For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯ ಎಂಟನೆಯ ತಿಂಗಳಲ್ಲಿ ಲೈಂಗಿಕ ಕ್ರಿಯೆ ಸುರಕ್ಷಿತವೇ?

|

ಗರ್ಭಾವಸ್ಥೆಯಲ್ಲಿ ಪ್ರತಿ ಗರ್ಭಿಣಿಗೂ ಹತ್ತು ಹಲವು ಪ್ರಶ್ನೆಗಳು ಹಾಗೂ ಗೊಂದಲಗಳಿರುತ್ತವೆ. ಬೇರೆ ಸಮಯದಲ್ಲಿ ಸೇವಿಸುವ ಆಹಾರ, ನಡೆಸುವ ಕ್ರಿಯೆಗಳು ಈ ಸಮಯದಲ್ಲಿ ಸೂಕ್ತವೇ, ಸೂಕ್ತವಲ್ಲವೇ ಎಂಬ ಪ್ರಶ್ನೆಗಳು ಸಹಜವಾಗಿವೆ. ಇದರಲ್ಲಿ ಪ್ರಮುಖವಾದುದು ಗರ್ಭಾವಸ್ಥೆಯ ಯಾವ ಅವಧಿಯವರೆಗೆ ಮಿಲನ ಸುರಕ್ಷಿತವಾಗಿದೆ ಎಂಬುದು. ಅದರಲ್ಲೂ ಎಂಟನೆಯ ತಿಂಗಳಲ್ಲಿ ಇದು ಅಪಾಯಕಾರಿಯೇ ಎಂಬ ಗೊಂದಲ ಎದುರಾಗುತ್ತದೆ.

ಈ ಬಗ್ಗೆ ತಜ್ಞರು, ಸೂಲಗಿತ್ತಿ ಅಥವಾ ಈ ಅನುಭವ ಮೊದಲೇ ಪಡೆದ ಇತರ ಮಹಿಳೆಯರನ್ನು ಕೇಳಿದಾಗ ಭಿನ್ನ ಭಿನ್ನವಾದ ಉತ್ತರಗಳೇ ದೊರಕಬಹುದು. ಈ ಪ್ರಶ್ನೆ ಗರ್ಭವತಿಗೆ ಮಾತ್ರವಲ್ಲ, ಇವರ ಆರೋಗ್ಯದ ಕಾಳಜಿ ವಹಿಸಿರುವ ಇತರ ವ್ಯಕ್ತಿಗಳಿಗೂ ಚರ್ಚೆಗೆ ಗ್ರಾಸವಾದ ವಿಷಯವಾಗಿದ್ದು ಇದಕ್ಕೆ ಉತ್ತರ ನೀಡುವುದು ಅವರಿಗೂ ಅಷ್ಟು ಸುಲಭವಲ್ಲ.

ಒಂದು ವೇಳೆ ನೀವು ಗರ್ಭವತಿಯಾಗಿದ್ದು ಈ ಅವಧಿಯನ್ನು ನಿರೀಕ್ಷಿಸುತ್ತಿದ್ದರೆ ನಿಮ್ಮ ದೇಹ ಈಗಾಗಲೇ ಹಲವಾರು ಬದಲಾವಣೆಗೆ ಒಳಗಾಗಿದ್ದು ತಿಂಗಳ ಅವಧಿಯಲ್ಲಿ ಹೊಸ ಜೀವವೊಂದನ್ನು ಈ ಜಗತ್ತಿಗೆ ಪರಿಚಯಿಸಲು ದಿನ ಹತ್ತಿರಾಗುತ್ತಿರುತ್ತದೆ. ಪ್ರಥಮ ಮತ್ತು ಕೊನೆಯ ತ್ರೈಮಾಸಿಕ ಅವಧಿಗಳು ಹೆಚ್ಚು ನಾಜೂಕಾಗಿದ್ದು ಈ ಸಮಯದಲ್ಲಿ ಮಿಲನ ಕೂಡದು ಎಂದು ಕೆಲವರು ಹೇಳಿದ್ದು ಇದರಲ್ಲಿ ಹೆಚ್ಚಾಗಿ ಉತ್ಪ್ರೇಕ್ಷೆಯೇ ತುಂಬಿದೆ. ಆದರೆ ಈ ಪ್ರಶ್ನೆಗೆ ಸರಿಯಾದ ಉತ್ತರವನ್ನು ಕೇವಲ ಪ್ರಸೂತಿ ತಜ್ಞರು ಹಾಗೂ ಸ್ತ್ರೀರೋಗ ತಜ್ಞರು ಮಾತ್ರವೇ ನೀಡಬಲ್ಲರು. ಈ ವಿಷಯದ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ಕಂಡುಕೊಂಡ ಉತ್ತರಗಳು ಹೆಚ್ಚಿನ ಗರ್ಭಿಣಿಯರ ಹರ್ಷಕ್ಕೆ ಕಾರಣವಾಗಿದೆ. ಅದೇನೆಂದರೆ ಎಂಟನೆಯ ತಿಂಗಳಲ್ಲಿಯೂ ಮಿಲನ ಕ್ಷೇಮವಾಗಿದೆ.

