Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ಮಲಗುವ ಭಂಗಿ ಹೇಗಿರಬೇಕು?
ತಾಯ್ತನವೆಂಬುದು ಪ್ರತಿಯೊಬ್ಬ ಹೆಣ್ಣಿನ ಜೀವನದಲ್ಲಿ ಹರುಷ ತರುವ ಸಮಯವಾಗಿದ್ದು ಮಗುವಿನ ಆಗಮನದ ಕ್ಷಣಗಳನ್ನು ಆಕೆ ಕಾತರದಿಂದ ನಿರೀಕ್ಷಿಸುತ್ತಿರುತ್ತಾಳೆ. ತನ್ನ ಒಡಲಿನಲ್ಲಿ ಒಂಭತ್ತು ತಿಂಗಳ ಕಾಲ ಮಗುವನ್ನು ಪೋಷಿಸುವ ಸಮಯದಲ್ಲಿ ಆಕೆ ಹೆಚ್ಚು ಕಾಳಜಿ ಮತ್ತು ಜಾಗರೂಕತೆಯಿಂದ ತನ್ನನ್ನು ಮಗುವನ್ನು ನೋಡಿಕೊಳ್ಳುತ್ತಾಳೆ. ವೈದ್ಯರ ಸಲಹೆಯನ್ನು ಪಾಲಿಸಿಕೊಂಡೇ ಆಹಾರಗಳ ಸೇವನೆ, ಮಾತ್ರಗಳ ಸೇವನೆಯನ್ನು ಮಾಡುತ್ತಾ ತನ್ನ ಮಗುವಿನ ರಕ್ಷಣೆಯನ್ನು ಮಾಡಿಕೊಳ್ಳಬೇಕಾದ ಮಹತ್ತರ ಜವಾಬ್ದಾರಿ ತಾಯಿಯದ್ದಾಗಿರುತ್ತದೆ.
ಔಷಧ ಮತ್ತು ಆಹಾರ ಸೇವನೆಯ ಜೊತೆಗೆ ಗರ್ಭಿಣಿಯು ಸಾಕಷ್ಟು ನಿದ್ದೆಗೂ ಈ ಸಮಯದಲ್ಲಿ ಪ್ರಾಮುಖ್ಯತೆಯನ್ನು ನೀಡಬೇಕು. ರಾತ್ರಿಯ ನಿದ್ದೆಯು ಮೆದುಳು ಮತ್ತು ನರಗಳಿಗೆ ವಿಶ್ರಾಂತಿಯನ್ನು ನೀಡಲಿದ್ದು ಇದು ಸಂಪೂರ್ಣ ದೇಹವನ್ನು ಪುನರ್ಯೌವನ ಗೊಳಿಸುತ್ತದೆ. ಗರ್ಭಿಣಿ ಸ್ತ್ರೀಯು ಸಾಕಷ್ಟು ವಿಶ್ರಾಂತಿ ಮತ್ತು ನಿದ್ದೆಯನ್ನು ಮಾಡಿಲ್ಲ ಎಂದಾದಲ್ಲಿ ವಾಕರಿಕೆ, ಅಸ್ತಮಾ ಹೀಗೆ ಇನ್ನಿತರ ತೊಂದರೆಗಳನ್ನು ಆಕೆ ಅನುಭವಿಸಬೇಕಾಗುತ್ತದೆ. ಇದು ಮಗುವಿನ ಮೇಲೆ ತೊಂದರೆಯನ್ನುಂಟು ಮಾಡಬಹುದು. ಆದ್ದರಿಂದ ಗರ್ಭಾವಸ್ಥೆಯಲ್ಲಿ ಉತ್ತಮ ನಿದ್ದೆಗಾಗಿ ತಾಯಿಯು ಮಲಗುವ ದಿಕ್ಕು ಸೂಕ್ತವಾಗಿರಬೇಕು.

