For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಜೀರ್ಣಶಕ್ತಿ ವೃದ್ಧಿಸುವುದು ಹೇಗೆ?

|

ಮಲಬದ್ಧತೆಯ ಸಮಸ್ಯೆಯು ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಒಂದಿಲ್ಲೊಂದು ಬಾರಿ ಕಾಡಿಸುವ ಸಮಸ್ಯೆಯೇ ಆಗಿದೆ. ತಿಂದ ಆಹಾರ ಸೂಕ್ತವಾಗಿ ಜೀರ್ಣವಾಗದೇ ಹೋದಾಗ ಮಲಬದ್ಧತೆ ಹೆಚ್ಚಾಗುತ್ತದೆ. ಅದರಲ್ಲೂ ಈ ಸಮಸ್ಯೆ ಚಿಕ್ಕ ಮಕ್ಕಳಿಗೆ ಕಾಡತೊಡಗಿದಾಗ ಪಾಲಕರ ಆತಂಕ ಹೆಚ್ಚಾಗುತ್ತದೆ. ಮಕ್ಕಳಿಗೆ ಅಜೀರ್ಣ ಸಮಸ್ಯೆ ಉಂಟಾಗದಂತೆ ಹಾಗೂ ಮಲಬದ್ಧತೆ ಕಾಡದಂತೆ ತಡೆಗಟ್ಟಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬಹುದು ಎಂಬುದನ್ನು ನೋಡೋಣ.

ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಯ ಲಕ್ಷಣಗಳು

ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಯ ಲಕ್ಷಣಗಳು

ನಿಮ್ಮ ಪುಟ್ಟ ಮಗು ಕಕ್ಕಸಿಗೆ ಹೋಗಲು ನಿರಾಕರಿಸುತ್ತಿದ್ದರೆ ಅಥವಾ ಕಕ್ಕಸು ಮಾಡುವಾಗ ಮುಖ ಕಿವುಚಿ ಕಷ್ಟ ಪಡುತ್ತಿದ್ದರೆ ಅಥವಾ ವಾರಕ್ಕೆ ಮೂರು ಬಾರಿಗಿಂತ ಕಡಿಮೆ ಸಮಯ ಶೌಚ ಮಾಡುತ್ತಿದ್ದರೆ ಮಗುವಿಗೆ ಮಲಬದ್ಧತೆಯ ಸಮಸ್ಯೆ ಬಾಧಿಸುತ್ತಿದೆ ಎಂದು ತಿಳಿದುಕೊಳ್ಳಬಹುದು.

ಆದರೆ ಹಾಗಂತ ಗಾಬರಿಯಾಗುವ ಅಗತ್ಯವೇನಿಲ್ಲ. ಜಗತ್ತಿನ ಶೇ 39ರಷ್ಟು ಮಕ್ಕಳು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಾರೆ ಎಂಬುದು ವೈದ್ಯಕೀಯವಾಗಿ ತಿಳಿದು ಬಂದಿದೆ. ಅದರಲ್ಲೂ 2 ರಿಂದ 3 ವರ್ಷ ವಯೋಮಾನದ ಮಕ್ಕಳಿಗೆ ಈ ಬಾಧೆ ಹೆಚ್ಚು. ಸಾಮಾನ್ಯವಾಗಿ ಇದೇ ಅವಧಿಯಲ್ಲಿ ಮಕ್ಕಳಿಗೆ ಅವರು ತಾವಾಗಿಯೇ ಶೌಚಾಲಯಕ್ಕೆ ಹೋಗುವುದನ್ನು ಕಲಿಸಬೇಕಾಗುತ್ತದೆ. ಹೀಗಾಗಿ ಈ ಸಮಯ ತಾಯಂದಿರಿಗೆ ಒಂದು ರೀತಿಯ ಸವಾಲಿನ ಅವಧಿಯೇ ಆಗಿದೆ.

ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಹೇಗಿರುತ್ತದೆ?

ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಹೇಗಿರುತ್ತದೆ?

