Latest Updates
-
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ರೆಸಿಪಿ: ಅಂಜೂರ ಮಕ್ಕಳಿಗೆ ಇಷ್ಟವಾಗಲ್ಲ, ಆದರೆ ಅಂಜೂರ ಸ್ವೀಟ್ಸ್ ಖಂಡಿತ ಇಷ್ಟಪಡುತ್ತಾರೆ
ಈಗ ನವರಾತ್ರಿ ಸಮಯ, ಮಕ್ಕಳಿಗೆ ದಸರಾ ರಜೆ ಬೇರೆ ಸಿಕ್ಕಿದೆ, ಮಕ್ಕಳು ಮನೆಯಲ್ಲಿರುವಾಗ ಆಗಾಗ ಏನಾದರು ತಿನ್ನಲು ಕೇಳ್ತಾ ಇರ್ತಾರೆ, ನಾವು ಡ್ರೈ ಪ್ರೂಟ್ಸ್ ಕೊಟ್ಟರೆ ಖಂಡಿತ ತಿನ್ನಲ್ಲ, ಅದೇ ಸ್ವೀಟ್ಸ್ ಕೊಟ್ಟರೆ ಖುಷಿಯಿಂದ ತಿನ್ನುತ್ತಾರೆ. ನಾವಿಲ್ಲಿ ಡ್ರೈ ಫ್ರೂಟ್ಸ್ ಮಾತ್ರ ಬಳಸಿ ಮಾಡುವ ಸಿಹಿ ತಿಂಡಿ ನೀಡಿದ್ದೇವೆ, ಇದನ್ನು ಅವರು ಇಷ್ಟಪಟ್ಟು ತಿನ್ನುತ್ತಾರೆ, ಆರೋಗ್ಯಕರವಾದ ವಸ್ತು ಅವರ ಹೊಟ್ಟೆ ಸೇರಿದೆ ಎಂಬ ಸಮಧಾನವೂ ಇರುತ್ತೆ.
ಈ ಸ್ವೀಟ್ಸ್ ತುಂಬಾ ಸುಲಭವಾಗಿ ಮಾಡಬಹುದು, ಅಲ್ಲದೆ ಅಷ್ಟೊಂದು ರುಚಿಯಾಗಿರುತ್ತದೆ, ಬನ್ನಿ ಇದರ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
ಒಣ ಅಂಜೂರ 1 ಕಪ್
ಖರ್ಜೂರ 1 ಕಪ್
ಒಣದ್ರಾಕ್ಷಿ 2 ಚಮಚ
ಡ್ರೈ ಫ್ರೂಟ್ಸ್ 100 ಗ್ರಾಂ
ಚಿಟಿಕೆಯಷ್ಟು ಏಲಕ್ಕಿ ಪುಡಿ
ಚಿಟಿಕೆಯಷ್ಟು ನಟ್ಮಗ್
ತುಪ್ಪ 1 ಚಮಚ
ನೀರು 2 ಚಮಚ
ಮಾಡುವ ವಿಧಾನ:
- ನೀವು ಒಂದು ಪ್ಯಾನ್ಗೆ ನಟ್ಸ್ ಹಾಕಿ ಸ್ವಲ್ಪ ರೋಸ್ಟ್ ಮಾಡಿ. ನಂತರ ಅದನ್ನು ಒಂದು ಪ್ಲೇಟ್ನಲ್ಲಿ ಹಾಕಿಡಿ.
- ಈಗ ಒಣ ಅಂಜೂರ, ಖರ್ಜೂರ ಇದಕ್ಕೆ ಸ್ವಲ್ಪ ನೀರು ಹಾಕಿ, ಕಡಿಮೆ ಉರಿಯಲ್ಲಿ ಬೇಯಿಸಿ, ಅವುಗಳು ಮೆತ್ತಗಾಗುವವರೆಗೆ ಬೇಯಿಸಿ.
- ಈಗ ಏಲಕ್ಕಿ ಪುಡಿ ಸೇರಿಸಿ, ನಂತರ ಸ್ವಲ್ಪ ಚಕ್ಕೆ, ಸ್ವಲ್ಪ ನಟ್ ಮಗ್(ಚಿಟಕೆಯಷ್ಟು) ಪುಡಿ ಹಾಕಿ ಮಿಕ್ಸ್ ಮಾಡಿ, ಮಿಶ್ರಣ ತುಂಬಾ ಅಂಟು ಅಂಟಾಗಿರಬೇಕು.
