Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Navratri: ನವರಾತ್ರಿ ಉಪವಾಸದಲ್ಲಿ ಈ ಜ್ಯೂಸ್ ಕುಡಿದ್ರೆ ಸಾಕು! ನಿಶಕ್ತಿ ದೂರ, ಎನರ್ಜಿ ಖಚಿತ
ನವರಾತ್ರಿಯ 9 ದಿನ ಉಪವಾಸದಲ್ಲಿ ಈ ಜ್ಯೂಸ್ ಕುಡಿದರೆ ಸಾಕು! ನಿಮ್ಮನ್ನು ಫ್ರೆಶ್ ಆಗಿ ಇಡುತ್ತವೆ. ನವರಾತ್ರಿ ಹಬ್ಬದ (Navratri 2025) ಸಮಯದಲ್ಲಿ ಉಪವಾಸ ವ್ರತ ಮಾಡುವುದು ಸಾಮಾನ್ಯ. ಈ ಸಮಯದಲ್ಲಿ ತಮ್ಮ ದೇಹಕ್ಕೆ ಅಗತ್ಯವಾದ ಶಕ್ತಿ ಮತ್ತು ತಾಜಾತನ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ಒಂಬತ್ತು ದಿನಗಳಲ್ಲಿ ದೇಹವು ಸುಸ್ತಾಗದಂತೆ ಮತ್ತು ನಿರ್ಜಲೀಕರಣದಿಂದ ದೂರವಿರಲು ಕೆಲವು ಆರೋಗ್ಯಕರ ಜ್ಯೂಸ್ ಅಥವಾ ಪಾನೀಯಗಳು ನೆರವಾಗುತ್ತವೆ. ಉಪವಾಸದ ಅವಧಿಯಲ್ಲಿ ಲಘುವಾದ, ಸುಲಭವಾಗಿ ಜೀರ್ಣವಾಗುವ ಮತ್ತು ಪೌಷ್ಟಿಕಾಂಶದಿಂದ ಕೂಡಿದ ಜ್ಯೂಸ್‌ಗಳನ್ನು (Healthy Drinks) ಸೇವಿಸುವುದು ಉತ್ತಮ.
ಶಾರದೀಯ ನವರಾತ್ರಿಯ (Shardiya Navratri 2025) ದಿನಗಳಲ್ಲಿ ದೇವಿಯ ಆರಾಧನೆಯೊಂದಿಗೆ ಉಪವಾಸವನ್ನು (navratri fasting) ಆಚರಿಸಲಾಗುತ್ತದೆ. ಉಪವಾಸದಿಂದ ದೇಹ ಮತ್ತು ಮನಸ್ಸಿಗೆ ಶಾಂತಿ ದೊರೆತರೂ, ಕೆಲವೊಮ್ಮೆ ದಿನವಿಡೀ ಉಪವಾಸ ಮಾಡುವುದರಿಂದ ಆಯಾಸ ಉಂಟಾಗುತ್ತದೆ. ಜೊತೆಗೆ ನಿರ್ಜಲೀಕರಣ ಮತ್ತು ದೌರ್ಬಲ್ಯ ಉಂಟಾಗಬಹುದು. ಈ ಸಮಯದಲ್ಲಿ, ದೇಹವನ್ನು ಹೈಡ್ರೇಟ್ ಮಾಡಿ ಶಕ್ತಿಯನ್ನು ನೀಡುವ ಸರಿಯಾದ ಪೌಷ್ಟಿಕಾಂಶದ ಜ್ಯೂಸ್‌ಗಳು ಅತಿ ಅವಶ್ಯಕ. ಈ ಲೇಖನದಲ್ಲಿ ನವರಾತ್ರಿ ಉಪವಾಸದಲ್ಲಿ ನೀವು ಸೇವಿಸಬಹುದಾದ 5 ಆರೋಗ್ಯಕರ ಜ್ಯೂಸ್‌ಗಳ ಬಗ್ಗೆ ತಿಳಿಸಲಾಗಿದೆ.

1. ಎಳನೀರು
ಅಗತ್ಯವಿರುವ ಸಾಮಗ್ರಿಗಳು: 1 ಗ್ಲಾಸ್ ತಾಜಾ ಎಳನೀರು, ಅರ್ಧ ಚಮಚ ನಿಂಬೆ ರಸ, 4 ರಿಂದ 5 ಪುದೀನಾ ಎಲೆಗಳು.
ತಯಾರಿಸುವ ವಿಧಾನ: ಒಂದು ಗ್ಲಾಸ್‌ಗೆ ಎಳನೀರನ್ನು ಸುರಿದು, ಅದಕ್ಕೆ ನಿಂಬೆ ರಸ ಮತ್ತು ಪುದೀನಾ ಎಲೆಗಳನ್ನು ಸೇರಿಸಿ ತಣ್ಣಗೆ ಸೇವಿಸಿ. ಇದು ದೇಹವನ್ನು ಚೈತನ್ಯದಿಂದ ಇಡಲು ಸಹಾಯ ಮಾಡುತ್ತದೆ.
