Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಚಾರಿ ಗೋಶ್ಟ್ ರೆಸಿಪಿ: ಮಟನ್ ಪ್ರಿಯರಿಗೆ ತುಂಬಾ ಇಷ್ಟವಾಗುವ ಖಾದ್ಯ
ನೀವು ಮಟನ್ ಪ್ರಿಯರಾಗಿದ್ದರೆ ನೀವು ಸಾಧಾರಣವಾಗಿ ಮಾಡುವ ವಿಧಾನಕ್ಕಿಂತ ಸ್ವಲ್ಪ ಭಿನ್ನವಾಗಿ ಏಕೆ ಮಾಡಲು ಪ್ರಯತ್ನಿಸಬಾರದು. ಅಯ್ಯೋ ಹೊಸ ವಿಧಾನ ಹೇಗೆ ಬರುತ್ತೋ ಎಂಬ ಆತಂಕವಿಲ್ಲದೆ ಮಾಡಬಹುದಾದ ರೆಸಿಪಿಯೊಂದನ್ನು ನಾವಿಲ್ಲ ನೀಡಿದ್ದೇವೆ.

ನೀವು ಇತರ ಮಟನ್ ಸಾರು ಮಾಡುವಷ್ಟೇ ಸುಲಭವಾದ ರೆಸಿಪಿಯಾಗಿದ್ದು ನಿಮಗೆ ಖಂಡಿತ ಈ ಟೇಸ್ಟ್ ಇಷ್ಟವಾಗುವುದು. ಇಲ್ಲಿ 1 ಕೆಜಿ ಮಟನ್ ಮಾಡುವ ರೆಸಿಪಿ ನೀಡಲಾಗಿದೆ. ನೀವು ಬೇಕಿದ್ದರೆ ಅರ್ಧ ಕೆಜಿ ಮಟನ್ ಬಳಸಿ ತಯಾರಿಸಬಹುದು.
ಈ ಆಚಾರಿ ಗೋಶ್ಟ್ ಖಾರವಾದ ಖಾದ್ಯವಾಗಿದ್ದು, ನೀವು ಬೇಕಿದ್ದರೆ ನಿಮ್ಮ ಖಾರಕ್ಕೆ ತಕ್ಕಂತೆ ತಯಾರಿಸಬಹುದು.
Recipe By: Kannada Boldsky
Recipe Type: Non veg
Serves: 4
-
ಬೇಕಾಗುವ ಸಾಮಗ್ರಿ
ಮಟನ್ 1 ಕೆಜಿ
ಒಣ ಮೆಣಸು 8
ಮೆಂತೆಕಾಳು ಅರ್ಧ ಚಮಚ
ಜೀರಿಗೆ 1 ಚಮಚ
ಸೋಂಪು 1 ಚಮಚ
ಈರುಳ್ಳಿ 1 ಚಮಚ
ಲವಂಗ 5
ಸಾಸಿವೆಯೆಣ್ಣೆ 4 ಚಮಚ
ಈರುಳ್ಳಿ 4
ಶುಂಠಿ 2 ಪೇಸ್ಟ್ ಚಮಚ
ಬೆಳ್ಳುಳ್ಳಿ 3 ಪೇಸ್ಟ್ ಚಮಚ
ಅರಿಶಿಣ ಪುಡಿ 1 ಚಮಚ
ಖಾರದ ಪುಡಿ 1 ಚಮಚ
ಟೊಮೆಟೊ 4
ನಿಂಬೆರಸ 1 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ಎರಡೂವರೆ ಕಪ್ ನೀರು
-
ಮಾಡುವ ವಿಧಾನ
* ಒಣ ಮೆಣಸು, ಜೀರಿಗೆ, ಮೆಂತೆ, ಸಾಸಿವೆ, ಸೋಂಪು, ಲವಂಗ ಇವುಗಳನ್ನು 2-3 ನಿಮಿಷ ಹುರಿಯಿರಿ. ಬೇಕಿದ್ದರೆ ಈರುಳ್ಳಿ ಬೀಜ ಕೂಡ ಸೇರಿಸಬಹುದು. ಮೆಣಸು ಹಾಗೂ ಇತರ ಮಸಾಲೆ ಸಾಮಗ್ರಿ ರೋಸ್ಡ್ ಆದ ಮೇಲೆ ಉರಿಯಿಂದ ಇಳಿಸಿ ತಣ್ಣಗಾಗಲು ಬಿಡಿ.
ನಂತರ ಮಿಕ್ಸಿಯಲ್ಲಿ ಹಾಕಿ ತರಿತರಿಯಾಹಿ ರುಬ್ಬಿಕೊಳ್ಳಿ.
* ಮಟನ್ ತೊಳೆದು ಸ್ವಚ್ಛವಾಗಿಸಿ.
* ಪ್ಯಾನ್‌ಗೆ ಸಾಸಿವೆ ಎಣ್ಣೆ ಹಾಕಿ (ನಿಮಗಿಷ್ಟವಾದ ಎಣ್ಣೆ ಬಳಸಬಹುದು), ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ.
* ಈಗ ರುಬ್ಬಿಟ್ಟ ಮಸಾಲೆಹಾಕಿ, ನಂತರ ಮಟನ್ ಹಾಕಿ ಮಿಕ್ಸ್ ಮಾಡಿ 10 ನಿಮಿಷ ಬೇಯಿಸಿ.
* ನಂತರ ಅರಿಶಿಣ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ.
* ಮತ್ತೆ ಸಾಧಾರಣ ಉರಿಯಲ್ಲಿ 5 ನಿಮಿಷ ಬೇಯಿಸಿ ಈಗ ಮಟನ್ ಬೇಯಲು ತಕ್ಕ ನೀರು ಹಾಕಿ ಬೇಯಿಸಿ. ಕುಕ್ಕರ್‌ನಲ್ಲಿ ಬೇಯಿಸುವುದಾದರೆ 8-10 ವಿಶಲ್ ಬರುವವರೆಗೆ ಬೇಯಿಸಿ.
* ನಂತರ ಸಾರು ಸ್ವಲ್ಪ ಗಟ್ಟಿಯಾಗ ಬೇಕಾದರೆ ಮುಚ್ಚಳ ತೆಗೆದು, ಅದರ ನೀರಿನಂಶ ಆವಿಯಾಗಿ ಗ್ರೇವಿ ಗಟ್ಟಿಯಾಗುವವರೆಗೆ ಬೇಯಿಸಿ. ನಂತರ ನಿಂಬೆ ರಸ ಹಿಂಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿ-ರುಚಿಯಾದ ಮಟನ್ ಗೋಶ್ಟ್ ರೆಡಿ.
- ಮಟನ್ ಮಸಾಲ ತರಿ -ತರಿಯಾಗಿರಬೇಕು, ನೀವು ಬೇಕಿದ್ದರೆ ಖಾರದ ಪುಡಿ ಬದಲಿಗೆ 1 ಚಮಚ ಮಟನ್ ಮಸಾಲ ಬಳಸಬಹುದು



Click it and Unblock the Notifications