ಸಾಮಾನ್ಯ ಗರ್ಭಾವಸ್ಥೆಯಲ್ಲಿ ಮೂರು ತ್ರೈಮಾಸಿಕಗಳಿವೆ. ಮೊದಲನೇ ತ್ರೈಮಾಸಿಕದಲ್ಲಿ ಮಹಿಳೆಯ ದೇಹವು ಕೆಲವೊಂದು ಹಾರ್ಮೋನು ಬದಲಾಣೆಗಳನ್ನು ಪಡೆದುಕೊಳ್ಳುತ್ತವೆ ಆದರೆ ಇದು ದೇಹದ ಆಕಾರದ ಮೇಲೆ ಪರಿಣಾಮವನ್ನು ಬೀರುವುದಿಲ್ಲ. ಈ ಸಂದರ್ಭದಲ್ಲಿ ವೈದ್ಯರು ಸೂಚಿಸದ ಹೊರತು ಮಹಿಳೆ ಸಾಮಾನ್ಯವಾಗಿ ಮಲಗಬಹುದಾಗಿದೆ. ಆಕೆಗೆ ಆರಾಮದಾಯಕವಾಗಿ ಹೇಗೆ ಅನ್ನಿಸುತ್ತದೆಯೋ ಹಾಗೆ. ಹೊಟ್ಟೆಯ ಮೇಲೆ ಮಲಗುವ ಅಭ್ಯಾಸವನ್ನು ಆಕೆ ತಡೆಯಬೇಕು. ಗರ್ಭಿಣಿಯರೇ,ಸುಖ ನಿದ್ದೆಗೆ ಅಡಚಣೆಯಾಗುತ್ತಿದೆಯೇ?
ಎರಡನೇ ತ್ರೈಮಾಸಿಕದಿಂದ ಮಹಿಳೆಯ ದೇಹವು ಬದಲಾವಣೆಗೆ ಒಳಗಾಗುತ್ತದೆ. ಗರ್ಭವು ಹೊರಗೆ ಕಾಣಿಸಿಕೊಳ್ಳಲು ಆರಂಭಗೊಳ್ಳುತ್ತದೆ. ಆಕೆಯ ತೂಕವು ಏರುತ್ತದೆ ಮತ್ತು ಹಾರ್ಮೋನುಗಳ ಬದಲಾವಣೆಯು ಗಾಢವಾಗಿ ಉಂಟಾಗಲು ಆರಂಭವಾಗುತ್ತದೆ. ಇದು ಮಲಗುವಾಗ ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಹಿಂಭಾಗ ಅಥವಾ ಹೊಟ್ಟೆಯ ಭಾಗದಲ್ಲಿ ಮಲಗುವುದನ್ನು ಈ ಸಮಯದಲ್ಲಿ ನಿಷೇಧಿಸಲಾಗಿದೆ. ಈ ಎರಡೂ ಸ್ಥಿತಿಗಳಲ್ಲಿ ಕೆಲವೊಂದು ಅಪಾಯಗಳು ಉಂಟಾಗಲಿದ್ದು ಗರ್ಭಾವಸ್ಥೆಯಲ್ಲಿ ಪಾಲಿಸಲೇಬಾರದ ಮಲಗುವ ಸ್ಥಿತಿಗಳಾಗಿ ಇದನ್ನು ಪರಿಗಣಿಸಲಾಗಿದೆ. ಐದು ತಿಂಗಳ ನಂತರ ಹೊಟ್ಟೆಯ ಭಾಗದಲ್ಲಿ ಮಲಗುವುದು ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ.
