Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮೀನು ಪ್ರಿಯರೇ? ಸುಲಭದಲ್ಲಿ ತಯಾರು ಮಾಡಬಹುದು ಈ ಬಂಗುಡೆ ಫಿಶ್ ಕರಿ
ಮೀನು ಪ್ರಿಯರಿಗೆ ಮೀನು ಸಾರು ಇದ್ದರೆ ಸಾಕು ಒಂದು ತುತ್ತು ಅನ್ನ ಹೆಚ್ಚೇ ಗಂಟಲಿನಿಂದ ಇಳಿಯುತ್ತದೆ, ಇಲ್ಲಿ ತುಂಬಾ ಸರಳವಾದ ರೆಸಿಪಿ ನೀಡಿದ್ದೇವೆ, ಇದನ್ನು ಬಂಗುಡೆ, ಬಂಗುಡೆ ರೀತಿಯೇ ನಮ್ಮ ಕಡೆ ಕಡವ ಮೀನು ಅಂತಾರೆ ಆ ಮೀನು ಅಥವಾ ಬೂತಾಯಿ, ತುನಾ ಈ ಬಗೆಯ ಮೀನು ಹಾಕಿ ಈ ಮೀನಿನ ಸಾರು ಮಾಡಬಹುದು. ಇದೊಂದು ಸುಲಭವಾದ ರೆಸಿಪಿಯಾಗಿದೆ, ಹಾಗಾಗಿ ಇತ್ತೇಚೆಗೆ ಅಡುಗೆ ಕಲಿಯಲಾರಂಭಿಸಿರುವೆ ಎನ್ನುವವರು ಕೂಡ ಟ್ರೈ ಮಾಡಬಹುದು.
ಈ ಮೀನಿನ ಸಾರು ಅನ್ನ, ತಿಂಡಿ, ದೋಸೆ, ನೀರುದೋಸೆ, ಇಡ್ಲಿ ಇವುಗಳಿಗೆ ಸೂಪರ್ ಕಾಂಬಿನೇಷನ್, ಬನ್ನಿ ಈ ಸುಲಭವಾದ ಈ ಮೀನಿನ ರೆಸಿಪಿಯತ್ತ ಕಣ್ಣಾಡಿಸೋಣ:

ಬೇಕಾಗುವ ಸಾಮಗ್ರಿ
ಬಂಗುಡೆ ಮೀನು 1/2 ಕೆಜಿ
ಈರುಳ್ಳಿ 1
ಟೊಮೆಟೊ 3
ಹಸಿಮೆಣಸು 3-4
ಖಾರದ ಪುಡಿ 1 ಚಮಚ
ಅರಿಶಿಣ ಪುಡಿ 1/4 ಚಮಚ
ಉಪ್ಪು 1 ಚಮಚ
ಎಣ್ಣೆ 2 ಚಮಚ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಹುಣಸೆ ಹಣ್ಣು ಒಂದು ದೊಡ್ಡ ನಿಂಬೆಹಣ್ಣು ಗಾತ್ರದಷ್ಟು (ನೀರಿನಲ್ಲಿ ಹುಣಸೆಹಣ್ಣು
ಹಾಕಿ ಕಲೆಸಿ ಹುಣಸೆರಸ ಮಾಡಿ)
ಇದನ್ನು ಟ್ರೈ ಮಾಡಿದರೆ ಹೇಳುವಿರಿ 'ಚಿಕನ್ ಮಂಚೂರಿಯನ್ ಇಷ್ಟು ಸುಲಭ ಅಂತ ಗೊತ್ತಿರಲಿಲ್ಲ'
ಮಾಡುವ ವಿಧಾನ
- ತೆಂಗಿನ ತುರಿಗೆ ಖಾರದ ಪುಡಿ, ಅರಿಶಿಣ ಪುಡಿ ಹಾಕಿ ನುಣ್ಣನೆ ರುಬ್ಬಿ
- ಪಾತ್ರೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ, ನಂತರ ಹಸಿ ಮೆಣಸಿನಕಾಯಿ, ಈರುಳ್ಳಿ
- ಹಾಕಿ, ಈರುಳ್ಳಿ ಮೆತ್ತಗಾದಾಗ ಟೊಮೆಟೊ ಹಾಕಿ.
- ಟೊಮೆಟೊ ಮೆತ್ತಗಾದ ಮೇಲೆ ಹುಣಸೆಹಣ್ಣಿನ ರಸ ಹಾಕಿ, ಹುಣಸೆ ಹಣ್ಣಿನ ರಸ ಕುದಿ ಬರಲಾರಂಭಿಸಿದಾಗ ನೀವು ರುಬ್ಬಿದ ಕಾಯಿ ಮಸಾಲೆ ಸೇರಿಸಿ.
