For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಅಸ್ತಮಾ: ನಿಯಂತ್ರಿಸುವುದು ಹೇಗೆ?

|

ಮಳೆಗಾಲ ಶುರುವಾಗಿದೆ, ಅಸ್ತಮಾ ಕಾಯಿಲೆ ಇರುವವರಿಗೆ ಮಳೆಗಾಲ, ಚಳಿಗಾಲ ಬಂತೆಂದರೆ ರೋಗ ಲಕ್ಷಣಗಳು ಉಲ್ಬಣವಾಗುವುದು. ಈ ಸಮಯದಲ್ಲಿ ಅಸ್ತಮಾ ಇರುವವರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು.

Childhood Asthma, Its Symptoms, Causes, Prevention & Treatment

ಇನ್ನು ಮಕ್ಕಳಿಗೆ ಅಸ್ತಮಾ ಕಾಯಿಲೆಯಿದ್ದರೆ ಪೋಷಕರ ಈ ಎರಡು ಸೀಸನ್‌ನಲ್ಲಿ ಮಕ್ಕಳ ಆಹಾರಕ್ರಮ, ಡ್ರೆಸ್‌ ಎಲ್ಲದರ ಬಗ್ಗೆ ಎಚ್ಚರಿಕೆವಹಿಸಬೇಕಾಗುತ್ತದೆ. ಅವರಿಗೆ ಶೀತವಾಗದಂತೆ ಬೆಚ್ಚಗೆ ಇಡಬೇಕಾಗುತ್ತದೆ.

ಈ ಲೇಖನದಲ್ಲಿ ಮಕ್ಕಳಿಗೆ ಅಸ್ತಮಾ ಇದೆ ಎಂದು ಸೂಚಿಸುವ ಲಕ್ಷಣಗಳಾವುವು ಹಾಗೂ ಅಸ್ತಮಾ ಕಾಯಿಲೆ ನಿಯಂತ್ರಣದಲ್ಲಿಡುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

ಮಕ್ಕಳಲ್ಲಿ ಅಸ್ತಮಾ ಕಾಯಿಲೆ:

ಮಕ್ಕಳಲ್ಲಿ ಅಸ್ತಮಾ ಕಾಯಿಲೆ:

ಚಿಕ್ಕ ಪ್ರಾಯದಲ್ಲಿ ಅಸ್ತಮಾ ಕಾಯಿಲೆ ಬಂದರೆ ಅದು ಅವರ ದಿನನಿತ್ಯದ ಚಟುವಟಿಕೆ ಹಾಗೂ ಬೆಳವಣಿಗೆ ಮೇಲೆ ಕಟ್ಟ ಪರಿಣಾಮ ಬೀರುತ್ತದೆ. ಅಸ್ತಮಾ ಇರುವ ಮಕ್ಕಳಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಇದರಿಂದಾಗಿ ಶಾಲೆಗೆ ಹೋಗಲು ತೊಂದರೆ ಉಂಟಾಗುತ್ತದೆ ಅವರಿಗೆ ಸರಿಯಾಗಿ ನಿದ್ದೆ ಮಾಡಲು ಕೂಡ ತೊಂದರೆ ಉಂಟಾಗುತ್ತದೆ.

ಅಸ್ತಮಾ ಕಾಯಿಲೆ ಬಂದರೆ ಅದನ್ನು ಶಾಶ್ವತವಾಗಿ ಇಲ್ಲವಾಗಿಸಲು ಸಾಧ್ಯವಿಲ್ಲ. ಆದರೆ ಸರಿಯಾದ ರೀತಿಯಲ್ಲಿ ಆರೈಕೆ ಹಾಗೂ ಮುನ್ನೆಚ್ಚರಿಕೆಯಿಂದ ನಿಯಂತ್ರಣದಲ್ಲಿಡಬಹುದು.

