For Quick Alerts
ALLOW NOTIFICATIONS  
For Daily Alerts

ಸಹಜವಾಗಿ ಹೆರಿಗೆ ಆಗಲು ಈ ಜೀವನಶೈಲಿ ಅನುಸರಿಸಿ

|

ಇತ್ತೀಚೆಗೆ 'ನಾರ್ಮಲ್ ಡೆಲಿವರಿ ' ಎನ್ನುವುದು ತುಂಬಾ ಅಪರೂಪದ ವಿಚಾರವಾಗಿದೆ. ಮನಸ್ಸಿನಲ್ಲಿ ನಾರ್ಮಲ್ ಡೆಲಿವರಿ ಆಗಬೇಕು ಎಂಬ ಆಸೆ ಇದ್ದರೂ ಅದರಿಂದ ಎದುರಾಗುವ ತೊಂದರೆಗಳನ್ನು ಮತ್ತು ಹೆರಿಗೆ ಸಮಯದಲ್ಲಿ ಅಪಾರವಾದ ನೋವು ಅನುಭವಿಸಬೇಕು ಎಂಬ ಭಯದಿಂದ ಗರ್ಭಿಣಿ ಮಹಿಳೆಯರು ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ. ಹಿಂದಿನ ಕಾಲದಲ್ಲಿ ಸಿಸೇರಿಯನ್ ಎಂಬ ಪದವೇ ಇರಲಿಲ್ಲ. ಪ್ರತಿಯೊಬ್ಬರಿಗೂ ಸರಳವಾದ ಹೆರಿಗೆಯ ಸಂದರ್ಭವೇ ಇರುತ್ತಿತ್ತು. ಆಗ ಹುಟ್ಟುವ ಮಕ್ಕಳು ತುಂಬಾ ಆರೋಗ್ಯಕರವಾಗಿ ಯಾವುದೇ ರೋಗ - ರುಜಿನಗಳಿಲ್ಲದೆ ಬದುಕುತ್ತಿದ್ದರು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

Tips to Help You Have Normal Delivery

ಸಿಸೇರಿಯನ್ ಶಸ್ತ್ರ ಚಿಕಿತ್ಸೆಗೆ ತುಂಬಾ ಹಣ ಖರ್ಚಾಗುತ್ತದೆ. ಆದರೆ ಇಲ್ಲೂ ಕೂಡ ಕೆಲವು ತೊಂದರೆಗಳು ಇದ್ದೇ ಇರುತ್ತವೆ. ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರು ಸರಿಯಾಗಿ ಗಮನ ವಹಿಸದಿದ್ದರೆ ಹೆರಿಗೆ ಸಮಯದಲ್ಲಿ ಮಹಿಳೆಯ ಪ್ರಾಣ ಹೋಗುವ ಸಾಧ್ಯತೆ ಸಹ ಇರುತ್ತದೆ. ಕೆಲವೊಮ್ಮೆ ರಕ್ತ ಸ್ರಾವ ಕಡಿಮೆ ಆಗುವಂತಹ ಔಷಧಿಗಳನ್ನು ಸರಿಯಾಗಿ ನೀಡಿದರೂ ಕೂಡ ಪ್ರಯೋಜನಕ್ಕೆ ಬರುವುದಿಲ್ಲ. ಹಾಗಾಗಿ ಇದರ ಬಗ್ಗೆ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ತಿಳಿದುಕೊಳ್ಳಬೇಕು.

ಈ ಲೇಖನದಲ್ಲಿ ಗರ್ಭಿಣಿ ಮಹಿಳೆಯರು ಒಂದು ವೇಳೆ ಸರಳವಾದ ಹೆರಿಗೆಗೆ ಮನಸ್ಸು ಮಾಡಿದರೆ ಅನುಸರಿಸಬೇಕಾದ ಕೆಲವು ಟಿಪ್ಸ್ ಗಳನ್ನು ನೀಡಲಾಗಿದೆ.

