Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳ್ಳುಳ್ಳಿ ಕಬಾಬ್ ರೆಸಿಪಿ: ರುಚಿ ಸಕತ್ ಸೂಪರ್ ಆಗಿದೆ ಕಣ್ರೀ
ಈಗ ಎಲ್ಲಿ ನೋಡಿದರೂ ಬೆಳ್ಳುಳ್ಳಿ ಕಬಾಬ್ ಬೆಳ್ಳುಳ್ಳಿ ಕಬಾಬ್ ಮಾತೇ, ಕರಿಮಣಿ ಮಾಲೀಕನಂತೆ ಇದು ಕೂಡ ತುಂಬಾನೇ ಟ್ರೆಂಡ್ ಆಗಿದೆ, ಅದರಲ್ಲೂ ಬೆಳ್ಳುಳ್ಳು ಕಬಾಬ್‌ಗೆ ಚಂದ್ರರವರು ತುಂಬಾಮೇ ಫೇಮಸ್ ಆಗಿದ್ದಾರೆ (ಪುನೀತ್ ರಾಜ್‌ಕುಮಾರ್ ಇವರ ಅಡುಗೆ ತುಂಬಾನೇ ಇಷ್ಟಪಡುತ್ತಿದ್ದರು ).
ಚಂದ್ರುರವರು ಯಾವಾಗ ಬೆಳ್ಳುಳ್ಳಿ ಕಬಾಬ್ ಮಾಡಿ ವೀಡಿಯೋ ಹಾಕಿದರೋ ಅಲ್ಲಿಂದ ಬೆಳ್ಳುಳ್ಳಿಗೆ ಸಿಕ್ಕಾಪಟ್ಟೆ ರೇಟ್ ಜಾಸ್ತಿ ಆಗಿದೆ ಅಂತ ಮಹಿಳೆಯರು ಹೇಳುತ್ತಿದ್ದಾರೆ, ಕೆಜಿಗೆ 60 ರುಪಾಯಿ ಇದ್ದ ಬೆಳ್ಳುಳ್ಳಿ ಇದೀಗ ಕೆಜಿಗೆ 400 ರುಪಾಯಿ ತಲುಪಿದೆ ಅಂದ ಮೇಲೆ ಬೆಳ್ಳುಳ್ಳಿ ಕಬಾಬ್‌ಗೆ ಇರುವ ಡಿಮ್ಯಾಂಡ್ ಕಮ್ಮಿಯೇ...
ನಾವು ಕೂಡ ಬೆಳ್ಳುಳ್ಳಿ ಕಬಾಬ್ ಹೇಗಿರುತ್ತದೆ ಎಂದು ಟ್ರೈ ಮಾಡಿದೆವು, ಟೇಸ್ಟ್ ಸೂಪರ್ ಬಂತು, ಈ ರೆಸಿಪಿ ನಿಮಗಾಗಿ....

ಬೇಕಾಗುವ ಸಾಮಗ್ರಿ
ಟೆಂಡರ್ ಚಿಕನ್ 1/2 ಕೆಜಿ
ಬೆಳ್ಳುಳ್ಳಿ 5-6 ಬೆಳ್ಳುಳ್ಳಿ
ಒಂದು ಮುಷ್ಟಿಯಷ್ಟು ಕರಿಬೇವು
ಹಸಿ ಮೆಣಸು 4-5 (ಖಾರಕ್ಕೆ ತಕ್ಕಷ್ಟು)
ಜೋಳದ ಹಿಡಿ 2 ಚಮಚ
ನಿಂಬೆರಸ 1 ಚಮಚ
ಮಾಡುವ ವಿಧಾನ
- ಬೆಳ್ಳುಳ್ಳಿ , ಕರಿಬೇವಿನ ಸೊಪ್ಪು ಹಾಗೂ ಹಸಿಮೆಣಸನ್ನು ರುಬ್ಬಿಕೊಳ್ಳಬೇಕು. ನೀರು ಹಾಕದೆ ರುಬ್ಬಿ. ಬೇಕಿದ್ದರೆ ಒಂದು ಸ್ಪೂನ್ ನೀರು ಸೇರಿಸಿ, ಆದರೆ ನೀರು ಹಾಕದೆ ರುಬ್ಬಿದರೆ ಒಳ್ಳೆಯದು.
- ಇದೀಗ ರುಬ್ಬಿದ ಮಿಶ್ರಣವನ್ನು ತಟ್ಟೆಗೆ ಹಾಕಿ ಅದಕ್ಕೆ ಉಪ್ಪು ಸೇರಿಸಿ, ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ, ಅದಕ್ಕೆ 2 ಚಮಚ ಕಾರ್ನ್‌ಫ್ಲೋರ್ ಸೇರಿಸಿ 2 ಗಂಟೆ ಫ್ರಿಡ್ಜ್‌ನಲ್ಲಿ ಇಡಿ( ಬೇಗ ಮಾಡುವುದಾದರೆ ಅರ್ಧ ಗಂಟೆ ಫ್ರಿಡ್ಜ್‌ನಲ್ಲಿಡಿ.)
