ಗರ್ಭಾವಸ್ಥೆಯಲ್ಲಿ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಜಾಗ್ರತೆಯಾಗಿರಬೇಕು!

Posted By: Divya pandith
Subscribe to Boldsky

ಮಹಿಳೆಯರಿಗೆ ಗರ್ಭಾವಸ್ಥೆಯು ಒಂದು ಅತ್ಯಂತ ಪ್ರಮುಖವಾದ ಸಮಯ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಹಿಳೆಯರ ದೇಹ ಹಾಗೂ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ. ಇವರ ಆರೋಗ್ಯದ ಸ್ಥಿತಿ-ಗತಿಯ ಆಧಾರದ ಮೇಲೆಯೇ ಮಗುವಿನ ಬೆಳವಣಿಗೆ ಅವಲಂಭಿಸಿರುತ್ತದೆ. ಆದ್ದರಿಂದ ತಾಯಿ ಮಲಗುವಾಗ, ಓಡಾಡುವಾಗ, ಕುಳಿತುಕೊಳ್ಳುವಾಗ ಮತ್ತು ಆಹಾರ ಸೇವನೆ ಮಾಡುವಾಗ ಕೆಲವು ಸೂಕ್ತ ಕ್ರಮದಲ್ಲಿ ದೇಹದ ಭಂಗಿಯನ್ನು ಇರಿಸಿಕೊಳ್ಳಬೇಕಾಗುತ್ತದೆ.

ಒಂಬತ್ತು ತಿಂಗಳಕಾಲ ತನ್ನ ಮಡಿಲಲ್ಲಿ ಮಗುವನ್ನು ಹೊತ್ತಿರುವ ಗರ್ಭಿಣಿಯು ಅನೇಕ ಬಗೆಯ ದೈಹಿಕ ಆರೋಗ್ಯದ ವಿಭಿನ್ನತೆಯನ್ನು ಅನುಭವಿಸಬೇಕಾಗುತ್ತದೆ. ಕೆಲವೊಂದು ಅಸ್ವಸ್ಥತೆಯು ಅಧಿಕ ಪ್ರಮಾಣದ ತೊಂದರೆಗೆ ಕಾರಣವಾಗಬಹುದು. ಅಂತಹ ಸಮಸ್ಯೆಗಳಿಂದ ಪಾರಾಗಲು ಇರುವ ಒಂದು ಉತ್ತಮ ಮಾರ್ಗವೆಂದರೆ ಗರ್ಭಾವಸ್ಥೆಯಲ್ಲಿ ಉತ್ತಮ ದೇಹ ಭಂಗಿಯನ್ನು ನಿರ್ವಹಿಸುವುದು.

Pregnancy

ಗರ್ಭಿಣಿಯ ದೇಹದ ಆರೋಗ್ಯವು ಬಹಳ ಸೂಕ್ಷ್ಮವಾಗಿರುತ್ತದೆ. ದೇಹವು ಭಾರ ಮತ್ತು ಸೂಕ್ಷ್ಮತೆಯಿಂದ ಕೂಡಿರುವುದಕ್ಕೆ ಕೆಲವು ದೇಹ ಭಂಗಿಯನ್ನು ಅನುಸರಿಸಲೇ ಬೇಕಾಗುವುದು. ಅವು ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು. ಆದರೆ ಉತ್ತಮ ಫಲಿತಾಂಶವನ್ನು ನೀಡುತ್ತವೆ. ಹಾಗಾದರೆ ಬನ್ನಿ, ಉತ್ತಮ ದೇಹ ಭಂಗಿಯ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಪಡೆಯೋಣ...

ಗರ್ಭಾವಸ್ಥೆಯಲ್ಲಿ ನಿಲ್ಲುವುದು ಹೇಗೆ?

ತಲೆಯನ್ನು ನೇರವಾಗಿ ಎತ್ತಿ, ಗಲ್ಲವನ್ನು ತಲೆಯ ನೇರಕ್ಕೆ ಎತ್ತಿರಬೇಕು. ತಲೆಯ ಹಿಂಭಾಗದಲ್ಲಿ ಅತಿಯಾಗಿ ಹಿಂದಕ್ಕೆ ಅಥವಾ ಜೋತು ಬಿದ್ದಂತೆ ಇರಿಸಬಾರದು.