1. ಗರ್ಭಾವಸ್ಥೆಗೆ ಮುಂಚೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

1. ಗರ್ಭಾವಸ್ಥೆಗೆ ಮುಂಚೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

ಈಗಂತೂ ಗರ್ಭಿಣಿ ಮಹಿಳೆಯರಿಗೆ ಸಹಾಯವಾಗಲಿ ಎಂದು ಅಥವಾ ಗರ್ಭಿಣಿ ಆಗಬೇಕು ಎಂದುಕೊಂಡಿರುವ ಮಹಿಳೆಯರಿಗೆ ಉಪಯೋಗವಾಗಲಿ ಮತ್ತು ಮಾಹಿತಿಯ ಕೊರತೆ ಆಗದಿರಲಿ ಎಂದು ವೈದ್ಯಕೀಯ ತಂಡ ಗರ್ಭಾವಸ್ಥೆಯಲ್ಲಿ ಯಾವೆಲ್ಲಾ ಬಗೆಯ ತೊಂದರೆಗಳು ಮತ್ತು ಗರ್ಭಾವಸ್ಥೆಯಲ್ಲಿ ಹಾಗು ಹೆರಿಗೆಯ ಸಮಯದಲ್ಲಿ ಎಂತಹ ಸಂದರ್ಭಗಳು ಎದುರಾಗಬಹುದು ಎಂಬ ಬಗ್ಗೆ ತರಗತಿಗಳನ್ನು ನಡೆಸುತ್ತಾರೆ. ಒಂದು ವೇಳೆ ನಿಮಗೆ ನಿಮ್ಮ ಹತ್ತಿರದಲ್ಲಿ ಈ ಸೌಲಭ್ಯವಿದ್ದರೆ ಇದನ್ನು ದಯವಿಟ್ಟು ಉಪಯೋಗಿಸಿಕೊಳ್ಳಿ. ಇಲ್ಲವೆಂದರೆ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಈ ವಿಚಾರವಾಗಿ ಮಾಹಿತಿ ಸಂಗ್ರಹಿಸಿ. ಗರ್ಭಾವಸ್ಥೆಗೆ ತಲುಪುವ ಮುಂಚೆ ಗರ್ಭಾವಸ್ಥೆಯ ಸಮಯದಲ್ಲಿ ನೀವು ಅನುಸರಿಸಬೇಕಾದ ಆಹಾರ ಪದ್ಧತಿ, ವ್ಯಾಯಾಮ, ನೋವು ರಹಿತ ಹೆರಿಗೆ ಇತ್ಯಾದಿಗಳ ಬಗ್ಗೆ ಸಂಪೂರ್ಣವಾಗಿ ನಿಮಗೆ ನೀವು ಅರಿವು ಮೂಡಿಸಿಕೊಳ್ಳಿ.

2. ನಿಯಮಿತವಾದ ವ್ಯಾಯಾಮ ನಿಮ್ಮದಾಗಲಿ

2. ನಿಯಮಿತವಾದ ವ್ಯಾಯಾಮ ನಿಮ್ಮದಾಗಲಿ

ಗರ್ಭಿಣಿಯರು ಗರ್ಭಾವಸ್ಥೆಯ ಸಮಯದಲ್ಲಿ ತಮ್ಮ ದೇಹಕ್ಕೆ ಎಷ್ಟೋ ಇಷ್ಟೋ ಕೆಲಸ ಕೊಡಬೇಕು. ಯಾವಾಗಲೂ ಒಂದು ಕಡೆ ಸುಮ್ಮನೆ ಕೂರುವುದರಿಂದ ದೇಹದ ರೋಗ - ನಿರೋಧಕ ಶಕ್ತಿ ಕಡಿಮೆ ಆಗುತ್ತದೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳುತ್ತಾರೆ. ಕೈಲಾದ ಸಣ್ಣ ಪುಟ್ಟ ಮನೆ ಕೆಲಸಗಳನ್ನು ಮಾಡುವುದರಿಂದ ಹಿಡಿದು ಸರಳವಾದ ಚಿಕ್ಕ ಪುಟ್ಟ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ. ಪ್ರಮುಖವಾಗಿ ಸೊಂಟದ ಭಾಗದ ಮಾಂಸ ಖಂಡಗಳು ಸಲೀಸಾಗುವಂತೆ ಮತ್ತು ಹೆರಿಗೆಯ ಸಮಯದಲ್ಲಿ ಕಂಡು ಬರುವ ನೋವನ್ನು ಸಹಿಸಿಕೊಳ್ಳುವಂತೆ ಅನುಕೂಲವಾಗುವ ವ್ಯಾಯಾಮಗಳು ಈ ಸಮಯದಲ್ಲಿ ಬಹಳ ಮುಖ್ಯ. ಇದಕ್ಕಾಗಿ ಒಬ್ಬ ಅನುಭವಿ ವ್ಯಾಯಾಮ ತಜ್ಞರನ್ನು ಸಂಪರ್ಕಿಸಿ ಗರ್ಭಿಣಿಯರಿಗೆ ಸೂಕ್ತವಾದ ವ್ಯಾಯಾಮಗಳು ಯಾವುವು ಎಂಬುದನ್ನು ತಿಳಿದು ವ್ಯಾಯಾಮ ಮಾಡಲು ಮುಂದಾಗುವುದು ಒಳ್ಳೆಯದು. ವ್ಯಾಯಾಮ ಮಾಡುವುದರಿಂದ ತಾಯಿ ಹಾಗೂ ಗರ್ಭದಲ್ಲಿರುವ ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು.

