Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮುಕಾಬಲಾ ಹಾಡಿಗೆ ಬೆಂಗಳೂರು ಪ್ರಾಧ್ಯಾಪಕ ಪುಷ್ಪರಾಜ್: ವಿಡಿಯೋ ವೈರಲ್
ಶಾಲಾ ಕಾಲೇಜುಗಳಲ್ಲಿ ಮಕ್ಕಳೊಂದಿಗೆ ಶಿಕ್ಷಕರು ಪ್ರಾಧ್ಯಾಪಕರು ಸೇರಿ ಹಲವರು ನೃತ್ಯ ಕಲಿಸುವುದು, ಮಾಡುವುದು ಅವರೊಂದಿಗೆ ಬೆರೆತು ಕಾರ್ಯಕ್ರಮಗಳ ಮಾಡುವುದು ನೋಡಿರುತ್ತೀರಿ. ಆದ್ರೆ ಶಿಕ್ಷಕರು ಮಕ್ಕಳ ರಂಜಿಸಲು ವೇದಿಕೆ ಮೇಲೆ ನೃತ್ಯ ಮಾಡೋದು ಬಹಳ ಕಡಿಮೆ. ಆದ್ರೆ ಇಲ್ಲೊಬ್ಬ ಪ್ರಾಧ್ಯಾಪಕರು ವೇದಿಕೆ ಮೇಲೆ ಮಾಡಿದ ಡ್ಯಾನ್ಸ್ ಈಗ ಇಂಟ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದೆ.
ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕರಾಗಿರುವ ಪುಷ್ಪ ರಾಜ್, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹೆಜ್ಜೆ ಹಾಕಿರುವ ವ್ಯಕ್ತಿ. ಗಣೇಶ ಚತುರ್ಥಿ ಹಿನ್ನಲೆಯಲ್ಲಿ ನಡೆದಿರುವ ಸಾಂಸ್ಕೃತಿಕ ಕಾರ್ಯಕ್ರಮ ಹಿನ್ನೆಲೆಯಲ್ಲಿ ಈ ನೃತ್ಯ ಮಾಡಿದ್ದಾರೆ ಎಂಬುದು ಹಿನ್ನೆಲೆಯಿಂದ ತಿಳಿದುಬರುತ್ತಿದೆ.

ಈ ಡ್ಯಾನ್ಸ್ ವಿಡಿಯೋವನ್ನು ಹಲವು ಇನ್ಸ್‌ಸ್ಟಾಗ್ರಾಮ್ ಖಾತೆಗಳು ಹಂಚಿಕೊಂಡಿವೆ. ಅವರು ಪ್ರಭುದೇವ ಹೆಜ್ಜೆ ಹಾಕಿದ್ದ ಮುಕಾಬಲಾ ಹಾಡಿಗೆ ಪ್ರಾಧ್ಯಾಪಕ ಪುಷ್ಪರಾಜ್ ಕೂಡ ಅದ್ಬುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿರುವುದಲ್ಲದೆ ಹಲವರು ಹಂಚಿಕೊಂಡಿದ್ದಾರೆ.
ಇನ್ನು ಅವರ ಡ್ಯಾನ್ಸ್ ನೋಡಿದ ಅಲ್ಲಿನ ವಿದ್ಯಾರ್ಥಿಗಳು ಮಾತ್ರವಲ್ಲ ವಿಡಿಯೋ ನೋಡಿದ ಜನರು ಕೂಡ ಅಚ್ಚರಿಗೊಳಗಾಗಿದ್ದಾರೆ. ಅವರ ಪಾಠವನ್ನಷ್ಟೇ ಕೇಳಿದ್ದ ವಿದ್ಯಾರ್ಥಿಗಳು ಡ್ಯಾನ್ಸ್ ನೋಡಿ ಅಚ್ಚರಿಗೊಳಗಾದರೆ, ಇತ್ತ ಅಂತರ್ಜಾಲ ಬಳಕೆದಾರರು ಅವರ ಪ್ರಭುದೇವ ರೀತಿಯ ಸ್ಟೈಲ್‌ನಲ್ಲಿ ಮಾಡಿರುವ ಡ್ಯಾನ್ಸ್ ಕಂಡು ಫಿದಾ ಆಗಿದ್ದಾರೆ.
