For Quick Alerts
ALLOW NOTIFICATIONS  
For Daily Alerts

ಕ್ರಿಸ್ಮಸ್ ರೆಸಿಪಿ: ಬನಾನ ಚಾಕೋಲೆಟ್ ಮಫೀನ್ , ಆರೋಗ್ಯಕ್ಕೂ ಒಳ್ಳೆಯದು

Posted By:
|

ಕ್ರಿಸ್ಮಸ್‌ ಸೆಲೆಬ್ರೇಷನ್‌ಗೆ ಈಗಾಗಲೇ ಸಿದ್ಧತೆಗಳು ಶುರುವಾಗಿರಬೇಕು ಅಲ್ವಾ? ಕ್ರಿಸ್ಮಸ್‌ ಸಮಯದಲ್ಲಿ ಮಫೀನ್‌ ಟ್ರೈ ಮಾಡದಿದ್ದರೆ ಹೇಗೆ ಅಲ್ವಾ? ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇದನ್ನು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ಬನಾನಾ ಮಫೀನ್ ಅಂದ್ರೆ ಟೇಸ್ಟ್‌ ಸೂಪರ್ ಆಗಿರುತ್ತೆ.

Banana Chocolate Chip Muffins

ಈ ಬನಾನ ಮಫೀನ್ ಅನ್ನು ನೀವು ತುಂಬಾನೇ ಸುಲಭವಾಗಿ ಮಾಡಬಹುದು, ಇದಕ್ಕೆ ಹೆಚ್ಚಿನ ಸಾಮಗ್ರಿ ಕೂಡ ಬೇಕಾಗಿಲ್ಲ, ತುಂಬಾ ಸುಲಭದಲ್ಲಿ ಮಾಡಬಹುದು.

ಇದನ್ನು ಕ್ರಿಸ್ಮಸ್‌ ಸಮಯದಲ್ಲಿ ಮಾತ್ರವಲ್ಲ ಇತರ ಸಮಯದಲ್ಲಿ ಮಾಡಿದರೆ ಮಕ್ಕಳಿಗೆ ಸ್ನಾಕ್ಸ್ ಆಗಿಯೂ ನೀಡಬಹುದು. ಗ್ಲುಟೀನ್ ಫ್ರೀ ಆಗಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
11/3 ಕಪ್‌ ಗ್ಲುಟೇನ್‌ ಫ್ರೀ ಬೇಕಿಂಗ್‌ ಮಿಕ್ಸ್ (Arrowhead Mills)
1 ಸ್ಕೂಪ್ ವೆನಿಲ್ಲಾ ಪ್ರೊಟೀನ್‌ ಪೌಡರ್
1 1/4 ಕಪ್ ಬೇಕಿಂಗ್‌ ಸೋಡಾ
1 ಚಮಚ ಚಮಚ ಬೇಕಿಂಗ್‌ ಸೋಡಾ
1 ಚಮಚ ಕೋಕಾ ಪುಡಿ (Optional)
1/2 ಚಮಚ ತರಿತರಿ ಪುಡಿ ಮಾಡಿದ ಕಲ್ಲುಪ್ಪು
3 ತುಂಬಾ ಹಣ್ಣಾದ ಬಾಳೆಹಣ್ಣು
1/2 ಕಪ್‌ ಸಕ್ಕರೆ
6 ಚಮಚ ಉಪ್ಪಿನಂಶಯಿಲ್ಲದ ಬೆಣ್ಣೆ
ಒಂದೂವರೆ ಮೊಟ್ಟೆ
3/4 ಕಪ್‌ ಸೆಮಿಸ್ವೀಟ್‌ ಚಾಕೋಲೆಟ್‌ ಚಿಪ್ಸ್
1/2 ಕಪ್‌ ಡ್ರೈ ಫ್ರೂಟ್ಸ್‌

ಮಾಡುವ ವಿಧಾನ
ಸ್ಟೆಪ್ 1
ಓವನ್‌ ಅನ್ನು 350 ಡಿಗ್ರಿ F ಅಥವಾ 175 ಡಿಗ್ರಿ Cಗೆ ಪ್ರೀಹೀಟ್ ಮಾಡಿ.

ಸ್ಟೆಪ್‌ 2
ಈಗ ಗ್ಲುಟೇನ್ ಫ್ರೀ ಹಿಟ್ಟು, ಪ್ರೊಟೀನ್ ಪೌಡರ್, ಬೇಕಿಂಗ್ ಸೋಡಾ, ಕೋಕಾ ಪೌಡರ್, ಉಪ್ಪು ಇವುಗಳನ್ನು ಒಂದು ದೊಡ್ಡ ಬೌಲ್‌ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಸ್ಟೆಪ್ 3
ಈಗ ಚೆನ್ನಾಗಿ ಹಿಸುಕಿದ ಬಾಳೆಹಣ್ಣು, ಸಕ್ಕರೆ, ಬೆಣ್ಣೆ, ಮೊಟ್ಟೆಯನ್ನು ಜಾರ್‌ಗೆ ಹಾಕಿ ಮಿಕ್ಸಿಯಲ್ಲಿ ಎರಡು ರೌಂಡ್‌ ತಿರುಗಿಸಿ. ನಂತರ ಅದನ್ನು ಮಿಕ್ಸ್ ಮಾಡಿದ ಹಿಟ್ಟಿನ ಮಿಶ್ರಣಕ್ಕೆ ಹಾಕಿ, ಅದರಲ್ಲಿ ಚಾಕೋಲೆಟ್ ಚಿಪ್ಸ್, ಡ್ರೈ ಫ್ರೂಟ್ಸ್ ಸೇರಿಸಿ ಮಿಕ್ಸ್ ಮಾಡಿ.

ಸ್ಟೆಪ್‌ 4
ಈಗ ಮಫೀನ್‌ ಟಿನ್‌ಗೆ ಬೆಣ್ಣೆ ಸವರಿ ಅದರ ಮುಕ್ಕಾಲು ಭಾಗದಷ್ಟು ಮಾತ್ರ ತುಂಬಿ.

ಸ್ಟೆಪ್5
ಈಗ ಪ್ರೀ ಹೀಟ್‌ ಮಾಡಿರುವ ಓವನ್‌ನಲ್ಲಿ 25-30 ನಿಮಿಷ ಬೇಯಿಸಿ 10 ನಿಮಿಷ ತಣ್ಣಗಾಗಲು ಇಡಿ. ಇಷ್ಟು ಮಾಡಿದರೆ ಮಫೀನ್‌ ತಿನ್ನಲು ರೆಡಿ.

ಇದರಲ್ಲಿರುವ ಪೋಷಾಂಶಗಳು

ಕ್ಯಾಲೋರಿ 257
ಕೊಬ್ಬು 12 ಗ್ರಾಂ
ಕಾರ್ಬ್ಸ್ 35ಗ್ರಾಂ
ಪ್ರೊಟೀನ್ 6ಗ್ರಾಂ

[ of 5 - Users]
Story first published: Tuesday, December 20, 2022, 13:00 [IST]
X
Desktop Bottom Promotion