- ಸ್ವಲ್ಪ ತುಪ್ಪ ಸೇರಿಸಿ (ತುಪ್ಪ ಪ್ಲೇವರ್ ಬೇಡ ಅಂದರೆ ಬಳಸದೆಯೂ ಇರಬಹುದು)
- ಆದರೆ ತುಪ್ಪ ಹಾಕಿ ಒಣ ಹಣ್ಣು ತವಾಗೆ ಅಂಟುವುದು ತಡೆಗಟ್ಟಬಹುದು.
- ನಂತರ ತುಪ್ಪ ಸವರಿದ ಒಂದು ತ್ಟಟೆಗೆ ಹಾಕಿ. ನೀವು ಎಷ್ಟು ಮಾಡಿದ್ದೀರಾ ಅದಕ್ಕೆ ತಕ್ಕಂತೆ ಪ್ಲೇಟ್ ಬಳಸಿ, ಸ್ವಲ್ಪ ಮಾಡಿ ದೊಡ್ಡ ಪ್ಲೇಟ್ ಬಳಸಬೇಡಿ.
- ನೀವು ಆ ಮಿಶ್ರಣ ಹಾಕುವಾಗ ಅದನ್ನು ತುಂಬುವಂತೆ ಹಾಕಬೇಕು, ಅದರ ಮೇಲೆ ಡ್ರೈ ಫ್ರೂಟ್ಸ್ ಉದುರಿಸಿ, ಬಳಿಕ ನಿಮಗೆ ಬೇಕಾದ ರೀತಿಯಲ್ಲಿ ಕತ್ತರಿಸಿ.
ಇದು ನೀವು ಒಂದು ವಾರದವರೆಗೆ ಇಟ್ಟು ಬಳಸಬಹುದು.
ಫ್ರಿಡ್ಜ್ನಲ್ಲಿಟ್ಟರೆ ಇನ್ನೂ ಹೆಚ್ಚಿನ ಸಮಯ ಬಳಸಬಹುದು.ಅಂಜೂರ ಮತ್ತು ಖರ್ಜೂರದ ಪ್ರಯೋಜನಗಳು
ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು:ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಇದರಲ್ಲಿ ಪೊಟಾಷ್ಯಿಯಂ ಮೆಗ್ನಿಷ್ಯಿಯಂ ಇರುವುದರಿಂದ ಹೃದಯದ ಆರೋಗ್ಯಕ್ಕೆ
ಒಳ್ಳೆಯದು. ಅಂಜೂರ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು.
ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
ಇದರಲ್ಲಿ ಕ್ಯಾಲ್ಸಿಯಂ ಇದೆ, ಇದರಿಂದ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮಕ್ಕಳ ಬೆಳವಣಿಗೆಗೆ ತುಂಬಾ ಅನುಕೂಲಕರವಾಗಿರಲಿದೆ.
ಅಸ್ತಮಾ ಸಮಸ್ಯೆ ಇರುವವರಿಗೆ ಒಳ್ಳೆಯದು
ಶ್ವಾಸಕೋಶದ ಆರೋಗ್ಯಕ್ಕೆ ತುಂಬಾನೇ ಒಳ್ಲೆಯದು, ಇದನ್ನು ಪ್ರತಿದಿನ ಮಾಡಿದರೆ
ತುಂಬಾ ಒಳ್ಳೆಯದು.
ತ್ವಚೆ ಆರೋಗ್ಯ ತುಂಬಾನೇ ಒಳ್ಳೆಯದು
ಇದರಲ್ಲಿ antioxidants ಇರುವುದರಿಂದ ತ್ವಚೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು,
ಇದು ತ್ವಚೆಯಲ್ಲಿ ಮೊಡವೆ ಈ ಬಗೆ ಸಮಸ್ಯೆ ತಡೆಗಟ್ಟಲು ಸಹಕಾರಿ.
ಹದಿಹರೆಯದ ಹೆಣ್ಮಕ್ಕಳಿಗೆ ತುಂಬಾ ಒಳ್ಳೆಯದು
ಈಗ PCOD ಸಮಸ್ಯೆ ಹೆಚ್ಚಿನ ಹೆಣ್ಮಕ್ಕಳನ್ನು ಕಾಡುತ್ತದೆ. ಇದನ್ನು
ತಡೆಗಟ್ಟುವಲ್ಲಿ ಆರೋಗ್ಯಕರ ಆಹಾರಕ್ರಮ ಸಹಕಾರಿಯಾಗಿದೆ. ಇನ್ನು ಮೆನೋಪಾಸ್
ಹಂತದಲ್ಲಿ ಕೂಡ ಮಹಿಳೆಯರಿಗೆ ಈ ಸ್ವೀಟ್ಸ್ ತುಂಬಾನೇ ಆರೋಗ್ಯಕರವಾಗಿದೆ.



Click it and Unblock the Notifications