ಮಕ್ಕಳಲ್ಲಿ ಅಸ್ತಮಾ ಕಾಯಿಲೆಯ ಲಕ್ಷಣಗಳು

ಮಕ್ಕಳಲ್ಲಿ ಅಸ್ತಮಾ ಕಾಯಿಲೆಯ ಲಕ್ಷಣಗಳು

ಮಕ್ಕಳಲ್ಲಿ ಅಸ್ತಮಾ ಕಾಯಿಲೆಯ ಲಕ್ಷಣಗಳು ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಭಿನ್ನವಾಗಿರಲೂ ಬಹುದು. ಆದರೆ ಸಾಮಾನ್ಯವಾಗಿ ಈ ಲಕ್ಷಣಗಳು ಕಂಡು ಬರುತ್ತವೆ.

  • ಉಸಿರಾಡುವಾಗ ಗುಂಯ್-ಗುಂಯ್ ಶಬ್ದ ಕೇಳಿ ಬರುತ್ತದೆ
  • ಉಸಿರಾಟಕ್ಕೆ ತೊಂದರೆ
  • ಎದೆಯಲ್ಲಿ ಬಿಗಿಯಾದ ಅನುಭವ
  • ಆಗಾಗ ಕೆಮ್ಮು ಅದರಲ್ಲೂ ಸ್ವಲ್ಪ ಓಡಾಡಿ ಆಟ ಆಡಲು ಸಾಧ್ಯವಾಗುವುದಿಲ್ಲ
  • ಶಕ್ತಿ ಕಡಿಮೆ
  • ಕೆಮ್ಮು ಹೆಚ್ಚಾಗಿ ನಿದ್ದೆ ಮಾಡಲು ತೊಂದರೆ
  • ಸ್ನಾಯುಗಳಲ್ಲಿ ನೋವು
  • ತುಂಬಾ ಚಿಕ್ಕ ಮಗುವಾಗಿದ್ದರೆ ತಿನ್ನಲು ಕೂಡ ಕಷ್ಟಪಡುತ್ತದೆ.
  • ವಿಪರೀತ ಬೆವರು
  • ಮಾತನಾಡುವಾಗ ಮಧ್ಯದಲ್ಲಿ ನಿಲ್ಲಿಸಿ ಉಸಿರು ತೆಗೆದು ಮಾತನಾಡುತ್ತಾರೆ
  • ಉಸಿರನ್ನು ತೆಗೆದುಕೊಳ್ಳುವಾಗ ಹೊಟ್ಟೆಯನ್ನು ತುಂಬಾ ಒಳಕ್ಕೆ ಎಳೆದುಕೊಳ್ಳುತ್ತಾರೆ
  • ಮೂಗನ್ನು ಅಗಲಿಸುತ್ತಾರೆ
  • ಜೋರಾದ ಎದೆ ಬಡಿತ
  • ಎದೆನೋವು
  • ಮಕ್ಕಳಲ್ಲಿ ಅಸ್ತಮಾಕ್ಕೆ ಕಾರಣವೇನು?

    ಮಕ್ಕಳಲ್ಲಿ ಅಸ್ತಮಾಕ್ಕೆ ಕಾರಣವೇನು?

    ಮಕ್ಕಳಲ್ಲಿ ಅಸ್ತಮಾ ಸಮಸ್ಯೆಗೆ ಕಾರಣವೇನೆಂದು ನಿಖರ ಕಾರಣ ಹೇಳಲು ಸಾಧ್ಯವಿಲ್ಲ. ಈ ಕಾರಣಗಳಿಂದ ಅಸ್ತಮಾ ಬರಬಹುದೆಂದು ತಜ್ಞರು ತಿಳಿಸುತ್ತಾರೆ:

    • ಕಲುಷಿತ ವಾತಾವರಣ (ಹೊಗೆ, ಧೂಮಪಾನದ ಹೊಗೆ ಮುಂತಾದ ವಾಯು ಮಾಲಿನ್ಯ)
    • ವಂಶಪಾರಂಪರ್ಯವಾಗಿ ಬಂದ ಅಲರ್ಜಿ ಸಮಸ್ಯೆ
    • ಪೋಷಕರಿಗೆ ಅಸ್ತಮಾ ಇದ್ದರೆ
    • ಚಿಕ್ಕ ಪ್ರಾಯದಲ್ಲಿಯೇ ಗಾಳಿ ಅಲರ್ಜಿ
    •  ಮಕ್ಕಳಲ್ಲಿ ಅಸ್ತಮಾ ಸಮಸ್ಯೆ ಉಲ್ಭಣಗೊಳಿಸುವ ಅಂಶಗಳಾವುವು

      ಮಕ್ಕಳಲ್ಲಿ ಅಸ್ತಮಾ ಸಮಸ್ಯೆ ಉಲ್ಭಣಗೊಳಿಸುವ ಅಂಶಗಳಾವುವು

      ಮಕ್ಕಳಿಗೆ ಅಸ್ತಮಾ ಸಮಸ್ಯೆ ಉಲ್ಭಣವಾಗಲು ನಾನಾ ಕಾರಣಗಳಿವೆ, ಅವುಗಳೆಂದರೆ

      • ಜಿರಳೆ ಅಲರ್ಜಿ, ದೂಳು, ಸಾಕು ಪ್ರಾಣಿಗಳ ರೋಮ
      • ವಾಯು ಮಾಲಿನ್ಯ, ತಂಪಾದ ವಾತಾವರಣ, ರಾಸಾಯನಿಕ, ಕೆಲವೊಂದು ವಾಸನೆ
      • ಗಾಳಿಯಿಂದ ಉಂಟಾಗುವ ಅಲರ್ಜಿಗಳೆಂದರೆ ಶೀತ, ಸೈನಸ್, ನ್ಯೂಮೋನಿಯಾ
      • ಮಾನಸಿಕ ಒತ್ತಡ
      • ದೈಹಿಕ ಚಟುವಟಿಕೆ
      • ಇನ್ನು ಕೆಲವು ಮಕ್ಕಳಲ್ಲಿ ಯಾವುದೇ ನಿಖರ ಕಾರಣವಿಲ್ಲದೆ ರೋಗ ಉಲ್ಭಣವಾಗುತ್ತದೆ.

        ಮಕ್ಕಳಲ್ಲಿ ಅಸ್ತಮಾ ಬರಲು ಇತರ ಕಾರಣಗಳು

        ಮಕ್ಕಳಲ್ಲಿ ಅಸ್ತಮಾ ಬರಲು ಇತರ ಕಾರಣಗಳು

        • ಅಲರ್ಜಿ, ತ್ವಚೆ ಅಲರ್ಜಿ, ಕೆಲವೊಂದು ಆಹಾರಗಳಿಂದ ಉಂಟಾಗುವ ಅಲರ್ಜಿ
        • ತುಂಬಾ ಸಮಯದಿಂದ ಶೀತದ ಸಮಸ್ಯೆ, ಸೈನಸ್ ಅಥವಾ ನ್ಯೂಮೋನಿಯಾ
        • ತಾಯಿಯ ತಂಬಾಕು ಸೇವನೆಯ ಅಭ್ಯಾಸ
        • ಒಬೆಸಿಟಿ
        • ಕುಟುಂಬದಲ್ಲಿ ಯಾರಿಗಾದರೂ ಅಸ್ತಮಾ ಇದ್ದರೆ
        • ಎದೆಯುರಿ
        • ಗಂಡು ಮಕ್ಕಳಲ್ಲಿ ಅಸ್ತಮಾ ಹೆಚ್ಚಾಗಿ ಕಂಡು ಬರುತ್ತದೆ
        • ಅಸ್ತಮಾದಿಂದ ಉಂಟಾಗುವ ಅಪಾಯಗಳು

