Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಾವಸ್ಥೆಯಲ್ಲಿ ಇದೆಲ್ಲಾ ಮಾಮೂಲು, ಭಯಪಡದಿರಿ!
ಸ್ತ್ರೀಯು ಗರ್ಭವತಿಯಾಗುವ ಸಂದರ್ಭದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡುಕೊಳ್ಳುತ್ತಾಳೆ. ತನ್ನ ದೇಹದ ತೂಕ
ಹೆಚ್ಚಾಗುವುದು, ಸುಸ್ತು ಉಂಟಾಗುವುದು, ವಾಂತಿ, ವಾಕರಿಕೆ, ಹುಳಿ ಪದಾರ್ಥಗಳನ್ನು ತಿನ್ನುವ ಬಯಕೆ, ಒತ್ತಡ, ಅತಿಯಾದ ಕೋಪ, ದುಃಖ ಉಂಟಾಗುವುದು ಹೀಗೆ ಹಲವಾರು ಪರಿಸ್ಥಿತಿಗಳು ಆಕೆಯನ್ನು ಕಾಡುತ್ತವೆ. ಇನ್ನೊಂದು ಜೀವದ ಬೆಳವಣಿಗೆಯನ್ನು ದೇಹವು ಸ್ವೀಕರಿಸಿದಾಗ ಈ ಎಲ್ಲಾ ಬದಲಾವಣೆಗಳು ಸರ್ವೇ ಸಾಮಾನ್ಯವಾಗಿ ಆಕೆಯನ್ನು ಕಾಡುತ್ತದೆ.

ಇದರ ಜೊತೆಗೆ ತ್ವಚೆಯಲ್ಲಿ ಉಂಟಾಗುವ ಬದಲಾವಣೆಗಳೊಂದಿಗೆ ಆಕೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ತಾಯ್ತನದ ನವ ಕಳೆ ತ್ವಚೆಯಲ್ಲಿ ಕಾಣಲು ಆರಂಭಿಸಿದಾಗ ಹೊಳೆಯುವ ಆರೋಗ್ಯವಂತ ತ್ವಚೆಯನ್ನು ಆಕೆ ಪಡೆದುಕೊಳ್ಳುತ್ತಾಳೆ. ರಕ್ತದ ಪೂರೈಕೆ ಚೆನ್ನಾಗಿ ನಡೆದರೂ ತ್ವಚೆಯು ಕೆಲವೊಮ್ಮೆ ಮೊಡವೆ, ಕಪ್ಪು ಕಲೆಗಳನ್ನು ಪಡೆಯುವ ಸಾಧ್ಯತೆ ಇರುತ್ತದೆ. ಗರ್ಭಾವಸ್ಥೆಯಲ್ಲಿನ ತುರಿಕೆಗೆ ಮನೆಮದ್ದೇ ಎಂದಿಗೂ ಬೆಸ್ಟ್
ಹಾರ್ಮೋನು ಬದಲಾವಣೆಗಳಿಂದ ಈ ಎಲ್ಲಾ ಅಂಶಗಳು ತಾಯಿಯ ತ್ವಚೆಯಲ್ಲಿ ಕಂಡುಬರುವುದರಿಂದ ಇದಕ್ಕಾಗಿ ಚಿಂತೆ ಪಡುವ ಅವಶ್ಯಕತೆ ಇಲ್ಲ.ಇಂದಿನ ಲೇಖನದಲ್ಲಿ ತಾಯ್ತನದ ಸಂಭ್ರಮದಲ್ಲಿರುವಾಗಲೇ ತ್ವಚೆಯು ಕಂಡುಕೊಳ್ಳುವ ಬದಲಾವಣೆಗಳನ್ನು ನಾವು ತಿಳಿಸುತ್ತಿದ್ದು ಇದರಿಂದ ನೀವು ಗಾಬರಿ ಪಟ್ಟುಕೊಳ್ಳುವುದು ಕಡಿಮೆಯಾಗುತ್ತದೆ.