- ರುಚಿಗೆ ತಕ್ಕ ಉಪ್ಪು ಸೇರಿಸಿ
- ಈಗ ಈ ಸಾರು ಕುದಿ ಬರಬೇಕು, ಬಳಿಕ ಉರಿ ಸ್ವಲ್ಪ ಕಡಿಮೆ ಮಾಡಿ ಮೀನು ಸೇರಿಸಿ, ಕಡಿಮೆ ಉರಿಯಲ್ಲಿ 20 ನಿಮಿಷ ಬೇಯಿಸಿ, ಬಳಿಕ ಉಪ್ಪು ಸರಿಯಾಗಿದೆಯೇ ನೋಡಿ ಉರಿಯಿಂದ ಇಳಿಸಿದರೆ ಸೂಪರ್ ರುಚಿಯ ಮೀನಿನ ಸಾರು ರೆಡಿ.
ಇತರ ಸಲಹೆ:
- ನೀವು ಇದಕ್ಕೆ ತೆಂಗಿನೆಣ್ಣೆ ಹಾಕಿ ಮಾಡಿದರೆ ಇನ್ನು ರುಚಿ, ಇನ್ನು ಸಾರು ಸ್ಟೌವ್‌ನಿಂದ ಇಳಿಸಿದ ಮೇಲೆ ಕೂಡ ಒಂದು ಚಮಚ ತೆಂಗಿನೆಣ್ಣೆ ಹಾಗೇ ಮೇಲೆ ಹಾಕಿದರೆ ರುಚಿ ಸೂಪರ್.
- ಈ ಮೀನಿನ ಸಾರಿಗೆ ಕೊತ್ತಂಬರಿ ಪುಡಿ ಬಳಸಿಲ್ಲ, ಶುಂಠಿ-ಬೆಳ್ಳುಳ್ಳಿ ಹೀಗೆ ಯಾವುದೇ ಮಸಾಲೆ ವಸ್ತು ಬಳಸಿಲ್ಲ.
- ಹಸಿ ಮೆಣಸು ನೀವು ಖಾರ ಕಡಿಮೆ ಇರುವ ಹಸಿಮೆಣಸು ಬಳಸಿ, ಇದನ್ನು ಹಾಗೇ ಕಚ್ಚಿ ತಿನ್ನಲು ರುಚಿ ಸೂಪರ್ ಆಗಿರುತ್ತದೆ.
- ಈ ಮೀನಿನ ಸಾರು ಮೀಡಿಯಂ ಖಾರದಲ್ಲಿ ಮಾಡಬಹುದು,ಇನ್ನೂ ಖಾರ ಬೇಕೆಂದರೆ ಅರ್ಧ ಚಮಚ ಖಾರದ ಪುಡಿ ಹೆಚ್ಚು ಬಳಸಬಹುದು.
- ನೀವು ಅಡುಗೆಗೆ ಕಲ್ಲುಪ್ಪು ಬಳಸುವವರಾದರೆ ಅದನ್ನೇ ಬಳಸಿ
- ರುಬ್ಬಿದ ಮಸಾಲೆ ಮಾತ್ರ ತುಂಬಾನೇ ನುಣಪಾಗಿರಬೇಕು.
- ಮೀನು ಸಾರು ಇನ್ನೂ ಸ್ವಲ್ಪ ಕಲರ್‌ಫುಲ್ ಆಗಿ ಕಾಣಬೇಕೆಂದು ಬಯಸುವುದಾದರೆ ಬ್ಯಾಡಗಿ ಮೆಣಸು ಅಥವಾ ಕಾಶ್ಮೀರಿ ಚಿಲ್ಲಿ ಪೌಡರ್ ಬಳಸಬಹುದು.
- ಮೀನು ತುಂಬಾ ಬೇಯಿಸಬೇಡಿ, ಕಡಿಮೆ ಉರಿಯಲ್ಲಿ 20 ನಿಮಿಷ ಬೇಯಿಸಿದರೆ ಸಾಕು, ಹೆಚ್ಚು ಬೇಯಿಸಿದರೆ ಮೀನು ಕರಗಿ ಹೋಗುತ್ತದೆ, ಹಾಗಾಗಿ ಬೇಯಿಸುವಾಗ ಹೆಚ್ಚು ಬೇಯಿಸಬೇಡಿ.



Click it and Unblock the Notifications