For Quick Alerts
ALLOW NOTIFICATIONS  
For Daily Alerts

ನೋಡಿ ಇದೇ ಕಾರಣಕ್ಕೆ, ಎದೆಹಾಲು ಉಣಿಸುವಾಗ ಮಗು ಅಳುವುದು!

|

ಗರ್ಭಧಾರಣೆ ಮತ್ತು ಹೆರಿಗೆ ಬಳಿಕದ ಸಮಯವು ಮಹಿಳೆಗೆ ತುಂಬಾ ಮಹತ್ವದ್ದಾಗಿರುವುದು. ಅದರಲ್ಲೂ ಮೊದಲ ಸಲ ಹೆರಿಗೆಯಾಗುವ ಮಹಿಳೆಯರು ಮಗುವಿನ ಲಾಲನೆ ಪಾಲನೆ ಬಗ್ಗೆ ಸರಿಯಾಗಿ ಕಲಿತುಕೊಳ್ಳಬೇಕು. ಹೀಗಿದ್ದಲ್ಲಿ ಮಾತ್ರ ಮಗುವಿನ ಸರಿಯಾದ ಆರೈಕೆ ಮಾಡಲು ಸಾಧ್ಯ. ಮಗುವಿಗೆ ತನಗೆ ಏನು ಬೇಕು ಏನು ಬೇಡ ಎನ್ನುವುದನ್ನು ಅದಕ್ಕೆ ಮಾತಿನ ಮೂಲಕ ಹೇಳಲು ಸಾಧ್ಯವಿಲ್ಲದೆ ಇರುವ ಕಾರಣದಿಂದ ಅಳುವಿನ ಮೂಲಕವೇ ಅದು ಎಲ್ಲವನ್ನು ವ್ಯಕ್ತಪಡಿಸುತ್ತದೆ.

ಹೀಗಾಗಿ ಮಗು ಅತ್ತರೆ ಅದು ಏನು ಬಯಸುತ್ತಿದೆ ಎಂದು ತಿಳಿಯಬೇಕು. ಇದಕ್ಕೆ ಹೆಚ್ಚಿನ ತಾಳ್ಮೆ ಕೂಡ ಬೇಕಾಗುತ್ತದೆ. ಮಗು ಹಸಿವಾದ ವೇಳೆ ಕೆಲವೊಮ್ಮೆ ಅಳುತ್ತದೆ. ಈ ವೇಳೆ ಸ್ತನಪಾನ ಮಾಡಿಸುವುದು ಅಗತ್ಯವಾಗಿದೆ. ಇದು ಮಹಿಳೆಯರಿಗೆ ಒಂದು ಅದ್ಭುತ ಅನುಭವ ಎನ್ನಬಹುದು. ಮಗುವಿಗೆ ಸ್ವಲ್ಪ ಮಟ್ಟಿನ ಕಿರಿಕಿರಿಯಾದರೂ ಅದು ಅಳುವುದು. ಸ್ತನಪಾನ ಮಾಡಿಸುವ ವೇಳೆ ಮಗು ಅಳಲು ಕಾರಣಗಳು ಏನು ಎಂದು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ವೇಗವಾದ ಹರಿವು

ವೇಗವಾದ ಹರಿವು

ಮಗು ಅಳುವ ಮೊದಲು ಕೆಮ್ಮುತ್ತಲಿದ್ದರೆ ಅಥವಾ ತಾನು ಕುಡಿದ ಹಾಲನ್ನು ಹೊರಗೆ ಹಾಕಿದರೆ ಅಥವಾ ಎದೆಹಾಲು ಹೊರಗೆ ಬರುತ್ತಿದ್ದರೆ ಆಗ ಹಾಲಿನ ಹರಿವು ಹೆಚ್ಚಾಗಿದೆ ಎಂದು ಹೇಳಬಹುದು. ಇದನ್ನು ವೇಗವಾಗಿ ಹೊರಬರುವುದು ಎನ್ನುವರು. ಮಗು ಅಳಲು ಇದೇ ಕಾರಣವೆಂದು ನಿಮಗೆ ತಿಳಿದಿದ್ದರೆ ಆಗ ನೀವು ಇದಕ್ಕೆ ಒಂದು ಕೆಲಸ ಮಾಡಬೇಕು. ನೀವು ಬೆನ್ನ ಮೇಲೆ ಮಲಗಿಕೊಂಡು ನವಜಾತ ಶಿಶುವನ್ನು ನಿಮ್ಮ ಮೇಲೆ ಮಲಗಿಸಿಕೊಂಡು ಹಾಲು ನೀಡುವಂತೆ ನೋಡಿಕೊಳ್ಳಿ. ಮಗು ಹಾಲು ಕುಡಿಯುವಾಗ ಸರಿಯಾಗಿ ಉಸಿರಾಡಲು ಅವಕಾಶ ಸಿಗಲಿ. ಹರಿವು ಕಡಿಮೆ ಆಗಿದೆ ಎಂದು ನಿಮಗನಿಸಿದರೆ ಆಗ ನೀವು ಕುಳಿತುಕೊಂಡು ಮಗುವಿಗೆ ಹಾಲುಣಿಸಬಹುದು. ಮಗುವಿಗೆ ಹೀಗೆ ಯಾವಾಗಲೂ ಹಾಲುಣಿಸಬೇಡಿ. ಇದರಿಂದ ಮಗುವಿನ ನಾಳಗಳು ತುಂಬಬಹುದು.

