Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಸಿಪಿ: 2 ಬಗೆಯ ಮಾವಿನಕಾಯಿ ಚಟ್ನಿ ರೆಸಿಪಿ
ಮಾವಿನಕಾಯಿ ಚಟ್ನಿ ಇದ್ದರೆ ಬ್ರೇಕ್‌ಫಾಸ್ಟ್ ಆಗಲಿ, ಮಧ್ಯಾಹ್ನದ ಊಟವಾಗಲಿ ತುಂಬಾನೇ ರುಚಿಯಾಗಿರುತ್ತದೆ. ಈ ಮಾವಿನಕಾಯಿ ಚಟ್ನಿ ಹಲವು ರೀತಿಯಲ್ಲಿ ಮಾಡಬಹುದು. ಇಲ್ಲಿ ಎರಡು ಬಗೆಯ ಮಾವಿನಕಾಯಿ ಚಟ್ನಿ ನೀಡಿದ್ದೇವೆ, ಮಾವಿನಕಾಯಿಯಿಂದ ಈ ರೀತಿ ಚಟ್ನಿ ಮಾಡಿ ನೋಡಿ ಸೂಪರ್ ಆಗಿರುತ್ತದೆ, ಆ ಬನ್ನಿ ಸೂಪರ್ ಚಟ್ನಿಯ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ತೆಂಗಿನತುರಿ
ಹಸಿ ಮೆಣಸು 3-4
ಈರುಳ್ಳಿ 1
ಮಾವಿನಕಾಯಿ ಅರ್ಧ (ಚಿಕ್ಕ ಮಾವಿನಕಾಯಿಯಾದರೆ ಒಂದು ಬಳಸಬಹುದು)
ರುಚಿಗೆ ತಕ್ಕ ಉಪ್ಪು
ಒಂದು ಚಮಚ ಎಣ್ಣೆ
ಕಡ್ಲೆಬೇಳೆ 1 ಚಮಚ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಮಾಡುವ ವಿಧಾನ:
ತೆಂಗಿನತುರಿ, ಹಸಿ ಮೆಣಸು, ಈರುಳ್ಳಿ, ಮಾವಿನಕಾಯಿ, ರುಚಿಗೆ ತಕ್ಕ ಉಪ್ಪು ಹಾಕಿ
ರುಬ್ಬಿ
ನಂತರ ಇದಕ್ಕೆ ಒಗ್ಗರಣೆ ಸೇರಿಸಿದರೆ ರುಚಿಯಾದ ಮಾವಿನಕಾಯಿ ಚಟ್ನಿ ರೆಡಿ.
ರೆಸಿಪಿ 2
ತೆಂಗಿನಕಾಯಿ 1ಕಪ್
ಮಾವಿನ ಕಾಯಿ ಅರ್ಧ
ಒಣಮೆಣಸು 8-10
ಸ್ವಲ್ಪ ಕರಿಬೇವು
ರುಚಿಗೆ ತಕ್ಕ ಉಪ್ಪು
ಎಣ್ಣೆ 1 ಚಮಚ
ಬಿಸಿ ನೀರು 1/4 ಕಪ್
ಒಗ್ಗರಣೆಗೆ
ಉದ್ದಿನ ಬೇಳೆ ಒಂದೂವರೆ ಚಮಚ
ಕಡ್ಲೆಬೇಳೆ ಒಂದೂವರೆ ಚಮಚ
ಮೆಂತೆಬೀಜ 1/2 ಚಮಚ
ಸಾಸಿವೆ
ಅರಿಶಿಣ ಪುಡಿ 1/2 ಚಮಚ
ಇಂಗು
ಇತರ ಸಾಮಗ್ರಿ
ಒಣಮೆಣಸು
ಕರಿಬೇವು
ಇಂಗು
ಮಾಡುವ ವಿಧಾನ
ಮಾವಿನಕಾಯಿ ಸಿಪ್ಪೆ ಸುಲಿದು ಕತ್ತರಿಸಿ
ತೆಂಗಿನಕಾಯಿ ಚಿಕ್ಕ ಚಿಕ್ಕ ತಂಡುಗಳಾಗಿ ಕತ್ತರಿಸಿ
ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಒಣಮೆಣಸು ಹಾಗೂ ಕರಿಬೇವು ಸ್ವಲ್ಪ
ಹುರಿಯಿರಿ
ನಂತರ ಈ ಎಲ್ಲಾ ಸಾಮಗ್ರಿ ಮಿಕ್ಸಿ ಜಾರ್‌ಗೆ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ
ತರಿತರಿಯಾಗಿ ರುಬ್ಬಿ.
ನಂತರ ಒಗ್ಗರಣೆ ಹಾಕಿ
ಒಂದು ಅಥವಾ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ
ಅದಕ್ಕೆ ಸ್ವಲ್ಪ ಮೆಂತೆ, ಕಡ್ಲೆಬೇಳೆ, ಉದ್ದಿನ ಬೇಳೆ, ಇಂಗು, ಸ್ವಲ್ಪ ಕರಿಬೇವು
ಸೇರಿಸಿ ಒಗ್ಗರಣೆ ಹಾಕಿದರೆ ರುಚಿಯಾದ ಮಾವಿನಕಾಯಿ ಚಟ್ನಿ ರೆಡಿ.
ಮಾವಿನಕಾಯಿ ತಿನ್ನುವುದರಿಂದ ಪ್ರಯೋಜನಗಳು:
ಸೆಕೆಗೆ ತುಂಬಾ ಒಳ್ಳೆಯದು?
ಸೆಕೆಗೆ ಮಾವಿನಕಾಯಿ ತುಂಬಾ ಒಳ್ಳೆಯದು. ಇದು ದೇಹದಲ್ಲಿ ನೀರಿನಂಶ ಕಾಪಾಡಲು ತುಂಬಾ
ಸಹಕಾರಿ.ಇದರಲ್ಲಿರುವ ಖನಿಜಾಂಶಗಳು ದೇಹಕ್ಕೆ ತುಂಬಾನೇ ಒಳ್ಳೆಯದು. ಬೇಸಿಗೆಯಲ್ಲಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
ಮಾವಿನಕಾಯಿ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಮಾವಿನಕಾಯಿ ಮಲಬದ್ಧತೆ
ತಡೆಗಟ್ಟುತ್ತದೆ, ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಎದೆಯುರಿ ಕಡಿಮೆಯಾಗುವುದು,
ವಾಂತಿ-ಬೇಧಿ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಮಾವಿನಕಾಯಿಯಲ್ಲಿ ಬಿ ವಿಟಮಿನ್ ನಿಯಾಸಿನ್ ರ ಇರುವುದರಿಂದ ಆರೋಗ್ಯಕ್ಕೆ
ತುಂಬಾನೇ ಒಳ್ಳೆಯದು. ರಕ್ತ ಸಂಚಾರ ಉತ್ತಮವಾಗಿ ನಡೆಯಲು ಸಹಕಾರಿಯಾಗಿದೆ.
ಲಿವರ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಪಿತ್ತರಸ ಉತ್ಪತ್ತಿಗೆ,
ದೇಹದಲ್ಲಿರುವ ಕಶ್ಮಲ ಹೊರಹಾಕಲು ತುಂಬಾನೇ ಸಹಕಾರಿ.
ಹಲ್ಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಬಾಯಿಯ ದುರ್ವಾಸನೆ ಹೋಗಲಾಡಿಸಲು ಈ ಮಾವಿನಕಾಯಿ ತುಂಬಾನೇ ಸಹಕಾರಿ.



Click it and Unblock the Notifications