ಆದರೆ ಈ ಮಿಲನಕ್ಕೆ ವೈದ್ಯರು ಅನುಮತಿ ನೀಡಿದರೆ ಮಾತ್ರ! ಒಂದು ವೇಳೆ ಗರ್ಭವತಿಗೆ ರಕ್ತಸ್ರಾವ, ಜರಾಯು ಜಾರುವಿಕೆ (placenta praevia), ಗರ್ಭಕಂಠ ಸಡಿಲವಾಗಿರುವುದು (cervical weakness), ಗರ್ಭನಾಳದ ಸೋಂಕು (vaginal infections) ಮೊದಲಾದ ತೊಂದರೆಗಳಿದ್ದರೆ ವೈದ್ಯರು ಮಿಲನಕ್ಕೆ ಅನುಮತಿ ನೀಡದೇ ಇರಬಹುದು. ಉಳಿದಂತೆ ಗರ್ಭವತಿಯ ಆರೋಗ್ಯ ಚೆನ್ನಾಗಿದ್ದರೆ ಹಾಗೂ ಮಿಲನದಿಂದ ಯಾವುದೇ ತೊಂದರೆ ಇಲ್ಲದೇ ಇದ್ದರೆ ನಿಮ್ಮ ಮನದನ್ನನಿಗೂ ನೀವೇ ಆಹ್ವಾನ ನೀಡಬಹುದು. ಬನ್ನಿ, ಯಾವ ಕಾರಣಗಳಿಂದಾಗಿ ವೈದ್ಯರು ಈ ಅನುಮತಿ ನೀಡುತ್ತಾರೆ ಎಂಬುದನ್ನು ನೋಡೋಣ...

ನವಮಾಸ ಪೂರೈಸುವ ಖಚಿತತೆ

ನವಮಾಸ ಪೂರೈಸುವ ಖಚಿತತೆ

ಈ ಅವಧಿಯಲ್ಲಿ ಹೆಚ್ಚಿನ ಗರ್ಭವತಿಯರು ಮಿಲನಕ್ಕೆ ನಿರಾಕರಿಸುವ ಕಾರಣವೆಂದರೆ ಅವಧಿಗೂ ಪೂರ್ವ ಮಗುವಿನ ಜನನದ ಸಾಧ್ಯತೆ. ಆದರೆ ಈ ಸಾಧ್ಯತೆ ಎಷ್ಟು ದಟ್ಟವಾಗಿದೆ ಎಂಬುದನ್ನು ಗರ್ಭವತಿಯ ಮತ್ತು ಮಗುವಿನ ಆರೋಗ್ಯವನ್ನು ಪರೀಕ್ಷೆಗಳ ಮೂಲಕ ಪರಿಶೀಲಿಸಿಕೊಂಡು ವೈದ್ಯರೇ ನಿರ್ಧರಿಸುತ್ತಾರೆ. ಎಲ್ಲಿಯವರೆಗೆ ಈ ಪರೀಕ್ಷೆಗಳ ವಿವರಗಳು ವೈದ್ಯರಿಗೇ ಸವಾಲಾಗುವುದಿಲ್ಲವೋ ಅಲ್ಲಿಯವರೆಗೆ ಈ ವಿಷಯದ ಬಗ್ಗೆ ಆತಂಕ ಬೇಡ.

