Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಮನೆಯಲ್ಲಿ ಬೆಸ್ಟ್ ಗೀ ರೈಸ್ ಮಾಡುವುದು ಹೇಗೆ..? ಇಲ್ಲಿದೆ ಸುಲಭದ ವಿಧಾನ
ಗೀ ರೈಸ್, ತುಪ್ಪ, ಸಂಪೂರ್ಣ ಮಸಾಲೆಗಳು, ಈರುಳ್ಳಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳೊಂದಿಗೆ ತಯಾರಿಸಿದ ಶ್ರೇಷ್ಠ ಮತ್ತು ಸೂಪರ್ ಆರೊಮ್ಯಾಟಿಕ್ ದಕ್ಷಿಣ ಭಾರತೀಯ ಊಟವಾಗಿದೆ. ಈ ಗೀ ರೈಸನ್ನು ನೀವು ಎರಡು ಬಗೆಯಲ್ಲಿ ಸವಿಯಬಹುದು. ಒಂದು ಇದು ಹೇಗಿದೆಯೋ ಹಾಗೆಯೇ ಸವಿಯಬಹುದು ಅಥವಾ ಸೋಯಾ ತುಣುಕುಗಳನ್ನು ಇದರಲ್ಲಿ ಹಾಕಿಕೊಂಡು ತಿನ್ನಬಹುದು. ಆದರೆ ಯಾವುದು ಇದ್ದರು ಇಲ್ಲದಿದ್ದರು ಈ ಅನ್ನದ ಪ್ರಕಾರವು ನಿಮ್ಮ ಬಾಯಿಯಲ್ಲಿ ನೀರೂರಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಪಲಾವ್ ಎಲೆ ಮತ್ತು ಜೀರಿಗೆಯಂತಹ ಮಸಾಲೆ ಪದಾರ್ಥಗಳು ಈ ಖಾದ್ಯವನ್ನು ಮತ್ತಷ್ಟು ರುಚಿಕರ ಮಾಡುತ್ತವೆ. ಈ ಮಸಾಲಾ ಗೀ ರೈಸನ್ನು ತಯಾರಿಸುವುದು ಸಹ ಸುಲಭ. ಹಾಗಾದರೆ ಇಂದು ನಾವು ಗೀ ರೈಸ್ ಮಾಡುವ ವಿಧಾನ ಹಾಗೂ ತಯಾರಿಸಲು ಬೇಕಾದ ಪದಾರ್ಥಗಳೇನು ಎಂಬುದನ್ನು ನೋಡೋಣ.

ಅಗತ್ಯವಾದ ಪದಾರ್ಥಗಳು
- ತುಪ್ಪ - 2 ಟೀ. ಚಮಚ
- ಜೀರಿಗೆ - 1 ಟೀ. ಚಮಚ
- ಪಲಾವ್ ಎಲೆ - 3
- ಗೋಡಂಬಿ - 3 ಟೀ. ಚಮಚ (ಕತ್ತರಿಸಿದಂತಹುದು)
- ಕರಿ ಬೇವು ಸೊಪ್ಪು - 4 - 5
- ಹಸಿ ಬಟಾಣಿ - ½ ಕಪ್
- ಈರುಳ್ಳಿ - 2 (ಕತ್ತರಿಸಿದಂತಹುದು)
- ಹಸಿ ಮೆಣಸಿನಕಾಯಿ- 3 (ಸಣ್ಣಗೆ ಕತ್ತರಿಸಿದಂತಹುದು)
- ರುಚಿಗೆ ತಕ್ಕಷ್ಟು ಉಪ್ಪು
- ಅರಿಶಿನ - 1 ಟೀ. ಚಮಚ
- ಖಾರದ ಪುಡಿ - 1 ಟೀ. ಚಮಚ
- ಅನ್ನ - 1 ½
ಪಾಕ ವಿಧಾನ
ಕುಕ್ಕರ್ಗೆ 1½ ಚಮಚ ತುಪ್ಪವನ್ನು ಸೇರಿಸಿ. ನಂತರ 14 ರಿಂದ 20 ಗೋಡಂಬಿ ಸೇರಿಸಿ ಮತ್ತು ಲಘುವಾಗಿ ಗೋಲ್ಡನ್ ಆಗುವವರೆಗೆ ಹುರಿಯಿರಿ. 14 ಒಣದ್ರಾಕ್ಷಿಗಳನ್ನು ಸಹ ಸೇರಿಸಿ. ಅವು ಸರಿಯಾಗಿ ಹುರಿದ ಮೇಲೆ ಅದನ್ನು ತೆಗೆದು ಪಕ್ಕಕ್ಕೆ ಇಟ್ಟಿಕೊಳ್ಳಿ.