ಮಾನವನ ಸಮಗ್ರ ಆರೋಗ್ಯಕ್ಕಾಗಿ ಜೀರ್ಣಶಕ್ತಿ ಉತ್ತಮವಾಗಿರುವುದು ಬಹಳೇ ಅಗತ್ಯ. ತಿಂದ ಆಹಾರವು ಸಮರ್ಪಕವಾಗಿ ಪಚನಗೊಂಡು ಅದರಲ್ಲಿನ ಅಗತ್ಯ ಪೌಷ್ಟಿಕಾಂಶಗಳನ್ನು ದೇಹ ಹೀರಿಕೊಂಡ ನಂತರ ಅಷ್ಟೇ ಸಮರ್ಪಕವಾಗಿ ತ್ಯಾಜ್ಯ ಶೌಚವನ್ನು ಸರಾಗವಾಗಿ ದೇಹ ಹೊರಹಾಕುತ್ತಿದ್ದರೆ ಅಂಥವರ ಜೀರ್ಣಶಕ್ತಿ ಆರೋಗ್ಯಕರವಾಗಿದೆ ಎಂದರ್ಥ. ಕರುಳಿನಲ್ಲಿರುವ ಟ್ರಿಲಿಯನ್ಗಟ್ಟಲೆ ಉಪಕಾರಿ ಬ್ಯಾಕ್ಟೀರಿಯಾಗಳಾದ ಬಿಫಿಡೊಬ್ಯಾಕ್ಟೀರಿಯಂ ಹಾಗೂ ಲ್ಯಾಕ್ಟೊಬ್ಯಾಸಿಲಸ್ಗಳು ಆಹಾರವು ಸೂಕ್ತವಾಗಿ ಪಚನವಾಗುವಂತೆ ಮಾಡುತ್ತವೆ.

ರೋಗ ನಿರೋಧಕ ಶಕ್ತಿಗೂ ಜೀರ್ಣಾಂಗ ವ್ಯವಸ್ಥೆಗೂ ಇದೆ ಸಂಬಂಧ!

ರೋಗ ನಿರೋಧಕ ಶಕ್ತಿಗೂ ಜೀರ್ಣಾಂಗ ವ್ಯವಸ್ಥೆಗೂ ಇದೆ ಸಂಬಂಧ!

ಸೆರಟೋನಿನ್ ಎಂಬುದು ಮನುಷ್ಯನ ಭಾವನೆಗಳನ್ನು ನಿಯಂತ್ರಿಸುವ ಹಾರ್ಮೋನ್ ಆಗಿದೆ. ಆದರೆ ದೇಹದ ಶೇ 95 ರಷ್ಟು ಸೆರಟೋನಿನ್ ಹಾರ್ಮೋನ್ ಇರುವುದೇ ಕರುಳಿನಲ್ಲಿ ಎಂಬುದು ಸತ್ಯ. ಇನ್ನು ಒಟ್ಟಾರೆ ಶೇ 70 ರಷ್ಟು ಮಾನವನ ರೋಗ ನಿರೋಧಕ ಶಕ್ತಿಯು ಉತ್ತಮ ಜೀರ್ಣಾಂಗ ವ್ಯವಸ್ಥೆಯಿಂದಲೇ ಬರುತ್ತದೆ ಎಂಬುದು ಮಹತ್ವದ ಸಂಗತಿಯಾಗಿದೆ.

ಮಲಬದ್ಧತೆಯ ಸಮಸ್ಯೆ ನಿರ್ಲಕ್ಷ್ಯ ಸಲ್ಲದು !

ಮಲಬದ್ಧತೆಯ ಸಮಸ್ಯೆ ನಿರ್ಲಕ್ಷ್ಯ ಸಲ್ಲದು !