ಮಗುವಿಗೆ ಅಪಾಯವಿಲ್ಲ ತಾನೇ?

ಮಗುವಿಗೆ ಅಪಾಯವಿಲ್ಲ ತಾನೇ?

ಹೆಚ್ಚಿನ ಗರ್ಭವತಿಯರ ಸಾಮಾನ್ಯ ಆತಂಕವೆಂದರೆ ಈ ಅವಧಿಯ ಮಿಲನ ಮಗುವಿನ ಮೇಲೆ ಒತ್ತಡ ಹೇರಿ ಆರೋಗ್ಯಕ್ಕೆ ಮಾರಕವಾಗುವ ಸಾಧ್ಯತೆಯಾಗಿದೆ. ಆದರೆ ಮಗು ನಿಮ್ಮ ಗರ್ಭಾಶಯದಲ್ಲಿ ಅತ್ಯಂತ ಸುರಕ್ಷಿತವಾಗಿದ್ದು ಇದರ ಸುರಕ್ಷತೆಯ ಹೊಣೆಯನ್ನು ನಿಸರ್ಗವೇ ಹೊತ್ತಿರುತ್ತದೆ. ಹಾಗಾಗಿ ಹೊಟ್ಟೆಯ ಮೇಲೆ ಭಾರ ಬೀಳುವ ಅಪಾಯದ ಬಗ್ಗೆ ಎಚ್ಚರಿಕೆ ವಹಿಸಿದರೆ ಸಾಕು, ಬೇರೇನೂ ತೊಂದರೆ ಇಲ್ಲ.

ಭಾವನಾತ್ಮಕ ಆರೋಗ್ಯ

ಭಾವನಾತ್ಮಕ ಆರೋಗ್ಯ

ಗರ್ಭವತಿಯ ಯೋಚನೆಗಳು ಈ ಸಮಯದಲ್ಲಿ ಮಗುವಿಗೂ ತಲುಪುತ್ತದೆ ಎಂದು ಹೇಳಲಾಗುತ್ತದೆ. ಅಭಿಮನ್ಯು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಚಕ್ರವ್ಯೂಹದೊಳಗೆ ನುಗ್ಗುವ ಕಲೆಯನ್ನು ತಿಳಿದಿದ್ದನಂತೆ. ಈ ಸಮಯದಲ್ಲಿ ಮಿಲನ ಗರ್ಭವತಿಯ ಮಾನಸಿಕ ದುಗುಡವನ್ನು ಕಡಿಮೆಗೊಳಿಸುತ್ತದೆ ಹಾಗೂ ಪ್ರಿಯನ ಬಾಹುಗಳಲ್ಲಿ ಹೆಚ್ಚಿನ ಸುರಕ್ಷತೆಯನ್ನು ಅನುಭವಿವುದರಿಂದ ಈ ಕ್ರಿಯೆ ಅಗತ್ಯವೂ ಹಾಗೂ ಗರ್ಭಾವಸ್ಥೆಯನ್ನು ಆಹ್ಲಾದಕರವಾಗಿಸಲು ನೆರವಾಗುತ್ತದೆ.

ಪ್ರಿಯಕರನೊಂದಿಗಿನ ಬಾಂಧವ್ಯ ಉತ್ತಮಗೊಳ್ಳುತ್ತದೆ

ಪ್ರಿಯಕರನೊಂದಿಗಿನ ಬಾಂಧವ್ಯ ಉತ್ತಮಗೊಳ್ಳುತ್ತದೆ

ಸಾಮಾನ್ಯವಾಗಿ ಪುರುಷರಿಗೆ ತಮ್ಮ ಪತ್ನಿಯ ಒಡನಾಟ ಹೆಚ್ಚಿನ ಸಮಯದವರೆಗೆ ಮುಂದುವರೆಸುವುದು ಇಷ್ಟವಿರುತ್ತದೆ. ಆದರೆ ನಿಮ್ಮ ಆರೋಗ್ಯದ ಬಗೆಗಿನ ಕಾಳಜಿ ಅವರಿಗೆ ಈ ಬಯಕೆಯನ್ನು ತೋರ್ಪಡಿಸದೇ ಇರಲು ಕಾರಣವಾಗಬಹುದು. ಆದರೆ ಈ ತಿಂಗಳಲ್ಲಿಯೂ ಮಿಲನ ಸುರಕ್ಷಿತ ಎಂದು ವೈದ್ಯರು ಹೇಳಿದರೆ ನಿಮ್ಮ ದಾಂಪತ್ಯ ಇನ್ನಷ್ಟು ಗಟ್ಟಿಗೊಳ್ಳಬಹುದು.

