For Quick Alerts
ALLOW NOTIFICATIONS  
For Daily Alerts

ವಿಶ್ವ ತಾಯಂದಿರ ದಿನದಂದು ಈ ತಂದೆಗೆ ನಮ್ಮದೊಂದು ಸಲಾಂ

|

ಅಮ್ಮಾ... ಪದಗಳಿಗೆ ನಿಲುಕದ ವ್ಯಕ್ತಿತ್ವ, ಮಮತೆ, ಕರುಣೆ, ವಾತ್ಸಲ್ಯದ ಮೂರ್ತಿ. ಮಕ್ಕಳು ಎಷ್ಟೇ ದೊಡ್ಡವರಾದರೂ ಅಮ್ಮನಿಗೆ ಸದಾ ಮಕ್ಕಳದ್ದೇ ಚಿಂತೆ. ಹೆತ್ತ ಮಾತ್ರಕ್ಕೆ ಯಾರೂ ಅಮ್ಮನಾಗಲು ಸಾಧ್ಯವಿಲ್ಲ... ಒಬ್ಬ ಹೆಣ್ಣು ಗರ್ಭಿಣಿಯಾಗಿ, ಮಗುವಿಗೆ ಜನ್ಮ ನೀಡಿ ಆ ಮಗುವಿಗೆ ತನ್ನ ರಕ್ತವನ್ನೇ ಹಾಲನ್ನಾಗಿ ಉಣಿಸಿ, ಅದಕ್ಕೆ ಮಮತೆ, ಪ್ರೀತಿಯನ್ನು ನೀಡಿದಾಗ ಮಾತ್ರ ಅಮ್ಮಾ... ಎಂಬ ಅದ್ಭುತ ಪಟ್ಟವನ್ನು ಏರಲು ಸಾಧ್ಯ.

World Mothers Day 2020

ಇಲ್ಲಿ ನಾವು ಅಮ್ಮಂದಿರ ದಿನದ ವಿಶೇಷವಾಗಿ ತಾಯಂದಿರ ಬಗ್ಗೆ ಮಾತನಾಡುತ್ತಿಲ್ಲ, ಬದಲಿಗೆ ಒಬ್ಬ ಅಪ್ಪನ ಬಗ್ಗೆ ಮಾತನಾಡುತ್ತಿದ್ದೇವೆ. ಈ ವರ್ಷದ ' ವರ್ಲ್ಡ್‌ ಬೆಸ್ಟ್ ಮಮ್ಮಿ' ಎಂಬ ಪ್ರಶಸ್ತಿ ಕೂಡ ಇವರಿಗೆ ಸಿಕ್ಕಿದೆ. ಅದಕ್ಕೇ ಹೇಳುವುದು, ಬರೀ ಹೆತ್ತ ಮಾತ್ರಕ್ಕೆ ತಾಯಿಯಾಗಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಪುಣೆ ಮೂಲದ ಅಪ್ಪನಿಗೆ ಇಂಥದ್ದೊಂದು ಪ್ರಶಸ್ತಿ ಸಿಕ್ಕಿದೆ. ಅವರ ಬಗ್ಗೆ ಹೇಳುತ್ತಾ ಹೋದಂತೆ ನಿಮಗೂ ಆ ವ್ಯಕ್ತಿಯ ಬಗ್ಗೆ ಗೌರವ ಮೂಡುವುದು.
ಡೌನ್ ಸಿಂಡ್ರೋಮ್ ಮಗುವಿಗೆ ಮಾತೃತ್ವದ ಪ್ರೀತಿ

