For Quick Alerts
ALLOW NOTIFICATIONS  
For Daily Alerts

ಗರ್ಭನಿರೋಧಕ ನಿಲ್ಲಿಸಿದ ಬಳಿಕ ಯಾವಾಗ ಗರ್ಭಧಾರಣೆಯಾಗುವುದು?

|

ದಂಪತಿ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಪ್ರಮುಖ ಉದ್ದೇಶ ಮಗು ಯಾವಾಗ ಬೇಕೆಂದು ನಿರ್ಧರಿಸುವುದು ಆಗಿದೆ. ಕೆಲ ದಂಪತಿ ಹಲವಾರು ವರ್ಷಗಳವರೆಗೆ ತಮಗೆ ಮಗು ಬೇಡವೆಂದು ನಿರ್ಧರಿಸಿ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ.

When Can Get Pregnant After Stopping Birth Control?

ಈಗಲೇ ಮಗು ಬೇಡ, ಆರ್ಥಿಕವಾಗಿ ಸದೃಢವಾಗಲಿ, ಕೆರಿಯರ್‌ನಲ್ಲಿ ಇನ್ನೊಂದಿಷ್ಟು ಸಾಧನೆ ಮಾಡಬೇಕಾಗಿದೆ ಹೀಗೆ ಏನೋ ಒಂದು ಕಾರಣಕ್ಕೆ ಈಗಲೇ ಗರ್ಭಧರಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ.

ತಾವು ಬಯಸಿದಂತೆ ಬದುಕಿನಲ್ಲಿ ಎಲ್ಲಾ ಸೆಟ್ ಆದ ಮೇಲೆ ನಮಗೆ ಒಂದು ಮಗುವಿರಲಿ ಎಂಬ ತೀರ್ಮಾನಕ್ಕೆ ಬಂದು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರೆ. ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದ ತಕ್ಷಣ ಗರ್ಭಿಣಿಯಾಗುತ್ತೇವೆ ಎಂದೇ ಕೆಲವರು ತಿಳಿದುಕೊಳ್ಳುತ್ತಾರೆ. ಆದರೆ ಗರ್ಭನಿರೋಧಕ ಮಾತ್ರೆ ನಿಲ್ಲಿಸಿದ ತಕ್ಷಣ ಗರ್ಭಿಣಿಯಾಗುವುದಿಲ್ಲ, ಬದಲಿಗೆ ಅವಳ ದೇಹದಲ್ಲಿ ಫಲವತ್ತತೆ ಮರಳಬೇಕಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ನೋಡಿ:

ಗರ್ಭಿಣಿಯಾಗಲು ಎಷ್ಟು ಸಮಯ ಬೇಕು?

ಗರ್ಭಿಣಿಯಾಗಲು ಎಷ್ಟು ಸಮಯ ಬೇಕು?

ಗರ್ಭನಿರೋಧಕ ಮಾತ್ರೆ ನಿಲ್ಲಿಸಿದ ತಕ್ಷಣ ಗರ್ಭಧಾರಣೆಯಾಗುತ್ತದೆ ಎಂದು ಕೆಲವರು ಅಂದುಕೊಳ್ಳುತ್ತಾರೆ. ನಿಮ್ಮ ದೇಹದಲ್ಲಿ ಫಲವತ್ತತೆ ಮರಳಿದರೆ ಗರ್ಭಿಣಿಯಾಗುವ ಸಾಧ್ಯತೆ ಇದೆ. ಇಲ್ಲದಿದ್ದರೆ ಸಾಧ್ಯವಿಲ್ಲ, ಇದನ್ನು ಸರಳವಾಗಿ ವಿವರಿಸುವುದಾದರೆ:

  • ಗರ್ಭನಿರೋಧಕ ಮಾತ್ರೆಗಳ ಪ್ರಮುಖ ಕಾರ್ಯ ನಿಮ್ಮ ಅಂಡೋತ್ಪತ್ತಿಯನ್ನು ಕಡಿಮೆ ಮಾಡುವುದು
  • ನಿಮ್ಮಲ್ಲಿ ಅಂಡೋತ್ಪತ್ತಿ ಉತ್ಪತ್ತಿಯಾಗದಿದ್ದರೆ ವೀರ್ಯಾಣುಗಳು ಫಲವತ್ತತೆ ಆಗಲು ಸಾಧ್ಯವಿಲ್ಲ.
  • ಇನ್ನೂ ಸರಳವಾಗಿ ಹೇಳುವುದಾದರೆ ಅಂಡೋತ್ಪತ್ತಿ ಇಲ್ಲ ಅಂದರೆ ಗರ್ಭಧಾರಣೆ ಸಾಧ್ಯವಿಲ್ಲ
  • ಗರ್ಭನಿರೋಧಕ ವಿಧಾನ ನಿಲ್ಲಿಸಿದ ಬಳಿಕ ಗರ್ಭಧಾರಣೆ

    ಗರ್ಭನಿರೋಧಕ ವಿಧಾನ ನಿಲ್ಲಿಸಿದ ಬಳಿಕ ಗರ್ಭಧಾರಣೆ

    ನಿಮ್ಮ ದೇಹ ಫಲವತ್ತತೆ ಅಂದರೆ ಅಂಡೋತ್ಪತ್ತಿ ಮರಳಿ ಪಡೆದಾಗ ಗರ್ಭಧಾರಣೆ ಉಂಟಾಗುವುದು. ಅಂಡೋತ್ಪತ್ತಿ ಮರಳಿ ಪಡೆಯಲು ಎಷ್ಟು ಸಮಯ ಬೇಕು ಎಂದು ನೋಡೋಣ:

    ನೀವು ಕಾಂಡೋಮ್, ಮಹಿಳಾ ಕಾಂಡೋಮ್, ಡಯಾಫ್ರಾಗಮ್, ಸ್ಪೆರ್ಮೆಸೈಡ್ ಬಳಸಿ ಗರ್ಭಧಾರಣೆಯಾಗುವುದನ್ನು ತಡೆಗಟ್ಟಿದ್ದರೆ ನಿಮ್ಮಲ್ಲಿ ಅಂಡೋತ್ಪತ್ತಿ ಬೇಗನೆ ಮರಳುವುದು.

    ಇನ್ನು ನೈಸರ್ಗಿಕವಾಗಿ ಕುಟುಂಬ ಯೋಜನೆ ಮಾಡಿದ್ದರೆ ಬೇಗನೆ ಗರ್ಭಧಾರಣೆಯಾಗುವುದು ಅಂದರೆ ಫಲವತ್ತತೆ ದಿನಗಳಲ್ಲಿ ಲೈಂಗಿಕ ಕ್ರಿಯೆ ನಡೆಸದೆ ಗರ್ಭಧಾರಣೆ ತಡೆಗಟ್ಟಿದ್ದರೆ ಮಗು ಬೇಕೆಂದು ಬಯಸಿದಾಗ ಆ ಸಮಯದಲ್ಲಿ ಸೇರುವುದರಿಂದ ಗರ್ಭಧಾರಣೆಯಾಗುವುದು.

    ಗರ್ಭ ನಿರೋಧಕ ಮಾತ್ರೆ ತೆಗೆದುಕೊಂಡಾಗ ಏನಾಗುತ್ತೆ?

    ಗರ್ಭ ನಿರೋಧಕ ಮಾತ್ರೆ ತೆಗೆದುಕೊಂಡಾಗ ಏನಾಗುತ್ತೆ?

    ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿರುವವರು ಆ ಮಾತ್ರೆಯನ್ನು ನಿಲ್ಲಿಸಿದ ಬಳಿಕ ಎಷ್ಟು ದಿನಗಳಲ್ಲಿ ಗರ್ಭಿಣಿಯಾಗುವುದು ಎಂಬ ಪ್ರಶ್ನೆ ಅನೇಕ ಮಹಿಳೆಯರಲ್ಲಿದೆ. ಕೆಲವರು ಗರ್ಭನಿರೋಧಕ ಮಾತ್ರೆ ನಿಲ್ಲಿಸಿದ ತಕ್ಷಣ ಗರ್ಭಧಾರಣೆಯಾಗುವುದು ಎಂದು ಹೇಳುತ್ತಾರೆ. ಆದರೆ ಹಾಗಾಗುವುದು ತುಂಬಾ ಅಪರೂಪ. ಗರ್ಭನಿರೋಧಕ ಮಾತ್ರೆ ನಿಲ್ಲಿಸಿದ ಬಳಿಕ ಎಷ್ಟು ಸಮಯ ಬೇಕು ಗರ್ಭಧಾರಣೆಯಾಗಲು ಎಂದು ತಿಳಿಯಲು ಮೊದಲಿಗೆ ಗರ್ಭನಿರೋಧಕ ಮಾತ್ರೆಯ ಕಾರ್ಯವನ್ನು ತಿಳಿಯೋಣ.

    ಗರ್ಭನಿರೋಧಕ ಮಾತ್ರೆಯ ಕಾರ್ಯ

    ಗರ್ಭನಿರೋಧಕ ಮಾತ್ರೆಯ ಕಾರ್ಯ

    ಗರ್ಭನಿರೋಧಕ ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದರೆ ಇದು ದೇಹದಲ್ಲಿ ಅಂಡೋತ್ಪತ್ತಿಯಾಗದಂತೆ ತಡೆಯುತ್ತದೆ. ಇದರಿಂದಾಗಿ ಗರ್ಭಧಾರಣೆಯಾಗುವುದು ಸಾಧ್ಯವಿಲ್ಲ. ಇದರ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಗರ್ಭನಿರೋಧಕ ಮಾತ್ರೆ ನಿಲ್ಲಿಸಿದ ಬಳಿಕ ಮೂರು ತಿಂಗಳು ಬೇಕು ಮಹಿಳೆಯರ ದೇಹದಲ್ಲಿ ಅಂಡೋತ್ಪತ್ತಿ ಉತ್ಪತ್ತಿಯಾಗಲು ಎಂದೆಲ್ಲಾ ನೀವು ಕೇಳಿರಬಹುದು, ಆದರೆ ಅದು ತಪ್ಪು ಕಲ್ಪನೆ. ಕೆಲವರಲ್ಲಿ ಒಂದು ವಾರದೊಳಗೆ ಅಂಡೋತ್ಪತ್ತಿ ಉಂಟಾಗುವುದು. ಕೆಲವರು ಮಗು ಬೇಡವೆಂದು ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದಾಗ ಒಂದು ದಿನ ಮಿಸ್ ಮಾಡಿ, ಗರ್ಭಿಣಿಯಾದ ಸಾಕಷ್ಟು ಉದಾಹಾರಣೆಗಳಿವೆ.

    ಆದ್ದರಿಂದ ಫಲವತ್ತತೆ ದಿನಗಳಿಗಾಗಿ ತುಂಬಾ ದಿನ ಕಾಯಬೇಕಾಗಿಲ್ಲ, ಮಾತ್ರೆ ನಿಲ್ಲಿಸಿದ ಒಂದು ತಿಂಗಳ ಒಳಗಾಗಿ ನಿಮ್ಮ ದೇಹದಲ್ಲಿ ಫಲವತ್ತತೆ ಮರಳಿ ಪಡೆಯಬಹುದು. ಗರ್ಭನಿರೋಧಕ ಮಾತ್ರೆ ನಿಲ್ಲಿಸಿದ ಬಳಿಕ ಶೇ.80ರಷ್ಟು ಮಹಿಳೆಯರು ಗರ್ಭಿಣಿಯಾಗುತ್ತಾರೆ ಎಂದು ಅಧ್ಯಯನಗಳು ಹೇಳಿವೆ.

