For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಮಲೇರಿಯಾ: ಲಕ್ಷಣಗಳು ಹಾಗೂ ಚಿಕಿತ್ಸೆ, ತಡೆಗಟ್ಟುವುದು ಹೇಗೆ?

|

ಸೊಳ್ಳೆಯಿಂದ ಹರಡುವ ರೋಗಗಳಲ್ಲಿ ಒಂದು ಮಲೇರಿಯಾ. ಮಲೇರಿಯಾ ಎಂಬುವುದು ಒಂದು ಅಪಾಯಕಾರಿಯಾದ ರೋಗವೇ ಆಗಿದೆ. ಸ್ವಲ್ಪ ಹೆಚ್ಚು-ಕಮ್ಮಿಯಾದರೆ ಜೀವಕ್ಕೂ ಕುತ್ತು ಬರಬಹುದು.

Malaria in kids

ಅದರಲ್ಲೂ ಮಕ್ಕಳಲ್ಲಿ ಮಲೇರಿಯಾ ಕಂಡು ಬಂದ್ರೆ ತುಂಬಾನೇ ಎಚ್ಚರವಹಿಸಬೇಕು. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಅಲ್ಲದೆ ಮಕ್ಕಳಿಗೆ ಸೊಳ್ಳೆ ಕಚ್ಚದಂತೆ ರಕ್ಷಣೆ ಮಾಡುವುದು ಕೂಡ ಮುಖ್ಯ. ಈ ಲೇಖನದಲ್ಲಿ ಮಕ್ಕಳಲ್ಲಿ ಮಲೇರಿಯಾ ರೋಗ ಕಂಡು ಬಂದಾಗ ಕಂಡು ಬರುವ ಲಕ್ಷಣಗಳು, ಚಿಕಿತ್ಸೆಯೇನು, ತಡೆಗಟ್ಟುವುದು ಹೇಗೆ ಎಂದು ಹೇಳಲಾಗಿದೆ ನೋಡಿ:

ಮಲೇರಿಯಾ ರೋಗದ ಲಕ್ಷಣಗಳು:

ಮಲೇರಿಯಾ ರೋಗದ ಲಕ್ಷಣಗಳು:

ಜ್ವರ

ವಿಪರೀತ ಚಳಿ

ನಿರ್ಧಿಷ್ಟ ಕಾರಣವಲ್ಲದ ಕಿರಿಕಿರಿ

ತಲೆನೋವು

ವಾಕರಿಕೆ ಮತ್ತು ವಾಂತಿ

ಅತಿಸಾರ

ಕಿಬ್ಬೊಟ್ಟೆ ನೋವು

ಮಾಂಸಖಂಡಗಳಲ್ಲಿ ಅಥವಾ ಕೀಲುಗಳಲ್ಲಿ ನೋವು

ತಲೆಸುತ್ತಿದಂತಾಗುವುದು

ವೇಗವಾಗಿ ಉಸಿರಾಡುವುದು

ವೇಗಗೊಂಡ ಹೃದಯ ಬಡಿತ

ಕೆಮ್ಮು

ಆಗಾಗ ಬರಬಹುದು

ಆಗಾಗ ಬರಬಹುದು

ಮಲೇರಿಯಾ ಪೀಡಿತರಾಗಿರುವ ಕೆಲವರು, ಮಲೇರಿಯಾ "ದಾಳಿಗಳ" ಚಕ್ರಗಳನ್ನು ಆಗಾಗ್ಗೆ ಅನುಭವಿಸುತ್ತಿರುತ್ತಾರೆ. ವ್ಯಕ್ತಿಯನ್ನು ಮಲೇರಿಯಾವು ಕಾಡಲಾರಂಭಿಸಿದಾಗ, ಆರಂಭದಲ್ಲಿ ಅದು ಮೈ ನಡುಗಿಸುವ ವಿಪರೀತ ಚಳಿಯ ರೂಪದಲ್ಲಿ ಅನಾವರಣಗೊಳ್ಳುತ್ತದೆ. ಅದರ ಹಿಂದೆಯೇ ಅತ್ಯಧಿಕ ದೇಹ ತಾಪಮಾನದೊಂದಿಗೆ ಜ್ವರವು ಶುರುವಿಟ್ಟುಕೊಳ್ಳುತ್ತದೆ, ಅದಾದ ಬಳಿಕ ರೋಗಿಯು ವಿಪರೀತ ಬೆವತು, ಮತ್ತೆ ಪುನ: ರೋಗಿಯ ದೇಹವು ಸಹಜ ಉಷ್ಣತೆಗೆ ಮರಳುತ್ತದೆ.

