ಮಹಿಳೆಯರಿಗಾಗಿ ತಾತ್ಕಾಲಿಕ ಗರ್ಭನಿರೋಧಕ ಕ್ರಮಗಳು

ಭಾರತದಲ್ಲಿ ಗರ್ಭನಿರೋಧಕ ಬಗ್ಗೆ ಇನ್ನೂ ಮಡಿವಂತಿಕೆಯ ಧೋರಣೆ ವ್ಯಾಪಕವಾಗುತ್ತಿದೆ . ಹಿಂದೂಸ್ತಾನ್ ಟೈಮ್ಸ್ ಮಾಧ್ಯಮದ ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಕೇವಲ 47.8% ಮಹಿಳೆಯರು ಮಾತ್ರವೇ ಗರ್ಭನಿರೋಧಕ ಕ್ರಮಗಳನ್ನು ಅನುಸರಿಸುತ್ತಾರೆ, ಆದರೆ ಇವರಿಗೆ ಈ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿಲ್ಲ ಅಥವಾ ತಮಗೆ ಅತ್ಯುತ್ತಮವಾದ ಕ್ರಮ ಯಾವುದೆಂದೂ ಅರಿತಿಲ್ಲ.

ಗರ್ಭನಿರೋಧಕ ಕ್ರಮಗಳಲ್ಲಿ ಹಲವು ವಿಧಗಳಿದ್ದು ವ್ಯಕ್ತಿಯ ಆರೋಗ್ಯ, ದೈಹಿಕ ಸ್ಥಿತಿ, ವಯಸ್ಸು ಮೊದಲಾದವನ್ನು ಆಧರಿಸಿ ಸೂಕ್ತವಾದುದನ್ನು ಆಯ್ಕೆಮಾಡಿಕೊಳ್ಳಬೇಕು. ಏಕೆಂದರೆ ಪ್ರತಿ ವಿಧಾನವೂ ಭಿನ್ನ ವ್ಯಕ್ತಿಯ ಮೇಲೆ ಭಿನ್ನ ಪರಿಣಾಮ ಬೀರಬಹುದು. ಇಂದಿನ ಲೇಖನದಲ್ಲಿ ತಾತ್ಕಾಲಿಕ ಅವಧಿಗಾಗಿ ಮಹಿಳೆಯರು ಅನುಸರಿಸಬಹುದಾದ ಗರ್ಭನಿರೋಧಕ ಕ್ರಮಗಳನ್ನು ಅರಿಯೋಣ ಹಾಗೂ ಇವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನೂ ತಿಳಿದುಕೊಳ್ಳೋಣ...

temporary birth control methods for female

ಹೆಚ್ಚು ಬಳಕೆಯಲ್ಲಿರುವ ಗರ್ಭನಿರೋಧಕ ಕ್ರಮಗಳೆಂದರೆ:

*ಕಾಂಡೋಮ್
*ಗರ್ಭ ನಿರೋಧಕ ಗುಳಿಗೆಗಳು
*ಗರ್ಭ ನಿರೋಧಕ ಚುಚ್ಚುಮದ್ದುಗಳು
*ಗರ್ಭಾಶಯದಲ್ಲಿ ಅಳವಡಿಸಬಹುದಾದ ಉಪಕರಣ (Intra-uterine device (IUD)
*ಗರ್ಭನಾಳದ ಉಂಗುರ (vaginal ring)

