೆದಿದೆ. ಅವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚಿಸಲಿದ್ದಿ, ಮತ್ತೊಂದು ಅವದಿಗೆ ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಇಂದು ನಿತೀಶ್ ಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ 10ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಹೊಸ ದಾಖಲೆಯಾಗಿದೆ.
ಈ ಪ್ರಮಾಣ ವಚನ ಸಮಾರಂಭಕ್ಕೆ ಬಿಜೆಪಿ ಗಣ್ಯರು ಭಾಗಿಯಾಗುತ್ತಿದ್ದಾರೆ. ನಿತೀಶ್ ಕುಮಾರ್ ಈ ಮೊದಲು ಸಿಎಂ ಆಗಿ ಮುಂದುವರೆದಿದ್ದರು, ಹಾಗೆ ಹಲವು ಬಾರಿ 5 ವರ್ಷ ಪೂರೈಸಿದ್ದಾರೆ. ಹೀಗಾಗಿ ಬಿಹಾರದ ರಾಜಕೀಯ ಇತಿಹಾಸದಲ್ಲಿ ಅವರದ್ದು ಅಚ್ಚಳಿಯದ ಹೆಸರಾಗಿದೆ. ಒಮ್ಮೆ ಬಿಜೆಪಿಯಿಂದ ಹೊರಬಂದ ಅವರು ಸಿಎಂ ಸ್ಥಾನ ನೀಡಿದ ಬಳಿಕ ಪುನಃ ಎನ್‌ಡಿಎ ಒಕ್ಕೂಟ ಸೇರಿದ್ದರು.

ಯಾರು ಈ ನಿತೀಶ್ ಕುಮಾರ್ ಅವರ ಆರಂಭಿಕ ಜೀವನ ಹೇಗಿತ್ತು?
ನಿತೀಶ್ ಕುಮಾರ್ ಮಾರ್ಚ್ 1 1951 ರಂದು ಬಿಹಾರದ ಪಾಟ್ನಾ ಜಿಲ್ಲೆಯಲ್ಲಿರುವ ಭಕ್ತಿಯಾರ್ಪುರ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದವರು. ಅವರು ಬಿಹಾರ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಪೂರೈಸಿದ್ದಾರೆ. ಆದ್ರೆ ಅವರು ನೇರವಾಗಿ ರಾಜಕೀಯ ಪ್ರವೇಶಿಸಿದವರಲ್ಲ. ಬದಲಿಗೆ 1972ರ ನಂತರ ಬಿಹಾರದ ರಾಜ್ಯ ವಿದ್ಯುತ್ ಮಂಡಳಿಯಲ್ಲಿ ಕೆಲ ಕಾಲ ಉದ್ಯೋಗಿಯಾಗಿದ್ದರು.
ಆದ್ರೆ 1974ರಿಂದ 1977ರ ನಡುವೆ ಆರಂಭಗೊಂಡಿದ್ದ ಜೆ.ಪಿ ಚಳವಳಿಯ ಸಮಯದಲ್ಲಿ ಅವರು ಹೋರಾಟದಲ್ಲಿ ಭಾಗಿಯಾಗಿದ್ದರು. 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಇದಾದ ಬಳಿಕ ರಾಜಕೀಯ ರಂಗದಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದರು. ಹೀಗಾಗಿ ಸಮತಾ ಪಕ್ಷದ ಸದಸ್ಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.
ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಿಸಾಟಿಯಾಗಿ ಹುಟ್ಟಿಕೊಂಡಿದ್ದ ಜನತಾ ಪಕ್ಷ ಎಲ್ಲಾ ರಾಜ್ಯದಲ್ಲೂ ಬೇರೂರಲು ಆರಂಭಿಸಿತ್ತು. ಈ ಸಮಯದಲ್ಲಿ ನಿತೀಶ್ ಕುಮಾರ್ ಜನತಾದಳ (ಯುನೈಟೆಡ್) ಸೇರ್ಪಡೆಯಾದರು. ಪಕ್ಷ ಸೇರಿದ ತಕ್ಷಣ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿಲ್ಲ, ಬದಲಿಗೆ ನಿತೀಶ್ ಕುಮಾರ್ ಅಲ್ಲಿ ಕಾರ್ಯಕರ್ತರಂತೆ ದುಡಿಯಲು ಆರಂಭಿಸಿದರು. ಕಾಂಗ್ರೆಸ್ ವಿರುದ್ಧದ ಹೋರಾಟದ ಮುಂದಾಳತ್ವ ವಹಿಸಿದ್ದರು.
