Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯಕರ ಬ್ರೇಕ್‌ಫಾಸ್ಟ್: ರೈಸ್ ಆಮ್ಲೆಟ್ ಹಾಗೂ ಮಶ್ರೂಮ್ ಆಮ್ಲೆಟ್ ರೆಸಿಪಿ
ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಆರೋಗ್ಯಕರ ಆಹಾರ ಆಮ್ಲೆಟ್, ಆಮ್ಲೆಟ್ ಅನ್ನು ನೀವು ಅನೇಕ ರುಚಿಯಲ್ಲಿ ತಯಾರಿಸಬಹುದು. ನಾವಿಲ್ಲಿ ನಿಮಗೆ 2 ವಿಭಿನ್ನ ರುಚಿಯ ಆಮ್ಲೆಟ್ ರೆಸಿಪಿ ನೀಡಿದ್ದೇವೆ, ಅನ್ನ ಹಾಕಿ ಮಾಡುವ ಆಮ್ಲೆಟ್, ನಂತರ ಅಣಬೆ ಹಾಕಿ ಮಾಡುವ ಆಮ್ಲೆಟ್, ಈ ಎರಡೂ ಬೆಳಗಿನ ಬ್ರೇಕ್‌ಫಾಸ್ಟ್‌ಗೆ ಸೂಪರ್ ರೆಸಿಪಿಯಾಗಿದೆ. ಬನ್ನಿ ಈ ಎರಡು ಆಮ್ಲೆಟ್ ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
4 ಮೊಟ್ಟೆ
30 ಗ್ರಾಂ ಅಕ್ಕಿ
20 ಗ್ರಾಂ ಕತ್ತರಿಸಿದ ಕೆಂಪು ದುಂಡು ಮೆಣಸು
4 ಚಮಚ ಹಾಲು
ಕರಿಮೆಣಸು
ಈರುಳ್ಳಿ 1
1 ಕ್ಯಾಪ್ಸಿಕಂ
1 ಟೊಮೆಟೊ
ರುಚಿಗೆ ತಕ್ಕ ಉಪ್ಪು
ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು
ಮಾಡುವುದು ಹೇಗೆ
* ಅಕ್ಕಿಯನ್ನು 15 ನಿಮಿಷ ನೆನೆಹಾಕಿ, ನಂತರ ಪಾತ್ರೆಯಲ್ಲಿ ಹಾಕಿ, ನೀರು ಹಾಕಿ
ಬೇಯಿಸಿ.
* ನಂತರ ಎಣ್ಣೆ ಸವರಿದ ಮಾತ್ರೆಗೆ ಅನ್ನವನ್ನು ಹರಡಿ, ಅದರ ಮೇಲೆ ತರಕಾರಿಯನ್ನು
ಹರಡಿ, ನಂತರ ಮೊಟ್ಟೆಯನ್ನು ಒಡೆದು, ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್
ಮಾಡಿ ಮೊಟ್ಟೆಯನ್ನು ಸುರಿಯಿರಿ, ಅದರ ಮೇಲೆ ಕಾಳು ಮೆಣಸಿನ ಪುಡಿ ಉದುರಿಸಿ. ನಂತರ
ಸ್ಟೀಮ್‌ನಲ್ಲಿ ಬೇಯಿಸಿ.
ಆರೋಗ್ಯಕರ ಆಹಾರಕ್ಕೆ ಪರ್ಫೆಕ್ಟ್ ಆಹಾರ ಇದಾಗಿದೆ.
2. ಮಶ್ರೂಮ್ ಆಮ್ಲೆಟ್
ಬೇಕಾಗುವ ಸಾಮಗ್ರಿ
4 ಮೊಟ್ಟೆ
1 ಚಿಟಿಕೆಯಷ್ಟು ಸಾಸಿವೆ ಪುಡಿ
1 ಚಮಚ ವೈಟ್ ಪೆಪ್ಪರ್ ಪುಡಿ
2-3 ಚಿಕ್ಕ ಈರುಳ್ಳಿ
ಸ್ವಲ್ಪ ಅಣಬೆ
2 ಚಮಚ ಬೆಣ್ಣೆ
ರುಚಿಗೆ ತಕ್ಕ ಉಪ್ಪು
ಕರಿಮೆಣಸಿನ ಪುಡಿ
ಮಾಡುವ ವಿಧಾನ
* ಮೊದಲು ಅಣಬೆಯನ್ನು ಶುದ್ಧ ಮಾಡಿ.
* ನಂತರ ಪ್ಯಾನ್ ಬಿಸಿ ಮಾಡಿ 1 ಚಮಚ ಬೆಣ್ಣೆ ಹಾಕಿ ಅದರಲ್ಲಿ ಅಣಬೆ ಮತ್ತು
ಈರುಳ್ಳಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಫ್ರೈ ಮಾಡಿ.
* ಒಂದು ಬೌಲ್‌ಗೆ ಮೊಟ್ಟೆ ಒಡೆದು ಹಾಕಿ ನಂತರ ಅದರಲ್ಲಿ ಫ್ರೈ ಮಾಡಿದ ಅಣಬೆ,
ಈರುಳ್ಳಿ ಹಾಕಿ, ನಂತರ ಸಾಸಿವೆ ಪುಡಿ, ವೈಟ್ ಪೆಪ್ಪರ್ ಪುಡಿ , ರುಚಿಗೆ ತಕ್ಕ
ಉಪ್ಪು ಹಾಕಿ ಮಿಕ್ಸ್ ಮಾಡಿ.
* ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ನಂತರ ಅದರಲ್ಲಿ ಮೊಟ್ಟೆ ಸುರಿದು ಅದರ ಮೇಲೆ
ಕಾಳು ಮೆಣಸಿನ ಪುಡಿ ಉದುರಿಸಿದರೆ ಆಮ್ಲೆಟ್ ರೆಡಿ.



Click it and Unblock the Notifications