ಸೋಂಕಿತ ಸೊಳ್ಳೆಯ ಕಡಿತಕ್ಕೊಳಗಾದ ಕೆಲವೇ ಕೆಲವು ವಾರಗಳೊಳಗೆ ಮಲೇರಿಯಾದ ಚಿಹ್ನೆಗಳು ಹಾಗೂ ರೋಗ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಆದಾಗ್ಯೂ, ಕೆಲಬಗೆಯ ಮಲೇರಿಯಾ ಪರಾವಲಂಬಿಗಳು ಸರಿಸುಮಾರು ಒಂದು ವರ್ಷದವರೆಗೂ ನಿಮ್ಮ ದೇಹದಲ್ಲಿ ನಿಷ್ಕ್ರಿಯವಾಗಿ ನೆಲೆಸಿರುವ ಸಾಧ್ಯತೆ ಇರುತ್ತದೆ.

ವೈದ್ಯರನ್ನು ಯಾವಾಗ ಕಾಣಬೇಕು ?

ವೈದ್ಯರನ್ನು ಯಾವಾಗ ಕಾಣಬೇಕು ?

ಮಲೇರಿಯಾ ಸೋಂಕಿನ ಅಪಾಯವು ಅತ್ಯಧಿಕವಾಗಿರುವ ಪ್ರದೇಶಕ್ಕೆ ಪ್ರಯಾಣಿಸುತ್ತಿರುವಾಗ ಅಥವಾ ಪ್ರಯಾಣಿಸಿದ ಬಳಿಕ, ಜ್ವರವೇನಾದರೂ ಕಂಡುಬಂದಲ್ಲಿ, ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿರಿ. ರೋಗ ಲಕ್ಷಣಗಳು ತೀವ್ರ ಸ್ವರೂಪದ್ದಾಗಿದ್ದಲ್ಲಿ, ತುರ್ತು ವೈದ್ಯಕೀಯ ನೆರವನ್ನು ಪಡೆಯಿರಿ.

ಸೊಳ್ಳೆ ಹರಡುವ ವಿಧಾನ

ಸೊಳ್ಳೆ ಹರಡುವ ವಿಧಾನ

ಕಾರಣಗಳು

ಜೀನಸ್ ಪ್ಲಾಸ್ಮೋಡಿಯಂ ವರ್ಗಕ್ಕೆ ಸೇರಿರುವ ಏಕ-ಕೋಶೀಯ ಪರಾವಲಂಬಿ ಜೀವಿಯು ಮಲೇರಿಯಾ ರೋಗಕ್ಕೆ ಕಾರಣ. ಈ ಪರಾವಲಂಬಿ ಜೀವಿಯು ಸೊಳ್ಳೆ ಕಡಿತಗಳ ಮೂಲಕ ತೀರಾ ಸಾಮಾನ್ಯವಾಗಿ ಮಾನವರಿಗೆ ಹರಡುತ್ತದೆ.

ಸೊಳ್ಳೆಯ ಪ್ರಸರಣ ಚಕ್ರ

ಸೋಂಕಿಗೆ ತುತ್ತಾಗದ ಸೊಳ್ಳೆ: ಮಲೇರಿಯಾ ರೋಗಿಯ ರಕ್ತವನ್ನು ಹೀರಿಕೊಳ್ಳುವ ಸೊಳ್ಳೆಯು ಸೋಂಕಿಗೀಡಾಗುತ್ತದೆ.

ಪರಾವಲಂಬಿಯ ಪ್ರಸರಣ: ಈ ಸೊಳ್ಳೆಯು ಮುಂದೆ ನಿಮ್ಮನ್ನು ಕಚ್ಚಿತೆಂದಾದಲ್ಲಿ, ಅದು ಮಲೇರಿಯಾ ಪರಾವಲಂಬಿಗಳನ್ನು ನಿಮ್ಮ ದೇಹಕ್ಕೆ ಸೇರಿಸಬಲ್ಲದು.

ಪಿತ್ತಕೋಶದಲ್ಲಿ: ಪರಾವಲಂಬಿಗಳು ಒಮ್ಮೆ ನಿಮ್ಮ ಶರೀರವನ್ನು ಪ್ರವೇಶಿಸಿದ ಬಳಿಕ, ಅವು ಪಿತ್ತಕೋಶದತ್ತ ಚಲಿಸುತ್ತವೆ ಹಾಗೂ ಈ ಪಿತ್ತಕೋಶದಲ್ಲಿ ಪರಾವಲಂಬಿಗಳ ಕೆಲಪ್ರಕಾರಗಳು ಸುಮಾರು ಒಂದು ವರ್ಷದವರೆಗೂ ನಿಷ್ಕ್ರಿಯವಾಗಿ ಹಾಗೆಯೇ ಇರಬಲ್ಲವು.

