For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಲ್ಲಿ ಕಾಡುವ ಮೂಲವ್ಯಾಧಿ: ಕಾರಣ, ಲಕ್ಷಣಗಳು ಹಾಗೂ ಚಿಕಿತ್ಸೆ

|

ಮಹಿಳೆ ಗರ್ಭಿಣಿಯಾದಾಗ ಅವಳ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ, ಅವಳ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರಿಂದಾಗಿ ಮೈ ತೂಕ ಹೆಚ್ಚುವುದು, ವಾಂತಿ, ಸುಸ್ತು, ವಿಪರೀತ ಹಸಿವು, ಮಲಬದ್ಧತೆ ಮುಂತಾದ ಸಮಸ್ಯೆಗಳು ಕಂಡು ಬರುವುದು, ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಒಂದೇ ರೀತಿಯ ಸಮಸ್ಯೆ ಕಂಡು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಕೆಲವರಿಗೆ ವಾಂತಿಯಿಂದಾಗಿ ಇನ್ನು ಕೆಲವರಿಗೆ ವಿಪರೀತ ಹಸಿವು ಇರಬಹುದು. ಗರ್ಭಾವತಿಯಾದಾಗ ಕಾಣಿಸಿಕೊಳ್ಳುವ ಈ ರೀತಿಯ ಲಕ್ಷಣಗಳ ಜತೆಗೆ ಕೆಲವರಿಗೆ ಮಲಬದ್ಧತೆ ಸಮಸ್ಯೆ ಕಂಡು ಬರುತ್ತದೆ. ಶೇ. 50ರಷ್ಟು ಮಹಿಳೆಯರಿಗೆ ಮೂಲವ್ಯಾಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹೆಮೊರಾಯ್ಡ್ ಎಂದು ಕರೆಯುತ್ತಾರೆ.

ಈ ಸಮಸ್ಯೆಗೆ ಕಾರಣವೇನು?

ಗರ್ಭಿಣಿಯಾದಾಗ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ ಹಾಗೂ ದೇಹದಲ್ಲಿ ಪ್ರೊಜೆಸ್ಟಿರಾನ್ಬ ಹಾರ್ಮೋನ್‌ ಹೆಚ್ಚು ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್‌ಗಳು ನರಗಳು ಸಡಿಲವಾಗುವಂತೆ ಮಾಡುತ್ತದೆ, ಇದರಿಂದ ಊತ ಉಂಟಾಗುವುದು, ಗರ್ಭಕೋಶದ ಕೆಳಭಾಗದಲ್ಲಿರುವ ನರ ಸ್ವಲ್ಪ ಊದಿಕೊಂಡು ಸಡಿಲವಾಗುತ್ತದೆ, ಮಗು ಬೆಳೆಯುತ್ತಿದ್ದಂತೆ ಆ ನರದ ಮೇಲೆ ಒತ್ತಡ ಬಿದ್ದು ಮೂಲವ್ಯಾಧಿ ಉಂಟಾಗುವುದು.

ಗರ್ಭಿಣಿಯರಲ್ಲಿ ಮೂಲವ್ಯಾಧಿ ಸಮಸ್ಯೆ ಬರಲು ಮತ್ತೊಂದು ಕಾರಣವೆಂದರೆ ಮಲಬದ್ಧತೆ. ಗರ್ಭಿಯಾದಾಗ ಜೀರ್ನಕ್ರಿಯೆ ನಿಧಾನವಾಗಿ ಇದರಿಂದ ಕೆಲವರಿಗೆ ಮಲಬದ್ಧತೆ ಸಮಸ್ಯೆ ಉಂಟಾಗುವುದು. ಮಲಬದ್ಧತೆ ಉಂಟಾದಾಗ ಅಧಿಕ ಒತ್ತಡ ಹಾಕುವುದರಿಂದ ಗುದನಾಳದಲ್ಲಿ ರಕ್ತನಾಳಗಳು ಊದಿಕೊಂಡು ಮೂಲವ್ಯಾಧಿ(ಹೆಮೊರಾಯ್ಡ್) ಉಂಟಾಗುವುದು, ಇದರಿಂದ ಮಲವಿಸರ್ಜನೆ ಮಾಡುವಾಗ ರಕ್ತ ಕೂಡ ಬರಬಹುದು.