ಕಾಂಡೋಮ್

ಕಾಂಡೋಮ್

ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯಲು ಅತಿ ಜನಪ್ರಿಯ ಮತ್ತು ಹೆಚ್ಚು ವ್ಯಾಪಕ ಕ್ರಮವೆಂದರೆ ಕಾಂಡೋಮುಗಳ ಬಳಕೆ. ಇದರಿಂದ ದಂಪತಿಗಳು ಪರಸ್ಪರರಲ್ಲಿ ಹರಡಬಹುದಾದ ಲೈಂಗಿಕ ರೋಗಗಳಿಂದ ರಕ್ಷಣೆ ಪಡೆಯುತ್ತಾರೆ ಹಾಗೂ ಲೈಂಗಿಕವಾಗಿ ಹರಡಬಹುದಾದ ಸೋಂಕು ಹರಡದಂತೆ ಮತ್ತು ಸುರಕ್ಷಿತ ಮಿಲನವೂ ಸಾಧ್ಯವಾಗುತ್ತದೆ. ಕಾಂಡೋಮುಗಳನ್ನು ಪುರುಷರು ಜನನಾಂಗಕ್ಕೆ ಧರಿಸಿಕೊಳ್ಳುವ ಮೂಲಕ ವೀರ್‍ಯ ಸ್ಖಲನಗೊಂಡರೂ ಗರ್ಭನಾಳದಲ್ಲಿ ಇಳಿಯಲು ಸಾಧ್ಯವಾಗದೇ ಹೋಗುವ ಮೂಲಕ ಅನೈಚ್ಛಿಕ ಗರ್ಭಧಾರಣೆಯನ್ನು ಯಶಸ್ವಿಯಾಗಿ ತಡೆದಂತಾಗುತ್ತದೆ.

ಗರ್ಭ ನಿರೋಧಕ ಗುಳಿಗೆಗಳು

ಗರ್ಭ ನಿರೋಧಕ ಗುಳಿಗೆಗಳು

ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವ ಮೂಲಕ ಅಂಡಾಣು ಬಿಡುಗಡೆಗೊಳ್ಳುವುದನ್ನು ತಡೆಯಲಾಗುತ್ತದೆ ಹಾಗೂ ಈ ಮೂಲಕವೂ ಅನೈಚ್ಛಿಕ ಗರ್ಭಧಾರಣೆಯಾಗುವುದನ್ನು ತಡೆಯಬಹುದು. ಈ ಮಾತ್ರೆಗಳನ್ನು ಸೇವಿಸುವ ಮಹಿಳೆಯರ ದೇಹದಲ್ಲಿ ಗರ್ಭಿಣಿಯರ ದೇಹದಲ್ಲಿ ಸ್ರವಿಸುವ ಪರಿಣಾಮವುಂಟಾಗುತ್ತದೆ ಹಾಗೂ ಈಗ ಅಂಡಾಣು ಬಿಡುಗಡೆಗೊಳ್ಳುವುದು ಬೇಕಿಲ್ಲ ಎಂಬ ಸೂಚನೆಯನ್ನು ನೀಡುತ್ತದೆ. ಆದರೆ ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯಲು ಮಹಿಳೆಯರು ಸೇವಿಸುವ ಈ ಗುಳಿಗೆಗಳು ಅಡ್ಡ ಪರಿಣಾಮಗಳಿಂದ ಹೊರತಾಗಿಲ್ಲ. ಅಲ್ಲದೇ 'ಗರ್ಭಿಣಿಯಾಗಿದ್ದೇನೆ, ಈಗ ಅಂಡಾಣು ಬಿಡುಗಡೆಯಾಗುವುದು ಬೇಕಿಲ್ಲ' ಎಂಬ ಸೂಚನೆಯಿಂದ ಅಂಡಾಣು ಬಿಡುಗಡೆಗೊಳ್ಳದೇ ಹೋದರೂ ಈ ಸೂಚನೆಯನ್ನು ಗರ್ಭಿಣಿಯ ದೇಹದ ಇತರ ಅಗತ್ಯ ಬದಲಾವಣೆಗಳಿಗೆ ಅಗತ್ಯ ಸೂಚನೆ ಎಂದುಕೊಂಡು ದೇಹ ಕೆಲವಾರು ಕ್ರಮಗಳನ್ನು ಪ್ರಾರಂಭಿಸಿಬಿಡುತ್ತದೆ. ಪ್ರಾರಂಭದಲ್ಲಿ ಇದರಿಂದ ಹೆಚ್ಚು ಗೊಂದಲ ಆಗದಿದ್ದರೂ ತಿಂಗಳಾದ ಬಳಿಕ ಸಹಜ ಗರ್ಭದ ಬೆಳವಣಿಗೆ ಇಲ್ಲದೇ ಈಗಾಗಲೇ ಈ ಬೆಳವಣಿಗೆ ಇದೆ ಎಂದುಕೊಂಡು ಮುಂದುವರೆದಿದ್ದ ಬದಲಾವಣೆಗಳೆಲ್ಲಾ ಏರುಪೇರಾಗುತ್ತವೆ. ಪರಿಣಾಮವಾಗಿ ವಾಕರಿಕೆ, ತಲೆನೋವು, ಹೊಟ್ಟೆಯುಬ್ಬರಿಕೆ, ಸತತ ರಕ್ತಸ್ರಾವ, ಸ್ತನಗಳು ವಿಪರೀತ ಸಂವೇದಿಯಾಗುವುದು, ಮೂತ್ರ ಹೊರಬರದೇ ಹೆಚ್ಚು ಹೊತ್ತು ಮೂತ್ರಕೋಶ ತುಂಬಿಯೇ ಇರುವುದು ಮೊದಲಾದವು ಎದುರಾಗಬಹುದು. ಹಾಗಾಗಿ, ಈ ಮಾತ್ರೆಗಳನ್ನು ಸೇವಿಸುವ ಮಹಿಳೆಯರ ದೇಹ ಈ ಮಾತ್ರೆಗಳಲ್ಲಿರುವ ಕೃತಕ ರಸದೂತಗಳಿಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಆಧರಿಸಿ ಈ ವಿಧಾನದ ಯಶಸ್ಸು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಈ ವಿಧಾನ 98% ಯಶಸ್ವಿಯಾದರೂ ರಸದೂತಗಳ ಏರುಪೇರಿನ ಅಡ್ಡಪರಿಣಾಮಗಳಿಂದ ಹೊರತಾಗಿಲ್ಲ.