ರಕ್ತಪ್ರವಾಹಕ್ಕೆ: ಪರಾವಲಂಬಿಗಳು ಪ್ರೌಢವಾದಾಗ, ಅವು ಪಿತ್ತಕೋಶವನ್ನು ಬಿಟ್ಟು ಹೊರಬರುತ್ತವೆ ಹಾಗೂ ನಿಮ್ಮ ಕೆಂಪು ರಕ್ತಕಣಗಳನ್ನು ಸೋಂಕಿಗೀಡು ಮಾಡುತ್ತವೆ. ಈ ಹಂತದಲ್ಲೇ ವ್ಯಕ್ತಿಯು ಮಾದರಿಯೆನಿಸುವಂತಹ ಮಲೇರಿಯಾದ ರೋಗ ಲಕ್ಷಣಗಳನ್ನು ಪಡೆದುಕೊಳ್ಳುವುದು.

ಮತ್ತೊಬ್ಬ ವ್ಯಕ್ತಿಗೆ: ಮಲೇರಿಯಾ ಪ್ರಸರಣ ಚಕ್ರದ ಈ ಹಂತದಲ್ಲಿ, ಸೋಂಕಿಗೆ ತುತ್ತಾಗಿರದ ಸೊಳ್ಳೆಯೊಂದು ಈಗ ನಿಮ್ಮನ್ನೇನಾದರೂ ಕಚ್ಚಿದಲ್ಲಿ, ಆ ಸೊಳ್ಳೆಯೂ ಕೂಡ ನಿಮ್ಮ ದೇಹದ ಮಲೇರಿಯಾ ಪರಾವಲಂಬಿಗಳ ಮೂಲಕ ಸೋಂಕಿಗೀಡಾಗುತ್ತದೆ ಹಾಗೂ ತಾನು ಕಚ್ಚುವ ಇತರರಿಗೂ ಮಲೇರಿಯಾ ಪರಾವಲಂಬಿಗಳನ್ನು ಹರಡುತ್ತದೆ.

 ಪ್ರಸರಣದ ಇನ್ನಿತರ ವಿಧಾನಗಳು

ಪ್ರಸರಣದ ಇನ್ನಿತರ ವಿಧಾನಗಳು

ಮಲೇರಿಯಾಕ್ಕೆ ಕಾರಣವಾಗುವ ಪರಾವಲಂಬಿಗಳು ಕೆಂಪು ರಕ್ತಕಣಗಳನ್ನು ಪ್ರಭಾವಿಸುವ ಕಾರಣದಿಂದಾಗಿ, ಸೋಂಕಿತ ರಕ್ತದ ಸಂಪರ್ಕಕ್ಕೆ ಬರುವುದರ ಮೂಲಕವೂ ಜನರು ಮಲೇರಿಯಾ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ಸೋಂಕಿತ ರಕ್ತವು ಈ ಕೆಳಗೆ ಪಟ್ಟಿ ಮಾಡಿರುವ ವಿಧಾನಗಳ ಮೂಲಕ ಮಲೇರಿಯಾವನ್ನು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿಸುತ್ತದೆ:

ತಾಯಿಯಿಂದ ಇನ್ನೂ ಹುಟ್ಟದೇ ಇರುವ ಮಗುವಿಗೆ

ಸೋಂಕಿತ ವ್ಯಕ್ತಿಯ ರಕ್ತವನ್ನು ಪಡೆದುಕೊಂಡಾಗ (ಬ್ಲಡ್ ಟ್ರಾನ್ಫ಼್ಯೂಷನ್)

ಜೌಷಧಗಳನ್ನು ರಕ್ತನಾಳಕ್ಕೆ ಸೇರಿಸುವ ಬಳಸುವ ಸೂಜಿಗಳನ್ನು ಹಂಚಿಕೊಂಡಾಗ

ಮಲೇರಿಯಾದ ಅಪಾಯಕ್ಕೆ ಕಾರಣವಾಗುವ ಅಂಶಗಳು

ಮಲೇರಿಯಾದ ಅಪಾಯಕ್ಕೆ ಕಾರಣವಾಗುವ ಅಂಶಗಳು

ಮಲೇರಿಯಾ ರೋಗಕ್ಕೆ ತುತ್ತಾಗಲು ಕಾರಣವಾಗುವ ಅತ್ಯಂತ ಅಪಾಯಕರ ಅಂಶವೆಂದರೆ, ಮಲೇರಿಯಾವು ಸರ್ವೇಸಾಮಾನ್ಯವಾಗಿ ಕಂಡುಬರುವ ಪ್ರದೇಶದಲ್ಲಿ ವಾಸವಿರುವುದು ಅಥವಾ ಅಂತಹ ಪ್ರದೇಶಕ್ಕೆ ಭೇಟಿ ನೀಡುವುದು.

