Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸ್ಪೆಷಲ್ ಬದನೆಕಾಯಿ ಗೊಜ್ಜು: ಈ ಮಸಾಲೆಯಲ್ಲಿ ಅಡಗಿದೆ ಇದರ ಟೇಸ್ಟ್
Recipes
oi-Reena TK
Posted By: Reena TK
ಬದನೆಕಾಯಿ ಗೊಜ್ಜು ನೀವು ನೂರಕ್ಕೂ ಅಧಿಕ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ಕೂಡ ಸ್ಪೆಷಲ್ ಬದನೆಕಾಯಿ ಗೊಜ್ಜು ನೀಡಲಾಗಿದೆ, ಈ ಗೊಜ್ಜು ಮಾಡುವಾಗ ಬಳಸುವ ಮಸಾಲೆಯಲ್ಲಿ ಅಡಗಿದೆ ಈ ಬದನೆಕಾಯಿ ಗೊಜ್ಜು ಟೇಸ್ಟ್, ನೀವು ಮಸಾಲೆ ಈ ರೀತಿ ಮಾಡಿ ಟ್ರೈ ಮಾಡಿ ನೋಡಿ ರುಚಿ ತುಂಬಾನೇ ಚೆನ್ನಾಗಿರುತ್ತದೆ:

ಬೇಕಾಗುವ ಸಾಮಗ್ರಿ
ಬದನೆಕಾಯಿ ಅರ್ಧ ಕೆಜಿ
ಈರುಳ್ಳಿ 2-3
ಕಡ್ಲೆಬೇಳೆ 1 ಚಮಚ
ಕೊತ್ತಂಬರಿ ಬೀಜ 2 ಚಮಚ
ಒಣ ಮೆಣಸು 3-4
ಅರಿಶಿಣ ಪುಡಿ ಅರ್ಧ ಚಮಚ
ಎಣ್ಣೆ 2 ಚಮಚ
ಸಾಸಿವೆ(1/2 ಚಮಚ)
ಸ್ವಲ್ಪ ಕರಿಬೇವು
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
- ಬದನೆಕಾಯಿ ನಿಮಗೆ ಬೇಕಾದ ಗಾತ್ರದಲ್ಲಿ ಕತ್ತರಿಸಿ, ತುಂಬಾ ಚಿಕ್ಕ ಪೀಸ್‌ಗಳಾಗಿ ಕತ್ತರಿಸಬೇಡಿ, ಬದನೆಕಾಯಿ ಸ್ವಲ್ಪ ದೊಡ್ಡ-ದೊಡ್ಡ ಪೀಸ್‌ಗಳಾಗಿ ಕತ್ತರಿಸಿ ನೀರಿನಲ್ಲಿ ಹಾಕಿಡಿ
- ಈಗ ನೀವು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಅದರಲ್ಲಿ ಕಡ್ಲೆಬೇಳೆ,ಕೊತ್ತಂಬರಿ ಬೀಜ, ಒಣ ಮೆಣಸು ಹಾಕಿ ರೋಸ್ಟ್ ಮಾಡಿ ನಂತರ ತೆಗೆದು ತಣ್ಣಗಾಗಲು ಒಂದು ಪಾತ್ರೆಯಲ್ಲಿ ಹಾಕಿ, ಸ್ವಲ್ಪತಣ್ಣಗಾದ ಮೇಲೆ ಪುಡಿ ಮಾಡಿ.
- ಈಗ ಪಾತ್ರೆ ಬಿಸಿ ಮಾಡಿ 1-2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಕರಿಬೇವು ಸೇರಿಸಿ
- ನಂತರ ಈರುಳ್ಳಿ ಹಾಕಿ, ಈರುಳ್ಳಿ ಸ್ವಲ್ಪ ಮೆತ್ತಗಾದಾಗ ಬದನೆಕಾಯಿ ಹಾಕಿ
- .
- ಈಗ ಅರಿಶಿಣ, ಉಪ್ಪು ಸೇರಿಸಿ, ಫ್ರೈ ಮಾಡಿ.
- ಬದನೆಕಾಯಿ ಮುಕ್ಕಾಲು ಬೆಂದಾಗ ನೀವು ರುಬ್ಬಿದ ಮಸಾಲೆ ಸೇರಿಸಿ ಮಿಕ್ಸ್ ಮಾಡಿ, ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ ಕಡಿಮೆ ಉರಿಯಲ್ಲಿ 5-6 ನಿಮಿಷ ಬೇಯಿಸಿ. ಬದನೆಕಾಯಿ ಬೆಂದಾಗ ಉಪ್ಪು ಸರಿಯಾಗಿದೆಯೇ ನೋಡಿ ಉರಿಯಿಂದ ಇಳಿಸಿದರೆ ಬದನೆಕಾಯಿ ಗೊಜ್ಜು ರೆಡಿ.
ಇತರ ಸಲಹೆ
- ನೀವು ಕೊತ್ತಂಬರಿ ಬೀಜವನ್ನು ಕಡಿಮೆ ಉರಿಯಲ್ಲಿ ರೋಸ್ಟ್ ಮಾಡಬೇಕು. ಆದರೆ ಕೊತ್ತಂಬರಿ ಬೀಜ ಸೀದು ಹೋಗಬಾರದು, ಸಾರು ಕಹಿ ಟೇಸ್ಟ್ ಬರುfತದೆ, ಕೊತ್ತಂಬರಿ ಬೀಜ ಪುಡಿ ಮಾಡಿದಾಗ ಕಾಫಿ ಪುಡಿ ಕಲರ್‌ಗೆ ಬರುವಷ್ಟು ಹೊತ್ತು ತುಂಬಾ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
- ನಂತರ ಒಣ ಮೆಣಸು ರೋಸ್ಟ್ ಮಾಡಿ
- ಕಡ್ಲೆಬೇಳೆ ಕೂಡ ತುಂಬಾ ಕಪ್ಪಗಾಗಬಾರದು
- ಇನ್ನು ರುಬ್ಬಿವಾಗ ನೀವು ಸ್ವಲ್ಪ ನೀರು ಸೇರಿಸಿ ಕೂಡ ಫ್ರೈ ಮಾಡಬಹುದು.
ಯಾವ ಬದನೆಕಾಯಿ ಬಳಸಬಹುದು?
ಅನೇಕ ಬಗೆಯ ಬದನೆ ಸಿಗುತ್ತದೆ. ವಾಂಗಿಬಾತ್ ಬದನೆ, ಎಣ್ಣೆ ಬದನೆ ಹೀಗೆ ಯಾವುದೇ
ಬದನೆ ಬೇಕಾದರೂ ಬಳಸಬಹುದು. ನೀವು ಒಂದೊಂದು ಬದನೆ ಬಳಸಿದಾಗಲೂ ಅದರ ರುಚಿ ಮಾತ್ರ
ಭಿನ್ನವಾಗಿರುತ್ತದೆ.
Comments
[ of 5 - Users]
Story first published: Monday, December 30, 2024, 14:26 [IST]
Other articles published on Dec 30, 2024



Click it and Unblock the Notifications