ಗರ್ಭ ನಿರೋಧಕ ಚುಚ್ಚುಮದ್ದುಗಳು

ಗರ್ಭ ನಿರೋಧಕ ಚುಚ್ಚುಮದ್ದುಗಳು

ಇದು ಇನ್ನೊಂದು ಬಗೆಯ ವಿಧಾನವಾಗಿದ್ದು ಗರ್ಭಧಾರಣೆ ಬಯಸದ ಮಹಿಳೆಯರಿಗೆ ವೈದ್ಯರು ಮಾತ್ರವೇ ನೀಡಬಹುದಾದ ಚುಚ್ಚುಮದ್ದಾಗಿದೆ. ಈ ವಿಧಾನದಲ್ಲಿ ವೈದ್ಯರು ಮಹಿಳೆಯ ಆರೋಗ್ಯದ ಪ್ರತಿ ಅಂಶವನ್ನೂ ಪರಿಶೀಲಿಸಿ ಅತ್ಯಂತ ಸೂಕ್ತ ಔಷಧಿ ಮತ್ತು ಪ್ರಮಾಣವನ್ನು ನಿರ್ಧರಿಸುವುದರಿಂದ ಅತಿ ಕಡಿಮೆ ಅಡ್ಡಪರಿಣಾಮಗಳ ಮೂಲಕ ಈ ಔಷಧಿಗಳ ಯಶಸ್ಸು ಮಾತ್ರೆಗಳಿಗಿಂತ ಹೆಚ್ಚಾಗಿದೆ. ಈ ಚುಚ್ಚುಮದ್ದುಗಳನ್ನು ಕೇವಲ ಗರ್ಭನಿರೋಧಕ ಕ್ರಮವಾಗಿ ಮಾತ್ರವಲ್ಲ, ರಸದೂತಗಳ ಏರುಪೇರನ್ನು ಸರಿಪಡಿಸಲೂ ವೈದ್ಯರು ಬಳಸಿಕೊಳ್ಳುತ್ತಾರೆ. ಈ ಚುಚ್ಚುಮದ್ದುಗಳಲ್ಲಿ ಈಸ್ಟ್ರೋಜೆನ್ ಇರುವುದಿಲ್ಲವಾದ್ದರಿಂದ ಈ ಮೂಲಕ ಎದುರಾಗಬಹುದಾದ ಬಹುತೇಕ ಎಲ್ಲಾ ಅಡ್ಡ ಪರಿಣಾಮಗಳಿಂದ ರಕ್ಷಣೆ ಪಡೆದಂತಾಗುತ್ತದೆ. ಆದರೆ ರಸದೂತಗಳಿಗೆ ಅತಿ ಹೆಚ್ಚು ಸಂವೇದನೆ ಪಡೆದಿರುವ ಮಹಿಳೆಯರಿಗೆ ಈ ಅಲ್ಪ ಅಡ್ಡಪರಿಣಾಮಗಳೂ ದೊಡ್ಡದೇ ಎನಿಸುತ್ತವೆ ಹಾಗೂ ಇವುಗಳಿಂದ ಮುಕ್ತರಾಗುವುದು ಅಷ್ಟು ಸುಲಭವಲ್ಲ.

