For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಮಾಡುವ ಜ್ಯೂಸ್‌ ಮತ್ತಷ್ಟು ರುಚಿ ಹಾಗೂ ಆರೋಗ್ಯಕರವಾಗಿಸಲು ಟಿಪ್ಸ್

Posted By:
|

ನೀವು ಮನೆಯಲ್ಲಿ ಫ್ರೂಟ್‌ ಜ್ಯೂಸ್‌ ಮಾಡುವಾಗ ಏಕೆ ಇದು ಹೋಟೆಲ್‌ಗಳಲ್ಲಿ ಸಿಗುವಷ್ಟು ರುಚಿಯಾಗುತ್ತಿಲ್ಲ ಎಂದು ಅನಿಸಬಹುದು.ಅವರು ಬಳಸುವ ಸಾಮಗ್ರಿಗಳನ್ನೇ ಬಳಸಿದ್ದೇನೆ ಆದರೂ ಏನೋ ಟೇಸ್ಟ್‌ ವ್ಯತ್ಯಾಸವಾಗುತ್ತಿದೆಯಲ್ಲಾ ಎಂದು ಕೆಲವೊಮ್ಮೆ ಅನಿಸುವುದು. ಅದರಲ್ಲೂ ಮೂಸಂಬಿ, ಆ್ಯಪಲ್ ಜ್ಯೂಸ್‌ ಮಾಡುವಾಗ ಈ ರೀತಿ ಅನಿಸುವುದು ಸಹಜ ಅಲ್ವಾ?

ನಾವು ಜ್ಯೂಸ್‌ ಮಾಡುವಾಗ ಕೆಲವೊಂದು ಟ್ರಿಕ್ಸ್ ಬಳಸಿದರೆ ರೆಸ್ಟೋರೆಂಟ್‌ಗಳಲ್ಲಿ, ಜ್ಯೂಸ್‌ ಅಂಗಡಿಗಳಲ್ಲಿ ಸಿಗುವಷ್ಟೇ ರುಚಿಕರವಾದ ಜ್ಯೂಸ್‌ ಸವಿಯಬಹುದು, ಆ ಟ್ರಿಕ್ಸ್ ಏನು ಎಂಬುವುದು ಇಲ್ಲಿ ನೀಡಲಾಗಿದೆ ನೋಡಿ:

ಜ್ಯೂಸರ್‌ ಬಿಸಿ ಇರಬಾರದು

ಜ್ಯೂಸರ್‌ ಬಿಸಿ ಇರಬಾರದು

ಮನೆಯಲ್ಲಿ ಜ್ಯೂಸ್‌ ಮಾಡುವಾಗ ಜ್ಯೂಸರ್‌ ಬಿಸಿ ಇರಬಾರದು, ಜ್ಯೂಸರ್‌ ತುಂಬಾ ಬಿಸಿಯಿದ್ದರೆ ಹಣ್ಣು ಹಾಗೂ ತರಕಾರಿಗಳಲ್ಲಿರುವ ರುಚಿ ಹಾಳು ಮಾಡುವುದರ ಜೊತೆಗೆ ರುಚಿಯೂ ಅಷ್ಟು ಚೆನ್ನಾಗಿರಲ್ಲ.

ಹಣ್ಣುಗಳನ್ನು, ಜ್ಯೂಸ್‌ಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ

ಹಣ್ಣುಗಳನ್ನು, ಜ್ಯೂಸ್‌ಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ

ಹಣ್ಣುಗಳು ಹಾಳಾಗಬಾರದು ಎಂದು ಹೆಚ್ಚಿನವರು ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡುತ್ತಾರೆ. ಆದರೆ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡುವುದರಿಂದ ಪೋಷಕಾಂಶ ಹಾಳಾಗುವುದರ ಜೊತೆ ಹಣ್ಣು, ತರಕಾರಿಗಳ ನೈಸರ್ಗಿಕ ರುಚಿಯೂ ಹಾಳಾಗುವುದು, ಅದೇ ಹಾಗೇ ಹೊರಗಿಟ್ಟು ಮಾಡಿ ನೋಡಿ ರುಚಿ ತುಂಬಾನೇ ಚೆನ್ನಾಗಿರುತ್ತದೆ.