ಮೊದಲ ಚುನಾವಣೆ ಗೆದ್ದ ನಿತೀಶ್ ಕುಮಾರ್
ಪಕ್ಷ ಕಟ್ಟುವ ಕೆಲಸದಲ್ಲಿದ್ದ ನಿತೀಶ್ ಕುಮಾರ್ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಪಡೆದರು. 1985 ರಲ್ಲಿ ಅವರು ಹರ್ನೌತ್ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ಚುನಾವಣೆ ಗೆದ್ದ ಬಳಿಕ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡಲು ತಮ್ಮದೆ ತಂತ್ರ ರೂಪಿಸಿದರು. ಹಾಗೆ ಮುಂದಿನ ಹಲವು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
ನಿತೀಶ್ ಕುಮಾರ್ ಮೊದಲ ಬಾರಿಗೆ 2000ದಲ್ಲಿ ಬಿಹಾರದ ಮುಖ್ಯಮಂತ್ರಿಯಾದರು. ಅಂದಿನಿಂದ ಅವರು ಹಲವಾರು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ, ಇದು ಅವರನ್ನು ಭಾರತದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಹಾಗೆ ಕೇಂದ್ರ ಸರ್ಕಾರ ಸೇವೆಯೊಂದಿಗೂ ಅಧಿಕಾರವಧಿ ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ, ಅವರು ರೈಲ್ವೆ, ಕೃಷಿ ಮತ್ತು ಮೇಲ್ಮೈ ಸಾರಿಗೆಯಂತಹ ಪ್ರಮುಖ ಸಚಿವಾಲಯಗಳನ್ನು ಸಹ ನಿರ್ವಹಿಸಿದರು.
ನಿತೀಶ್ ಕುಮಾರ್ ಫೆಬ್ರವರಿ 22 1973 ರಂದು ಮಂಜು ಕುಮಾರಿ ಸಿನ್ಹಾ ಅವರನ್ನು ವಿವಾಹವಾದರು. ದಂಪತಿಗೆ ಒಬ್ಬ ಮಗನಿದ್ದಾನೆ. ಅವರ ತಂದೆ ರಾಮ್ ಲಖನ್ ಸಿಂಗ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ನಾಟಿ ವೈದ್ಯ ಆಗಿ ಕೆಲಸ ಮಾಡಿದರು, ಅವರ ತಾಯಿ ಪರಮೇಶ್ವರಿ ದೇವಿ ಗೃಹಿಣಿಯಾಗಿದ್ದರು. ಅವರ ಪತ್ನಿ 2007 ರಲ್ಲಿ ನಿಧನರಾದರು.
ನಿತೀಶ್ ಕುಮಾರ್ ಒಟ್ಟು ಆಸ್ತಿ ಎಷ್ಟು?
ನಿತೀಶ್ ಕುಮಾರ್ ಅವರ ನಿವ್ವಳ ಮೌಲ್ಯ ಸುಮಾರು ₹1.65 ಕೋಟಿ. ಅವರ ಆಸ್ತಿಯಲ್ಲಿ ಸ್ಥಿರ ಆಸ್ತಿ ಮತ್ತು ಉಳಿತಾಯ ಸೇರಿವೆ ಮತ್ತು ಅವರಿಗೆ ಯಾವುದೇ ಪ್ರಮುಖ ಸಾಲಗಳಿಲ್ಲ ಎಂದು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಿಂದ ತಿಳಿದುಬರಲಿದೆ.



Click it and Unblock the Notifications