Pregnancy

ಭುಜ

ಭುಜವನ್ನು ನಿಮ್ಮ ದೇಹಕ್ಕೆ ಸರಿಯಾಗಿ ಮಧ್ಯ ಭಾಗದಲ್ಲಿ ಇರುವಂತೆ ಇರಬೇಕು. ಅತಿಯಾಗಿ ಜೋತು ಬಿದ್ದಂತೆ ಇರಿಸಿಕೊಂಡಿರಬಾರದು.

ಎದೆಯ ಭಂಗಿ

ಎದೆಯನ್ನು ಭುಜದ ಸಮಕ್ಕೆ ಎತ್ತಿ ಹಿಡಿದಂತೆ ನಿಲ್ಲಬೇಕು. ಆಗ ನಿಮ್ಮ ಬೆನ್ನು ನೇರವಾದ ಭಂಗಿಗೆ ಬರುವುದು. ಇದು ನಿಮಗೆ ಆರಾಮದಾಯಕ ಅನುಭವ ನೀಡುವುದು.

ಮೊಣಕಾಲು

ನೀವು ನಿಲ್ಲುವಾಗ ಮೊಣಕಾಲನ್ನು ಬಗ್ಗಿಸದೆ ನಿಲ್ಲಬೇಕು. ಕುಳಿತುಕೊಳ್ಳುವಾಗ ಕಾಲನ್ನು ನೀಡಿ, ನೇರವಾಗಿ ಕುಳಿತು ಕೊಳ್ಳುವುದರಿಂದ ರಕ್ತ ಸಂಚಾರ ಸುಗಮಗೊಳ್ಳುವುದು.

ಸೊಂಟದ ಸ್ಥಾನ

ನಿಮ್ಮ ಸೊಂಟವನ್ನು ಹಿಂಭಾಗಕ್ಕೆ ಅಥವಾ ಮುಂಭಾಗಕ್ಕೆ ಭಾಗಿಕೊಂಡಂತೆ ಇರಬಾರದು. ನಿಮ್ಮ ಪೃಷ್ಟದೊಳಗೆ ಒಳಮುಖವಾಗಿ ಹಿಡಿದುಕೊಂಡಂತೆ ಇರಬೇಕು.

ತೂಕದ ಸಮತೋಲನ

ಗರ್ಭಾವಸ್ಥೆಯಲ್ಲಿ ದೇಹದ ತೂಕವು ಹೆಚ್ಚಾಗಿರುತ್ತದೆ. ಆಗ ಎರಡು ಪಾದಗಳು ಒಂದೇ ಮಾರ್ಗದಲ್ಲಿ ಇರುವಂತೆ ಇರಿಸಿ ಭಾರವನ್ನು ಹೊರಬೇಕು.

ಪಾದರಕ್ಷೆ

ಗರ್ಭಾವಸ್ಥೆಯಲ್ಲಿರುವಾಗ ಎತ್ತರದ ಹಿಮ್ಮಡಿ ಇರುವ ಪಾದರಕ್ಷೆಯನ್ನು ಧರಿಸದಿರಿ. ಇದು ನಿಮ್ಮ ಗರ್ಭದ ಮೇಲೆ ಪ್ರಭಾವ ಬೀರುವುದು. ಆದಷ್ಟು ಮೃದುವಾದ ಹಾಗೂ ಎತ್ತರದ ಹಿಂಭಾಗ ಇಲ್ಲದ ಪಾದರಕ್ಷೆಯನ್ನು ಧರಿಸಬೇಕು.

ತುಂಬಾ ಸಮಯ ನಿಂತರಬೇಡಿ

ಒಂದೇ ಭಂಗಿಯಲ್ಲಿ ಅಧಿಕ ಸಮಯದವರೆಗೆ ನಿಂತಿರಬೇಡಿ. ಆಗಾಗ ಚಿಕ್ಕದಾದ ನಡಿಗೆ ಹಾಗೂ ವಿಶ್ರಾಂತಿಯನ್ನು ಹೊಂದಿ.

Pregnancy

ಕುಳಿತುಕೊಳ್ಳುವ ಬಗೆ

ಪ್ರತಿ ಭಾರಿ ಕುಳಿತುಕೊಳ್ಳುವಾಗ ನಿಮ್ಮ ಬೆನ್ನಿಗೆ ಯಾವುದಾದರೂ ಆಧಾರ ಉದಾರಣೆಗೆ: ಗೋಡೆ, ಕುರ್ಚಿಗೆ ಒರಗಿಕೊಂಡು ಕುಳಿತುಕೊಳ್ಳಿ. ಇದರಿಂದ ಬೆನ್ನಿನ ಹುರಿ/ಮೂಳೆ ನೇರವಾಗಿರುವಂತೆ ಮಾಡುತ್ತದೆ. ಜೊತೆಗೆ ಆರಾಮದಾಯಕ ಅನುಭವ ಉಂಟಾಗುವುದು.