ಸಹಾರಾ ಉಪವಲಯದ ಆಫ್ರಿಕಾ, ದಕ್ಷಿಣ ಹಾಗೂ ಆಗ್ನೇಯ ಏಷ್ಯಾ, ಫೆಸಿಫಿಕ್ ದ್ವೀಪಗಳು, ಅಮೇರಿಕಾದ ಕೇಂದ್ರ ಭಾಗ ಹಾಗೂ ಉತ್ತರ ಅಮೇರಿಕಾದ ದಕ್ಷಿಣ ಭಾಗಗಳ ಉಷ್ಣವಲಯದ ಹಾಗೂ ಉಪ ಉಷ್ಣವಲಯದ ಪ್ರದೇಶಗಳು ಮಲೇರಿಯಾವು ಸರ್ವೇಸಾಮಾನ್ಯವಾಗಿ ಕಂಡುಬರುವ ಪ್ರದೇಶಗಳಾಗಿವೆ.

ಸ್ಥಳೀಯವಾಗಿ ಮಲೇರಿಯಾದ ನಿಯಂತ್ರಣ ಮಟ್ಟ, ಮಲೇರಿಯಾ ದರಗಳಲ್ಲಿ ಋತುಮಾನಕ್ಕೆ ಹೊಂದಿಕೊಂಡಂತೆ ಬದಲಾವಣೆಗಳು, ಹಾಗೂ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳುವುದಕ್ಕೆ ನೀವು ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳ ಮೇಲೆ ಅಪಾಯದ ತೀವ್ರತೆಯು ಅವಲಂಬಿತವಾಗಿರುತ್ತದೆ.

ಮಲೇರಿಯಾದ ಮತ್ತಷ್ಟು ತೀವ್ರ ಸ್ವರೂಪದ ಅಪಾಯಗಳು ಈ ಕೆಳಗಿನವರಲ್ಲಿ ಕಂಡುಬರುತ್ತದೆ:

ಮಲೇರಿಯಾದ ಮತ್ತಷ್ಟು ತೀವ್ರ ಸ್ವರೂಪದ ಅಪಾಯಗಳು ಈ ಕೆಳಗಿನವರಲ್ಲಿ ಕಂಡುಬರುತ್ತದೆ:

ಪುಟ್ಟ ಮಕ್ಕಳಲ್ಲಿ ಹಾಗೂ ಎಳೆಯ ಕಂದಮ್ಮಗಳಲ್ಲಿ

ಹಿರಿಯ ನಾಗರೀಕರಲ್ಲಿ

ಮಲೇರಿಯಾದ ಹಾವಳಿಯಿಲ್ಲದ ಪ್ರದೇಶದಿಂದ ಆಗಮಿಸುವ ಪ್ರವಾಸಿಗರಲ್ಲಿ

ಗರ್ಭಿಣಿಯರು ಹಾಗೂ ಇನ್ನೂ ಜನಿಸದ ಅವರ ಗರ್ಭಸ್ಥ ಶಿಶುಗಳು

ಮಲೇರಿಯಾ ಪ್ರಕರಣಗಳು ಅತ್ಯಂತ ಹೆಚ್ಚಾಗಿ ಕಂಡುಬರುವ ಅನೇಕ ದೇಶಗಳಲ್ಲಿ ಪ್ರತಿಬಂಧಕೋಪಾಯಗಳ, ವೈದ್ಯೋಪಚಾರದ ಹಾಗೂ ಮಾಹಿತಿಯ ಸರಿಯಾದ ಲಭ್ಯತೆ ಇಲ್ಲದಿರುವ ಸನ್ನಿವೇಶಗಳಲ್ಲಿ ಮಲೇರಿಯಾವೆಂಬ ಪಿಡುಗು ಇನ್ನಷ್ಟು ಬಿಗಡಾಯಿಸುತ್ತದೆ.