ಗರ್ಭಾವಸ್ಥೆಯಲ್ಲಿ ಹೆಮೊರಾಯ್ಡ್ ಅಥವಾ ಮೂಲವ್ಯಾಧಿ ಬಂದರೆ ಕಂಡು ಬರುವ ಲಕ್ಷಣಗಳು

ಗರ್ಭಿಣಿಯರಲ್ಲಿ ಎರಡು ರೀತಿಯಾಗಿ ಮುಲವ್ಯಾಧಿ ಸಮಸ್ಯೆ ಕಂಡು ಬರುವುದು

ಗರ್ಭಿಣಿಯರಲ್ಲಿ ಎರಡು ರೀತಿಯಾಗಿ ಮುಲವ್ಯಾಧಿ ಸಮಸ್ಯೆ ಕಂಡು ಬರುವುದು

1. ಆಂತರಿಕ ಹೆಮೊರಾಯ್ಡ್, ಇದು ದೇಹದ ಒಳಭಾಗದಲ್ಲಿ ಉಂಟಾಗುತ್ತದೆ.

2. ಬಾಹ್ಯ ಹೆಮೊರಾಯ್ಡ್, ಇದು ದೇಹದ ಹೊರಭಾಗದಲ್ಲಿ ಉಂಟಾಗುತ್ತದೆ.

ಹೆಮೊರಾಯ್ಡ್ ಉಂಟಾದಾಗ ದೇಹದಲ್ಲಿ ಈ ಲಕ್ಷಣಗಳು ಕಂಡು ಬರುತ್ತದೆ

* ರಕ್ತಸ್ರಾವ(ಮಲವಿಸರ್ಜನೆಗೆ ಹೋದಾಗ ರಕ್ತ ಕಂಡು ಬಂದರೆ)

* ಮಲವಿಸರ್ಜನೆಗೆ ತೊಂದರೆಯಾಗುವುದು

* ಗುದದಲ್ಲಿ ಚಿಕ್ಕ ಮಾಂಸದ ಮುದ್ದೆ ಕಂಡು ಬರುವುದು

* ತುರಿಕೆ

* ಉರಿ

* ಊತ

ಈ ರೀತಿಯ ಲಕ್ಷಣಗಳು ಬಾಹ್ಯ ಹೆಮೊರಾಯ್ಡ್‌ಗಳಲ್ಲಿ ಕಂಡು ಬರುತ್ತದೆ, ಆಂತರಿಕ ಹೆಮೊರಾಯ್ಡ್‌ ಉಂಟಾದರೆ ಈ ರೀತಿಯ ಲಕ್ಷಣಗಳು ಕಂಡು ಬರುವುದಿಲ್ಲ.

ಗರ್ಭಾವಸ್ಥೆಯಲ್ಲಿ ಹೆಮೊರಾಯ್ಡ್ ಬರಲು ಕಾರಣವೇನು

ಗರ್ಭಾವಸ್ಥೆಯಲ್ಲಿ ಹೆಮೊರಾಯ್ಡ್ ಬರಲು ಕಾರಣವೇನು

* ರಕ್ತಕಣಗಳು ಹೆಚ್ಚಾಗುತ್ತದೆ, ಇದರಿಂದ ನರಗಳು ದೊಡ್ಡದಾಗುವುದು

* ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದ್ದಂತೆ ಗುದದ ಬಳಿ ಇರುವ ನರದ ಮೇಲೆ ಹೆಚ್ಚು ಒತ್ತಡ ಬೀಳುವುದು

* ದೇಹದಲ್ಲಿ ಹಾರ್ಮೋನ್‌ಗಳು ಬದಲಾವಣೆಯಾಗುತ್ತವೆ

* ಮಲಬದ್ಧತೆ ಉಂಟಾಗುವುದು

ಗರ್ಭಿಣಿಯರಲ್ಲಿ ತುಂಬಾ ಹೊತ್ತು ಕೂರುವುದರಿಂದ, ಹಾರ್ಮೋನ್‌ಗಳ ಬದಲಾವಣೆಯಿಂದ ಹಾಗೂ ಕಬ್ಬಿಣದಂಶ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಉಂಟಾಗುತ್ತದೆ.

ಹೆರಿಗೆಯ ಬಳಿಕ ಹೆಮೊರಾಯ್ಡ್ ಸಮಸ್ಯೆ ಇಲ್ಲವಾಗುವುದೇ?

ಹೆರಿಗೆಯ ಬಳಿಕ ಹೆಮೊರಾಯ್ಡ್ ಸಮಸ್ಯೆ ಇಲ್ಲವಾಗುವುದೇ?