ಆರೋಗ್ಯವಂತ ಹೊಳಪುಳ್ಳ ತ್ವಚೆ
ಗರ್ಭಾವಸ್ಥೆ ಸಂದರ್ಭದಲ್ಲಿ ಸ್ತ್ರೀಯ ದೇಹವು ಹಲವಾರು ಹಾರ್ಮೋನು ಬದಲಾವಣೆಗಳಿಗೆ ಒಳಗಾಗುತ್ತದೆ. ಹಾರ್ಮೋನು ಹಂತಗಳ ಈ ಬದಲಾವಣೆಯಿಂದಾಗಿ ತ್ವಚೆಯು ಎಣ್ಣೆಯ ಉತ್ಪನ್ನವನ್ನು ಅಧಿಕವಾಗಿಸುತ್ತದೆ ಮತ್ತು ಇದರಿಂದ ತ್ವಚೆಯು ಹೊಳೆಯುತ್ತದೆ. ಹಾರ್ಮೋನುಗಳ ಈ ಬದಲಾವಣೆಯಿಂದಾಗಿ ತ್ವಚೆಯು ಸುಂದರವಾಗಿ ಹೊಳೆಯುತ್ತದೆ. ತಾಯಿ ಮಗುವಿನ ಆರೋಗ್ಯಕ್ಕಾಗಿ-'ಕೊಬ್ಬರಿ ಎಣ್ಣೆ'
ಹೆಚ್ಚಿದ ರಕ್ತ ಪೂರೈಕೆ
ಗರ್ಭಾವಸ್ಥೆಯ ಎರಡನೇ ತ್ರೈಮಾಸಿಕದಲ್ಲಿ ತಾಯಿಯಲ್ಲಿ ಮೊಗದಲ್ಲಿ ತಾಯ್ತನದ ಕಳೆ ವಿಜೃಂಭಿಸುತ್ತಿರುತ್ತದೆ. ಹೊಟ್ಟೆಯಲ್ಲಿ ಶಿಶುವು ಬೆಳೆಯುತ್ತಿರುವಂತೆ, ಅಂಗಗಳಿಗೆ ರಕ್ತದ ಪೂರೈಕೆಯನ್ನು ದೇಹವು ಹೆಚ್ಚಿಸುತ್ತದೆ. ಹೊಸ ಜೀವಕ್ಕೆ ಬೆಂಬಲವನ್ನು ಒದಗಿಸುವ ಕಾರ್ಯವನ್ನು ದೇಹವು ಮಾಡುತ್ತಿರುತ್ತದೆ. ಇದು ಸಾಮಾನ್ಯಕ್ಕಿಂತ 50% ಅಧಿಕವಾಗಿರುತ್ತದೆ ಅಂತೆಯೇ ತಾಯ್ತನದ ಅನುಭೂತಿಯನ್ನು ಅನುಭವಿಸಲು ಸಿದ್ಧ ಪಡಿಸುತ್ತದೆ. ಗರ್ಭದಲ್ಲಿರುವ ಕಂದಮ್ಮನ ತುಂಟಾಟ ಹೇಗಿರುತ್ತೆ ನೋಡಿ...
ತ್ವಚೆಯಲ್ಲಿ ಮೊಡವೆ
ಜಿಡ್ಡಿನ ತ್ವಚೆಯನ್ನು ಹೊಂದಿರುವವರಿಗೆ ಈ ಸಂದರ್ಭದಲ್ಲಿ ಮೊಡವೆ ಸಾಮಾನ್ಯವಾಗಿರುತ್ತದೆ. ಮೇದೋ ಗ್ರಂಥಿಯಲ್ಲಿ ಹಾರ್ಮೋನು ಪ್ರೊಜೆಸ್ಟರಾನ್ ಅಧಿಕ ಜಿಡ್ಡನ್ನು ಉತ್ಪಾದಿಸುತ್ತದೆ. ಇದರಿಂದ ತ್ವಚೆಯು ಮುರಿತಕ್ಕೊಳಗಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ.
ಕಪ್ಪು ಕಲೆಗಳು ಅಥವಾ ಚಲೋಸ್ಮಾ
ನಾಣ್ಯಕ್ಕೆ ಎರಡು ಮುಖವಿದ್ದಂತೆ, ಗರ್ಭಾವಸ್ಥೆಯಲ್ಲಿ ಕೂಡ ಸ್ತ್ರೀಗೆ ಸಂತಸ ಮತ್ತು ದುಃಖ ಇದ್ದೇ ಇರುತ್ತದೆ. ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿ ಆರೋಗ್ಯವಂತ ಹೊಳೆಯುವ ತ್ವಚೆಯನ್ನು ಪಡೆದುಕೊಂಡರೆ, ಕೆಲವರು ಕಹಿ ಭಾಗವನ್ನು ಅನುಭವಿಸಬೇಕಾಗುತ್ತದೆ. ಇದರಲ್ಲಿ ಚಲೋಸ್ಮಾ ಅಥವಾ ಕುಖ್ಯಾತ ಗರ್ಭಧಾರಣೆಯ ಮುಖವಾಡ ಎಂಬ ಹೆಸರನ್ನು ಪಡೆದುಕೊಂಡಿದೆ. ಚಲೋಸ್ಮಾದಲ್ಲಿ ಸ್ತ್ರೀಯು ಕಪ್ಪು ಕಲೆಗಳನ್ನು ಎದುರಿಸಬೇಕಾಗುತ್ತದೆ ಇದು ತೀಕ್ಷ್ಣವಾಗಿ ತ್ವಚೆಯಲ್ಲಿ ಕಾಣುತ್ತಿರುತ್ತದೆ ಮತ್ತು ಮುಜುಗರವನ್ನುಂಟು ಮಾಡುತ್ತಿರುತ್ತದೆ.



Click it and Unblock the Notifications