ರೋಗನಿರೋಧಕ ಶಕ್ತಿಯು ಕುಂಠಿತಗೊಂಡೀತು

ರೋಗನಿರೋಧಕ ಶಕ್ತಿಯು ಕುಂಠಿತಗೊಂಡೀತು

ಮಲೇರಿಯಾ ರೋಗವು ಸರ್ವೇಸಾಮಾನ್ಯವಾಗಿ ಕಂಡುಬರುವ ಪ್ರದೇಶಗಳಲ್ಲಿ ವಾಸಿಸುವ ಮಂದಿ, ಪದೇ ಪದೇ ಮಲೇರಿಯಾಕ್ಕೆ ತುತ್ತಾಗುವ ಕಾರಣದಿಂದಾಗಿ, ಮಲೇರಿಯಾದ ವಿರುದ್ಧ ಭಾಗಶ: ರೋಗನಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುವ ಸಾಧ್ಯತೆ ಇದೆ ಮತ್ತು ಈ ಕಾರಣದಿಂದಾಗಿ, ಅವರಲ್ಲಿ ಮಲೇರಿಯಾ ರೋಗ ಲಕ್ಷಣಗಳ ತೀವ್ರತೆಯು ಕಡಿಮೆಯಾಗುವ ಸಂಭವವೂ ಇದೆ. ಆದಾಗ್ಯೂ, ಒಂದೊಮ್ಮೆ ಆ ಜನರು ಮಲೇರಿಯಾ ಪರಾವಲಂಬಿಯ ಉಪಟಳವು ಹೆಚ್ಚಾಗಿ ಕಂಡುಬರದೇ ಇರುವ ಪ್ರದೇಶಕ್ಕೇನಾದರೂ ವರ್ಗಾವಣೆಗೊಂಡು ಅಲ್ಲಿಯೇ ನೆಲೆ ನಿಂತರೆ, ಕಾಲಕ್ರಮೇಣ ಅವರು ಗಳಿಸಿಕೊಂಡಿದ್ದ ಆ ಭಾಗಶ: ರೋಗನಿರೋಧಕಶಕ್ತಿಯು ನಷ್ಟವಾಗುವ ಸಂಭವೂ ಇದೆ.

ಮಲೇರಿಯಾ ಸೋಂಕಿನ ಗಂಭೀರ ಸ್ವರೂಪಗಳು

ವಿಶೇಷವಾಗಿ ಆಫ್ರಿಕಾ ದೇಶದಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ಪ್ಲಾಸ್ಮೋಡಿಯಂ ಪ್ರಬೇಧದ ಪರಾವಲಂಬಿಗಳ ಕಾರಣದಿಂದ ಮಲೇರಿಯಾವು ಉಂಟಾಗಿದ್ದಲ್ಲಿ, ಅದು ಮಾರಣಾಂತಿಕವಾದೀತು. ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜಿಸುವ ಪ್ರಕಾರ, ಸುಮಾರು 94% ದಷ್ಟು ಎಲ್ಲ ಮಲೇರಿಯಾ ಸಾವುಗಳು ಆಫ್ರಿಕಾದಲ್ಲಿಯೇ ಸಂಭವಿಸುತ್ತವೆ ಹಾಗೂ ಈ ಸಾವಿನ ಪ್ರಕರಣಗಳು ಅತ್ಯಂತ ಸಾಮಾನ್ಯವಾಗಿ ಕಂಡುಬರುವುದು 5 ವರ್ಷಗಳಿಗಿಂತ ಕಡಿಮೆ ವಯೋಮಾನದ ಮಕ್ಕಳಲ್ಲಿ.

ಅಪಾಯ ಯಾವಾಗ?

ಅಪಾಯ ಯಾವಾಗ?

ಮಲೇರಿಯಾ ಸಾವುಗಳು ಸಾಮಾನ್ಯವಾಗಿ ಈ ಕೆಳಗಿನವುಗಳನ್ನು ಒಳಗೊಂಡಂತೆ ಒಂದು ಅಥವಾ ಎರಡು ಹೆಚ್ಚು ಗಂಭೀರ ಸ್ವರೂಪದ ಅನಾರೋಗ್ಯ ಕಾರಣಗಳೊಂದಿಗೆ ಸಂಬಂಧ ಹೊಂದಿರುತ್ತವೆ:

ಸೆರೆಬ್ರಲ್ ಮಲೇರಿಯಾ: ನಿಮ್ಮ ಮೆದುಳಿಗೆ ರಕ್ತವನ್ನು ಪೂರೈಸುವ ಚಿಕ್ಕ ರಕ್ತನಾಳಗಳಲ್ಲಿ ಪರಾವಲಂಬಿಗಳಿಂದ ತುಂಬಿಕೊಂಡಿರುವ ಕೆಂಪು ರಕ್ತಕಣಗಳು ಅಡಚಣೆಯನ್ನುಂಟು ಮಾಡಿದರೆ (ಸೆರೆಬ್ರಲ್ ಮಲೇರಿಯಾ), ನಿಮ್ಮ ಮೆದುಳು ಊದಿಕೊಂಡೀತು ಇಲ್ಲವೇ ಮೆದುಳು ಹಾನಿಗೀಡಾದೀತು. ಸೆರೆಬ್ರಲ್ ಮಲೇರಿಯಾವು ಬವಳಿಗಳಿಗೆ ಹಾಗೂ ಕೋಮಾಕ್ಕೆ ಕಾರಣವಾದೀತು.