ಗರ್ಭಾವಸ್ಥೆಯಲ್ಲಿ ಹೆಮೊರಾಯ್ಡ್ ಸಮಸ್ಯೆ ಕಾಣಿಸಿಕೊಂಡಿದ್ದರೆ ಹೆರಿಗೆಯ ನಂತರ ಯಾವುದೇ ಚಿಕಿತ್ಸೆ ಇಲ್ಲದೆ ಆ ಸಮಸ್ಯೆ ಇಲ್ಲವಾಗುವುದು. ಹೆರಿಗೆಯ ಬಳಿಕ ಹಾರ್ಮೋನ್‌ನಲ್ಲಿ ಬದಲಾವಣೆ ಉಂಟಾಗುವುದು, ಕೆಳ ಹೊಟ್ಟೆಯ ಮೆಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ ಇದರಿಂದಾಗಿ ಈ ಸಮಸ್ಯೆ ಇಲ್ಲವಾಗುವುದು.

ಸಾಮಾನ್ಯವಾಗಿ ಮೂರನೇ ತ್ರೈಮಾಸಿಕದಲ್ಲಿ ಗರ್ಭಿಣಿಯರಲ್ಲಿ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಮೂರನೇಯ ತ್ರೈ ಮಾಸಿಕದಲ್ಲಿ ಮಗುವಿನ ತೂಕ ಅಧಿಕವಾಗಿರುತ್ತದೆ, ಇದರಿಂದ ಹೊಟ್ಟೆಯ ಮೇಲೆ ಒತ್ತಡ ಬೀಳುವುದರಿಂದ ಗುದ ನಾಳದ ನರದಲ್ಲಿ ಊತ ಕಂಡು ಬರುವುದು.

ಗರ್ಭಾವಸ್ಥೆಯಲ್ಲಿ ಕಾಡುವ ಹೆಮೊರಾಯ್ಡ್ ಸಮಸ್ಯೆ ಹೋಗಲಾಡಿಸಲು ಈ ಮನೆಮದ್ದುಗಳನ್ನು ಮಾಡಬಹುದು:

ಗರ್ಭಾವಸ್ಥೆಯಲ್ಲಿ ಕಾಡುವ ಹೆಮೊರಾಯ್ಡ್ ಸಮಸ್ಯೆ ಹೋಗಲಾಡಿಸಲು ಈ ಮನೆಮದ್ದುಗಳನ್ನು ಮಾಡಬಹುದು:

* ಹೇಝಲ್ ಇರುವ ವೈಪ್ಸ್ ಬಳಸಿ.

* ಟಾಯ್ಲೆಟ್‌ ಹೋದಾಗ ಮೃದುವಾದ ಟಿಶ್ಯೂ ಪೇಪರ್‌ನಿಂದ ಒರೆಸಿ

* ಉಗುರು ಬೆಚ್ಚಗಿನ ಶುದ್ಧವಾದ ನೀರಿನಲ್ಲಿ 10 ನಿಮಿಷ ಕುಳಿತುಕೊಳ್ಳಿ, ಈ ರೀತಿ ದಿನದಲ್ಲಿ ಹಲವಾರು ಬಾರಿ ಮಾಡಿ.

* ಎಪ್ಸೊಮ್ ಉಪ್ಪು ಅನ್ನು ಉಗುರು ಬೆಚ್ಚಗಿನ ಬಿಸಿ ನೀರಿನಲ್ಲಿ ಹಾಕಿ ಅದರಲ್ಲಿ ಸ್ನಾನ ಮಾಡಿ.

* ಆ ಭಾಗಕ್ಕೆ ದಿನದಲ್ಲಿ 4-5 ಬಾರಿ ಐಸ್‌ಪ್ಯಾಕ್‌ ಇಡುವುದರಿಂದ ಉರಿ ಕಡಿಮೆಯಾಗುವುದು

* ತುಂಬಾ ಹೊತ್ತು ಒಂದೇ ಕಡೆ ಕೂರಬೇಡಿ, ಹೀಗೆ ಮಾಡುವುದರಿಂದ ಗುದದ ಮೇಲೆ ಹೆಚ್ಚಿನ ಒತ್ತಡ ಬೀಳುವುದನ್ನು ತಡೆಯಬಹುದು

* ಸಾಕಷ್ಟು ನೀರು ಕುಡಿಯಿರಿ, ನೀರಿನಂಶ ಅಧಿಕವಿರುವ ಆಹಾರ ಸೇವಿಸಿ.