3. ಆರೋಗ್ಯಕರ ಆಹಾರ ಪದ್ಧತಿಯನ್ನು ಮರೆಯಬೇಡಿ

3. ಆರೋಗ್ಯಕರ ಆಹಾರ ಪದ್ಧತಿಯನ್ನು ಮರೆಯಬೇಡಿ

ಗರ್ಭಿಣಿ ಆಗುವುದಕ್ಕೆ ಮುಂಚೆ ಸೇವಿಸುವ ಆಹಾರಕ್ಕೆ ಮಿತಿ ಇರುವುದಿಲ್ಲ. ಕಣ್ಣಿಗೆ ಬೇಕಾದ ಆಹಾರವನ್ನು ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು, ಬೇಕರಿ ತಿಂಡಿಗಳನ್ನು, ರಸ್ತೆ ಬದಿಯ ಜಂಕ್ ಫುಡ್ ಗಳನ್ನು ಸೇವಿಸುವುದು ಅಭ್ಯಾಸವಾಗಿರುತ್ತದೆ. ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಇಂತಹ ಹಲವಾರು ಆಹಾರಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಕೇವಲ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಪೌಷ್ಟಿಕ ಸತ್ವಗಳನ್ನು ಒದಗಿಸುವ ಆಹಾರಗಳ ಬಗ್ಗೆ ಮಾತ್ರ ಯೋಚನೆ ಮಾಡಬೇಕು. ತಾಜಾ ಹಣ್ಣು ತರಕಾರಿ ಹೆಚ್ಚಾಗಿ ಸೇವಿಸಬೇಕು. ದೇಹವನ್ನು ತಂಪಾಗಿಸಿಕೊಳ್ಳಲು ಹೆಚ್ಚಿನ ದ್ರವಾಹಾರಗಳನ್ನು ತೆಗೆದುಕೊಂಡು ಆರೋಗ್ಯಕರವಾದ ತೂಕ ನಿರ್ವಹಣೆಗೆ ಅತಿಯಾದ ಕೊಬ್ಬಿನ ಅಂಶಗಳನ್ನು ಉಂಟು ಮಾಡುವ ಆಹಾರಗಳನ್ನು ದೂರ ಇಡಬೇಕು.