ಉಸಿರಾಟದ ತೊಂದರೆಗಳು: ನಿಮ್ಮ ಶ್ವಾಸಕೋಶಗಳಲ್ಲಿ ಸಂಚಯಗೊಂಡ ದ್ರವವು (ಪಲ್ಮೊನರಿ ಎಡಿಮಾ) ಉಸಿರಾಟದ ತೊಂದರೆಗೆ ಕಾರಣವಾದೀತು.

ಅಂಗ ವೈಫಲ್ಯ: ಮಲೇರಿಯಾವು ಮೂತ್ರಪಿಂಡಗಳನ್ನು ಅಥವಾ ಪಿತ್ತಕೋಶವನ್ನು ಹಾನಿಗೊಳಿಸಬಲ್ಲದು ಅಥವಾ ಪ್ಲೀಹ (ಸ್ಪ್ಲೀನ್) ವು ಹರಿದುಹೋಗುವಂತೆ ಮಾಡಬಲ್ಲದು. ಈ ಯಾವ ಪರಿಸ್ಥಿತಿಯೂ ಜೀವಕ್ಕೇ ಎರವಾದೀತು.

ರಕ್ತಹೀನತೆ: ನಿಮ್ಮ ದೇಹದ ಅಂಗಾಂಶಗಳಿಗೆ ಸಾಕಷ್ಟು ಪ್ರಾಣವಾಯುವನ್ನು ಪೂರೈಕೆ ಮಾಡಲು ಅತ್ಯಗತ್ಯವಾಗಿ ಬೇಕಾಗುವ ಕೆಂಪು ರಕ್ತಕಣಗಳ ನಾಶಕ್ಕೆ ಕಾರಣವಾದೀತು (ರಕ್ತಹೀನತೆ).

ಕುಂಠಿತಗೊಂಡ ರಕ್ತದ ಸಕ್ಕರೆಯ ಮಟ್ಟ: ಮಲೇರಿಯಾವನ್ನು ಹತ್ತಿಕ್ಕಲು ಸಾಮಾನ್ಯವಾಗಿ ಬಳಸಲ್ಪಡುವ ಕ್ವಿನೈನ್ ನಂತಹ ತೀವ್ರ ಪರಿಣಾಮವುಳ್ಳ ಜೌಷಧವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಗ್ಗಿಸುವ ಸಾಧ್ಯತೆ ಇದೆ (ಹೈಪೋಗ್ಲೈಸೇಮಿಯಾ). ರಕ್ತದಲ್ಲಿನ ಸಕ್ಕರೆಯ ಮಟ್ಟವು ತೀರಾ ಕೆಳಮಟ್ಟಕ್ಕೆ ಇಳಿದಲ್ಲಿ ರೋಗಿಯು ಕೋಮಾಕ್ಕೆ ಜಾರಬಹುದು ಅಥವಾ ಸಾಯಲೂ ಬಹುದು.

ಮಲೇರಿಯಾದ ಮರುಕಳಿಕೆ: ಮಲೇರಿಯಾ ರೋಗವು ಮಧ್ಯಮ ಸ್ವರೂಪದಲ್ಲಿ ಕಾಣಿಸಿಕೊಳ್ಳುವಂತೆ ಮಾಡುವ ಮಲೇರಿಯಾ ಪರಾವಲಂಬಿಗಳ ಕೆಲ ವಿಧಗಳು ಮಲೇರಿಯಾ ರೋಗಿಯಲ್ಲಿ ವರ್ಷಗಟ್ಟಲೆ ನೆಲೆಸುತ್ತವೆ ಹಾಗೂ ವ್ಯಕ್ತಿಯು ಪದೇ ಪದೇ ಮಲೇರಿಯಾಗೆ ತುತ್ತಾಗುವುದಕ್ಕೆ ಕಾರಣವಾಗುತ್ತವೆ.