2. ಬೇಲದ ಹಣ್ಣಿನ ಶರಬತ್ತು
ಅಗತ್ಯವಿರುವ ಸಾಮಗ್ರಿಗಳು: 1 ದೊಡ್ಡ ಬೇಲದ ಹಣ್ಣು, 2 ಗ್ಲಾಸ್ ನೀರು, 2 ಚಮಚ ಜೇನುತುಪ್ಪ ಅಥವಾ ಕಲ್ಲುಸಕ್ಕರೆ.
ತಯಾರಿಸುವ ವಿಧಾನ: ಮೊದಲಿಗೆ ಬೇಲದ ಹಣ್ಣನ್ನು ಒಡೆದು ತಿರುಳನ್ನು ತೆಗೆಯಿರಿ. ಆ ತಿರುಳನ್ನು ನೀರಿನಲ್ಲಿ ಬೆರೆಸಿ, ನಂತರ ಸೋಸಿಕೊಳ್ಳಿ. ಅದಕ್ಕೆ ಜೇನುತುಪ್ಪ ಅಥವಾ ಕಲ್ಲುಸಕ್ಕರೆ ಸೇರಿಸಿ ತಣ್ಣಗೆ ಸೇವಿಸಿ. ಇದು ದೇಹಕ್ಕೆ ತಂಪು ನೀಡುತ್ತದೆ.
3. ಮೊಸರು - ಹಣ್ಣಿನ ಸ್ಮೂಥಿ
ಅಗತ್ಯವಿರುವ ಸಾಮಗ್ರಿಗಳು: 1 ಕಪ್ ಮೊಸರು, 1 ಕತ್ತರಿಸಿದ ಬಾಳೆಹಣ್ಣು, ಅರ್ಧ ಸೇಬು ಅಥವಾ ಪಪ್ಪಾಯಿ, ಜೇನುತುಪ್ಪ (ಅಗತ್ಯಕ್ಕೆ ತಕ್ಕಷ್ಟು).
ತಯಾರಿಸುವ ವಿಧಾನ: ಮೊದಲಿಗೆ ಒಂದು ಮಿಕ್ಸಿಯಲ್ಲಿ ಮೊಸರು, ಕತ್ತರಿಸಿದ ಹಣ್ಣುಗಳು ಮತ್ತು ಜೇನುತುಪ್ಪವನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ತಣ್ಣಗಾದ ಸ್ಮೂಥಿಯನ್ನು ಗ್ಲಾಸ್‌ಗೆ ಹಾಕಿ ಸೇವಿಸಿ. ಇದು ದೇಹಕ್ಕೆ ತಕ್ಷಣದ ಶಕ್ತಿ ನೀಡುತ್ತದೆ.
4. ಪುದೀನಾ - ನಿಂಬೆ ನೀರು
ಅಗತ್ಯವಿರುವ ಸಾಮಗ್ರಿಗಳು: ತಣ್ಣನೆಯ ನೀರು, ನಿಂಬೆ ರಸ - 1 ಚಮಚ, ಪುದೀನಾ ಎಲೆಗಳು.
ತಯಾರಿಸುವ ವಿಧಾನ: ಮೊದಲು ತಣ್ಣನೆಯ ನೀರಿಗೆ ನಿಂಬೆ ರಸ ಮತ್ತು ಪುದೀನಾ ಎಲೆಗಳನ್ನು ಹಾಕಿ. ಇದನ್ನು 5 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಇದನ್ನು ಸೇವಿಸಿ. ಇದು ದೇಹವನ್ನು ನಿರ್ವಿಷಗೊಳಿಸಿ ತಂಪು ನೀಡುತ್ತದೆ.
5. ಬಾದಾಮಿ ಹಾಲು
ಅಗತ್ಯವಿರುವ ಸಾಮಗ್ರಿಗಳು: ನೆನೆಸಿದ ಬಾದಾಮಿ, ಹಾಲು, ಜೇನುತುಪ್ಪ, ಏಲಕ್ಕಿ ಪುಡಿ.
ತಯಾರಿಸುವ ವಿಧಾನ: ಮೊದಲಿಗೆ ನೆನೆಸಿದ ಬಾದಾಮಿಯನ್ನು ಪೇಸ್ಟ್ ಮಾಡಿ. ಇದನ್ನು ಹಾಲಿಗೆ ಹಾಕಿ. ಇದಾದ ಬಳಿಕ ಅದಕ್ಕೆ ಜೇನುತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿ. ಇದನ್ನು ಕುಡಿಯಿರಿ. ಇದು ದೌರ್ಬಲ್ಯ ಮತ್ತು ಆಯಾಸವನ್ನು ನಿವಾರಿಸಿ, ದೇಹಕ್ಕೆ ಶಕ್ತಿ ನೀಡುತ್ತದೆ.



Click it and Unblock the Notifications