* ಮಲವಿಸರ್ಜನೆಗೆ ಹೋಗುವಾಗ ತುಂಬಾ ಒತ್ತಡ ಹಾಕಬೇಡಿ, ತುಂಬಾ ಹೊತ್ತು ಟಾಯ್ಲೆಟ್‌ ಕೂರಬೇಡಿ.

* ಹೆಚ್ಚು ಹೊತ್ತು ಕೂರುವುದಕ್ಕಿಂತ ಮಲಗಿ ವಿಶ್ರಾಂತಿ ತೆಗೆದುಕೊಳ್ಳಿ.

ಈ ವಸ್ತುಗಳನ್ನು ಕೊಂಡು ಬಳಸುವುದು ಒಳ್ಳೆಯದು

* ಹೆಮೊರಾಯ್ಡ್ ಪ್ಯಾಡ್ಸ್

* ಫ್ಲಷಬಲ್ ವಯಪ್ಸ್

* ಸೈಜ್ ಬಾತ್

* ಎಪ್ಸೋಮ್ ಉಪ್ಪು

* ಐಸ್‌ಬ್ಯಾಗ್

ವೈದ್ಯಕೀಯ ಚಿಕಿತ್ಸೆ

ವೈದ್ಯಕೀಯ ಚಿಕಿತ್ಸೆ

ಮನೆಯಲ್ಲಿ ಈ ಚಿಕಿತ್ಸೆಯನ್ನು ಮಾಡುವ ಮುನ್ನ ವೈದ್ಯರನ್ನು ಬೇಟಿಯಾಗಿ ಅವರ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಇದರಿಂದ ಯಾವುದೇ ತೊಂದರೆ ಉಂಟಾಗುವುದನ್ನು ತಡೆಗಟ್ಟಬಹುದು.

ಗರ್ಭಾವಸ್ಥೆಯಲ್ಲಿ ಹೆಮೊರಾಯ್ಡ್ ಬರದಂತೆ ತಡೆಗಟ್ಟಲು ಟಿಪ್ಸ್

* ಹಣ್ಣು-ತರಕಾರಿಗಳನ್ನು ತುಂಬಾ ಸೇವಿಸಬೇಕು. ನಾರಿನಂಶವಿರುವ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬೇಕು.

* ಸಾಕಷ್ಟು ನೀರು ಕುಡಿಯಬೇಕು, ಇದರಿಂದ ಮಲವಿಸರ್ಜನೆ ಸರಿಯಾಗಿ ಆಗುವುದು.

* ಮಲವಿಸರ್ಜನೆಗೆ ಹೋಗುವಾಗ ತುಂಬಾ ಒತ್ತಡ ಹಾಕಬೇಡಿ

* ಟಾಯ್ಲೆಟ್‌ ತುಂಬಾ ಹೊತ್ತು ಕೂರಬೇಡಿ

* ಮಲವಿಸರ್ಜನೆ ಬಂದ ಕೂಡಲೇ ಹೋಗಬೇಕು, ತಡೆಗಟ್ಟುವ ಪ್ರಯತ್ನ ಮಾಡಬೇಡಿ.

* ತುಂಬಾ ಹೊತ್ತು ಕೂತೇ ಇರುವುದಕ್ಕಿಂತ ಓಡಾಡುವುದು ಒಳ್ಳೆಯದು

* ಮಲಬದ್ಧತೆ ಹಾಗೂ ಹೆಮೊರಾಯ್ಡ್ ತಡೆಗಟ್ಟಲು ಯಾವ ಸಪ್ಲಿಮೆಂಟ್‌ ತೆಗೆದುಕೊಳ್ಳಬೇಕೆಂದು ವೈದ್ಯರ ಸಲಹೆ ಪಡೆಯಿರಿ.

ಹೆಮೊರಾಯ್ಡ್ ಗರ್ಭಾವಸ್ಥೆಯಲ್ಲಿ ಗಂಡು ಬರುವುದು ಸಹಜವಾದರೂ ಇದನ್ನು ತಡೆಗಟ್ಟುವುದು ಹೇಗೆ ಎಂದು ವೈದ್ಯರ ಬಳಿ ಕೇಳಿ, ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಒಳ್ಳೆಯದು.

English summary

Piles In Pregnancy : Causes, symptoms, treatment and prevention

Piles or Hemorrhoids is common during pregnancy, especially in women who are in their third trimester. Here are causes for piles, symptoms and how to treat piles in pregnancy, and here is tips tp avoid piles in pregnancy. Take a look.
Story first published: Tuesday, November 19, 2019, 15:06 [IST]
X
Desktop Bottom Promotion