Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ನಾವಿಲ್ಲಿ ಈ ಬೇಸಿಗೆಯಲ್ಲಿ ಆರೋಗ್ಯ ವೃದ್ಧಿಸುವ ಕೆಲ ಚಟ್ನಿ ರೆಸಿಪಿ ನೀಡಿದ್ದೇವೆ. ದೋಸೆ-ಇಡ್ಲಿಗೆ ಈ ಚಟ್ನಿ ತುಂಬಾನೇ ರುಚಿಯಾಗಿರುತ್ತದೆ, ದೇಹವನ್ನೂ ತಂಪಾಗಿಸುತ್ತದೆ, ಬನ್ನಿ ಆ ಚಟ್ನಿ ರೆಸಿಪಿ ನೋಡೋಣ ಬನ್ನಿ:
ಸೊಪ್ಪಿನ ಚಟ್ನಿ
ಪುದೀನಾ ಚಟ್ನಿ, ಕೊತ್ತಂಬರಿ ಚಟ್ನಿ , ಪಾಲಾಕ್ ಚಟ್ನಿ ಹೀಗೆ ಯಾವುದೇ ಸೊಪ್ಪಿನ
ಚಟ್ನಿಯಾದರೂ ಈ ಬೇಸಿಗೆಯ ಆರೋಗ್ಯ ವೃದ್ಧಿಸಲು ಸಹಕಾರಿ. ನಾವಿಲ್ಲಿ ಸೊಪ್ಪು ಹಾಕಿ
ಮಾಡುವ ಕೆಲ ಚಟ್ನಿ ರೆಸಿಪಿ ನೀಡಿದ್ದೇವೆ ನೋಡಿ:

ಕೊತ್ತಂಬರಿ ಸೊಪ್ಪು ಹಾಕಿ ಮಾಡುವ ಚಟ್ನಿ
ಕೊತ್ತಂಬರಿ ಸೊಪ್ಪು ಕ್ಲೀನ್ ಮಾಡಿ ತೊಳೆಯಿರಿ
ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ
ಈಗ ಬ್ಲೆಂಡರ್‌ಗೆ ರೋಸ್ಟ್ ಮಾಡಿದ ನೆಲಗಡಲೆ, 1/2 ಚಮಚ ಜೀರಿಗೆ ಪುಡಿ ಅಥವಾ 2
ಚಮಚ ರೋಸ್ಟ್ ಮಾಡಿದ ಜೀರಿಗೆ, 1/2 ಚಮಚ ಉಪ್ಪು, ಬೆಳ್ಳುಳ್ಳಿ, 2 ಹಸಿಮೆಣಸು
ಸ್ವಲ್ಪ ಹುಣಸೆಹಣ್ಣು ಸೇರಿಸಿ, ಸ್ವಲ್ಪ ನೀರು ಹಾಕಿ ಗ್ರೈಂಡ್ ಮಾಡಿ.
ಹುಣಸೆಹಣ್ಣು ಬಳಸದಿದ್ದರೆ ರುಬ್ಬಿದ ನಂತರ ಸ್ವಲ್ಪ ನಿಂಬೆರಸ ಸೇರಿಸಿ.
ನಂತರ ಈ ಚಟ್ನಿಗೆ ಸ್ವಲ್ಪ ಮೊಸರು ಹಾಕಿ ಮಿಕ್ಸ್ ಮಾಡಿ, ಇದನ್ನು ಅನ್ನ, ದೋಸೆ
ಇವುಗಳ ಜೊತೆ ಸವಿಯಬಹುದು.
ಟಿಪ್ಸ್: ಚಟ್ನಿಯನ್ನು ತುಂಬಾನೇ ರುಬ್ಬಬೇಡಿ, ಕಹಿ ರುಚಿ ಬರುತ್ತೆ.
ತುಂಬಾ ಬಲಿತ ಸೊಪ್ಪಿನ ಕಡ್ಡಿ ಹಾಕಬಾರದು
ಬೆಳ್ಳುಳ್ಳಿ 2-3 ಎಸಳು ಹಾಕಿದರೆ ಸಾಕು.