Most Read: ಎದೆಹಾಲು ಉಣಿಸುವಾಗ ಆಹಾರದಲ್ಲಿ ಸೂಕ್ತ ಪೋಷಕಾಂಶಗಳು ಅಗತ್ಯ

ಹಾಲಿನ ನಿಧಾನ ಹರಿವು/ಬಾಟಲಿಗೆ ಮಹತ್ವ ನೀಡಿ

ಹಾಲಿನ ನಿಧಾನ ಹರಿವು/ಬಾಟಲಿಗೆ ಮಹತ್ವ ನೀಡಿ

ತಾಯಿಯ ಹಾಲಿನ ಹರಿವು ತುಂಬಾ ಕಡಿಮೆ ಇದ್ದ ವೇಳೆ ಆಗ ಮಗು ತುಂಬಾ ಕಿರಿಕಿರಿಗೆ ಒಳಗಾಗುವುದು. ಯಾಕೆಂದರೆ ಮಗು ತುಂಬಾ ಹಸಿದಿರುವುದು. ಇದರಿಂದ ಅದಕ್ಕೆ ಸಾಕಷ್ಟು ಹಾಲು ಸಿಗುವುದಿಲ್ಲ. ಬಾಟಲಿಯಿಂದ ಹಾಲು ನೀಡುವ ವೇಳೆ ಕೆಲವೊಮ್ಮೆ ಹಾಲು ವೇಗವಾಗಿ ಬರುವುದು. ಅದೇ ರೀತಿಯಾಗಿ ಎದೆಹಾಲು ಬರದೇ ಇರಬಹುದು.ಮಗುವಿಗೆ ಸರಿಯಾಗಿ ಹಾಲು ಸಿಗಲು ನೀವು ಬದಿ ಬದಲಾಯಿಸಿಕೊಳ್ಳಿ. ಕೇವಲ ಒಂದು ಸ್ತನವನ್ನು ಮಗು ಎಳೆಯುತ್ತಿರುವ ಕಾರಣದಿಂದ ಹಾಲಿನ ಪ್ರಮಾಣ ಕಡಿಮೆ ಆಗಬಹುದು. ಬದಿ ಬದಲಾಯಿಸುವ ಕಾರಣದಿಂದಾಗಿ ಹಾಲಿನ ಉತ್ಪತ್ತಿಯು ಹೆಚ್ಚಾಗುವುದು.

ಹಿಮ್ಮುಖ ಹರಿವು

ಹಿಮ್ಮುಖ ಹರಿವು

ಎಲ್ಲಾ ಮಕ್ಕಳಿಗೆ ಹಾಲು ಕುಡಿದ ಬಳಿಕ ಹಿಮ್ಮುಖ ಹರಿವು ಉಂಟಾಗುವುದು ಸಹಜವಾಗುವುದು. ಇದರಿಂದ ವಾಂತಿ ಮಾಡಿಕೊಳ್ಳುವುದು. ಮಗುವಿಗೆ ನೋವು ಅಥವಾ ಸ್ತನಪಾನದ ವೇಳೆ ಯಾವುದೇ ಹಾನಿಯಾಗದೆ ಇದ್ದರೆ ಆಗ ಯಾವುದೆ ಸಮಸ್ಯೆ ಆಗದು. ಹಾಲು ವಾಂತಿ ಮಾಡಿದ ಬಳಿಕ ಪದೇ ಪದೇ ವಾಂತಿಯಾಗುತ್ತಲಿದ್ದರೆ ಮತ್ತು ಅಳುತ್ತಿದ್ದರೆ, ತೂಕ ಹೆಚ್ಚಳವಾಗದೆ ಇದ್ದರೆ, ಸರಿಯಾಗಿ ನಿದ್ರೆ ಮಾಡದಿದ್ದರೆ ಮತ್ತು ದುರ್ವಾಸನೆ ಬರುತ್ತಲಿದ್ದರೆ ಆಗ ಮಗುವಿಗೆ ಜಿಇಆರ್ ಡಿ ಸಮಸ್ಯೆ ಇರಬಹುದು. ಮಗುವಿಗೆ ಪದೇ ಪದೇ ವಾಂತಿಯಾಗುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ.