ಡೌನ್ ಸಿಂಡ್ರೋಮ್ ಮಗುವಿಗೆ ಮಾತೃತ್ವದ ಪ್ರೀತಿ

ಆದಿತ್ಯ ತಿವಾರಿ, ಪುಣೆ ಸಾಫ್ಟ್‌ವೇರ್‌ ಎಂಜಿನಿಯರ್‌ 2016ರಲ್ಲಿ ಮಗುವೊಂದನ್ನು ದತ್ತು ಪಡೆಯುವ ಮೂಲಕ ಜಗತ್ತಿನ ಗಮನ ಸೆಳೆದರು. ತುಂಬಾ ಕಿರಿಯ ವಯಸ್ಸಿನಲ್ಲಿ ಸಿಂಗಲ್‌ ಪೇರೆಂಟ್‌ ಆಗಿ ಒಂದು ಮುದ್ದಾದ ಮಗುವಿಗೆ ತಂದೆ-ತಾಯಿಯ ಪ್ರೀತಿ ನೀಡಲು ಮುಂದಾದರು. ಇಷ್ಟಕ್ಕೂ ಅವರು ಮಾತೃತ್ವದ ಪ್ರೀತಿಯನ್ನು ನೀಡಿದ್ದು ಡೌನ್‌ ಸಿಂಡ್ರಮ್ ಇರುವ ಮಗುವಿಗೆ. ಇಂದು ಆ ಮಗು ಇವರ ಕೈಯಲ್ಲಿ ಸುರಕ್ಷಿತವಾಗಿದೆ, ಖುಷಿಯಾಗಿದೆ.

ಅಪ್ಪ-ಮಗನ ಬದುಕು ಬದಲಾಯಿತು

ಅಪ್ಪ-ಮಗನ ಬದುಕು ಬದಲಾಯಿತು

ಜನವರಿ 1, 2016ರಂದು ತಿವಾರಿ ಮಗುವನ್ನು ದತ್ತು ತೆಗೆದುಕೊಳ್ಳುವಾಗ ಆ ಮಗುವಿಗೆ 22 ತಿಂಗಳು. ಆ ಮಗು ತಿವಾರಿ ಬದುಕಿನಲ್ಲಿ ಬಂದಿದ್ದೇ ಅವರ ಬದುಕೇ ಬದಲಾಯಿತು. ಅವರು ಆ ಮಗುವಿನ ಆರೈಕೆಗೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು, ಸಾಫ್ಟ್‌ವೇರ್‌ ಕೆಲಸಕ್ಕೆ ರಾಜೀನಾಮೆ ನೀಡಿ ಕೌನ್ಸಿಂಗ್, ವಿಶೇಷ ಚೈತನ್ಯ ಮಕ್ಕಳಿರುವ ಪೋಷಕರು ಸ್ಪೂರ್ತಿ ತುಂಬುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಶೇಷ ಚೇತನ ಮಕ್ಕಳ ಪೋಷಕರಿಗೆ ಸ್ಪೂರ್ತಿ ತುಂಬುವ ಕೆಲಸ

ವಿಶೇಷ ಚೇತನ ಮಕ್ಕಳ ಪೋಷಕರಿಗೆ ಸ್ಪೂರ್ತಿ ತುಂಬುವ ಕೆಲಸ

ಕೌನ್ಸಿಲಿಂಗ್ ಅವರೊಬ್ಬರೇ ಮಾಡ್ತಾ ಇಲ್ಲ, ಅವರ ಜೊತೆ 6 ವರ್ಷದ ಮಗ ಅವ್ನಿಶ್‌ ಇದ್ದಾನೆ. ಆತ ಆ ಕಾರ್ಯಕ್ರಮದಲ್ಲಿ ಏನೂ ಮಾತನಾಡಲಾರ, ಆದರೆ ಆ ಮಗು ಅಲ್ಲಿದ್ದರೆ ಆ ಮಗುವನ್ನು ನೋಡಿದ ಮೇಲೆ ವಿಶೇಷ ಚೇತನ ಮಕ್ಕಳನ್ನು ಹೊಂದಿರುವ ಪೋಷಕರಿಗೆ ತಮ್ಮ ಮಗುವಿನಲ್ಲೂ ಆತ್ಮ ವಿಶ್ವಾಸ ತುಂಬ ಬಹುದು ಎಂಬ ಭರವಸೆ ಮೂಡುವುದು, ಬದುಕಿನಲ್ಲಿ ಹೊಸ ಸ್ಪೂರ್ತಿ ಸಿಗುವುದು.