4. ಮಾನಸಿಕ ಒತ್ತಡದಿಂದ ದೂರವಿರಿ

4. ಮಾನಸಿಕ ಒತ್ತಡದಿಂದ ದೂರವಿರಿ

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಿಗೆ ಸಾಕಷ್ಟು ಸಮಸ್ಯೆಗಳು ಕಂಡು ಬರುವುದರಿಂದ ಮಾನಸಿಕವಾಗಿ ತೊಂದರೆ ಉಂಟಾಗುತ್ತದೆ. ಜೊತೆಯಲ್ಲಿ ಮನೆಯಲ್ಲಿನ ಸಮಸ್ಯೆ ಏನಾದರೂ ಇದ್ದರೆ ಅದನ್ನೂ ತಲೆಗೆ ಹಚ್ಚಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ ಮಾನಸಿಕವಾಗಿ ಒಬ್ಬ ಗರ್ಭಿಣಿ ಮಹಿಳೆಯು ನೊಂದರೆ ಅದರ ಪ್ರಭಾವ ನೇರವಾಗಿ ಗರ್ಭದಲ್ಲಿರುವ ಮಗುವಿನ ಮೇಲೆ ಉಂಟಾಗುತ್ತದೆ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಭಯ ಪಡಿಸುವ ಸನ್ನಿವೇಶಗಳಿಂದ ದೂರವಿರಬೇಕು. ಹೆಚ್ಚು ಚಿಂತೆ ನೀಡುವ ವಿಚಾರಗಳ ಬಗ್ಗೆ ಯೋಚಿಸಲು ಹೋಗಬಾರದು. ಕೇವಲ ಸಕಾರಾತ್ಮಕ ಆಲೋಚನೆಗಳಿಗೆ ಮಾತ್ರ ಬೆಲೆ ಕೊಡಬೇಕು. ಸಂತೋಷಕರವಾದ ವಾತಾವರಣವನ್ನು ನೀವೇ ನಿರ್ಮಿಸಿಕೊಂಡು ನಿಮ್ಮ ಮನಸ್ಸನ್ನು ಪ್ರಫುಲ್ಲವಾಗಿಸಿಕೊಳ್ಳಲು ಪ್ರಯತ್ನ ಪಡಬೇಕು.

5. ಚೆನ್ನಾಗಿ ಕಣ್ತುಂಬ ನಿದ್ರೆ ಮಾಡಿ

5. ಚೆನ್ನಾಗಿ ಕಣ್ತುಂಬ ನಿದ್ರೆ ಮಾಡಿ

ಸಾಧಾರಣವಾಗಿ ವೈದ್ಯರು ಹೇಳುವ ಹಾಗೆ ಒಬ್ಬ ಆರೋಗ್ಯವಂತ ವ್ಯಕ್ತಿ 8 ರಿಂದ 10 ಗಂಟೆಗಳ ಕಾಲ ಪ್ರತಿ ರಾತ್ರಿ ನಿದ್ರೆ ಮಾಡಲೇಬೇಕು. ನಿದ್ರೆಯಲ್ಲಿ ಆಗಾಗ ಎಚ್ಚರಗೊಳ್ಳುವುದು ನಡೆಯಬಾರದು ಎಂದು ಸೂಚಿಸುತ್ತಾರೆ. ಇದು ಗರ್ಭಿಣಿಯರಿಗೂ ಅನ್ವಯವಾಗುತ್ತದೆ. ತಮ್ಮ ಮಾನಸಿಕ ತೊಳಲಾಟದಿಂದ ದೂರವಾಗಲು, ತಮ್ಮ ದೇಹದ ಆಯಾಸವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಉತ್ತಮ ಆರೋಗ್ಯವನ್ನು ಹೊಂದಲು ರಾತ್ರಿಯ ಸಮಯದಲ್ಲಿ ಗರ್ಭಿಣಿಯರು ಚೆನ್ನಾಗಿ ನಿದ್ರೆ ಮಾಡಬೇಕು. ರಾತ್ರಿ ಊಟ ಮಾಡಿದ ನಂತರ ಅರ್ಧ ಗಂಟೆಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿಕೊಳ್ಳುವುದು ಸೂಕ್ತ. ಮಲಗುವ ಸಮಯದಲ್ಲಿ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ಇದ್ದರೆ, ಕೈ ಬಿಡಬೇಕು.

