Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಆಲೂ ದಮ್: ಬೆಂಗಾಲಿ ಶೈಲಿಯ ರೆಸಿಪಿ
ನೀವು ಬೆಂಗಾಲಿ ಶೈಲಿಯ ಆಲೂ ದಮ್ ರುಚಿ ನೋಡಿದರೆ ವಾವ್! ಆಲೂಗಡ್ಡೆಯಿಂದ ಇಷ್ಟೊಂದು ಟೇಸ್ಟಿ ಅಡುಗೆ ಮಾಡಬಹುದೇ ಎಂದು ಅಚ್ಚರಿ ಪಡುವಿರಿ, ಅಷ್ಟೊಂದು ರುಚಿಯಾಗಿರುತ್ತದೆ.
ಈ ಆಲೂದಮ್ ವೀಕೆಂಡ್‌ಗಳಲ್ಲಿ ಸ್ಪೆಷಲ್ ಬ್ರೇಕ್‌ಫಾಸ್ಟ್ ಸವಿಯಬೇಕೆಂದು ಅನಿಸಿದ ದಿನ ಪೂರಿಗೆ ಕಾಂಬಿನೇಷನ್ ಆಗಿ ಮಾಡಲು ಬೆಸ್ಟ್ ಅಡುಗೆಯಾಗಿದೆ.

ಈ ಆಲೂದಮ್ ಮಾಡಲು ಸ್ವಲ್ಪ ಅಧಿಕ ಸಮಯ ಹಿಡಿಯುವುದು ಆದರೆ ಇದರ ರುಚಿಯ ಮುಂದೆ ಪಟ್ಟ ಶ್ರಮ ಸಾರ್ಥಕ ಅನಿಸುವುದು. ಇದನನ್ನು ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ ನೋಡಿ:
Recipe By: Reena TK
Recipe Type: Side Dish
Serves: 4
-
ಬೇಕಾಗುವ ಸಾಮಗ್ರಿ
1 ಇಂಚಿನಷ್ಟು ದೊಡ್ಡದಿರುವ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು)
2 ಹಸಿ ಮೆಣಸಿನಕಾಯಿ, ಕತ್ತರಿಸಿದ್ದು
1 ಈರುಳ್ಳಿ (ಕತ್ತರಿಸಿದ್ದು)
4 ಬೆಳ್ಳುಳ್ಳಿ ಎಸಳು
ಆಲೂಗಡ್ಡೆ ರೋಸ್ಟ್ ಮಾಡಲು
250 ಗ್ರಾಂ ಚಿಕ್ಕ ಆಲೂಗಡ್ಡೆ (ಬೇಬಿ ಪೊಟೆಟೊ)
1 ಚಮಚ ಸಾಸಿವೆ ಎಣ್ಣೆ
ರುಚಿಗೆ ತಕ್ಕ ಉಪ್ಪು
ಆಲೂ ದಮ್‌ಗೆ ಬೇಕಾಗುವ ಸಾಮಗ್ರಿ
1 ಚಮಚ ಸಾಸಿವೆ ಎಣ್ಣೆ
4 ಏಲಕ್ಕಿ
1 ಇಂಚಿನಷ್ಟು ದೊಡ್ಡದಿರುವ ಚಕ್ಕೆ
4 ಲವಂಗ
2 ಪಲಾವ್ ಎಲೆ
1 ಚಮಚ ಅರಿಶಿಣ ಪುಡಿ
1 ಚಮಚ ಖಾರದ ಪುಡಿ
1 ಚಮಚ ಗರಂ ಮಸಾಲ ಪುಡಿ
1ಚಮಚ ಕೊತ್ತಂಬರಿ ಪುಡಿ
ಅರ್ಧ ಕಪ್ ಟೊಮೆಟೊ ಪೇಸ್ಟ್(ಮನೆಯಲ್ಲಿಯೇ ಮಾಡಿದ್ದು)
ಅರ್ಧ ಕಪ್ ಮೊಸರು
1 ಚಮಚ ಸಕ್ಕರೆ
ರುಚಿಗ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು
-
ಮಾಡುವ ವಿಧಾನ:
* ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಇಟ್ಟುಕೊಳ್ಳಿ.
* ಮಿಕ್ಸಿ ಜಾರ್‌ಗೆ ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿ ರುಬ್ಬಿ ಒಂದು ಕಪ್‌ನಲ್ಲಿ ಹಾಕಿಡಿ.