          ಅಸ್ತಮಾದಿಂದ ಉಂಟಾಗುವ ಅಪಾಯಗಳು

          • ಅಸ್ತಮಾ ಸಮಸ್ಯೆ ಅಧಿಕವಾದರೆ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಬೇಕು, ಇಲ್ಲದಿದ್ದರೆ ಅಪಾಯ.
          • ಮಕ್ಕಳಿಗೆ ಕಲಿಯಲು ತೊಂದರೆ ಉಂಟಾಗುವುದು, ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ, ತಲೆಸುತ್ತು ಉಂಟಾಗುತ್ತದೆ.
          • ಶ್ವಾಸಕೋಶಕ್ಕೆ ಶಾಶ್ವತ ಹಾನಿಯುಂಟಾಗುವುದು
          • ಯಾವುದೇ ದೈಹಿಕ ಚಟುವಟಿಕೆಯಲ್ಲಿ , ಆಟೋಟಗಳಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ
          • ಮಕ್ಕಳಲ್ಲಿ ಅಸ್ತಮಾ ಗುರುತಿಸುವುದು ಹೇಗೆ?

            ಮಕ್ಕಳಲ್ಲಿ ಅಸ್ತಮಾ ಗುರುತಿಸುವುದು ಹೇಗೆ?

            ಮಕ್ಕಳಲ್ಲಿ ಅಸ್ತಮಾ ಮೊದಲಿಗೆ ಕಂಡು ಹಿಡಿಯುವುದು ಕಷ್ಟ, ವೈದ್ಯರು ಈ ಕೆಳಗಿನ ಅಂಶಗಳನ್ನು ತಿಳಿದುಕೊಂಡು ಮಗುವಿಗೆ ಅಸ್ತಮಾ ಕಾಯಿಲೆಯೇ ಅಥವಾ ಇತರ ಕಾಯಿಲೆ ಇರಬಹುದೇ ಎಂಬುವುದನ್ನು ತಿಳಿಸುತ್ತಾರೆ.

            • ಗಾಳಿ ಅಲರ್ಜಿ (ದೂಳು, ಹೊಗೆ)
            • ಸೈನಸೈಟಿಸ್
            • ಆ್ಯಸಿಡ್ ರಿಫ್ಲೆಕ್ಸ್
            • ಉಸಿರಾಟದಲ್ಲಿ ತೊಂದರೆ
            • ಬ್ರಾಂಕಿಯೋಲೈಟಿಸ್ ಹಾಗೂ ಮತ್ತಿತರ ಉಸಿರಾಡದ ಸಮಸ್ಯೆಪತ್ತೆ ಹಚ್ಚುವುದು ಹೇಗೆ?

              ಗಂಟಲಿನ ಪರೀಕ್ಷೆ

            • ಎಕ್ಸೇಲ್ಡ್ ನೈಟ್ರಿಕ್ ಆಕ್ಸೈಡ್ ಪರೀಕ್ಷೆ
            • ತ್ವಚೆ ಅಲರ್ಜಿ ಪರೀಕ್ಷೆ
            • ಮಕ್ಕಳ ಅಸ್ತಮಾಕ್ಕೆ ಚಿಕಿತ್ಸೆ ಏನು?

              ಮಕ್ಕಳ ಅಸ್ತಮಾಕ್ಕೆ ಚಿಕಿತ್ಸೆ ಏನು?

              ಮಕ್ಕಳಲ್ಲಿ ರೋಗ ಲಕ್ಷಣ ನೋಡಿ ವೈದ್ಯರು ಸೂಕ್ತವಾದ ಔಷಧಿ ಸೂಚಿಸುತ್ತಾರೆ. ಮೂರು ವರ್ಷದ ಕೆಳಗಿನ ಮಕ್ಕಳಲ್ಲಿ ಅಸ್ತಮಾ ಲಕ್ಷಣಗಳು ಕಂಡ ಬಂದರೆ ವೈದ್ಯರು ಅದು ಅಸ್ತಮಾ ಇರಬಹುದೇ ಅಥವಾ ಮತ್ತಿತರ ಅಲರ್ಜಿ ಸಮಸ್ಯೆ ಇರಬಹುದೇ ಎಂದು ತಿಳಿಯಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತಿಳಿಸುತ್ತಾರೆ ಮಗುವಿಗೆ ಅಸ್ತಮಾವಿರುವುದು ತಿಳಿದು ಬಂದರೆ ದೀರ್ಘಕಾಲಿಕ ಔಷಧಿ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ, ಅವುಗಳೆಂದರೆ....