ಮೊತ್ತ ಮೊದಲನೆಯದಾಗಿ, ಭ್ರೂಣವನ್ನು ಒಳಗೊಂಡಿರುವ ವಿಸ್ತರಿತ ಗರ್ಭಕೋಶದಿಂದಾಗಿ ಇದು ಹೆಚ್ಚು ಆರಾಮದಾಯಕವಲ್ಲದ ಮಲಗುವ ಭಂಗಿಯಾಗಿದೆ. ಎರಡನೆಯದಾಗಿ ಗರ್ಭಧಾರಣೆಯ ಈ ಹಂತದಲ್ಲಿ, ಹಾಲನ್ನು ಉತ್ಪಾದಿಸುವ ಹಾರ್ಮೋನು ಆದ ಪ್ರೊಲಕ್ಟಿನ್ ಸೇರಮ್ ಅನ್ನು ದೇಹವು ಉತ್ಪಾದಿಸಲು ಆರಂಭಿಸುತ್ತದೆ ಇದು ಸ್ತನವನ್ನು ಹಿರಿದಾಗಿಸುತ್ತದೆ. ಇದರಿಂದಾಗಿ, ಗರ್ಭಿಣಿಯ ಮುಂಭಾಗವು ಅಹಿತಕರ ಉಬ್ಬುಗಳನ್ನು ಒಳಗೊಂಡಿರುವುದರಿಂದ ಇದು ನಿದ್ದೆಗ ಭಂಗವನ್ನುಂಟು ಮಾಡುತ್ತದೆ ಇದು ಗರ್ಭಾವಸ್ಥೆಗೆ ಕೆಟ್ಟದ್ದಾಗಿದೆ. ಗರ್ಭಾವಸ್ಥೆಯಲ್ಲಿ ಕಾಡುವ ನಿದ್ರಾಹೀನತೆಗೆ ಸುಲಭ ಪರಿಹಾರಗಳು
ಇದಲ್ಲದೆ ಹೊಟ್ಟೆಯ ಭಾಗದಲ್ಲಿ ಹೆಚ್ಚು ಕಾಲ ಮಲಗುವುದು ಭ್ರೂಣಕ್ಕೆ ಅಪಾಯವನ್ನುಂಟು ಮಾಡಬಹುದು ಇದು ಭ್ರೂಣದ ಬೆಳವಣಿಗೆಗೆ ತಡೆಯನ್ನುಂಟು ಮಾಡಬಹುದು. ಒಟ್ಟಾರೆ ಹೇಳಬೇಕಾದರೆ, ಗರ್ಭಿಣಿ ಸ್ತ್ರೀಯು ನಿದ್ದೆಮಾಡಬೇಕಾದ ಸರಿಯಾದ ಭಂಗಿ ಇದಾಗಿರುವುದಿಲ್ಲ. ಹಿಂಭಾಗದಲ್ಲಿ ಮಲಗುವುದು ಗರ್ಭಿಣಿ ಸ್ತ್ರೀಗೆ ಉತ್ತಮ ನಿದ್ದೆಯ ಭಂಗಿಯಾಗಿ ತೋರಬಹುದು ಆದರೆ ನಿಜವಾಗಿ ಈ ರೀತಿ ಮಲಗುವುದು ತಪ್ಪಾದ ನಿದ್ದೆಯ ಭಂಗಿಯಾಗಿದೆ. ವಿಸ್ತೃತಗೊಂಡ ಗರ್ಭಕೋಶದಿಂದಾಗಿ ಕರುಳಿನ ಮೇಲೆ ಅಧಿಕ ಒತ್ತಡ ಉಂಟಾಗುತ್ತದೆ ಇದರಿಂದಾಗಿ ಆಕೆಗೆ ವಾಕರಿಕೆಯ ಅನುಭವವಾಗುತ್ತದೆ ಉಸಿರಾಟದ ತೊಂದರೆ ಕೂಡ ಉಂಟಾಗುತ್ತದೆ.