ಬೆನ್ನಿಗೆ ಆಧಾರ

ಕುಳಿತುಕೊಳ್ಳುವಾಗ ಬೆನ್ನಿಗೆ ಸರಿಯಾದ ಆಧಾರವನ್ನು ನೀಡಿ ಕುಳಿತುಕೊಳ್ಳಬೇಕು. ಮೇಜಿನ ಮೇಲೆ ಕುಳಿತುಕೊಳ್ಳುವಾಗ ಬೆನ್ನಿಗೆ ತಲೆ ದಿಂಬನ್ನು ಅಥವಾಮಾರುಕಟ್ಟೆಯಲ್ಲಿ ಗರ್ಭಿಣಿಯರಿಗೆ ಸಿಗುವ ಬೆನ್ನಿನ ಆಧಾರದ ರೋಲ್‍ಗಳನ್ನು ಉಪಯೋಗಿಸಿ ಕುಳಿತುಕೊಳ್ಳಬಹುದು. ಅಥವಾ ಸಣ್ಣ ಟವೆಲ್‍ಅನ್ನು ಸುರುಳಿಯಾಕೃತಿಯಲ್ಲಿ ಸುತ್ತಿ, ಆಧಾರವಾಗಿಟ್ಟುಕೊಂಡು ಕುಳಿತುಕೊಳ್ಳಬಹುದು.

ಅಧಿಕ ಸಮಯ ಕುಳಿತಿರುವ ಭಂಗಿ

ಚಲನ ಚಿತ್ರ ವೀಕ್ಷಣೆ, ಪುಸ್ತಕ ಓದುವುದು ಅಥವಾ ಇನ್ಯಾವುದೋ ವಿಚಾರಕ್ಕೆ ದೀರ್ಘ ಸಮಯದ ವರೆಗೆ ಒಂದೇ ಭಂಗಿಯಲ್ಲಿ ಕುಳಿತಿರಬಾರದು. ಹದಿನೈದು ನಿಮಿಷಕ್ಕೊಮ್ಮೆಯಾದರೂ ಭಂಗಿಯನ್ನು ಬದಲಿಸಬೇಕು.

ಕುರ್ಚಿಯನ್ನು ಹೊಂದಿಸಿಕೊಳ್ಳುವುದು

ವಿಶ್ರಾಂತಿ ಹೊಂದುವಾಗ ಕುರ್ಚಿಯನ್ನು ಸೂಕ್ತ ರೀತಿಯಲ್ಲಿ ಇರಿಸಿಕೊಂಡಿರಬೇಕು. ಕೈತೋಳು ಮತ್ತು ಭುಜವನ್ನು ಕುರ್ಚಿಗೆ ಒರಗಿಕೊಂಡು, ಆರಾಮದಾಯಕವಾಗಿ ಕುಳಿತಿರಲು ಅನುಕೂಲವಾಘುವಂತೆ ಕುರ್ಚಿಯನ್ನು ಹೊಂದಿಸಿಕೊಳ್ಳಬೇಕು.

ಸೊಂಟ ತಿರುಗಿಸಬೇಡಿ

ಗರ್ಭಾವಸ್ಥೆಯಲ್ಲಿ ಸೊಂಟವು ಬಹಳ ಸೂಕ್ಷ್ಮ ಹಾಗೂ ಮಗುವಿಗೆ ನೇರವಾಗಿ ಸಂಬಂಧಿಸಿರುತ್ತದೆ. ಕೆಲವು ಸಂದರ್ಭದಲ್ಲಿ ನೀವು ಹಿಂತಿರುಗಿ ನೋಡಬೇಕಾದಾಗ ಇಡೀ ದೇಹವನ್ನೇ ತಿರುಗಿಸಿ ನೋಡಿ. ಕೇವಲ ಸೊಂಟವನ್ನೇ ತಿರುಗಿಸಿ ನೋಡಬಾರದು. ಇದರಿಂದ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ.

ಕುಳಿತಲ್ಲಿಂದ ಏಳುವಾಗ

ಗರ್ಭಿಣಿಯರು ತಾವು ಬಹುಕಾಲ ಕುಳಿತಿರುವ ಸ್ಥಳದಿಂದ ಏಳುವಾಗ ಮುಂದೆ ಭಾಗಿ ಎದ್ದೇಳಬಾರದು. ಆದಷ್ಟು ನೇರವಾಗಿ, ಕಾಲುಗಳ ಮೇಲೆ ಭಾರ ಹಾಕಿ ನಿಲ್ಲಬೇಕು.