ಆಹಾರದ ಅಲರ್ಜಿ/ತಾಯಿಯ ಹಾಲಿನಲ್ಲಿ ಸೂಕ್ಷ್ಮತೆ

ಆಹಾರದ ಅಲರ್ಜಿ/ತಾಯಿಯ ಹಾಲಿನಲ್ಲಿ ಸೂಕ್ಷ್ಮತೆ

ಮನುಷ್ಯನ ಹಾಲು ತುಂಬಾ ಹೈಪೋಲಾರ್ಜನಿಕ್ ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಈ ಹಾಲಿಗೆ ಕೂಡ ಕೆಲವೊಂದು ಸೂಕ್ಷ್ಮ ಜೀವಿಗಳು ಪ್ರವೇಶ ಮಾಡುವುದು. ಸ್ತನಪಾನ ಮಾಡುತ್ತಿರುವ ಮಹಿಳೆಯರು ಆದಷ್ಟು ತಿನ್ನಬೇಕು ಮತ್ತು ತಮ್ಮ ಆಹಾರ ಕ್ರಮದಲ್ಲಿ ಪ್ರತಿಯೊಂದನ್ನು ಸೇರಿಸಿಕೊಳ್ಳಬೇಕು. ಕೆಲವೊಂದು ಸಲ ಆಹಾರವು ದೇಹದಿಂದ ಪ್ರತಿರೋಧ ಪಡೆಯಬಹುದು ಮತ್ತು ಮಗುವಿನಲ್ಲಿ ಇದು ಕಾಣಿಸಬಹುದು. ಸ್ತನಪಾನ ವೇಳೆ ಅಥವಾ ಅದರ ತಕ್ಷಣವೇ ಮಗು ಅಳಲು ಇದು ಕಾರಣವಾಗಿರಬಹುದು. ಏನೋ ಸರಿಯಾಗಿಲ್ಲವೆಂದು ನಿಮಗನಿಸಿದರೆ ಆಗ ನೀವು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಿ ಅಥವಾ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ.

Most Read: ಮಗುವಿಗೆ ಎದೆ ಹಾಲು ಉಣಿಸುವಾಗ ಈ ತಪ್ಪನ್ನು ಅಪ್ಪಿತಪ್ಪಿಯೂ ಮಾಡದಿರಿ...

ಭಂಗಿ

ಭಂಗಿ

ನೀವು ನವಜಾತ ಶಿಶುವಿಗೆ ಸ್ತನಪಾನ ಮಾಡುತ್ತಾ ಇರುವ ಭಂಗಿಯನ್ನು ಮಗು ಇಷ್ಟಪಡದೇ ಇರಬಹುದು. ಮಗುವಿಗೆ ಸರಿಯಾಗಿ ಹಾಲು ಕುಡಿಯಲು ಆಗದೆ ಇರಬಹುದು ಮತ್ತು ಹಾಲು ಕುಡಿಯುವ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಬಹುದು. ಒಂದು ಭಂಗಿಯಲ್ಲಿ ಮಗು ಅಳುತ್ತಿದ್ದರೆ ಆಗ ನೀವು ಮತ್ತೊಂದು ಬದಿಯಿಂದ ಮಗುವಿಗೆ ಹಾಲು ನೀಡಿ. ಈ ಕ್ರಮಗಳನ್ನು ಅನುಸರಿಸಿಕೊಂಡರೆ ಮಗುವಿಗೆ ಸ್ತನಪಾನ ಮಾಡುವ ವೇಳೆ ಮಗು ಅಳುವುದನ್ನು ತಡೆಯಬಹುದು.

English summary

Reasons Babies Cry during Breastfeeding

Breastfeeding must be a pleasant experience for the mother and the baby. Even the slightest distress indicates a problem. Considering that babies cannot talk, they know exactly when to be vocal about any problem they are facing. A slight discomfort and they will wail like a fire engine. Here are 5 reasons babies cry during breastfeeding.
X
Desktop Bottom Promotion