1 ಮಧ್ಯಮ ತೆಳುವಾಗಿ ಕತ್ತರಿಸಿದ ಈರುಳ್ಳಿಯನ್ನು ಅದೇ ಪಾತ್ರೆಗೆ ಹಾಕಿ, ಗೋಲ್ಡನ್ ಅಥವಾ ತಿಳಿ ಕಂದು ಬಣ್ಣ ಬರುವವರೆಗೆ ಅವುಗಳನ್ನು ಸಮವಾಗಿ ಹುರಿಯಿರಿ. ಬಳಿಕ ಅರ್ಧ (½) ಚಮಚ ತುಪ್ಪವನ್ನು ಸೇರಿಸಿ. 1 ದಾಲ್ಚಿನ್ನಿ ಎಲೆ ಹಾಕಿ, 1 ಚಕ್ರಮೊಗ್ಗು ಹಾಕಿ, 4 ಲವಂಗ, 1 ಸಣ್ಣ ದಾಲ್ಚಿನ್ನಿ ಚೆಕ್ಕೆ, 3 ಏಲಕ್ಕಿ ಸೇರಿಸಿ. ಒಂದು ನಿಮಿಷ ಫ್ರೈ ಮಾಡಿ. ನಂತರ 2 ಕತ್ತರಿಸಿದ ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಮತ್ತು ಒಂದು ನಿಮಿಷ ಫ್ರೈ ಮಾಡಿ.
ಬಳಿಕ ಬಸಿದು ಅಳತೆ ಮಾಡಿಕೊಂಡಿದ್ದ ಅಕ್ಕಿಯನ್ನು ಸೇರಿಸಿ. ಸುಮಾರು 3 ರಿಂದ 4 ನಿಮಿಷಗಳ ಕಾಲ ಫ್ರೈ ಮಾಡಿ, ಸಮವಾಗಿ ಬೆರೆಸಿ ಮತ್ತು ಹುರಿಯಿರಿ. ಅರ್ಧ ಚಮಚ ಉಪ್ಪು ಸೇರಿಸಿ. ಕುಕ್ಕರ್ನಲ್ಲಿ ಬೇಯಿಸಿದರೆ 1¾ ಕಪ್ ನೀರು ಸುರಿಯಿರಿ. ಒಂದು ಪಾತ್ರೆಯಲ್ಲಿ ಬೇಯಿಸಲು, 2 ಕಪ್ ನೀರು ಸುರಿಯಿರಿ. ಎಲ್ಲಾ ಹಾಕಿದ ಬಳಿಕ ಚೆನ್ನಾಗಿ ಮಿಶ್ರಣ ಮಾಡಿ.
ನೀವು ಕುಕ್ಕರ್ ಅಲ್ಲದೆ ಒಂದು ಪಾತ್ರೆಯಲ್ಲಿ ಅಡುಗೆ ಮಾಡುತ್ತಿದ್ದರೆ, ನೀರನ್ನು ಕುದಿಸಿ ಬಳಿಕ ಉರಿಯನ್ನು ಕಡಿಮೆ ಮಾಡಿ. ಅಕ್ಕಿ ಸಂಪೂರ್ಣವಾಗಿ ಬೇಯಿಸುವವರೆಗೆ ಮುಚ್ಚಿ ಬೇಯಿಸಿ. ಮುಗಿದ ನಂತರ 10 ರಿಂದ 15 ನಿಮಿಷಗಳ ಕಾಲ ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿಡಿ. ಪಾತ್ರೆಯಲ್ಲಿನ ಶಾಖವು ಅನ್ನವನ್ನು ಮತ್ತಷ್ಟು ಮೃದುವಾಗಿಸುತ್ತದೆ.



Click it and Unblock the Notifications