ಹಿಗ್ಗಿಸುವ ವ್ಯಾಯಾಮ

ಗರ್ಭಾವಸ್ಥೆಯಲ್ಲಿ ವ್ಯಾಯಾಮ ಮಾಡುವಾಗ ದೇಹವನ್ನು ಮತ್ತು ಬೆನ್ನನ್ನು ಹಿಗ್ಗಿಸುವ ಪ್ರಯತ್ನ ಮಾಡಬೇಡಿ.

ಬೆನ್ನಿನ ನೋವಿದ್ದರೆ

ನಿಮಗೆ ಬೆನ್ನು ನೋವಿದ್ದರೆ ದೀರ್ಘ ಸಮಯದ ತನಕ ಕುಳಿತುಕೊಳ್ಳಬೇಡಿ. ಒಂದು 10 ನಿಮಿಷದ ಬಳಿಕ ಭಂಗಿಯನ್ನು ಬದಲಾಯಿಸಿ.

ಗರ್ಭಾವಸ್ಥೆಯಲ್ಲಿ ಮಲಗುವ ಭಂಗಿ

ಗರ್ಭಾವಸ್ಥೆಯಲ್ಲಿರುವಾಗ ಮಲಗುವ ಭಂಗಿಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಮಲಗುವಾಗ ನೇರವಾಗಿ ಬೆನ್ನಿನ ಭಾಗ ಕೆಳಗೆ ಹೊಟ್ಟೆಯ ಭಾಗ ಮೇಲೆ ಬರುವಂತೆ ಮಲಗ ಬಾರದು. ಇದು ಮಗುವಿನ ಹೃದಯ ಬಡಿತಕ್ಕೆ ಹಾಗೂ ರಕ್ತ ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ.

ಬೆನ್ನಿನ ಮೇಲೆ ಮಲಗುವುದು

ಗರ್ಭಾವಸ್ಥೆಯಲ್ಲಿ ಬೆನ್ನಿನ ಮೇಲೆ ಮಲಗುವುದು ತಪ್ಪಾದ ಭಂಗಿ. ಹೀಗೆ ಮಲಗುವುದರಿಂದ ಇನ್ನಷ್ಟು ಬೆನ್ನುನೋವು ಹಾಗೂ ಮಗುವಿನ ಮೇಲೆ ಪ್ರಭಾವ ಉಂಟಾಗುತ್ತದೆ.

ಸೂಕ್ತ ರೀತಿಯಲ್ಲಿ ಮಲಗುವ ಭಂಗಿ

ಮಲಗುವಾಗ ಎಡ ಅಥವಾ ಬಲ ಭಾಗದ ಭಂಗಿಯಲ್ಲಿ ಮಲಗಬೇಕು. ಎಡ ಮಗ್ಗುಲಲ್ಲಿ ಮಲಗುವುದರಿಂದ ಮಗುವಿಗೆ ಮತ್ತು ತಾಯಿಗೆ ಉತ್ತಮವಾದದ್ದು. ಇದರಿಂದ ಮಗುವಿಗೆ ರಕ್ತ ಸಂಚಾರವು ಸುಗಮವಾಗುವುದು.

Pregnancy

ಗರ್ಭಿಣಿಯರಾಗಿರುವಾಗ ಭಾರ ಎತ್ತುವುದು

ಭಾರವಾದ ವಸ್ತುವನ್ನು ಎತ್ತುವ ಗೋಜಿಗೆ ಹೋಗಬಾರದು. ಆದಷ್ಟು ಬೇರೆಯವರ ಬಳಿ ಸಹಾಯವನ್ನು ಪಡೆದು ಕೆಲಸ ಮಾಡಿ.