ಕೊತ್ತಂಬರಿ ಸೊಪ್ಪಿನ ಪ್ರಯೋಜನಗಳು
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ'
ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
ಪುದೀನಾ ಚಟ್ನಿ
1/2 ಕಪ್ ಪುದೀನಾ
ಈರುಳ್ಳಿ
ಹಸಿ ಎಮಣಸು
2 ಬೆಳ್ಳುಳ್ಳಿ ಎಸಳು (ಬೇಕಿದ್ದರೆ ಹಾಕಬಹುದು)
1 ಚಮಚ ಉಪ್ಪು
2 ಚಮಚ ಸಕ್ಕರೆ
ಸ್ವಲ್ಪ ಕರಿಬೇವು(ಎಣ್ನೆಯಲ್ಲಿ ಫ್ರೈ ಮಾಡಿ ಹಾಕಿ)
ಸ್ವಲ್ಪ ಹುಣಸೆಹಣ್ಣು
ಸ್ವಲ್ಪ ನೀರು
ಈ ಎಲ್ಲಾ ಸಾಮಗ್ರಿ ಒಟ್ಟಿಗೆ ಹಾಕಿ ರುಬ್ಬಿದರೆ ಚಟ್ನಿ ರೆಡಿ.
ಪುದೀನಾ
ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಬಾಯಿ ದುರ್ವಾಸನೆ ಬೀರುವುದನ್ನು ತಡೆಗಟ್ಟುತ್ತದೆ
ಕರಿಬೇವಿನ ಚಟ್ನಿ
1 ಕಪ್ ಕರಿಬೇವು
ಒಂದೂವರೆ ಚಮಚ ಕಡ್ಲೆಬೇಳೆ
ಸ್ವಲ್ಪ ಉದ್ದಿನ ಬೇಳೆ
2 ಬೆಳ್ಳುಳ್ಳಿ ಎಸಳು
ಸ್ವಲ್ಪ ಜೀರಿಗೆ
ಹಸಿಮೆಣಸು
1 ಚಮಚ ನಿಂಬೆರಸ ಅಥವಾ ಸ್ವಲ್ಪ ಹುಣಸೆ ಹಣ್ಣು
ಸ್ವಲ್ಪ ತೆಂಗಿನತುರಿ
ಮಾಡುವ ವಿಧಾನ
ಕರಿಬೇವನ್ನು ತೊಳೆದು ಇಡಿ
ಅದರ ನೀರಿನಂಶ ಹೋಗಬೇಕು, ನಂತರ ಬಾಣಲೆಗೆ ಎಣ್ಣೆ ಹಾಕಿ ಸ್ವಲ್ಪ ಕರಿಬೇವು ಹಾಕಿ
ಸ್ವಲ್ಪ ಫ್ರೈ ಮಾಡಿ
ಕಡ್ಲೆಬೇಳೆ ಸ್ವಲ್ಪ ರೋಸ್ಟ್ ಮಾಡಿ
ಉದ್ದಿನ ಬೇಳೆಯನ್ನು ರೋಸ್ಟ್ ಮಾಡಿ
ಜೀರಿಗೆ ಕೂಡ ರೋಸ್ಟ್ ಮಾಡಿ
ನಂತರ ಈ ಎಲ್ಲಾ ಸಾಮಗ್ರಿಯನ್ನು ಜಾರ್‌ಗೆ ಹಾಕಿ, ಹಸಿ ಮೆಣಸು, ತೆಂಗಿನಕಾಯೊ,
ಹುಣಸೆಹಣ್ಣು, ಉಪ್ಪು ಹಾಕಿ ರುಬ್ಬಿ
ಟಿಪ್ಸ್
ನೀವು ತೆಂಗಿನತುರಿಯನ್ನೂ ಫ್ರೈ ಮಾಡಿ ಹಾಕಬಹುದು.
ಕರಿಬೇವಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಧಿಕವಿದೆ
ಜೀರ್ಣಕ್ರಿಯೆಗೆ ಒಳ್ಳೆಯದು
ಮಧುಮೇಹವನ್ನು ನಿಯಂತ್ರಿಸುತ್ತದೆ
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ತೂಕ ಇಳಿಕೆಗೆ ಸಹಕಾರಿ
ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು
ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
ಈ ಚಟ್ನಿಯನ್ನು ಸೇವಿಸುವುದರಿಂದ ಬೇಸಿಗೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳು ದೊರೆಯುವುದು.



Click it and Unblock the Notifications