ಮಲಬದ್ಧತೆ ಎಂಬುದು ನಿರ್ಲಕ್ಷಿಸುವ ವಿಷಯವಲ್ಲ. ತಾನಾಗಿಯೇ ಬಂದು ತಾನಾಗಿಯೇ ಸರಿಹೋಗುತ್ತದೆ ಬಿಡು ಎಂಬ ನಿರ್ಲಕ್ಷ್ಯ ಧೋರಣೆ ಮಕ್ಕಳ ವಿಷಯದಲ್ಲಿ ಬೇಡವೇ ಬೇಡ. ಮಕ್ಕಳಿಗೆ ಪದೇ ಪದೇ ಮಲಬದ್ಧತೆ ಸಮಸ್ಯೆ ಕಾಡಲಾರಂಭಿಸಿದರೆ ಮಗು ತಾನಾಗಿಯೇ ಶೌಚಕ್ಕೆ ಹೋಗುವ ಅಭ್ಯಾಸದಿಂದ ವಿಮುಖವಾಗಬಹುದು. ಇನ್ನು ಶೌಚ ಮಾಡುವಾಗ ಅತಿಯಾದ ಒತ್ತಡ ಹಾಕುವುದರಿಂದ ಗುದದ್ವಾರದಲ್ಲಿ ಬಿರುಕುಗಳಾಗಬಹುದು. ಶೌಚ ಮಾಡುವಾಗ ನೋವಾಗುತ್ತದಲ್ಲ ಎಂದು ಹೆದರುವ ಮಕ್ಕಳು ಆದಷ್ಟೂ ಶೌಚವನ್ನು ಹಿಡಿದಿಡುವ ಯತ್ನ ಮಾಡಬಹುದು. ಆಗ ಕರುಳಿನಲ್ಲೇ ಉಳಿಯುವ ಮಲ ಮತ್ತಷ್ಟು ಗಟ್ಟಿಯಾಗಿ ಸಮಸ್ಯೆ ಉಲ್ಬಣಿಸಬಹುದು.

ಮಗುವಿನ ಮಲಬದ್ಧತೆಯ ಸಮಸ್ಯೆ ನಿವಾರಣೆಗೆ ಏನು ಮನೆ ಮದ್ದು ಮಾಡಬಹುದು?

ಮಗುವಿನ ಮಲಬದ್ಧತೆಯ ಸಮಸ್ಯೆ ನಿವಾರಣೆಗೆ ಏನು ಮನೆ ಮದ್ದು ಮಾಡಬಹುದು?

ಮಗುವಿನ ಮಲಬದ್ಧತೆಯ ಸಮಸ್ಯೆ ನೀಗಿಸಲು ಪಾಲಕರು ಮನೆಯಲ್ಲಿಯೇ ಕೆಲ ಪರಿಹಾರೋಪಾಯಗಳನ್ನು ಕೈಗೊಳ್ಳಬಹುದು. ಮಗು ಆಗಾಗ ಹೆಚ್ಚು ನೀರು ಕುಡಿಯುವಂತೆ ಮತ್ತು ಜ್ಯೂಸ್ ಕುಡಿಯುವಂತೆ ನೋಡಿಕೊಳ್ಳುವುದು. ಜೊತೆಗೆ ಜೀರ್ಣಶಕ್ತಿ ಸುಧಾರಿಸಲು ಲಘು ವ್ಯಾಯಾಮ ಮಾಡಿಸುವುದು ಸಹಕಾರಿಯಾಗಬಹುದು. ಇನ್ನು ಸಮತೋಲಿತ ಹಾಗೂ ಪೌಷ್ಟಿಕ ಆಹಾರವನ್ನು ಸಮಯಕ್ಕೆ ಸರಿಯಾಗಿ ನೀಡಬೇಕು. ಊಟ ಮಾಡಿಸುವಾಗ ಒಮ್ಮೆಲೇ ಹೆಚ್ಚು ತಿನ್ನಿಸದೆ ಕಡಿಮೆ ಪ್ರಮಾಣದಲ್ಲಿ ತಿನ್ನುವಂತೆ ಹಾಗೂ ಆಹಾರವನ್ನು ಸರಿಯಾಗಿ ನುರಿಸಿ ನಿಧಾನವಾಗಿ ತಿನ್ನುವಂತೆ ಜಾಗರೂಕತೆ ವಹಿಸಬೇಕು.

ಇಷ್ಟೆಲ್ಲ ಮಾಡಿದರೂ ಕೆಲ ಬಾರಿ ಮಲಬದ್ಧತೆ ಕಡಿಮೆಯಾಗದಿರಬಹುದು. ಆಗ ಸೂಕ್ತವಾದ ಪ್ರಿಬಯಾಟಿಕ್ ಸಪ್ಲಿಮೆಂಟ್ ನೀಡಬಹುದು. (ಪ್ರಿಬಯಾಟಿಕ್ ಎಂಬುದನ್ನು ಪ್ರೊಬಯಾಟಿಕ್ ಎಂದು ಗೊಂದಲ ಮಾಡಿಕೊಳ್ಳದಿರಿ. ಎರಡೂ ಬೇರೆ ಬೇರೆ.) ಪ್ರಿಬಯಾಟಿಕ್ಗಳು ಜೀರ್ಣವಾಗದ ಸಪ್ಲಿಮೆಂಟ್ಗಳಾಗಿದ್ದು, ಜೀರ್ಣಶಕ್ತಿ ಸುಧಾರಣೆಗೆ ಸಹಾಯ ಮಾಡುತ್ತವೆ.