ದೃಢವಾದ ಹಿಡಿತ ಹೊಂದಿ

ನೀವು ವಸ್ತುಗಳನ್ನು ಎತ್ತುವ ಮೊದಲು ನಿಮ್ಮ ಪಾದದ ಹಿಡಿತ ಹಾಗೂ ದೇಹದ ಹಿಡಿತ ಸೂಕ್ತರೀತಿಯಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಸೋಂಟಕ್ಕಿಂತ ಕೆಳಭಾಗದಲ್ಲಿ ಇರುವ ವಸ್ತುಗಳು

ನೆಲದ ಮೇಲೆ ಇರುವ ವಸ್ತುವನ್ನು ತೆಗೆದುಕೊಳ್ಳುವಾಗ ಆದಷ್ಟು ಮೊಣಕಾಲನ್ನು ಭಾಗಿಸಿ ವಸ್ತುಗಳನ್ನು ಎತ್ತಿ. ಹಾಗೆಯೇ ವಸ್ತುಗಳನ್ನು ನೆಲಕ್ಕಿಡುವಾಗ ಮೊಣಕಾಲನ್ನು ಭಾಗಿಸಿ, ಕೈಗಳನ್ನು ನೆಲಕ್ಕೆ ಊರಿ ವಸ್ತುಗಳನ್ನು ಕೆಳಕ್ಕಿಡಿ.

ವಸ್ತುಗಳನ್ನು ಹಿಡಿದುಕೊಳ್ಳುವಾಗ

ಭಾರವಾದ ವಸ್ತುವನ್ನು ಹಿಡಿದುಕೊಳ್ಳುವಾಗ ಹೊಟ್ಟೆಯನ್ನು ಆಧಾರವಾಗಿ ಇಟ್ಟುಕೊಳ್ಳಬಾರದು. ಲಘುವಾದ ವಸ್ತುವನ್ನು ಹಿಡಿದುಕೊಳ್ಳುವುದು ಮತ್ತು ಸ್ತೀರವಾದ ಕ್ರಮವನ್ನು ಅನುಸರಿಸಬೇಕು.

ವಸ್ತು ನಿಮ್ಮ ತಲೆಯ ಮಟ್ಟಕ್ಕಿಂತ ಎತ್ತರದಲ್ಲಿದ್ದರೆ

ವಸ್ತು ನಿಮ್ಮ ತಲೆಯ ಮಟ್ಟಕ್ಕಿಂತ ಎತ್ತಿರದಲ್ಲಿದ್ದಾಗ ಆದಷ್ಟು ಅದನ್ನು ತೆಗೆಯುವ ಪ್ರಯತ್ನಕ್ಕೆ ಹೋಗದಿರಿ. ಅದು ಭಾರವಲ್ಲದ ವಸ್ತುವಾಗಿದ್ದರೆ ಮಾತ್ರ ತೆಗೆಯಿರಿ. ಆಗ ಹೆಚ್ಚಿನ ಅಪಾಯದಿಂದ ದೂರ ಉಳಿಯಬಹುದು.

ಹತ್ತುವ ಪ್ರಯತ್ನ ಬೇಡ

ನಿಮ್ಮ ವ್ಯಾಪ್ತಿಗಿಂತ ಎತ್ತರದಲ್ಲಿರುವ ವಸ್ತುವನ್ನು ಪಡೆಯಲು ಏಣಿ ಅಥವಾ ಇನ್ನಿತರ ವಸ್ತುಗಳ ಸಹಾಯ ಪಡೆದು ಏರುವ ಪ್ರಯತ್ನವನ್ನು ಮಾಡದಿರಿ. ಇದರಿಂದ ಆಯ ತಪ್ಪಿ ನೀವು ಕೆಳಗೆ ಬೀಳುವ ಸಾಧ್ಯತೆಗಳಿರುತ್ತವೆ. ಅಂತಹ ಸಂದರ್ಭದಲ್ಲಿ ಬೇರೆಯವರ ಸಹಾಯವನ್ನು ಪಡೆದುಕೊಳ್ಳಿ.ನಿಮ್ಮ ಎರಡು ಕೈಗಳನ್ನು ಬಳಸಿ ಮೇಲಿರುವ ಹಗುರವಾದ ವಸ್ತುವನ್ನು ಪಡೆಯಲು ಎರಡು ಕೈಗಳನ್ನು ಬಳಸಿ ತೆಗೆಯಿರಿ. ಕೇವಲ ಒಂದೇ ಕೈಗಳನ್ನು ಬಳಸಿದರೆ ಅಪಾಯ ಉಂಟಾಗುವ ಸಾಧ್ಯತೆಗಳಿವೆ.

English summary

The Best Body Posture To Follow During Pregnancy

Pregnancy is counted among the best times in a woman's life. Women tend to cherish this time and look back at it with fondness for the rest of their lives. But the duration of pregnancy is not always a bed of roses. Lucky are those women who sail through the nine months of pregnancy. Most women face problems during this time that range from minor discomfort to major issues. One way to avoid complications and trouble during this time is to maintain a good body posture during pregnancy.