ಇನ್ನು ಜ್ಯೂಸ್‌ ಮಾಡಿದ ಕೆಲವರಿಗೆ ಅದನ್ನು ಫ್ರಿಡ್ಜ್‌ನಲ್ಲಿಟ್ಟು ಕುಡಿಯುವ ಅಭ್ಯಾಸವಿರುತ್ತದೆ, ಆದರೆ ಜ್ಯೂಸ್‌ ಫ್ರಿಡ್ಜ್‌ನಲ್ಲಿಟ್ಟರೆ ಅದರ ಪೋಷಕಾಂಶಗಳು ಹಾಳಾಗುವುದು, ಆದ್ದರಿಂದ ಹಾಗೇ ಮಾಡಬೇಡಿ.

ಸಕ್ಕರೆ ಹಾಕಬೇಡಿ

ಸಕ್ಕರೆ ಹಾಕಬೇಡಿ

ಜ್ಯೂಸ್‌ನ ರುಚಿ ಹೆಚ್ಚಾಗಿಲಿ ಎಂದು ಸಕ್ಕರೆ ಹಾಕುತ್ತೇವೆ, ಆದರೆ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಹಣ್ಣುಗಳಲ್ಲಿಯೇ ಸಿಹಿ ಅಂಶ ಇರುತ್ತದೆ, ಆದ್ದರಿಂದ ಸಕ್ಕರೆ ಹಾಕಿ ಜ್ಯೂಸ್ ಮಾಡಬೇಡಿ. ಅದಕ್ಕೆ ಉಪ್ಪು, ಮಸಾಲೆ ಕೂಡ ಸೇರಿಸಬೇಡಿ.

ಬೀಜವನ್ನು ತೆಗೆಯಿರಿ

ಬೀಜವನ್ನು ತೆಗೆಯಿರಿ

ಹಣ್ಣುಗಳ ಜ್ಯೂಸ್‌ ಮಾಡುವಾಗ ಮೊದಲು ಅದರ ಬೀಜಗಳನ್ನು ಸರಿಯಾಗಿ ತೆಗೆಯಬೇಕು, ಬೀಜಗಳಿದ್ದರೆ ಜ್ಯೂಸ್‌ನ ರುಚಿ ಹಾಳಾಗುವುದು ಜೊತೆಗೆ ಸೇಬು ಮುಂತಾದ ಹಣ್ಣುಗಳ ಬೀಜಗಳು ಆರೋಗ್ಯಕ್ಕೂ ಒಳ್ಳೆಯದಲ್ಲ.

ಕಹಿ ಪದಾರ್ಥ ಜೊತೆ ಸಿಹಿ ಹಣ್ಣುಗಳನ್ನು ಮಿಕ್ಸ್ ಮಾಡಿ ಜ್ಯೂಸ್‌ ಮಾಡಿ

ಕಹಿ ಪದಾರ್ಥ ಜೊತೆ ಸಿಹಿ ಹಣ್ಣುಗಳನ್ನು ಮಿಕ್ಸ್ ಮಾಡಿ ಜ್ಯೂಸ್‌ ಮಾಡಿ

ಕೆಲವೊಂದು ಸೊಪ್ಪು, ತರಕಾರಿಗಳು ತುಂಬಾನೇ ಕಹಿ, ಆದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇವುಗಳನ್ನು ಜ್ಯೂಸ್‌ ಮಾಡುವಾ ಸ್ವಲ್ಪ ಟೇಸ್ಟ್ ಬರುವ ರೀತಿಯಲ್ಲಿ ಅಂದ್ರೆ ಕ್ಯಾರೆಟ್‌ ಅಥವಾ ಇತರ ಹಣ್ಣುಗಳ ಜೊತೆ ಮಿಕ್ಸ್ ಮಾಡಿ, ಬೇಕಿದ್ದರೆ ಸ್ವಲ್ಪ ನಿಂಬೆಹಣ್ಣಿನ ರಸ ಕೂಡ ಸೇರಿಸಿದರೆ ಕುಡಿಯಲು ಸಾಧ್ಯವಾಗುವುದು.

[ of 5 - Users]
Story first published: Monday, August 23, 2021, 9:04 [IST]
X
Desktop Bottom Promotion