6. ಉಸಿರಾಟದ ವ್ಯಾಯಾಮಗಳು ಪಾಲನೆಯಲ್ಲಿ ಇರಲಿ

6. ಉಸಿರಾಟದ ವ್ಯಾಯಾಮಗಳು ಪಾಲನೆಯಲ್ಲಿ ಇರಲಿ

ಹೆರಿಗೆಯ ಸಂದರ್ಭದಲ್ಲಿ ಗರ್ಭಾವಸ್ಥೆಯಲ್ಲಿರುವ ಮಹಿಳೆ ಆಗಾಗ ಕೆಲವು ಸೆಕೆಂಡುಗಳ ಕಾಲ ಉಸಿರನ್ನು ಬಿಗಿ ಹಿಡಿದುಕೊಳ್ಳಬೇಕಾಗಿ ಬರುತ್ತದೆ. ಹಾಗಾಗಿ ಅಂತಹ ಸಂದರ್ಭಕ್ಕೆ ಹೊಂದಿಕೊಳ್ಳುವ ಹಾಗೆ ಮೊದಲೇ ಉಸಿರಾಟಕ್ಕೆ ಸಂಬಂಧ ಪಟ್ಟ ವ್ಯಾಯಾಮಗಳನ್ನು ಮಾಡಿ ಮಾನಸಿಕವಾಗಿ ತಯಾರಾಗುವುದು ಒಳ್ಳೆಯದು. ಏಕೆಂದರೆ ಗರ್ಭದಲ್ಲಿ ಬೆಳವಣಿಗೆ ಆಗುತ್ತಿರುವ ಮಗುವಿಗೆ ಆಮ್ಲಜನಕ ಅತ್ಯಂತ ಮುಖ್ಯ. ಹಾಗಾಗಿ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಧ್ಯಾನ, ಯೋಗ ಮಾಡುವ ಅಭ್ಯಾಸ ಕೈಗೊಳ್ಳಬೇಕು. ಇದರಿಂದಲೂ ಸಹ ಹೆರಿಗೆಯ ಸಮಯದಲ್ಲಿ ತುಂಬಾ ಸಹಾಯವಾಗುತ್ತದೆ.

7. ಹೆಚ್ಚು ನೀರು ಕುಡಿಯಿರಿ

7. ಹೆಚ್ಚು ನೀರು ಕುಡಿಯಿರಿ

ಗರ್ಭಾವಸ್ಥೆಯ ಸಮಯದಲ್ಲಿ ಪ್ರತಿ ದಿನ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಇದು ದೇಹವನ್ನು ನಿರ್ಜಲೀಕರಣದ ಸಮಸ್ಯೆಯಿಂದ ದೂರ ಮಾಡುವುದರ ಜೊತೆಗೆ ಗರ್ಭದಲ್ಲಿರುವ ಮಗುವಿಗೆ ಹೆಚ್ಚಿನ ದ್ರವ ಅಂಶಗಳನ್ನು ಒದಗಿಸುತ್ತದೆ. ಇದರ ಜೊತೆಗೆ ಗರ್ಭಿಣಿಯರಲ್ಲಿ ಕಾಡುವ ಮೂತ್ರನಾಳದ ಸೋಂಕು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ನೀರಿನ ಜೊತೆಗೆ ಪೌಷ್ಟಿಕ ಭರಿತವಾದ ಹಣ್ಣಿನ ರಸ, ಕೇಸರಿ ಹಾಕಿದ ಬಾದಾಮಿ ಹಾಲು ಇತ್ಯಾದಿಗಳನ್ನು ಸೇವನೆ ಮಾಡಬೇಕು.