    IUD ಇದ್ದರೆ ಮಕ್ಕಳಾಗಲ್ಲ ಎನ್ನುವುದು ಕೂಡ ತಪ್ಪು ಕಲ್ಪನೆ

    IUD ಇದ್ದರೆ ಮಕ್ಕಳಾಗಲ್ಲ ಎನ್ನುವುದು ಕೂಡ ತಪ್ಪು ಕಲ್ಪನೆ

    IUD ಇದ್ದರೆ ಮಕ್ಕಳಾಗಲ್ಲ ಎನ್ನುವುದು ತಪ್ಪು ಕಲ್ಪನೆ. IUDನಲ್ಲಿ ಎರಡು ಬಗೆಗಳಿವೆ. ಹಾರ್ಮೋನಲ್ IUD ಹಾಗೂ ಕಾಪರ್ IUD. ಇದನ್ನು ವೈದ್ಯರು ತೆಗೆದರೆ ಗರ್ಭಧಾರಣೆಯಾಗುವುದು.

    ನೆಕ್ಸಾಪ್ಲಾನನ್

    ಇದು ಕೂಡ ಗರ್ಭನಿರೋಧಕದ ಒಂದು ವಿಧಾನ. ನೆಕ್ಸಾಪ್ಲಾನನ್ ತೆಗಿಸಿದ ತಕ್ಷಣ ಗರ್ಭಧಾರಣೆಯಾಗುವುದು.

    ಡೆಪೋ ಪ್ರೊವೆರಿಯಾ

    ಡೆಪೋ ಪ್ರೊವೆರಿಯಾ ಕೂಡ ಗರ್ಭಧಾರಣೆ ತಡೆಗಟ್ಟುವ ವಿಧಾನವಾಗಿದ್ದು ಇದನ್ನು ಬಳಸುತ್ತಿರುವವರು ಮಗು ಬೇಕೆಂದು ಬಯಸಿದರೆ ಒಂದು ವರ್ಷದ ಮುನ್ನವೇ ನಿಲ್ಲಿಸುವುದು ಒಳ್ಳೆಯದು.

     ವೈದ್ಯರ ಭೇಟಿ

    ವೈದ್ಯರ ಭೇಟಿ

    ಗರ್ಭನಿರೋಧಕ ಮಾತ್ರೆಗಳು ನಿಲ್ಲಿಸಿದ ಬಳಿಕ ಈ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿ ಮಾಡಿ:

    • ಮೂರು ತಿಂಗಳು ಮುಟ್ಟಾಗದಿದ್ದರೆ
    • ನಿಮ್ಮ ಮುಟ್ಟಿನಲ್ಲಿ ಏನಾದರೂ ವ್ಯತ್ಯಾಸ ಉಂಟಾಗಿದ್ದರೆ
    • ಅನಿಯಮಿತ ಮುಟ್ಟು
    • ಅಧಿಕ ರಕ್ತಸ್ರಾವ
    • 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಒಂದು ವರ್ಷದಿಂದ ಗರ್ಭಧಾರಣೆಗೆ ಪ್ರಯತ್ನಿಸಿ ಸಾಧ್ಯವಾಗದಿದ್ದರೆ
    • 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು 6 ತಿಂಗಳಿನಿಂದ ಪ್ರಯತ್ನಿಸುತ್ತಿದ್ದು ಗರ್ಭಧಾರಣೆಯಾಗದಿದ್ದರೆ
    • ಸಲಹೆ: ಗರ್ಭನಿರೋಧಕ ಮಾತ್ರೆ ನಿಲ್ಲಿಸಿದ ಬಳಿಕ ಗರ್ಭಧಾರಣೆಯಾಗಲು ನಿಮ್ಮ ವಯಸ್ಸು, ದೇಹದ ಆರೋಗ್ಯ, ಜೀವನಶೈಲಿ ಕೂಡ ಮುಖ್ಯವಾಗಿರುತ್ತದೆ.

English summary

When Can Get Pregnant After Stopping Birth Control?

If you ready to get pregnant. Does that mean that once you stop taking birth control you will automatically be able to get pregnant? Read On.
Story first published: Friday, April 3, 2020, 9:28 [IST]
X
Desktop Bottom Promotion