ಗರ್ಭಾಶಯದಲ್ಲಿ ಅಳವಡಿಸಬಹುದಾದ ಉಪಕರಣ (IUD)

ಗರ್ಭಾಶಯದಲ್ಲಿ ಅಳವಡಿಸಬಹುದಾದ ಉಪಕರಣ (IUD)

ಮಾತ್ರೆ ಮತ್ತು ಚುಚ್ಚುಮದ್ದುಗಳ ವಿಧಾನಕ್ಕೆ ವ್ಯತಿರಿಕ್ತವಾಗಿ, ಈ ವಿಧಾನದಲ್ಲಿ ರಸದೂತಗಳ ಪಾತ್ರವೇ ಇಲ್ಲದೇ ಗರ್ಭನಿರೋಧಕ ಕ್ರಮವನ್ನು ಸಾಧಿಸಬಹು. ಪ್ರಾಥಮಿಕವಾಗಿ ಇದೊಂದು ಮಹಿಳೆಯರ ಶರೀರದೊಳಗೆ ಅಳವಡಿಸಬಹುದಾದ ಉಪಕರಣವಾಗಿದ್ದು ಕಾಪರ್ ಟಿ ಎಂಬ ಹೆಸರಿನಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ಉಪಕರಣವನ್ನು ಕೇವಲ ತರಬೇತಿ ಪಡೆದ ನುರಿತ ಹಾಗೂ ತಜ್ಞ ವೈದ್ಯರು ಮಾತ್ರವೇ ಸರಳ ಶಸ್ತ್ರಚಿಕಿತ್ಸೆಯ ಮೂಲಕ ಮಹಿಳೆಯ ದೇಹದಲ್ಲಿ ಅಳವಡಿಸಬಹುದು. ಒಂದು ಬಾರಿ ಹೀಗೆ ಅಳವಡಿಸಿಕೊಂಡ ಉಪಕರಣ ಸುಮಾರು ಐದರಿಂದ ಹತ್ತು ವರ್ಷಗಳವರೆಗೆ ಸತತವಾಗಿ ಅನೈಚ್ಛಿಕ ಗರ್ಭಧಾರಣೆಯಿಂದ ತಡೆಯುತ್ತದೆ. ಈ ಮೂಲಕ ಅತ್ಯಂತ ಯಶಸ್ವಿ ವಿಧಾನ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದೆ. ಆದರೆ 'ಶಸ್ತ್ರಚಿಕಿತ್ಸೆ' , 'ಶರೀರದಲ್ಲಿಯೇ ಸದಾ ಇರುತ್ತದೆ', 'ತಾಮ್ರದಿಂದ ತನ್ನ ದೇಹಕ್ಕೇನಾಗುತ್ತದೆಯೋ' ಎಂಬೆಲ್ಲಾ ಹುಸಿಭಾವನೆಗಳಿಂದ ಈ ವಿಧಾನವನ್ನು ಅಳವಡಿಸಿಕೊಳ್ಳಲು ಇಂದೂ ಹೆಚ್ಚಿನ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ.