ತಡೆಗಟ್ಟುವಿಕೆ

ತಡೆಗಟ್ಟುವಿಕೆ

ಮಲೇರಿಯಾ ಪ್ರಕರಣಗಳು ಸರ್ವೇಸಾಮಾನ್ಯವಾಗಿರುವ ಪ್ರದೇಶದಲ್ಲಿ ವಾಸಿಸುತ್ತಿರುವವರು ನೀವಾಗಿದ್ದಲ್ಲಿ ಅಥವಾ ಅಂತಹ ಪ್ರದೇಶಕ್ಕೆ ಪ್ರಯಾಣ ಮಾಡುತ್ತಿದ್ದಲ್ಲಿ, ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿರಿ. ಸೊಳ್ಳೆಗಳು ಮುಸ್ಸಂಜೆಯ ಹಾಗೂ ಮುಂಜಾವಿನ ನಡುವಿನ ಅವಧಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಹಾಗಾಗಿ, ಇಂತಹ ಸೊಳ್ಳೆಗಳಿಂದ ಸ್ವಯಂ ರಕ್ಷಿಸಿಕೊಳ್ಳಲು ನೀವು ಮಾಡಬೇಕಾದುದೇನೆಂದರೆ:

ಮೈಯನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಿ: ಪ್ಯಾಂಟ್ ಗಳನ್ನು ಹಾಗೂ ಲಾಂಗ್ - ಸ್ಲೀವ್ಡ್ ಷರ್ಟ್ ಗಳನ್ನು ಧರಿಸಿರಿ. ನಿಮ್ಮ ಷರ್ಟ್ ನ ಕೆಳಭಾಗವನ್ನು ಪ್ಯಾಂಟ್ ನೊಳಗೆ ತೂರಿಸಿಕೊಳ್ಳಿರಿ, ಹಾಗೆಯೇ ನಿಮ್ಮ ಪ್ಯಾಂಟ್ ನ ಕೆಳಭಾಗಗಳನ್ನು ನಿಮ್ಮ ಕಾಲುಚೀಲಗಳೊಳಗೆ ತೂರಿಸಿರಿ.

ಕೀಟಾಣುಗಳನ್ನು ಹಿಮ್ಮೆಟ್ಟಿಸುವಂತಹ ಕ್ರೀಮ್ ಗಳನ್ನು ನಿಮ್ಮ ತ್ವಚೆಗೆ ಲೇಪಿಸಿಕೊಳ್ಳಿರಿ. ಪಾರಿಸಾರಿಕ ಸಂರಕ್ಷಣಾ ಏಜೆನ್ಸಿ (ಎನ್ವೈರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ) ಯೊಂದಿಗೆ ನೋಂದಾಯಿಸಲ್ಪಟ್ಟಿರುವ ಇನ್ಸ್ಸೆಕ್ಟ್ ರಿಪೆಲ್ಲೆಂಟ್ (ಕೀಟಾಣುಗಳನ್ನು ಹಿಮ್ಮೆಟ್ಟಿಸುವಂತಹ ಮುಲಾಮು) ಅನ್ನು ತೆರೆದಿಡಲ್ಪಟ್ಟಿರುವ ಯಾವುದೇ ತ್ವಚೆಯ ಮೇಲೆ ಲೇಪಿಸಿಕೊಳ್ಳಿರಿ. ಡಿಇಇಟಿ, ಪೈಕಾರಿಡಿನ್, ಐಆರ್3535, ಆಯಿಲ್ ಆಫ್ ಲೆಮನ್ ಯೂಕಲಿಪ್ಟಸ್ (ಒಎಲ್ ಇ), ಪಾರಾ-ಮೆನ್ಥೇನ್-3, 8-ಡಯೋಲ್ (ಪಿಎಮ್ ಡಿ) ಅಥವಾ 2 - ಅಂಡೆಕ್ಯಾನೋನ್ ಗಳನ್ನು ಒಳಗೊಂಡಿರುವ ರಿಪೆಲ್ಲೆಂಟ್ ಗಳನ್ನು ಇವು ಒಳಗೊಂಡಿವೆ. ಸ್ಪ್ರೇಯನ್ನು ನೇರವಾಗಿ ಮುಖಕ್ಕೆ ಸಿಂಪಡಿಸಿಕೊಳ್ಳುವುದು ಬೇಡ. 3 ವರ್ಷಗಳಿಗಿಂತಲೂ ಕಡಿಮೆ ವಯೋಮಾನದ ಮಕ್ಕಳಿಗೆ ಒಎಲ್ ಇ ಅಥವಾ ಪಿಎಮ್ ಡಿ ಗಳನ್ನೊಳಗೊಂಡಿರುವ ಉತ್ಪನ್ನಗಳನ್ನು ಬಳಸುವುದು ಬೇಡ.

