Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಆಗಸ್ಟ್ 3ಕ್ಕೆ ಕೊಡಗಿನ ಎಲ್ಲಾ ಮನೆಗಳಲ್ಲಿ ಸಿಗುತ್ತೆ ಕಡು ನೀಲಿ ಬಣ್ಣದ ಪಾಯಸ, ಇದರ ವಿಶೇಷತೆಯೇನು?
ಕೆಲವು ಕಡೆ ಆಷಾಢ ಆಚರಣೆ ಮಾಡಿದರೆ ಇನ್ನು ಕೆಲವು ಕಡೆ ಆಟಿ ತಿಂಗಳು ಅಂತ ಆಚರಣೆ ಮಾಡಲಾಗುವುದು, ದಕ್ಷಿಣ ಕನ್ನಡ, ಕೊಡಗು ಈ ಭಾಗಗಳಲ್ಲಿ ಆಟಿ ಮಾಸ ಎಂದು ಆಚರಣೆ ಮಾಡುತ್ತಾರೆ. ಆಟಿ ಅಮವಾಸ್ಯೆ, ಆಟಿ 18 ಇದೆಲ್ಲಾ ವಿಶೇಷ ದಿನವಾಗಿ ಆಚರಿಸುತ್ತಾರೆ. ಆಗಸ್ಟ್ 3ಕ್ಕೆ ಆಟಿ 18 ಆಚರಿಸುತ್ತಿದ್ದಾರೆ, ಈ ದಿನ ಕೊಡಗಿನ ಯಾವುದೇ ಮನೆಗೆ ಹೋಗಿ(ಜಾತಿ-ಬೇಧವಿಲ್ಲದೆ)ಅಲ್ಲೊಂದು ಕಡು ನೀಲಿ ಬಣ್ಣದ ಪಾಯಸ ಸೇವಿಸಲು ಕೊಡುತ್ತಾರೆ, ಅದನ್ನು ಆಟಿ ಪಾಯಸ ಎಂದು ಕರೆಯಲಾಗುವುದು.

.
ಈ ಆಟಿ ಪಾಯಸದಲ್ಲಿ 18 ಬಗೆಯ ಔಷಧಗಳು ಸೇರಿರುತ್ತದೆ ಎಂದು ಹೇಳಲಾಗುವುದು, ಹಾಗಾಗಿ ಈ ಪಾಯಸ ಸೇವನೆ ಆರೋಗ್ಯಕ್ಕೆ ಅಷ್ಟೊಂದು ಅನುಕೂಲಕರ ಎಂದು ಪರಿಗಣಿಸಲಾಗಿದೆ. ಆಟಿ ಸೊಪ್ಪು ಎಂದು ದೊರೆಯುತ್ತದೆ, ಅದನ್ನು ಬೇರೆ ಸಮಯದಲ್ಲಿ ಬೇಯಿಸಿದರೆ ಆ ಸೊಪ್ಪು ಹಾಕಿ ಬೇಯಿಸಿದ ನೀರು ಕಡು ನೀಲಿ ಬಣ್ಣಕ್ಕೆ ಬರುವುದಿಲ್ಲ, ಆದರೆ ಈ ಸಮಯದಲ್ಲಿ ಅದರಲ್ಲಿಯೂ ಆಟಿ 18ಕ್ಕೆ ಈ ಸೊಪ್ಪು ಬೇಯಿಸಿದಾಗ ಕಡು ನೀಲಿ ಬಣ್ಣಕ್ಕೆ ಬರುತ್ತದೆ.
ಆ ನೀರಿಗೆ ಅಕ್ಕಿ ಪಾಯಸ ಪಾಡುವ ರೀತಿಯಲ್ಲಿ ಮಾಡಲಾಗುವುದು, ಕೊಡಗಿನವರು ಈ ಸಮಯದಲ್ಲಿ ಕೊಡಗಿನಿಂದ ಹೊರಗಡೆ ಇದ್ದರೆ ಈ ಪಾಯಸ ಖಂಡಿತ ಮಿಸ್ ಮಾಡಿಕೊಳ್ಳುತ್ತಾರೆ, ಅಷ್ಟರ ಮಟ್ಟಿಗೆ ಪ್ರಿಯವಾದ ಪಾಯಸವಿದು.