ತಂದೆ-ಮಗನ ಸಾಧನೆ

ತಂದೆ-ಮಗನ ಸಾಧನೆ

ತಂದೆ ಮಗ ಸುಮಾರು 22ಕ್ಕೂ ಅಧಿಕ ರಾಜ್ಯಗಳಿಗೆ ಹೋಗಿ ಮೀಟಿಂಗ್ , ವರ್ಕ್‌ಶಾಪ್‌ಗಳಲ್ಲಿ , ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ. 400ಕ್ಕೂ ಅಧಿಕ ಸ್ಥಳಗಳಿಗೆ ಭೇಟಿ ನೀಡಿ ವಿಶೇಷ ಚೇತನ ಮಕ್ಕಳಿರುವ ಪೋಷಕರಿಗೆ ಸ್ಪೂರ್ತಿ ತುಂಬಿದ್ದಾರೆ. ವಿಶ್ವ ಸಂಸ್ಥೆಯಿಂದಲೂ ಸಮಾವೇಶಗಳಲ್ಲಿ ಭಾಗವಹಿಸಲು ಕೋರಿ ಆಹ್ವಾನ ಬರುತ್ತಿವೆ.

ಅವ್ನೀಶ್‌ ಬದುಕೀಗ ಸುಂದರ

ಅವ್ನೀಶ್‌ ಬದುಕೀಗ ಸುಂದರ

ಅವ್ನೀಶ್‌ ಇದೀಗ ಶಾಲೆಗೆ ಹೋಗುತ್ತಿದ್ದಾನೆ. ನೃತ್ಯ, ಸಂಗೀತ, ಫೋಟೋಗ್ರಫಿಯಲ್ಲಿ ಆಸಕ್ತಿ ತೋರಿಸುತ್ತಾನೆ.ಅವನಿಗೆ ಯಾವುದೇ ಜಂಕ್ ಆಹಾರ ನೀಡಲ್ಲ, ಹಾಲನ್ನೂ ನೀಡಲ್ಲ, ಅವನಿಗೆ ಸರಿಯಾದ ಆಹಾರಕ್ರಮ ನೀಡುತ್ತೇವೆ' ಎಂತಾರೆ ತಿವಾರಿ.

ತಂದೆಯ ಆರೈಕೆಯಿಂದ ಅವ್ನೀಶ್ ಕಾಯಿಲೆಯೇ ಮಾಯ

ತಂದೆಯ ಆರೈಕೆಯಿಂದ ಅವ್ನೀಶ್ ಕಾಯಿಲೆಯೇ ಮಾಯ

'ಅವ್ನೀಶ್‌ ಅನ್ನು ದತ್ತು ತೆಗೆದುಕೊಳ್ಳುವಾಗ ಅವನ ಹೃದಯಲ್ಲಿ ಎರಡು ರಂಧ್ರಗಳಿವೆ ಎಂದು ವೈದ್ಯರು ತಿಳಿಸಿದ್ದರು, ಆದರೆ ಇದೀಗ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಆ ರಂಧ್ರಗಳು ಮಾಯವಾಗಿವೆ' ಎನ್ನುತ್ತಾರೆ ತಿವಾರಿ.

ಈ ತಂದೆಗೆ ನಮ್ಮದೊಂದು ಸಲಾಂ...

ಈ ತಂದೆಗೆ ನಮ್ಮದೊಂದು ಸಲಾಂ...

ಈಗ ಹೇಳಿ ಡೌನ್‌ ಸಿಂಡ್ರೋಮ್ ಇರುವ ಮಗುವನ್ನು ದತ್ತು ತೆಗೆದುಕೊಂಡು ಆ ಮಗುವಿಗೆ ತಾಯಿ ಪ್ರೀತಿ ನೀಡುತ್ತಿರುವ ತಿವಾರಿ ನಿಜಕ್ಕೂ ಗ್ರೇಟ್‌ ಅಲ್ವಾ... ವಿಶ್ವ ತಾಯಂದಿರ ದಿನದಂದು ಈ ತಂದೆಗೆ ನಮ್ಮದೊಂದು ಸಲಾಂ...

English summary

World Mothers Day 2021 : We Must Salute To 'World's Best Mommy' Aditya Tiwari

On world mothers day we are taking about Aditya Tiwari, a resident of Pune who adopted a child with Down Syndrome in 2016, who has got World’s Best Mommy’ award.
X
Desktop Bottom Promotion