              • ಇನ್‌ಹೇಲ್ಡ್ ಕಾರ್ಟಿಸ್ಟಿರಾಯ್ಡ್
              • ಕಾಂಬಿನೇಷನ್ ಇನ್‌ಹೇಲರ್
              • ಇಮ್ಯೂನೋಮಾಡ್ಯೂಲೇಟರಿ ಏಜೆಂಟ್
              • ಓರಲ್ ಇಂಟ್ರಾವೇನಸ್ ಕಾರ್ಟಿಸ್ಟಿರಾಯ್ಡ್
              • ಮಕ್ಕಳಲ್ಲಿ ಅಸ್ತಮಾ ತಡೆಗಟ್ಟಬಹುದೇ?

                ಮಕ್ಕಳಲ್ಲಿ ಅಸ್ತಮಾ ತಡೆಗಟ್ಟಬಹುದೇ?

                ತುಂಬಾ ಮುನ್ನೆಚ್ಚರಿಕೆ ವಹಿಸಿದರೆ ಮಕ್ಕಳಲ್ಲಿ ಅಸ್ತಮಾ ಹೆಚ್ಚಾಗದಂತೆ ತಡೆಗಟ್ಟಬಹುದು ಅವುಗಳೆಂದರೆ:

                • ಮಕ್ಕಳನ್ನು ಬೆಚ್ಚಗೆ ಇಡಿ
                • ಮನೆ ಸ್ವಚ್ಛವಾಗಿಡಬೇಕು
                • ಮನೆಯನ್ನು ಆಗಾಗ ಸ್ವಚ್ಛ ಮಾಡುತ್ತಾ ಇರಬೇಕು, ದೂಳು ಕೂರಲು ಬಿಡಬಾರದು
                • ಆರೋಗ್ಯಕರ ಮೈತೂಕ
                • ಮಕ್ಕಳ ಎದುರುಗಡೆ ಧೂಮಪಾನ ಮಾಡಗೇಡಿ
                • ಮಕ್ಕಳನ್ನು ದೈಹಿಕ ಆಟಗಳನ್ನು ಆಡುವಂತೆ ಉತ್ತೇಜಿಸಿ. ಮೊಬೈಲ್, ಟಿವಿ ಮುಂದೆ ತುಂಬಾ ಹೊತ್ತು ಕೂರುವುದನ್ನು ತಪ್ಪಿಸಿ.
                • ಸಲಹೆ: ಅಸ್ತಮಾ ಇರುವ ಮಕ್ಕಳನ್ನು ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗುವಾಗ ಉಸಿರಾಟದ ತೊಂದರೆ ಉಂಟಾಗದಂತೆ ಸೂಕ್ತ ಮುನ್ನೆಚ್ಚರಿಕೆವಹಿಸಬೇಕು. ಉಸಿರಾಟಕ್ಕೆ ಅನುಕೂಲವಾಗುವ ಔಷಧಗಳು ಸದಾ ಬಳಿಯಲ್ಲಿರಬೇಕು. ನಿಯಮಿತವಾಗಿ ವೈದ್ಯರ ಸಲಹೆ ಪಡೆಯುತ್ತಿರಬೇಕು.

English summary

Childhood Asthma, Symptoms, Causes, Prevention & Treatment

Childhood asthma also termed as pediatric asthma, is the same as that of asthma reported in adults. However, childhood asthma has different symptoms in comparison to other types of asthma.
X
Desktop Bottom Promotion