ಹೀಗಾಗಿ ಅವರ ವಿಡಿಯೋಗೆ ಹಲವರು ತಪಾಷೆಯಾಗಿ ಹಲವು ರೀತಿಯ ಕಮೆಂಟ್‌ಗಳ ಮಾಡಿದ್ದಾರೆ. 'ಅವರು ತಪ್ಪಾಗಿ ತಮ್ಮ ಪ್ರೊಫೆಶನ್ ಆಯ್ಕೆ ಮಾಡಿಕೊಂಡಿದ್ದಾರೆ' ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅವರು ಡ್ಯಾನ್ಸ್ ಮಾಸ್ಟರ್ ಇರಬಹುದು. ವೇದಿಕೆ ಸಿಕ್ಕಾಗ ಬಳಸಿಕೊಂಡಿದ್ದಾರೆ ಎಂದಿದ್ದಾರೆ.
ಗಣಪತಿ ಹಬ್ಬದಲ್ಲಿ ಎಲ್ಲರು ಡ್ಯಾನ್ಸರ್‌ಗಳಾಗುತ್ತಾರೆ. ಎಲ್ಲರಿಗೂ ಹಾಡು ಬರೋದು ಕಾಮನ್ ಎಂದು ಮತ್ತೊಬ್ಬರಿ ತಮಾಷೆಯ ಕಮೆಂಟ್‌ಗಳ ಮಾಡಿದ್ದಾರೆ. 'ಅವರು ತಪ್ಪು ವೃತ್ತಿಯನ್ನು ಆರಿಸಿಕೊಂಡರು' ಎಂದು ವ್ಯಂಗ್ಯವಾಡಿದ್ದಾರೆ. ಬೇರೊಬ್ಬರು, 'ಶೂಗಳು ಕಳಚಿಕೊಂಡಿವೆ, ಅವನ ಆತ್ಮವಿಶ್ವಾಸವಲ್ಲ' ಎಂದು ಸೇರಿಸಿದ್ದಾರೆ. ಅವರ ಪಠ್ಯಗಳು ಪೂರ್ಣವಾಗಿ ಅವಧಿ ಮುನ್ನವೇ ಮುಗಿಸಿರಬೇಕು ಹೀಗಾಗಿ ಬಹಳ ಖುಷಿಯಲ್ಲಿದ್ದಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ.
ಈ ಹಾಡಿಗೆ ಈಗಲು ಮಂದಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ರಂಜಿಸುವ ಹಲವು ವಿಡಿಯೋಗಳ ನೋಡಬಹುದು. ಈ ಹಾಡಿನ ಮೂಲಕ ನಟ ಪ್ರಭುದೇವ ಕೂಡ ಫೇಮಸ್ ಆಗಿದ್ದರು. 1994ರಲ್ಲಿ ಈ ಹಾಡು ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ನಂತರ ಹಲವು ಬಾರಿ ರಿಮಿಕ್ಸ್ ಆಗಿ ಜನರ ಮುಂದೆ ಬಂದಿದೆ. 2019ರಲ್ಲಿ ಬಂದ ಬಾಲಿವುಡ್ ಸಿನಿಮಾ ಸ್ಟ್ರೀಟ್ ಡ್ಯಾನ್ಸರ್‌ನಲ್ಲಿ ಈ ಹಾಡಿನ ಹೊಸ ರೀತಿಯ ರಿಮಿಕ್ಸ್ ಬಂದು ಈ ಹಾಡು ಮತ್ತಷ್ಟು ಫೇಮಸ್ ಆಗಿತ್ತು. ಮೂಲ ಹಾಡಿಗೆ ಎ ಆರ್ ರೆಹಮಾನ್ ಸಂಗೀತ ನೀಡಿದ್ದರು.
ಸದ್ಯ ಬೆಂಗಳೂರು ಪ್ರಾಧ್ಯಾಪಕರ ಈ ಡ್ಯಾನ್ಸ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರು ನೃತ್ಯ ಮಾಡುವಾಗ ಶೂ ಕಳಚಿದರೂ ಸ್ವಲ್ಪವೂ ವಿಚಿಲಿತರಾಗದೆ ತಮ್ಮ ಡ್ಯಾನ್ಸ್ ಮುಂದುವರೆಸಿದ್ದಾರೆ. ಹಾಗೆ ಪೂರ್ಣ ಹಾಡಿಗೆ ಅವರು ನೃತ್ಯ ಮಾಡಿದ್ದಾರೆ. ಈ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸೆನ್ಷೇಶನ್ ಕ್ರಿಯೇಟ್ ಮಾಡಿದೆ.



Click it and Unblock the Notifications