8. ಗರ್ಭಿಣಿಯರಿಗೆ ಈ ಸಮಯದಲ್ಲಿ ಮಸಾಜ್ ಅಗತ್ಯವಿದೆ

8. ಗರ್ಭಿಣಿಯರಿಗೆ ಈ ಸಮಯದಲ್ಲಿ ಮಸಾಜ್ ಅಗತ್ಯವಿದೆ

ಗರ್ಭಿಣಿಯರು ತಮ್ಮ ಮೊದಲ ಎರಡು ತ್ರೈಮಾಸಿಕಗಳಲ್ಲಿ ಮೇಲಿನ ಅನುಸರಣೆ ಗಳನ್ನು ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಮೂರನೆಯ ತ್ರೈಮಾಸಿಕ ಅಂದರೆ ಗರ್ಭಾವಸ್ಥೆಯಲ್ಲಿ ಅದಾಗಲೇ ಆರು ತಿಂಗಳು ಕಳೆದ ನಂತರ ಮಸಾಜ್ ಪ್ರಕ್ರಿಯೆಯನ್ನು ಹೊಸದಾಗಿ ಸೇರಿಸಿಕೊಳ್ಳಬೇಕು. ಏಕೆಂದರೆ ಹೆರಿಗೆ ಸಮಯ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಸರಾಗವಾಗಿ ಸಾಧಾರಣ ಹೆರಿಗೆ ಆಗಲು ಇದು ಸಹಾಯ ಮಾಡುತ್ತದೆ. ಜೊತೆಗೆ ಮಸಾಜ್ ಪ್ರಕ್ರಿಯೆಯಿಂದ ಮೈಕೈ ನೋವು, ಕೀಲುನೋವು ಮಾಂಸಖಂಡಗಳ ಸೆಳೆತ ಇತ್ಯಾದಿ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ. ಗರ್ಭಾವಸ್ಥೆಯ ಸಮಯದಲ್ಲಿ ಅಜೀರ್ಣತೆ ಯ ಪ್ರಭಾವದಿಂದ ಉಂಟಾಗುವ ಆರೋಗ್ಯದ ಅಸ್ವಸ್ಥತೆಯನ್ನು ಮಸಾಜ್ ಪ್ರಕ್ರಿಯೆ ದೂರ ಮಾಡುತ್ತದೆ ಎಂದು ಹೇಳಬಹುದು.

ಸಿಸೇರಿಯನ್ ಅಲ್ಲದ ಸಾಧಾರಣ ಹೆರಿಗೆಯಲ್ಲಿ ಹೆರಿಗೆ ನೋವು ಎನ್ನುವುದು ಸಾಮಾನ್ಯ.

ಸಿಸೇರಿಯನ್ ಅಲ್ಲದ ಸಾಧಾರಣ ಹೆರಿಗೆಯಲ್ಲಿ ಹೆರಿಗೆ ನೋವು ಎನ್ನುವುದು ಸಾಮಾನ್ಯ.

ಹಾಗಾಗಿ ಗರ್ಭಿಣಿಯರು ಇದರ ಬಗ್ಗೆ ಯೋಚಿಸುತ್ತಾ ಕೂರಬಾರದು. ಅದರ ಬದಲು ಹೆರಿಗೆ ನೋವನ್ನು ಕಡಿಮೆ ಮಾಡಿಕೊಳ್ಳುವಂತಹ ಉಪಾಯಗಳನ್ನು ಹುಡುಕಬೇಕು. ನಿಮ್ಮ ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮಾನಸಿಕವಾಗಿ ನೀವು ಸದೃಢವಾಗಿರಬೇಕು.

ಗರ್ಭಾವಸ್ಥೆಯ ಸಮಯ ಎನ್ನುವುದು ನಿಮ್ಮ ಜೀವನದಲ್ಲಿ ನಿಮಗೆ ಒದಗಿ ಬಂದಿರುವ ಅಪರೂಪದ ಸಮಯ. ಹಾಗಾಗಿ ಇದನ್ನು ಅತ್ಯಂತ ಸಂತೋಷಕರವಾಗಿ ಕಳೆಯಬೇಕಾದದ್ದು ನಿಮ್ಮ ಕರ್ತವ್ಯ. ನೀವು ಖುಷಿಯಾಗಿದ್ದರೆ, ನಿಮ್ಮ ಮನೆ ಮಂದಿ ಸಂತೋಷವಾಗಿರುತ್ತಾರೆ. ಎಲ್ಲರೂ ಸಂತೋಷವಾಗಿದ್ದರೆ ನಿಮ್ಮ ಗರ್ಭದಲ್ಲಿರುವ ಮಗು ಕೂಡ ಆರೋಗ್ಯವಾಗಿರುತ್ತದೆ.

English summary

Pregnancy Tips to Help You Have a Normal Delivery in Kannada

Here we are discussing about Tips to Help You Have Normal Delivery or vaginal delivery. Though there are no magic tricks or sure shot formulas that will help for a normal delivery, there are things that can be worked out and paid attention to, to improve the chances of having a normal delivery. Read more.
X
Desktop Bottom Promotion