Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: ಪರ್ಫೆಕ್ಟ್ ಟೇಸ್ಟ್‌ನ ಬೇಬಿಕಾರ್ನ್ ಮಂಚೂರಿಯನ್ ಮಾಡುವುದು ಹೇಗೆ?
Recipes
oi-Reena TK
Posted By: Reena TK
ಬೇಬಿಕಾರ್ನ್‌ನಿಂದ ಮಂಚೂರಿಯನ್ ಮಾಡಿದ್ದೀರಾ? ತುಂಬಾನೇ ಟೇಸ್ಟ್ ಆಗಿರುತ್ತದೆ. ಮಂಚೂರಿಯನ್ ರೆಸ್ಟೋರೆಂಟ್‌ಗಳಲ್ಲಿ ಸಿಗುವ ರುಚಿಯಲ್ಲಿಯೇ ಮಾಡಬಹುದು. ಮಂಚೂರಿಯ್‌ಗೆ ಕೆಲವು ಅಗ್ಯತವಿರುವ ವಸ್ತುಗಳಿದ್ದರೆ ಸಾಕು, ಬೇಬಿ ಕಾರ್ನ್ ಮಂಚೂರಿಯನ್ ರೆಡಿಯಾಗುತ್ತೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
200 ಗ್ರಾಂ ಬೇಬಿಕಾರ್ನ್
2 ಚಮಚ ಕಡ್ಲೆಹಿಟ್ಟು
2 ಚಮಚ ಮೈದಾ
ರುಚಿಗೆ ತಕ್ಕ ಉಪ್ಪು
1/4 ಚಮಚ ಕಾಳುಮೆಣಸಿನ ಪುಡಿ
ಮಂಚೂರಿಯನ್ ಸಾಸ್ ಮಾಡುವುದು ಹೇಗೆ?
2-3 ಚಮಚ ಎಣ್ಣೆ
1/2 ಚಮಚ ಚಿಕ್ಕದಾಗಿ ಕತ್ತರಿಸಿದ್ದು
1 ಚಮಚ ಬೆಳ್ಳುಳ್ಳಿ ಚಿಕ್ಕದಾಗಿ ಕತ್ತರಿಸಿದ್ದು
2-3 ಚಮಚ ಈರುಳ್ಳಿ
1 ಹಸಿ ಮೆಣಸು
2-3 ಚಮಚ ಈರುಳ್ಳಿ
2-3 ಕ್ಯಾಪ್ಸಿಕಂ
1 ಚಮಚ ಸೋಯಾ ಸಾಸ್
1/4 ಚಮಚ ವಿನೆಗರ್
11/2 ಚಮಚ ಟೊಮೆಟೊ ಸಾಸ್
11/2 ಚಮಚ ಹಸಿಮೆಣಸಿನ ಸಾಸ್
2 ಚಮಚ ಸ್ಪ್ರಿಂಗ್ ಆನಿಯನ್
ಮಾಡುವ ವಿಧಾನ
- ಬೇಬಿ ಕಾರ್ನ್ ತೊಳೆದು ಚಿಕ್ಕದಾಗಿ ಕತ್ತರಿಸಿ, ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿ.
- ಈಗ ಒಂದು ಬೌಲ್‌ಗೆ ಜೋಳದ ಹಿಟ್ಟು, ಮೈದಾ ಹಿಟ್ಟು ಉಪ್ಪು, ಕಾಳು ಮೆಣಸಿನ ಪುಡಿ, ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ. ಹಿಟ್ಟು ಸ್ವಲ್ಪ ಗಟ್ಟಿಯಾಗಿರಲಿ ಅದಕ್ಕೆ ಉಪ್ಪು, ಕಾು ಮೆಣಸಿನ ಉಡಿ ಹಾಕಿ ಮಿಕ್ಸ್ ಮಾಡಿ ಬೇಬಿಕಾರ್ನ್ ಮೇಲೆ ಮೆತ್ತಿ.
- ಈಗ ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಕಾಯಿಸಿ, ಈಗ ಬೇಬಿ ಕಾರ್ನ್ ಫ್ರೈ ಮಾಡಿ, ನಂತರ ಎಣ್ಣೆಯಿಂದ ತೆಗೆದು ಒಂದು ತಟ್ಟೆಯಲ್ಲಿ ಹಾಕಿಡಿ.
- ನಂತರ ಅದೇ ಪ್ಯಾನ್‌ನ ಎಣ್ಣೆಯನ್ನು ಬೇರೆ ಪಾತ್ರೆಗೆ ಹಾಕಿ, ಅದರಲ್ಲಿ ಒಂದೆರಡು ಚಮಚ ಎಣ್ಣೆ ಹಾಕಿ, ಅದರಲ್ಲಿ ಶುಂಠಿ, ಬೆಳ್ಳುಳ್ಳಿ , ಹಸಿ ಮೆಣಸು ಹಾಕಿ ಪ್ರೈ ಮಾಡಿ, ನಂತರ ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ.
- ನಂತರ ಸೋಯಾ ಸಾಸ್, ವಿನೆಗರ್, ಟೊಮೆಟೊ ಸಾಸ್, ಚಿಲ್ಲಿ ಸಾಸ್, ಸಕ್ಕರೆ ಹಾಕಿ, ನಂತರ ಸ್ವಲ್ಪ ನೀರು ಹಾಕಿ ಸಾಸ್ ಸ್ವಲ್ಪ ಗಟ್ಟಿ ಗ್ರೇವಿಯಾಗಿರಬೇಕು.
- ನಂತರ 1 ಚಮಚ ಜೋಳದ ಹಿಟ್ಟು, 2-3 ಚಮಚ ನೀರು ಹಾಕಿ ಮಿಕ್ಸ್ ಮಾಡಿ. ನಂತರ ಇದನ್ನ ಸಾಸ್ ಮಿಶ್ರಣಕ್ಕೆ ಹಾಕಿ, ಸಾಸ್ ಸ್ವಲ್ಪ ಮಂದವಾದಾಗ ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿ
- ನಂರ ಬೇಬಿ ಕಾರ್ನ್ ಹಾಗೂ ಸ್ಪ್ರಿಂಗ್ ಆನಿಯನ್ ಸೇರಿಸಿ ಮಿಕ್ಸ್ ಮಾಡಿ ಸರ್ವ್ ಮಾಡಿದರೆ ಬೇಬಿಕಾರ್ನ್ ಮಂಚೂರಿಯನ್ ರೆಡಿ.
Comments
[ of 5 - Users]
Story first published: Monday, September 16, 2024, 12:36 [IST]
Other articles published on Sep 16, 2024



Click it and Unblock the Notifications