ಬೆನ್ನು ನೋವು ಕೂಡ ಕಾಣಿಸಿಕೊಳ್ಳುವುದಿದೆ. ಹಿಂಭಾಗದಲ್ಲಿ ಮಲಗುವುದು ಮಹಾಪಧಮನಿಯ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಹಾಗೂ ಹೊಟ್ಟೆಯ ಹಿಂದೆ ಸಂಚರಿಸುವ ಕಾಲುಗಳಿಂದ ಪಾದಕ್ಕೆ ಮತ್ತು ಹೃದಯಕ್ಕೆ ರಕ್ತವನ್ನು ಒಯ್ಯುವ ರಕ್ತನಾಳ ಮಹಾಸಿರಿಗೂ ಅಪಾಯಕಾರಿಯಾಗಿದೆ. ಈ ಒತ್ತಡವು ರಕ್ತನಾಳಗಳ ಸಾಮರ್ಥ್ಯವನ್ನು ಕುಗ್ಗಿಸಿ ಕಡಿಮೆ ರಕ್ತ ಪ್ರಸಾರವಾಗುವಂತೆ ಮಾಡುತ್ತದೆ ಇದು ಹೃದಯ ಕಾಯಿಲೆ ಅಪೌಷ್ಟಿಕತೆ ಅಂತೆಯೇ ಮಗುವಿನ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಸ್ಪಷ್ಟವಾಗಿ ಹೇಳಬೇಕಾದರೆ ಹಿಂಭಾಗದಲ್ಲಿ ಮಲಗುವುದು ನಿದ್ದೆಯ ಭಂಗಿಯಲ್ಲ.
ಹಾಗಿದ್ದರೆ ಉತ್ತಮವಾಗಿ ಮಲಗುವ ಭಂಗಿ ಯಾವುದು?
ಒಂದು ನಿರ್ದಿಷ್ಟ ಬದಿಯಲ್ಲಿ ಮಲಗುವುದು ಉತ್ತಮ ನಿದ್ದೆಯ ಭಂಗಿಯಾಗಿದೆ. ಎರಡೂ ಬದಿಗಳು ಪರಿಣಾಮಕಾರಿಯಾಗಿದ್ದು, ಎಡಭಾಗ ಹೆಚ್ಚು ಉತ್ತಮವಾದುದು ಎಂಬುದು ಪರಿಣಿತರ ಸಲಹೆಯಾಗಿದೆ. ನಮ್ಮ ಹೃದಯವು ಎಡಭಾಗದಲ್ಲಿದ್ದು, ಎಡಭಾಗದಲ್ಲಿ ನಿದ್ದೆ ಮಾಡುವುದು ಹೃದಯದಿಂದ ಜರಾಯುವಿಗೆ ರಕ್ತಪ್ರಸಾರಕ್ಕೆ ಸರಳವಾಗಿರುತ್ತದೆ. ಇದು ಭ್ರೂಣಕ್ಕೆ ಪೌಷ್ಟಿಕಾಂಶವುಳ್ಳ ಶುದ್ಧ ರಕ್ತವನ್ನು ಒದಗಿಸುತ್ತದೆ ಇದು ಮಗುವಿನ ಬೆಳವಣಿಗೆಗೆ ಮುಖ್ಯವಾದುದಾಗಿದೆ. ಹೊಟ್ಟೆಯು ಬೆಳೆದಂತೆ ಒಂದೇ ಬದಿಯಲ್ಲಿ ಮಲಗುವುದು ಹೆಚ್ಚು ಆರಾಮದಾಯಕ ಎಂದೆನಿಸಿದೆ. ಯಕೃತ್ತಿನ ಮೇಲೆ ಹೆಚ್ಚು ಒತ್ತಡ ಬೀಳದಂತೆ ಇದು ಸಂರಕ್ಷಿಸುತ್ತದೆ.ನೈಸರ್ಗಿಕವಾಗಿ ಗರ್ಭಿಣಿಯು ತನ್ನ ಗರ್ಭಾವಸ್ಥೆಯಲ್ಲಿ ಪಾಲಸಬೇಕಾದ ಉತ್ತಮ ನಿದ್ರಾ ಭಂಗಿಯಾಗಿದೆ ಕೂಡ.



Click it and Unblock the Notifications