ಔಷಧೀಯ ಗುಣವಿರುವ ಈ ಪಾಯಸದ ಮಹತ್ವವೇನು?
ಮಳೆಗಾಲ, ನಾಟಿಯ ಸಮಯವಿದು ಈ ಸಮಯದಲ್ಲಿ ಆರೋಗ್ಯಕರ ಆಹಾರದ ಕಡೆಗೆ ತುಂಬಾನೇ ಗಮನಹರಿಸಬೇಕು. ಕೆಲವೊಂದು ಔಷಧಿಗಳನ್ನು ಸೇವಿಸಬೇಕು, ಈ ಆಟಿ ಸೊಪ್ಪಿನಲ್ಲಿ ಅಷ್ಟೊಂದು ಔಷಧೀಯ ಗುಣಗಳಿವೆ, ಹಾಗಾಗಿ ಹಿಂದಿನ ಕಾಲದಿಂದಲೂ ಈ ಆಟಿ ಪಾಯಸ ಮಾಡುವುದನ್ನು ಒಂದು ಆಚರಣೆಯಂತೆ ಮಾಡುತ್ತಾರೆ.
ಈ ಆಟಿ ಪಾಯಸ ಹೇಗೆ ಮಾಡುತ್ತಾರೆ?
ಆಟಿ ಸೊಪ್ಪು
3 ಲೀಟರ್ ನೀರು
1 ಲೋಟ ಅಕ್ಕಿ
ತೆಂಗಿನ ಕಾಯಿ ಹಾಲು 1 ಕಪ್
1/2 ಕೆಜಿ ಬೆಲ್ಲ (ಪೂರ್ತಿ ಹಾಕಬೇಡಿ, ಸ್ವಲ್ಪ ಉಳಿಸಿ 1/2 ಕೆಜಿಗಿಂತ ಸ್ವಲ್ಪ
ಹೆಚ್ಚು ಹಾಕಿ)
2 ಚಮಚ ತುಪ್ಪ
2-3 ಏಲಕ್ಕಿ
ಸ್ವಲ್ಪ ಗೋಡಂಬಿ, ದ್ರಾಕ್ಷಿ
ಮಾಡುವುದು ಹೇಗೆ?
ಸೊಪ್ಪು ತೊಳೆದು ನಂತರ ನೀರು ಹಾಕಿ ಬೇಯಿಸಿ, ನೀರು ನೀಲಿ ಬಣ್ಣಕ್ಕೆ ಬರುತ್ತದೆ, ಆ
ನೀರನ್ನು ಮತ್ತೊಂದು ಪಾತ್ರೆಗೆ ಸುರಿದು ಅದರಲ್ಲಿ ಅಕ್ಕಿ ಮತ್ತು ಬೆಲ್ಲ ಹಾಕಿ
ಬೇಯಿಸಿ.
ಪಾಯಸ ಬೇಯುವಾಗ ಏಲಕ್ಕಿ ಹಾಕಿ
ಪಾಯಸ ಬೆಂದ ಮೇಲೆ ತೆಂಗಿನಕಾಯಿ ಹಾಲು ಹಾಕಿ ಮತ್ತೆ 5 ನಿಮಿಷ ಬೇಯಿಸಿ
ನಂತರ ಪಾತ್ರೆಗೆ ತುಪ್ಪ ಹಾಕಿ ಅದರಲ್ಲಿ ಗೋಡಂಬಿ, ದ್ರಾಕ್ಷಿ ಹಾಕಿ ನಂತರ
ಪಾಯಸಕ್ಕೆ ಸೇರಿಸಿದರೆ ಪಾಯಸ ಸವಿಯಲು ರೆಡಿ.



Click it and Unblock the Notifications