Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೀಪಾವಳಿ ಸ್ಪೆಷಲ್ ರೆಸಿಪಿ: ಆಹಾ ಎಷ್ಟೊಂದು ರುಚಿ ಈ ಆ್ಯಪಲ್ ರಾಬ್ದಿ
ರಾಬ್ದಿ ಇದೊಂದು ಉತ್ತರ ಭಾರತದ ಕಡೆ ಜನಪ್ರಿಯವಾಗಿರುವ ಸಿಹಿ ಪದಾರ್ಥವಾಗಿದೆ. ಇದರ ರುಚಿಗೆ ಮನಸ್ಸು ಕರಗದವರೇ ಇರಲ್ಲ ಅಷ್ಟೊಂದು, ಅಲ್ಲದೆ ನೀವು ಅಂಗಡಿಯಿಂದ ಕೊಳ್ಳುವುದಾದರೆ ಒಂದು ಚಿಕ್ಕ ಕಪ್ಗೆ ನೂರು ರುಪಾಯಿಗೂ ಅಧಿಕ ಬೆಲೆ ಇರುತ್ತದೆ.

ಈ ರಾಬ್ದಿ ನೀವು ಮನೆಯಲ್ಲಿಯೂ ಮಾಡಿ ಸವೆಯಬಹುದು. ನಾವಿಲ್ಲಿ ಸೇಬಿನಿಂದ ಮಾಡುವ ರಾಬ್ದಿ ರೆಸಿಪಿ ನೀಡಿದ್ದೇವೆ.
ಇದನ್ನು ಹಬ್ಬಗಳ ಸಮಯದಲ್ಲಿಯೂ ಮಾಡಬಹುದು. ಈ ದೀಪಾವಳಿ ಹಬ್ಬದಲ್ಲಿ ರಾಬ್ದಿ ಸವಿಯಲು ಇಷ್ಟಪಡುವುದಾದರೆ ಇದನ್ನು ಟ್ರೈ ಮಾಡಿ.
Recipe By: Reena TK
Recipe Type: Sweet
Serves: Depends
-
ಬೇಕಾಗುವ ಸಾಮಗ್ರಿ
3 ಕಪ್ ಮಂದವಾದ ಹಾಲು
ಎರಡೂವರೆ ಚಮಚ ಸಕ್ಕರೆ (ದೊಡ್ಡ ಚಮಚ)
ಮುಕ್ಕಾಲು ಕಪ್ ಸಿಪ್ಪೆ ಸುಲಿದು ತುರಿದ ಸೇಬು
3 ಚಮಚ ಪುಡಿ ಮಾಡಿದ ಬಾದಾಮಿ
1/2 ಚಮಚ ಏಲಕ್ಕಿ
-
ಮಾಡುವ ವಿಧಾನ
* ದಪ್ಪ ತಳವಿರುವ ಪಾತ್ರೆಗೆ ಹಾಲು ಹಾ,ಕಿ 30 ನಿಮಿಷ ಸಾಧಾರಣ ಉರಿಯಲ್ಲಿ ಕುದಿಸಿ (ಹಾಲು ಉಕ್ಕಿ ಹೋಗದಂತೆ ನೋಡಿಕೊಳ್ಳಿ).
* 3 ಕಪ್ ಹಾಲು ಒಂದೂವರೆ ಕಪ್ ಆಗುವಷ್ಟು ಹೊತ್ತು ಕುದಿಸಿ.
* ಈಗ ಸಕ್ಕರೆ, ಸೇಬು ಹಾಕಿ (ಸಕ್ಕರೆಯನ್ನು ನಿಮ್ಮ ಸಿಹಿಗೆ ತಕ್ಕಂತೆ ಹಾಕಿ) 3-4 ನಿಮಿಷ ಕುದಿಸಿ.
* ಈಗ ಬಾದಾಮಿ ಪುಡಿ ಹಾಗೂ ಏಲಕ್ಕಿಯನ್ನು ಹಾಕಿ ಮಿಶ್ರ ಮಾಡಿ, ಗ್ಯಾಸ್ ಆಫ್ ಮಾಡಿ.
* ನಂತರ ಮಿಶ್ರಣ ತಣ್ಣಗಾಗಲು ಬಿಡಿ.
* ತಣ್ಣಗಾದ ನಂತರ ಕಡಿಮೆಯೆಂದರೆ 2 ಗಂಟೆ ಕಾಲ ಫ್ರಿಡ್ಜ್ನಲ್ಲಿಡಿ, ನಂತರ ಸರ್ವ್ ಮಾಡಿ.
- ರಾಬ್ದಿ ಮಾಡುವ ಮುಂಚೆ ಅಂದರೆ ಹಾಲು ಕುದಿಯುತ್ತಿರುವಾಗ ಸೇಬಿನ ಸಿಪ್ಪೆ ತೆಗೆದು ತುರಿಯಿರಿ, ಇಲ್ಲದಿದ್ದರೆ ಸೇಬು ಕಪ್ಪು ಬಣ್ಣಕ್ಕೆ ತಿರುಗುವುದು
- ಕ್ಯಾಲೋರಿ - 299ಕ್ಯಾ
- ಕೊಬ್ಬು - 16ಗ್ರಾಂ
- ಪ್ರೊಟೀನ್ - 8ಗ್ರಾಂ



Click it and Unblock the Notifications