- ನಂತರ ಎಣ್ಣೆ ಕಾಯಿಸಿ ಎಣ್ಣೆಯಲ್ಲಿ ಫ್ರೈ ಮಾಡಿ ರುಚಿ ರುಚಿಯಾದ ಬೆಳ್ಳುಳ್ಳಿ ಕಬಾಬ್ ಸವಿಯಿರಿ.
ಈ ಕಬಾಬ್ ವಿಶೇಷವೆಂದರೆ ಇದರಲ್ಲಿ ಯಾವುದೇ ಬಣ್ಣದ ಪುಡಿ ಬಳಸಿಲ್ಲ, ಅಲ್ಲದೆ ಮಕ್ಕಳಿಗೆ ಹೀಗೆ ಮಾಡಿ ಕೊಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುವುದು.
ಬೆಳ್ಳುಳ್ಳಿ ಗ್ರಿಲ್ಡ್ ಕಬಾಬ್ ಮಾಡುವ ವಿಧಾನ
ಇದು ಕೂಡ ಕಬಾಬ್ ಮಾಡುವ ರೀತಿಯಲ್ಲಿಯೇ ಮಸಾಲೆ ಮಾಡಿ, ಆದರೆ ಕಾರ್ನ್‌ಫ್ಲೋರ್
ಬಳಸಬೇಡಿ
ನಂತರ ಮೈಕ್ರೋವೇವ್‌ನಲ್ಲಿ ಗ್ರಿಲ್ಡ್ ತಯಾರಿಸಿ
ನೀವು ಬೇಕಾದರೆ ಕೆಂಡದಲ್ಲಿಯೂ ಗ್ರಿಲ್ಡ್ ತಯಾರಿಸಬಹುದು.
ಈ ಬೆಳ್ಳುಳ್ಳಿ ಕಬಾಬ್ ಏಕಿಷ್ಟು ಫೇಮಸ್?
ಇದೀಗ ಬೆಳ್ಳುಳ್ಳಿ ಕಬಾಬ್ ತುಂಬಾನೇ ಫೇಮಸ್ ಆಗಿದೆ, ಏಕೆಂದರೆ ಇದರಲ್ಲಿ ಯಾವುದೇ ಬಣ್ಣ ಬಳಸಿಲ್ಲ, ಇಷ್ಟು ದಿನ ಕಬಾಬ್ ಅಂದರೆ ಕೆಂಪಗೆ ಇರಬಕು ಅಂತ ನಮ್ಮ ಕಲ್ಪನೆಯಲ್ಲಿ ಇತ್ತು, ಆದರೆ ಕೆಂಪಗೆ ಅಲ್ಲ, ಬೆಳ್ಳಗೆ ಇದ್ದರೂ ರುಚಿ ಇರುತ್ತೆ ಎಂದು ಈ ಕಬಾಬ್ ತೋರಿಸಿ ಕೊಟ್ಟಿದೆ.
ಇನ್ನು ಇದರ ರುಚಿ
ಬೆಳ್ಳುಳ್ಳಿ, ಕರಿಬೇವು ಎಣ್ಣೆಯಲ್ಲಿ ಕರಿದಾಗ ರುಚಿ, ವಾಸನೆ ಸೂಪರ್ ಆ ರುಚಿಯಿಂದಲೇ ಈ ಕಬಾಬ್ ತುಂಬಾನೇ ಟೇಸ್ಟ್ ಅನಿಸುವುದು, ಅಲ್ಲದೆ ಕಬಾಬ್ ಮಸಾಲೆ ಚೆನ್ನಾಗಿ ಹೀರಿಕೊಂಡು ತಿನ್ನುತ್ತಿದ್ದರೆ ಒನ್ಸ್ ಮೋರ್ ಹೇಳುವಿರಿ.
ಮಕ್ಕಳಿಗೂ ಒಳ್ಳೆಯದು
ಮಕ್ಕಳಿಗೆ ಬಣ್ಣ ಹಾಕಿದ ಕಬಾಬ್ ನೀಡುವ ಬದಲಿಗೆ ಇಂಥ ಕಬಾಬ್ ನೀಡಿದರೆ ಅವರ ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಕಬಾಬ್ ಮಾಡುವಾಗ ಲೆಗ್‌ಪೀಸ್ ಬಳಸಿ, ಅಲ್ಲದೆ ಮಸಾಲೆ ಮಿಕ್ಸ್ ಮಾಡಿ ಹೆಚ್ವು ಹೊತ್ತು ಇಡುವುದರಿಂದ ಮಸಾಲೆ ಚೆನ್ನಾಗಿ ಹೀರಿಕೊಂಡು ರುಚಿ ಸೂಪರ್ ಆಗಿರುತ್ತದೆ.
ನಿಮ್ಮ ಬಳಿ ಹೀಗೆ ಏನಾದರು ಈ ರೀತಿ ಸ್ಪೆಷಲ್ ರೆಸಿಪಿ ಇದ್ದರೆ ಕಮೆಂಟ್ ಮಾಡಿ ನಮಗೂ ತಿಳಿಸಿ...



Click it and Unblock the Notifications