ಮಲಬದ್ಧತೆ ನಿವಾರಣೆಗೆ ವೈದ್ಯರ ಸಲಹೆ ಪಡೆಯುವುದು

ಮಲಬದ್ಧತೆ ನಿವಾರಣೆಗೆ ವೈದ್ಯರ ಸಲಹೆ ಪಡೆಯುವುದು

ಮೂರರಲ್ಲಿ ಒಂದು ಮಗು ಮಲಬದ್ಧತೆ ಸಮಸ್ಯೆಯಿಂದ ಬಳಲುವುದು ವಾಸ್ತವಾಂಶವಾಗಿದೆ. ಮಗುವಿನ ಜೀರ್ಣಶಕ್ತಿಯ ಬಗ್ಗೆ ಕೆಲ ಬಾರಿ ಪಾಲಕರು ಗಮನ ನೀಡುವುದಿಲ್ಲ. ಮಲಬದ್ಧತೆ ಆದಾಗ ಆರಂಭದಲ್ಲಿ ಒಂದೆರಡು ತಿಂಗಳು ಮನೆ ಮದ್ದು ಮಾಡಿ ಪಾಲಕರು ಮಕ್ಕಳನ್ನು ಡಾಕ್ಟರ್ ಬಳಿಗೆ ಕರೆದುಕೊಂಡು ಬರುತ್ತಾರೆ. ಆದರೆ ಸೂಕ್ತ ಸಮಯದಲ್ಲಿ ಇದಕ್ಕೆ ವೈದ್ಯಕೀಯ ಚಿಕಿತ್ಸೆ ಆರಂಭಿಸುವುದು ಸೂಕ್ತ. ಸಕಾಲದಲ್ಲಿ ಪ್ರಿಬಯಾಟಿಕ್ಸ್ ನೀಡುವುದರಿಂದ ಬಹುತೇಕ ಸಂದರ್ಭಗಳಲ್ಲಿ ಸಮಸ್ಯೆ ನಿವಾರಿಸಬಹುದು.

ಪ್ರಿಬಯಾಟಿಕ್‌ಗಳು ಕರುಳಿನಲ್ಲಿ ಉಪಕಾರಿ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡಿ ಒಟ್ಟಾರೆ ಜೀರ್ಣಶಕ್ತಿ ಸುಧಾರಿಸುವಂತೆ ಮಾಡುತ್ತವೆ ಹಾಗೂ ಕೆಟ್ಟ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ. ಮಲವನ್ನು ದ್ರವರೂಪಕ್ಕಿಳಿಸಿ ಶೌಚ ಸರಾಗವಾಗಿ ಹೊರಹೋಗುವಂತೆ ಪ್ರಿಬಯಾಟಿಕ್ಗಳು ಮಾಡುತ್ತವೆ.

