Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಂಧ್ರ ಶೈಲಿಯ ಸ್ಪೆಷಲ್ ಖಿಚಡಿ: 5 ನಿಮಿಷದಲ್ಲಿ ಮಾಡೋದು ಹೇಗೆ?
ಬೆಳಗ್ಗೆ ಗಡಿ ಬಿಡಿಯಲ್ಲಿ ಸುಲಭವಾಗಿ ಯಾವುದಾದರು ತಿಂಡಿ ಮಾಡುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಸುಲಭವಾಗಿ ಮಾಡಿ ಮುಗಿಸುವಂತಹ ತಿಂಡಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಬೆಳಗ್ಗೆ ಸಮಯದಲ್ಲಿ ಗೃಹಿಣಿಯರ ತಲೆಯಲ್ಲಿ ಯಾವ ತಿಂಡಿ ಮಾಡಬೇಕು ಎಂಬ ಆಲೋಚನೆ ಬಂದೇ ಬರುತ್ತದೆ. ಹಾಗೆ ಯಾವುದಾದರು ಸುಲಭದ ತಿಂಡಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ.
ಹಾಗೆ ನಾವಿಂದು ಇಂತಹ ವಿಶೇಷ ರೀತಿಯ ತಿಂಡಿಗಳ ಪೈಕಿ ಖಿಚಡಿ ಮಾಡುವ ಕುರಿತು ತಿಳಿಯೋಣ. ನೀವು ಹೋಟೆಲ್, ಕ್ಯಾಂಟಿನ್‌ನಲ್ಲಿ ಸವಿದಿರುವಂತಹ ರುಚಿ ರುಚಿಯ ಖಿಚಡಿಯನ್ನು ಮನೆಯಲ್ಲಿಯೂ ಮಾಡಿ ಸವಿದಿರಬಹುದು. ಆದ್ರೆ ನಾವಿಂದು ಸುಲಭವಾಗಿ ವಿಶೇಷ ರೀತಿಯಲ್ಲಿ ಈ ಖಿಚಡಿ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಆಂಧ್ರದಲ್ಲಿ ಮಸಾಲೆ ಭರಿತ ಖಾದ್ಯಗಳು ಬಹಳ ಫೇಮಸ್. ಆಂಧ್ರದಲ್ಲಿ ಈ ಖಿಚಡಿ ಬಹಳ ಫೇಮಸ್. ಹಾಗೆ ಇದರ ರುಚಿ ಒಮ್ಮೆ ನೀವು ಮಾಡಿ ಸವಿದರೆ ಪದೇ ಪದೇ ಈ ಖಾದ್ಯ ಮಾಡಿ ಸವಿಯಲು ಮುಂದಾಗುತ್ತೀರಿ. ಬೆಳಗ್ಗೆ ಸಮಯದಲ್ಲಿ ಗಡಿಬಿಡಿಯ ಸಮಯದಲ್ಲಿ ಈ ಖಾದ್ಯ ನಿಮಗೆ ಬಹಳ ಉತ್ತಮವಾಗಿರಲಿದೆ. ನೀವು ಕೂಡ ಮನೆಯಲ್ಲಿ ಈ ಖಾದ್ಯ ಮಾಡಿ ಸವಿದು ನೋಡಿ.
ಹಾಗಾದ್ರೆ ಈ ಆಂಧ್ರ ಶೈಲಿ ಖಿಚಡಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಆಂಧ್ರ ಶೈಲಿಯ ಖಿಚಡಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ
- ಬೆಳೆ
- ಹೆಸರು ಬೇಳೆ
- ತೊಗರಿ ಬೇಳೆ
- ಕೆಂಪು ಬೇಳೆ
- ಉಪ್ಪು
- ಎಣ್ಣೆ
- ಈರುಳ್ಳಿ
- ಟೊಮೆಟೋ ಶುಂಠಿ
- ಅರಶಿಣ
- ಖಾರದ ಪುಡಿ
- ಸಾಸಿವೆ
- ಬೆಳ್ಳುಳ್ಳಿ
- ಜೀರಿಗೆ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಹಸಿ ಮೆಣಸು
ಆಂಧ್ರ ಶೈಲಿಯ ಖಿಚಡಿ ಮಾಡುವ ವಿಧಾನವೇನು?
ಮೊದಲು ಕುಕ್ಕರ್‌ಗೆ 1 ಕಪ್ ಅಕ್ಕಿ ಹಾಕಿ ಅರ್ಧ ಕಪ್ ಹೆಸರು ಬೇಳೆ, ಕಾಲು ಕಪ್ ತೊಗರಿ ಬೇಳೆ, ಕಾಲು ಕಪ್ ಕೆಂಪು ಬೇಳೆ ಹಾಕಿಕೊಂಡು ನೀರು ಹಾಕಿಕೊಂಡು ಚೆನ್ನಾಗಿ ತೊಳೆದುಕೊಳ್ಳಬೇಕು. 3ರಿಂದ 4 ಬಾರಿ ತೊಳೆದು ನೀರು ಬಸಿದು ಈಗ ಒಂದು ಆಲೂಗಟ್ಟೆ ಹೆಚ್ಚಿಕೊಂಡು ಹಾಕಿ, ಹಾಗೆ ಹಸಿ ಬಟಾಣಿ, ಅರಶಿಣ 1 ಸ್ಪೂನ್ ಎಣ್ಣೆ ಹಾಗೆ 6ರಿಂದ 7 ಕಪ್ ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ.
ನಂತರ ಕುಕ್ಕರ್ ತಣ್ಣಗಾದ ಬಳಿಕ ಮುಚ್ಚಳ ತೆಗೆದು ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಇದಕ್ಕೆ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಕರಿಬೇವು, ಹಸಿ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅರ್ಧ ಸ್ಪೂನ್ ಖಾರದ ಪುಡಿ ಕೂಡ ಹಾಕಿ 1 ನಿಮಿಷ ಫ್ರೈ ಮಾಡಿ.
ಅನಂತರ 2 ಈರುಳ್ಳಿ, ತುರಿದ ಶುಂಠಿ, 2 ಟೊಮೆಟೋ ಹಾಗೆ ಉಪ್ಪು ಸೇರಿಸಿಕೊಂಡು ಮತ್ತೆ ಮಿಕ್ಸ್ ಮಾಡಬೇಕು. 2 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಈಗ ಈ ಎಲ್ಲಾ ಪದಾರ್ಥವನ್ನು ಕುಕ್ಕರ್‌ನಲ್ಲಿರುವ ಬೇಳೆ ಅಕ್ಕಿಯ ಜೊತೆಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಅನಂತರ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ಈ ದಾಲ್ ಖಿಚಡಿ ರೆಡಿಯಾಗುತ್ತದೆ. ಆಂಧ್ರ ಭಾಗದಲ್ಲಿ ಈ ರೀತಿಯ ಖಚಿಡಿ ಬಹಳ ಫೇಮಸ್ ಆಗಿದೆ. ನೀವು ಕೂಡ ಬೆಳಗ್ಗೆ ತಿಂಡಿಯ ಸಮಯದಲ್ಲಿ ಇದನ್ನು ಮಾಡಿ ಸವಿದು ನೋಡಿ.



Click it and Unblock the Notifications