For Quick Alerts
ALLOW NOTIFICATIONS  
For Daily Alerts

ಮಕ್ಕಳನ್ನ ಕೊರೊನಾ ಗುಣಮುಖದ ನಂತರ ಕಾಡುತ್ತಿರುವ ಎಂಐಎಸ್-ಸಿ ಸಮಸ್ಯೆ ಅಂದ್ರೇನು? ಇದು ಗುಣಮುಖವಾಗಲು ಎಷ್ಟು ಸಮಯ ಬೇಕು?

|

ಕೊರೊನಾದ ಮೊದಲ ಅಲೆಯಲ್ಲಿ ಮಕ್ಕಳನ್ನು ಸೇಫ್ ಎಂದು ಹೇಳಲಾಗಿತ್ತು. ಆದ್ರೆ ಈಗ ಇರುವ ಎರಡನೇ ಅಲೆಯಲ್ಲಿ ಮಕ್ಕಳ ಈ ವೈರಸ್ ಗೆ ತುತ್ತಾಗುತ್ತಿದ್ದಾರೆ. ಆದರೆ ಇವರಲ್ಲಿ ಹೆಚ್ಚಿನವರಿಗೆ ಲಕ್ಷಣಗಳೇ ಇರಲಿಲ್ಲ, ಇದ್ದರೂ ಸಣ್ಣ ಪ್ರಮಾಣದ ಲಕ್ಷಣಗಳು ಅಷ್ಟೇ. ಆದರೆ ಕೆಲವು ಮಕ್ಕಳು ಮಾತ್ರ ಕೊರೊನಾ ಗುಣಮುಖದ ನಂತರ ಅಪರೂಪದ ಪಿಡೀಯಾಟ್ರಿಕ್ ಇನ್ಫ್ಲೇಮೇಟರಿ ಮಲ್ಟಿಸಿಸ್ಟಮ್ ಸಿಂಡ್ರೋಮ್ (ಪಿಮ್ಸ್) ಅಥವಾ ಮಲ್ಟಿಸಿಸ್ಟಮ್ ಇನ್ಫ್ಲೇಮೇಟರಿ ಸಿಂಡ್ರೋಮ್(ಎಂಐಎಸ್-ಸಿ) ಗೆ ತುತ್ತಾಗುತ್ತಿದ್ದಾರೆ. ಈ ವಿಚಾರ ಪೋಷಕರನ್ನ ಚಿಂತೆಗೀಡು ಮಾಡುವಂತೆ ಮಾಡಿದೆ. ಆದರೆ ಸದ್ಯ ನಡೆಸಿದ ಸಣ್ಣ ಅಧ್ಯಯನವೊಂದು ಪೋಷಕರಿಗೆ ಸ್ವಲ್ಪ ನಿರಾಳತೆ ನೀಡಿದೆ. ಹಾಗಾದ್ರೆ ಏನಿದು ಅಧ್ಯಯನ? ಏನಿದೆ ಅದ್ರಲ್ಲಿ ಎಂಬುದನ್ನು ನೋಡೋಣ.

ಎಂಐಎಸ್-ಸಿ ಎಂದರೇನು?:

ಎಂಐಎಸ್-ಸಿ ಎಂದರೇನು?:

ಎಂಐಎಸ್-ಸಿ ಎನ್ನುವುದು ಕೊರೊನಾಗೆ ಸಂಬಂಧಿಸಿದ ಒಂದು ಸ್ಥಿತಿಯಾಗಿದ್ದು, ಇದು ಮೊದಲು ಏಪ್ರಿಲ್ 2020 ರಲ್ಲಿ ಕಾಣಿಸಿಕೊಂಡಿತ್ತು. ಈ ಅಪರೂಪದ ಸ್ಥಿತಿಯ ಹಲವಾರು ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ಕಂಡುಬಂದಿದ್ದು, ಮಕ್ಕಳನ್ನು ದೀರ್ಘಕಾಲದವರಗೆ ಕಾಡುವ ಸಮಸ್ಯೆಯಾಗಿದೆ. ಜ್ವರ, ದದ್ದು, ಕಣ್ಣಿನ ಸೋಂಕು ಮತ್ತು ಜೀರ್ಣಾಂಗ ಅವ್ಯವಸ್ಥೆಯ ಲಕ್ಷಣಗಳು MIS-C ಯ ಲಕ್ಷಣಗಳಾಗಿವೆ. ಕೆಲವೊಂದು ಸಂದರ್ಭಗಳಲ್ಲಿ, ಇದು ಬಹು-ಅಂಗಗಳ ವೈಫಲ್ಯಕ್ಕೆ ಕಾರಣವಾಗಬಹುದು. ಈ ಸೋಂಕನ್ನು ಪ್ರಚೋದಿಸುವ ಅಂಶ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ತಜ್ಞರು ಇದನ್ನು ರೋಗನಿರೋಧಕ ಶಕ್ತಿಯ ಅತಿಯಾದ ಪ್ರತಿಕ್ರಿಯೆಯಿಂದ ಬರಬಹುದು. ಸೋಂಕು ತಗುಲಿದ ನಾಲ್ಕರಿಂದ ಆರು ವಾರಗಳಲ್ಲಿ ಕಾಣಿಸಿಕೊಳ್ಳಬಹುದು ಎಂದಿದ್ದಾರೆ.