ಬಾಳೆಹಣ್ಣು, ಈರುಳ್ಳಿ, ಬೆಳ್ಳುಳ್ಳಿ ಉತ್ತಮ ಪ್ರಿಬಯಾಟಿಕ್‌ಗಳು

ಬಾಳೆಹಣ್ಣು, ಈರುಳ್ಳಿ, ಬೆಳ್ಳುಳ್ಳಿ ಉತ್ತಮ ಪ್ರಿಬಯಾಟಿಕ್‌ಗಳು

ಹಲವಾರು ತರಕಾರಿ ಮತ್ತು ಹಣ್ಣುಗಳು ಉತ್ತಮ ಪ್ರಿಬಯಾಟಿಕ್ಗಳಾಗಿವೆ. ಬಾಳೆಹಣ್ಣು, ಬೆಳ್ಳುಳ್ಳಿ ಮತ್ತು ಈರುಳ್ಳಿಗಳು ಪ್ರಿಬಯಾಟಿಕ್ ಅಂಶಗಳನ್ನು ಹೊಂದಿವೆ, ಆದರೆ ಕೆಲ ಮಕ್ಕಳು ಸರಿಯಾಗಿ ತಿನ್ನಲು ಹಟ ಮಾಡುತ್ತವೆ. ಅಂಥದರಲ್ಲಿ ಇವೆಲ್ಲವನ್ನು ತಿನ್ನಿಸುವುದಾದರೂ ಹೇಗೆ ಎಂಬ ಚಿಂತೆ ಪಾಲಕರಿಗೆ ಕಾಡುತ್ತದೆ. ಇಂಥ ಸಮಸ್ಯೆಯ ನಿವಾರಣೆಗೆ ಅಬಾಟ್ ಇಂಡಿಯಾದ ಮೆಡಿಕಲ್ ಡೈರೆಕ್ಟರ್ ಡಾ. ಶ್ರೀರೂಪಾ ದಾಸ್ ಹೀಗೆ ಹೇಳುತ್ತಾರೆ-

"ಮಲಬದ್ಧತೆಯು ದೀರ್ಘಾವಧಿಯ ಸಮಸ್ಯೆಯಾಗಿರುತ್ತದೆ. ಶೌಚಕ್ರಿಯೆಯು ನಿಯಮಿತವಾಗುವಂತೆ ನೋಡಿಕೊಳ್ಳುವುದು ಈ ಸಮಸ್ಯೆಗೆ ಪರಿಹಾರವಾಗಿದೆ. ಮಲಬದ್ಧತೆಯನ್ನು ಬೇಗ ಗುಣಪಡಿಸಬಹುದು. ಆದರೆ ಮಲಬದ್ಧತೆ ಇರುವ ಮಕ್ಕಳ ಪೈಕಿ ಕೇವಲ ಶೇ 30 ರಷ್ಟು ಪಾಲಕರು ಮಾತ್ರ ತಮ್ಮ ಮಕ್ಕಳನ್ನು ವೈದ್ಯರ ಬಳಿ ಕರೆದೊಯ್ಯುತ್ತಾರೆ. ಅದರಲ್ಲೂ ಕೆಲವರು ವೈದ್ಯರ ಸಲಹೆಯಂತೆ ನಡೆದುಕೊಳ್ಳದೇ ಸಮಸ್ಯೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿಕೊಳ್ಳುತ್ತಾರೆ. ಇಂಥ ಎಲ್ಲ ಸಮಸ್ಯೆಗಳ ನಿವಾರಣೆಗೆ ಲಭ್ಯವಿರುವ ಪ್ರಿಬಯಾಟಿಕ್ ಲ್ಯಾಕ್ಟುಟೋಸ್ ಹೊಂದಿರುವ ನಮ್ಮ ಉತ್ಪನ್ನವನ್ನು ಬಳಸಬಹುದು."

ಮಗುವಿನ ಸಮಗ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಜೀರ್ಣಶಕ್ತಿ ಉತ್ತಮವಾಗಿರುವುದು ಅತಿ ಅಗತ್ಯ. ಮಗುವಿಗೆ ಯಾವಾಗಲೂ ಸಮತೋಲಿತ ಆಹಾರ ನೀಡುವುದು. ಮಗು ಸಾಕಷ್ಟು ಆಟೋಟಗಳಲ್ಲಿ ತೊಡಗಿಕೊಳ್ಳುವುದು, ಅವಶ್ಯವಿರುವಷ್ಟು ನೀರು ಕುಡಿಯುವಂತೆ ನೋಡಿಕೊಳ್ಳುವುದು ಮತ್ತು ಅಗತ್ಯವಿದ್ದಾಗ ಸಪ್ಲಿಮೆಂಟ್ಗಳನ್ನು ನೀಡುವುದು ಪಾಲಕರ ಆದ್ಯ ಕರ್ತವ್ಯವಾಗಿದೆ.

English summary

Ways To Improve Your Child's Digestive Health

If your kid facing constipation, here are ways to improve your child digestive health, Read on...
Story first published: Wednesday, November 4, 2020, 13:24 [IST]
X
Desktop Bottom Promotion