Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಂಜಲ್ ಮೀನಿನ ತವಾ ಫ್ರೈ ರೆಸಿಪಿ
ಇಲ್ಲಿ ನಾವು ಅಂಜಲ್ ಮೀನಿನ ಫ್ರೈ ಮಾಡುವುದು ಹೇಗೆ ಎಂಬ ತುಂಬಾ ಸರಳವಾದ ರೆಸಿಪಿ ನೀಡಿದ್ದೇವೆ. ಈ ಮೀನು ರುಚಿಯಲ್ಲಿ ಸೂಪರ್ ಆಗಿರುತ್ತದೆ ಹಾಗೂ ಹೆಚ್ಚು ಮುಳ್ಳು ಇಲ್ಲದ ಕಾರಣ ತಿನ್ನಲು ಕೂಡ ಸುಲಭ. ಮೀನಿನ ಫ್ರೈ ಮಾಡಲು ಹೆಚ್ಚಿನ ಮಸಾಲೆ ಪದಾರ್ಥಗಳು ಬೇಕಾಗಿಲ್ಲ, ಖಾರದ ಪುಡಿ, ಉಪ್ಪು, ಅರಿಶಿಣ, ಹುಣಸೆ ಹಣ್ಣು ಇಷ್ಟು ಪ್ರಮುಖವಾದ ಸಾಮಗ್ರಿ ಇದ್ದರೆ ಸಾಕು ನೀವು ರುಚಿ ರುಚಿಯಾದ ಮೀನಿನ ಫ್ರೈ ಮಾಡಬಹುದು.

ಅಂಜಲ್ ಮೀನಿನ ಫ್ರೈ ಹೋಟೆಲ್‌ನಲ್ಲಿ ಕೊಂಡರೆ ಒಂದು ಪೀಸ್‌ಗೆ ಕಡಿಮೆಯೆಂದರೂ 200ರೂ ತೆಗೆದುಕೊಳ್ಳುತ್ತಾರೆ. ಅದೇ ನೀವು ಮನೆಯಲ್ಲಿಯೇ ಮಾಡಿದರೆ ಖರ್ಚು ಕಡಿಮೆ ಹಾಗೂ ಅಷ್ಟೇ ರುಚಿಯಾಗಿ ಮೀನನ್ನು ಸವಿಯಲು ಇಲ್ಲಿದೆ ನೋಡಿ ಸರಳವಾದ ರೆಸಿಪಿ.
Recipe By: Reena TK
Recipe Type: Non Veg
Serves: 4
-
ಬೇಕಾಗುವ ಸಾಮಗ್ರಿ
* ಅಂಜಲ್ ಮೀನು ಅರ್ಧ ಕೆಜಿ
* ಖಾರದ ಪುಡಿ ಒಂದೂವರೆ ಅಥವಾ ಎರಡು ಚಮಚ
* ಅರಿಶಿಣ ಪುಡಿ ಅರ್ಧ ಚಮಚ
* 1/4 ಚಮಚ ಜೀರಿಗೆ ಪುಡಿ
* ದೊಡ್ಡ ನಿಂಬೆಹಣ್ಣು ಗಾತ್ರದಷ್ಟು ಹುಣಸೆ ಹಣ್ಣು
* 1 ಚಮಚ ಉಪ್ಪು
* ಎಣ್ಣೆ 2 ಚಮಚ
-
ಮಾಡುವ ವಿಧಾನ:
* ಅಂಜಲ್ ಮೀನನ್ನು ಅರಿಸಿಣ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ತೊಳೆಯಿರಿ.
* ಹುಣಸೆಹಣ್ಣನ್ನು 1/4 ಕಪ್ ಬಿಸಿ ನೀರಿನಲ್ಲಿ ಹಾಕಿ ಸ್ವಲ್ಪ ಗಟ್ಟಿಯಾಗಿ ಹುಣಸೆ ಹಣ್ಣಿನ ರಸ ಮಾಡಿ.
* ಅದನ್ನು ತಟ್ಟೆಗೆ ಹಾಕಿ ಆ ರಸಕ್ಕೆ ಅರಿಶಿಣ, ಉಪ್ಪು, ಖಾರದ ಪುಡಿ, 1/4 ಚಮಚ ಜೀರಿಗೆ ಪುಡಿ (ನಿಮ್ಮ ಆಯ್ಕೆಗೆ ಬಿಟ್ಟದ್ದು) ಹಾಕಿ ಹಾಕಿ ಮಿಶ್ರ ಮಾಡಿ ಅದಕ್ಕೆ ಮೀನನ್ನು ಹಾಕಿ ಆ ಪೇಸ್ಟ್ ಅನ್ನು ಮೀನಿನ ತುಂಡುಗಳ ಮೇಲೆ ಚೆನ್ನಾಗಿ ಸವರಿ.
* ಈಗ ಮೀನು ಮಸಾಲೆಯನ್ನು ಚೆನ್ನಾಗಿ ಹೀರಿ ಕೊಳ್ಳಲು ಒಂದು ಅಥವಾ ಎರಡು ತಾಸು ಫ್ರಿಡ್ಜ್‌ನಲ್ಲಿಡಿ.
* ತವಾ ಬಿಸಿ ಮಾಡಿ ಅದಕ್ಕೆ 2 ಚಮಚ ಎಣ್ಣೆ ಹಾಕಿ ಉರಿ ಕಡಿಮೆ ಮಾಡಿ ಮೀನು ಹಾಕಿ 10 ನಿಮಿಷ ಫ್ರೈ ಮಾಡಿ ನಂತರ ಅದರ ಮತ್ತೊಂದು ಬದಿಯನ್ನು ಕೂಡ 10 ನಿಮಿಷ ಫ್ರೈ ಮಾಡಿದರೆ ಅಂಜಲ್ ಮೀನಿನ ತವಾ ಫ್ರೈ ಮಾಡಿ ನೋಡಿ.
- ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೀನಿನಲ್ಲಿ ವಿಟಮಿನ್ ಡಿ ಹಾಗೂ ಒಮೆಗಾ 3 ಕೊಬ್ಬಿನಂಶವಿದೆ. ಅಂಜಲ್ ಮೀನಿನ ವಿಶೇಷತೆಯೆಂದರೆ ಇದು ರುಚಿಯ ಜೊತೆಗೆ ಮುಳ್ಳು ಕಡಿಮೆ ಇರುವುದರಿಂದ ಮಕ್ಕಳಿಗೂ ಕೂಡ ಕೊಡಬಹುದು.



Click it and Unblock the Notifications