ಅಧ್ಯಯನ ಏನು ಹೇಳುತ್ತೆ?:

ಅಧ್ಯಯನ ಏನು ಹೇಳುತ್ತೆ?:

ದಿ ಲ್ಯಾನ್ಸೆಟ್ ಚೈಲ್ಡ್ ಮತ್ತು ಅಡಾಲೆಸೆಂಟ್ ಹೆಲ್ತ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆರಂಭಿಕ ಹಂತದಲ್ಲಿ ತೀವ್ರ ಅನಾರೋಗ್ಯದ ಹೊರತಾಗಿಯೂ, ಹೆಚ್ಚಿನ ರೋಗಲಕ್ಷಣಗಳನ್ನು ಆರು ತಿಂಗಳ ಒಳಗೆ ಪರಿಸಹರಿಸಬಹುದು. 46 ಮಕ್ಕಳ ಮೇಲೆ ನಡೆಸಿದ ವೀಕ್ಷಣಾ ಅಧ್ಯಯನದಲ್ಲಿ, ಕೆಲವು ಮಕ್ಕಳು ಆರು ತಿಂಗಳವರೆಗೆ ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಅವರಿಗೆ ದೈಹಿಕ ಚಿಕಿತ್ಸೆ ಮತ್ತು ಮಾನಸಿಕ ಆರೋಗ್ಯ ಬೆಂಬಲದ ಅಗತ್ಯವಿರುತ್ತದೆ, ಆದರೆ ಹೆಚ್ಚಿನವರು ಆರು ತಿಂಗಳ ಒಳಗೆ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

ಯುಕೆ ಯ ಗ್ರೇಟ್ ಒರ್ಮಂಡ್ ಸ್ಟ್ರೀಟ್ ಆಸ್ಪತ್ರೆಯ ತಜ್ಞ ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಮೇಲೆ ಈ ಅಧ್ಯಯನವನ್ನು ನಡೆಸಲಾಯಿತು. ಜೀರ್ಣಾಂಗವ್ಯೂಹದ ತೊಂದರೆಗಳು, ನರವೈಜ್ಞಾನಿಕ ಲಕ್ಷಣಗಳು ಮತ್ತು ಹೃದಯದ ತೊಂದರೆಗಳಂತಹ ಹೆಚ್ಚಿನ ಮಕ್ಕಳು ತಮ್ಮ ಆರಂಭಿಕ ಅನಾರೋಗ್ಯದ ಸಮಯದಲ್ಲಿ ತೀವ್ರ ಪರಿಣಾಮಗಳನ್ನು ಅನುಭವಿಸಿದ್ದಾರೆ ಎಂದು ಸಂಶೋಧಕರು ಗಮನಿಸಿದ್ದಾರೆ. ಆದರೆ ಆರು ತಿಂಗಳ ಕಾಲಾವಧಿಯಲ್ಲಿ, ಅವರ ಹೆಚ್ಚಿನ ರೋಗಲಕ್ಷಣಗಳನ್ನು ಪರಿಹಾರ ಮಾಡಲಾಯಿತು. ಕೇವಲ ಒಂದು ಮಗುವಿಗೆ ಉರಿಯೂತದ ಸಮಸ್ಯೆ, ಇಬ್ಬರು ಎಕೋಕಾರ್ಡಿಯೋಗ್ರಾಮ್ ಸಂಬಂಧಿತ ವೈಪರೀತ್ಯಗಳಿಂದ ಬಳಲುತ್ತಿದ್ದರೆ, ಆರು ಜನ ಜಠರಗರುಳಿನ ರೋಗಲಕ್ಷಣಗಳನ್ನು ಹೊಂದಿದದ್ದರು.

ಮಿತಿ:

ಮಿತಿ:

ಆರು ತಿಂಗಳಲ್ಲಿ 18 ಮಕ್ಕಳಲ್ಲಿ ಸಣ್ಣ ನರವೈಜ್ಞಾನಿಕ ವೈಪರೀತ್ಯಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಮಕ್ಕಳು ನಡೆಯಲು ಮತ್ತು ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಸ್ವಲ್ಪ ಕಷ್ಟವನ್ನು ಅನುಭವಿಸಿದರು. ಆದರೂ, ಈ ನರವೈಜ್ಞಾನಿಕ ವೈಪರೀತ್ಯಗಳು ಸೌಮ್ಯವಾಗಿದ್ದವು ಮತ್ತು ಅಂಗವೈಕಲ್ಯಕ್ಕೆ ಕಾರಣವಾಗಲಿಲ್ಲ. ಆರು ತಿಂಗಳಲ್ಲಿ ಮಕ್ಕಳ ಸ್ನಾಯುಗಳ ಕಾರ್ಯವು ಗಮನಾರ್ಹವಾಗಿ ಸುಧಾರಿಸಿದೆ.

ಉಪಸಂಹಾರ:

ಉಪಸಂಹಾರ:

ಈ ಅಧ್ಯಯನವನ್ನು ಒಂದು ಸಣ್ಣ ಗುಂಪಿನ ಜನರ ಮೇಲೆ ನಡೆಸಲಾಯಿತು, ಅದೂ ಒಂದೇ ಆಸ್ಪತ್ರೆಯಿಂದ. ಎಲ್ಲಾ ಎಂಐಎಸ್-ಸಿ ರೋಗಿಗಳಿಗೆ ಸಂಶೋಧನೆಗಳು ಅನ್ವಯವಾಗುತ್ತದೆಯೇ ಎಂದು ನಿರ್ಧರಿಸಲು ಹೆಚ್ಚಿನ ಸಂಶೋಧನೆಗಳು ಅಗತ್ಯವೆಂದು ಅಧ್ಯಯನದ ಲೇಖಕರು ಹೇಳಿದ್ದಾರೆ.

English summary

MIS-C in Kids: A Study Suggests Most Cases of MIS-C in Kids Resolve Within 6 Months

Here we talking about MIS-C in kids: A study suggests most cases of MIS-C in kids resolve within 6 months, read on
Story first published: Thursday, May 27, 2021, 15:35 [IST]
X
Desktop Bottom Promotion