ರಿಪೆಲ್ಲೆಂಟ್ ಅನ್ನು ನೀವು ಧರಿಸುವ ಬಟ್ಟೆಗಳಿಗೆ ಹಾಕಿರಿ. ಪರ್ಮೆಥ್ರಿನ್ ಅನ್ನು ಒಳಗೊಂಡಿರುವ ಸ್ಪ್ರೇಗಳನ್ನು ಧರಿಸುವ ಉಡುಪುಗಳಿಗೆ ಹಾಕುವುದು ಸುರಕ್ಷಿತವಾಗಿದೆ. ಸೊಳ್ಳೆಪರದೆಯಡಿಯಲ್ಲಿಯೇ ಮಲಗಿರಿ. ವಿಶೇಷವಾಗಿ ಪರ್ಮೆಥ್ರಿನ್ ನಂತಹ ಕೀಟನಾಶಕಗಳಿಂದ ಸಂಸ್ಕರಿತವಾದ ಬೆಡ್ ನೆಟ್ ಗಳು, ನೀವು ಮಲಗಿರುವಾಗ ಸೊಳ್ಳೆಗಳು ನಿಮ್ಮನ್ನು ಕಚ್ಚದಂತೆ ತಡೆಯಲು ನೆರವಾಗುತ್ತವೆ.

ಪ್ರತಿಬಂಧಾತ್ಮಕ ಜೌಷಧ

ಪ್ರತಿಬಂಧಾತ್ಮಕ ಜೌಷಧ

ಮಲೇರಿಯಾವು ಸರ್ವೇಸಾಮಾನ್ಯವಾಗಿ ಪ್ರಚಲಿತದಲ್ಲಿರುವ ಸ್ಥಳವೊಂದಕ್ಕೆ ನೀವು ಪ್ರಯಾಣಿಸಬೇಕಾದಲ್ಲಿ, ಮಲೇರಿಯಾ ಪರಾವಲಂಬಿಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೆರವಾಗುವುದಕ್ಕೆ, ಆ ಸ್ಥಳಕ್ಕೆ ಪ್ರಯಾಣಿಸುವ ಮೊದಲೇ, ಅಥವಾ ಪ್ರಯಾಣಿಸುವಾಗ, ಅಥವಾ ಅಲ್ಲಿಗೆ ಪ್ರವಾಸ ಮಾಡಿ ಮರಳಿದ ಬಳಿಕ ಜೌಷಧಗಳನ್ನು ತೆಗೆದುಕೊಳ್ಳಬೇಕೆ ಎಂಬುದರ ಕುರಿತು ಅಲ್ಲಿಗೆ ಪ್ರಯಾಣಿಸುವ ಕೆಲವು ತಿಂಗಳುಗಳಷ್ಟು ಮೊದಲೇ ನೀವು ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ.

ಸಾಧಾರಣವಾಗಿ, ಮಲೇರಿಯಾವನ್ನು ತಡೆಗಟ್ಟುವುದಕ್ಕಾಗಿ ತೆಗೆದುಕೊಳ್ಳುವ ಅವೇ ಜೌಷಧಗಳನ್ನು, ಮಲೇರಿಯಾದ ಚಿಕಿತ್ಸೆಗೂ ಬಳಸಲಾಗುತ್ತದೆ. ಎಲ್ಲಿಗೆ ಹಾಗೂ ಎಷ್ಟು ಕಾಲದವರೆಗೆ ನೀವು ಪ್ರಯಾಣಿಸಲಿದ್ದೀರಿ ಮತ್ತು ನಿಮ್ಮ ವೈಯಕ್ತಿಕ ಆರೋಗ್ಯ ಸ್ಥಿತಿಯು ಹೇಗಿದೆ ಎಂಬುದರ ಮೇಲೆ ಯಾವ ಜೌಷಧವನ್ನು ನೀವು ತೆಗೆದುಕೊಳ್ಳಬೇಕೆಂಬುದು ಅವಲಂಬಿತವಾಗಿರುತ್ತದೆ.

ಲಸಿಕೆ

ಸೋಂಕನ್ನು ತಡೆಗಟ್ಟುವುದಕ್ಕಾಗಿ ಸಂಶೋಧಕರು ಮಲೇರಿಯಾ ಲಸಿಕೆಗಳನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ, ಆದರೆ ಸದ್ಯಕ್ಕೆ ಲಸಿಕೆಗಳು ಪ್ರಾಯೋಗಿಕವಾಗಿದ್ದು, ಅವು ಸಾಮಾನ್ಯ ಬಳಕೆಗೆ ಅನುಮೋದನೆಯನ್ನು ಪಡೆದುಕೊಂಡಿಲ್ಲ.

English summary

Malaria in kids - Causes, Symptoms, Diagnosis, Treatment and Prevention in Kannada

Malaria in kids - Causes, Symptoms, Diagnosis, Treatment and Prevention tips, have a look.
X
Desktop Bottom Promotion