ಅತಿ ಕಡಿಮೆ ಸಂದರ್ಭಗಳಲ್ಲಿ, ಕೆಲವು ಮಹಿಳೆಯರ ದೇಹ ಈ ಉಪಕರಣವನ್ನು ಸ್ವೀಕರಿಸಲು ನಿರಾಕರಿಸಿ ಪ್ರತಿರೋಧ ಒಡ್ಡುತ್ತದೆ. ಈ ಸೂಚನೆಗಳ ಬಗ್ಗೆ ಕೊಂಚವೂ ಸುಳಿವು ವೈದ್ಯರಿಗೆ ಸಿಕ್ಕರೆ ತಕ್ಷಣವೇ ಇದನ್ನು ನಿವಾರಿಸುತ್ತಾರೆ. ಏಕೆಂದರೆ ಈ ಪ್ರತಿರೋಧ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಕೆಲವೊಮ್ಮೆ ಉಪಕರಣದ ತುದಿ ಯಾವುದೋ ಕಾರಣದಿಂದ ಗರ್ಭಾಶಯದೊಳಕ್ಕೂ ಸಾಗಿಬಿಡಬಹುದು. ಇದು ಅಪಾಯಕರವಾಗಿದೆ. ಆದ್ದರಿಂದ ಕಾಲಕಾಲಕ್ಕೆ ಈ ಉಪಕರಣ ಅಳವಡಿಸಿಕೊಂಡ ಮಹಿಳೆಯರು ವೈದ್ಯರಲ್ಲಿ ನಿಯಮಿತವಾಗಿ ತಪಾಸಣೆಗೊಳ್ಳುತ್ತಾ ಇರಬೇಕು.

ಗರ್ಭನಾಳದ ಉಂಗುರ

ಗರ್ಭನಾಳದ ಉಂಗುರ

ಇದೊಂದು ರಸದೂತದಿಂದ ತುಂಬಿದ ಉಂಗುವರೊಂದನ್ನು ಗರ್ಭಕಂಠದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಬಹುದಾದ ವಿಧಾನವಾಗಿದ್ದು ಮಹಿಳೆಯರಿಗೆ ಗರ್ಭನಿರೋಧಕ ಹಾಗೂ ಸೋಂಕಿನಿಂದ ರಕ್ಷಣೆಯೂ ದೊರಕುತ್ತದೆ. ಈ ವಿಧಾನದಲ್ಲಿ ಜನನಾಂಗದ ಆಳದಲ್ಲಿ ಈ ಉಂಗುರವನ್ನು ಅಳವಡಿಸಬೇಕಾದುದರಿಂದ ಹೆಚ್ಚಿನ ಮಹಿಳೆಯರು ಈ ವಿಧಾನವನ್ನು ಇಷ್ಟಪಡುವುದಿಲ್ಲ. ಈ ವಿಧಾನ ಅಳವಡಿಸಿಕೊಂಡ ಮಹಿಳೆಯರಲ್ಲಿ ಈ ಉಂಗುರದಿಂದ ಸ್ರವಿಸುವ ರಸದೂತಗಳು ಜನನಾಂಗದಲ್ಲಿ ಹೀರಲ್ಪಟ್ಟು ರಕ್ತದಲ್ಲಿ ಬೆರೆತುಕೊಳ್ಳುತ್ತವೆ. ಗರ್ಭನಿರೋಧಕ ಮಾತ್ರೆ ಮತ್ತು ಚುಚ್ಚುಮದ್ದುಗಳಲ್ಲಿ ಇವು ಆಹಾರದ ಅಥವಾ ರಕ್ತದ ಮೂಲಕ ಆಗಮಿಸಿರುತ್ತವೆ. ಈ ರಸದೂತಗಳು ಜೀರ್ಣಾಂಗ, ಯಕೃತ್ ಮೊದಲಾದವುಗಳ ಮೂಲಕ ಹೀರಲ್ಪಡುವುದರಿಂದಲೇ ಅಡ್ಡ ಪರಿಣಾಮಗಳು ಎದುರಾಗಿರುತ್ತವೆ. ಆದರೆ ಈ ವಿಧಾನದಲ್ಲಿ ರಸದೂತಗಳು ನೇರವಾಗಿ ಅಗತ್ಯವಿರುವ ಭಾಗದಲ್ಲಿಯೇ ಲಭಿಸುವುದರಿಂದ ಮಾತ್ರೆ-ಚುಚ್ಚುಮದ್ದುಗಳಿಗಿಂತ ಅತಿ ಕಡಿಮೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ.

English summary

Temporary Birth Control Methods For Women

According to statistics, 47.8% women use contraceptives in India, a Hindustan Times report revealed, but they don't really know much about their contraceptives or which is the best contraceptive for them.Contraceptive methods are chosen according to your preference and health status. How exactly the contraception method would impact someone differs from person to person. In this article, we will discuss the various types of temporary birth control methods for women and how exactly they work.
Story first published: Sunday, September 30, 2018, 11:31 [IST]
X
Desktop Bottom Promotion