* ಮುಂದಿನ ಹಂತವೆಂದರೆ ಆಲೂಗಡ್ಡೆಯನ್ನು ರೋಸ್ಟ್ ಮಾಡುವುದು. 2 ಚಮಚ ಎಣ್ಣೆಯನ್ನು ಪ್ಯಾನ್‌ಗೆ ಹಾಕಿ ಬಿಸಿ ಮಾಡಿ ಅದರಲ್ಲಿ ಆಲೂಗಡ್ಡೆ, ಚಿಟಿಕೆಯಷ್ಟು ಅರಿಶಿಣ ಪುಡಿ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ ರೋಸ್ಟ್ ಮಾಡಿ. ಒಂದು 5-6 ನಿಮಿಷ ರೋಸ್ಟ್ ಮಾಡಿದರೆ ಸಾಕು. ಆಲೂಗಡ್ಡೆ ಕಂದು ಬಣ್ಣಕ್ಕೆ ತಿರುಗವಷ್ಟು ಹೊತ್ತು ರೋಸ್ಟ್ ಮಾಡಿರಬೇಕು. ನಂತರ ಅದನ್ನು ತೆಗೆದು ಒಂದು ಬೌಲ್ ನಲ್ಲಿ ಹಾಕಿಡಿ.
* ಈಗ ಫ್ರೈ ಮಾಡುವ ಪ್ಯಾನ್‌ಗೆ 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಡಿಮೆ ಉರಿಯಲ್ಲಿ ಸೌಟ್‌ನಿಂದ ಆಡಿಸಿ. ಈ ಪೇಸ್ಟ್‌ನ ಹಸಿ ವಾಸನೆ ಹೋಗಿ ಅದು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಬೇಕು. ಹೀಗಾಗಲು 5 ನಿಮಿಷ ತೆಗೆದುಕೊಳ್ಳುತ್ತದೆ. ನಂತರ ಚಕ್ಕೆ ಹಾಗೂ ಲವಂಗ, ಪಲಾವ್ ಎಲೆ ಹಾಕಿ ಮತ್ತೆ 3-4 ನಿಮಿಷ ಸೌಟ್‌ನಿಂದ ಆಡಿಸುತ್ತಾ ಫ್ರೈ ಮಾಡಿ.
* ಈಗ ಟೊಮೆಟೊ ಪೇಸ್ಟ್ ಹಾಕಿ, ಅದಕ್ಕೆ ಅರಿಶಿಣ ಪುಡಿ, ಒಂದು ಚಮಚ ಕೊತ್ತಂಬರಿ ಪುಡಿ, ಒಂದು ಚಮಚ ಗರಂ ಮಸಾಲ ಪುಡಿ ಹಾಕಿ, ಇವೆಲ್ಲಾ ಮಿಶ್ರವಾದ ಬಳಿಕ ಖಾರದ ಪುಡಿ ಹಾಕಿ.
* ಈಗ ಚೆನ್ನಾಗಿ ಸೌಟ್‌ನಿಂದ ಆಡಿಸಿ, ಮೊಸರು ಹಾಕಿ ಮಿಶ್ರ ಮಾಡಿ, ಈಗ ರೋಸ್ಟ್ ಮಾಡಿದ ಆಲೂಗಡ್ಡೆ ಹಾಕಿ 1 ಚಮಚ ಸಕ್ಕರೆ ಹಾಕಿ.
* ಉಪ್ಪು ಸರಿಯಾಗಿದೆಯೇ ನೋಡಿ, ಪಾತ್ರೆಯ ಬಾಯಿ ಮಿಚ್ಚಿ ಕಡಿಮೆ ಉರಿಯಲ್ಲಿ 20 ನಿಮಿಷ ಬೇಯಿಸಿ. ಹೀಗೆ ಬೇಯಿಸುವಾಗ ತಳ ಹಿಡಿಯದಂತೆ ಒಂದೆರಡು ಬಾರಿ ತಿರುಗಿಸಿ.
* ಈಗ ಮಿಶ್ರ ಸ್ವಲ್ಪ ಗಟ್ಟಿಯಾದಾಗ ಸೌಟ್ ಆಫ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಪೂರಿ ಜೊತೆ ಸರ್ವ್ ಮಾಡಿ.
- ಆಲೂ ದಮ್‌ಗೆ ಆಲೂಗಡ್ಡೆಯನ್ನು ಡೀಪ್ ಫ್ರೈ ಮಾಡಿ ಬಳಸಿದರೆ ರುಚಿ ಹೆಚ್ಚು, ಆದರೆ ಅಧಿಕ ಎಣ್ಣೆಯಂಶ ಬೇಡ ಎನ್ನುವವರು ಪ್ಯಾನ್‌ನಲ್ಲಿ ರೋಸ್ಟ್ ಮಾಡಿ
- ಕೊಬ್ಬು - 16ಗ್ರಾಂ
- ಪ್ರೊಟೀನ್ - 3ಗ್ರಾಂ
- ಕಾರ್ಬ್ಸ್ - 25ಗ್ರಾಂ
- ನಾರಿನಂಶ - 2.4ಗ್ರಾಂ



Click it and Unblock the Notifications