ಪರಾಕಾಷ್ಠೆಯೂ ಆರೋಗ್ಯಕರ

ಪರಾಕಾಷ್ಠೆಯೂ ಆರೋಗ್ಯಕರ

ಮಿಲನಕ್ರಿಯೆಯ ಕೊನೆಯ ಹಂತದ ಪರಾಕಾಷ್ಠೆಯ ಸಮಯದಲ್ಲಿ ಎದುರಾಗುವ ಅನುಭವಗಳಿಂದ ಮಗುವಿನ ಆರೋಗ್ಯಕ್ಕೆ ಯಾವ ತೊಂದರೆಯೂ ಇಲ್ಲ. ಗರ್ಭಾಶಯದಲ್ಲಿರುವ ಮಗುವನ್ನು ಗಾಢವಾದ ದ್ರವ ಸುತ್ತುವರೆದಿದ್ದು ಇದು ಗರ್ಭಕಂಠ, ಆಮ್ನಿಯಾಟಿಕ್ ಚೀಲ ಹಾಗೂ ಗರ್ಭಕೋಶದ ಸ್ನಾಯುಗಳು ಸುರಕ್ಷಿತವಾಗಿರಿಸುತ್ತವೆ.

ಆದರೆ ಸುರಕ್ಷತೆಯ ಬಗ್ಗೆ ಗಮನವಿರಲಿ

ಆದರೆ ಸುರಕ್ಷತೆಯ ಬಗ್ಗೆ ಗಮನವಿರಲಿ

ಈ ಬಗ್ಗೆ ದಂಪತಿಗಳಿಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕು. ಹೊಟ್ಟೆಯ ಮೇಲೆ ಭಾರ ಬೀಳುವ ಯಾವುದೇ ಭಂಗಿಯನ್ನು ಅನುಸರಿಸಕೂಡದು. ಆದರೆ ಪ್ರೀತಿಗಾಗಿ ದೈಹಿಕ ಸಂಪರ್ಕವೇ ಸದಾ ಆಗಬೇಕಾಗಿಲ್ಲ. ಬದಲಿಗೆ ಅತ್ಮೀಯ ಅಪ್ಪುಗೆ, ಚುಂಬನ, ಪಾದಗಳ ಮಸಾಜ್ ಮೊದಲಾದವೇ ಸಾಕಾಗಬಹುದು. ಈ ಅವಧಿಯಲ್ಲಿ ಮಿಲನ ಸುರಕ್ಷಿತವೇ ಎಂಬುದನ್ನು ನಿಮ್ಮ ವೈದ್ಯರು ಹೇಳುವವರೆಗೂ ಈ ಬಗ್ಗೆ ಮುಂದುವರೆಯದಿರಿ. ಗರ್ಭಾವಸ್ಥೆಯಲ್ಲಿ ಗರ್ಭಿಣಿ ಹಾಗೂ ಮಗುವಿನ ಆರೋಗ್ಯವೇ ಪ್ರಥಮ ಪ್ರಾಶಸ್ತ್ಯದ್ದಾಗಿದ್ದು ಈ ಬಗ್ಗೆ ಹೆಚ್ಚಿನ ಕಾಳಜಿಯನ್ನು ದಂಪತಿಗಳಿಬ್ಬರೂ ವಹಿಸಬೇಕು.

English summary

Is It Really Safe To Have Sex During 8th Month Of Pregnancy

Once you are pregnant you will be tied by many doubts and confusions. Everything that you otherwise did will become great questions in front of you. Is it safe to have intercourse during 8th month of pregnancy is one among those doubts. Making love during pregnancy is a controversial matter where you will get ten answers if you ask to ten women. When love making during pregnancy itself is a subject of debate, there is no wonder if you consider intercourse during 8th month of pregnancy clueless.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X