For Quick Alerts
ALLOW NOTIFICATIONS  
For Daily Alerts

ಹೆಣ್ಣುಮಕ್ಕಳು ಋತುಮತಿಯಾಗುವ ಸರಾಸರಿ ವಯಸ್ಸೆಷ್ಟು? ಆಗ ಆಕೆಯನ್ನು ಪೋಷಕರು ಹೇಗೆ ನೋಡಿಕೊಳ್ಳಬೇಕು?

|

ಮೊನ್ನೆ ಮೊನ್ನೆಯಷ್ಟೇ ಫ್ರಾಕ್ ಹಾಕಿಕೊಂಡು ಎಲ್ಲರೊಂದಿಗೂ ಆಡಿಕೊಂಡು ಇದ್ದ ಮಗಳು ಋತುಮತಿಯಾದಾಗ ಅಥವಾ ಮೊದಲ ಬಾರಿಗೆ ಪಿರಿಯಡ್ಸ್ ಆದಾಗ ಕೆಲವು ಪೋಷಕರಿಗೆ ಆತಂಕವಾಗುವುದು ಸಹಜ. ಆದರೆ ಈ ಸಮಯದಲ್ಲಿ ಮಗಳ ಬಳಿ ಶಾಂತವಾಗಿ ಪ್ರತಿಕ್ರಿಯಿಸಬೇಕಾಗಿರುವುದು ಪೋಷಕರ ಕರ್ತವ್ಯ. ಅವರ ಮನದಲ್ಲಿ ಆಗುವ ಗೊಂದಲಗಳನ್ನು ದೂರಮಾಡಿ, ಅವರಿಗೆ ಆತ್ಮವಿಶ್ವಾಸ ತುಂಬಬೇಕು.

ಋತುಮತಿಯಾಗುವ ಸಹಜ ವಯಸ್ಸೆಷ್ಟು?:

ಋತುಮತಿಯಾಗುವ ಸಹಜ ವಯಸ್ಸೆಷ್ಟು?:

ತಜ್ಞರ ಪ್ರಕಾರ, ಇದೇ ವಯಸ್ಸಿಗೆ ಋತುಮತಿಯಾಗಬೇಕು ಎಂಬುದು ಇಲ್ಲ. ಆದರೆ ಹಿಂದೆ 14-16 ವರ್ಷಕ್ಕೆ ಋತುಮತಿಯಾಗುತ್ತಿದ್ದರು. ಈಗ 12-13 ವರ್ಷಕ್ಕೆ ಋತುಮತಿಯಾಗುತ್ತಾರೆ. ಇನ್ನು ಕೆಲವರು ಬಹಳ ಚಿಕ್ಕ ವಯಸ್ಸಿಗೆ ಆಗುತ್ತಾರೆ. ಅದು ಈಗಿರುವ ಜೀವನಶೈಲಿಯ ಪರಿಣಾಮ ಬಹಳ ಚಿಕ್ಕ ವಯಸ್ಸಿಗೆ ಋತುಮತಿಯಾದರೆ ಅದು ಸಾಮಾಜಿಕ, ಸಾಂಸ್ಕೃತಿಕ, ಭಾವನಾತ್ಮಕ ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಇದು ಕ್ಯಾನ್ಸರ್, ಹೃದ್ರೋಗದಂತಹ ಕಾಯಿಲೆಗಳಿಗೂ ಕಾರಣವಾಗಬಹುದು.

ಹುಡುಗಿಯರು 14 ವರ್ಷದೊಳಗೆ ಋತುಮತಿ ಆಗದಿದ್ದರೆ ಹೆಚ್ಚಿನ ಪರೀಕ್ಷೆಗಳಿಗೆ ವೈದ್ಯರನ್ನು ಸಂಪರ್ಕಿಸಬೇಕು. ಹುಡುಗಿಯರು 8 ವರ್ಷಕ್ಕಿಂತ ಮುಂಚೆ ಋತುಮತಿ ಆದರೂ ವೈದ್ಯರನ್ನು ಸಂಪರ್ಕಿಸಬೇಕು. ಇನ್ನು 6 ವರ್ಷಕ್ಕಿಂತ ಮುಂಚೆಯೇ ಹುಡುಗಿ ಋತುಮತಿ ಆದರೆ ಅದು ಖಂಡಿತವಾಗಿಯೂ ಆತಂಕಕಾರಿ ವಿಚಾರ ಮತ್ತು ಅದಕ್ಕೆ ಮೌಲ್ಯಮಾಪನದ ಅವಶ್ಯಕತೆ ಇದೆ.

ವಯಸ್ಸಿನ ವ್ಯತ್ಯಾಸವಾಗಲೂ ಕಾರಣವಾಗುವ ಅಂಶಗಳು:

ವಯಸ್ಸಿನ ವ್ಯತ್ಯಾಸವಾಗಲೂ ಕಾರಣವಾಗುವ ಅಂಶಗಳು:

ಮೊದಲ ಬಾರಿಗೆ ಪಿರಿಯಡ್ಸ್ ಆದಾಗ ವಯಸ್ಸಿನ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಿವೆ. ತಾಯಂದಿರು ಪಿರಿಯಡ್ಸ್ ಆದ ವಯಸ್ಸಿಗೂ ಅವರ ಹೆಣ್ಣುಮಕ್ಕಳು ಪಿರಿಯಡ್ಸ್ ಆಗುವ ವಯಸ್ಸಿಗೂ ಸಂಬಂಧ ಇದೆ. ಅಧಿಕ ತೂಕ ಹೊಂದಿರುವ ಹುಡುಗಿಯರು ಕಡಿಮೆ ತೂಕದ ಹುಡುಗಿಯರಿಗಿಂತ ಮುಂಚೆಯೇ ಪಿರಿಯಡ್ಸ್ ಆಗುತ್ತಾರೆ. ವ್ಯಾಯಾಮ ಮಾಡದವರಿಗಿಂತ, ಹೆಚ್ಚು ದೈಹಿಕ ಚಟುವಟಿಕೆಯನ್ನು ಮಾಡುವ ಹುಡುಗಿಯರು, ಕಡಿಮೆ ಜಂಕ್ ಫುಡ್ ತಿನ್ನುವವರು ಸ್ವಲ್ಪ ಸಮಯದ ನಂತರ ಪಿರಿಯಡ್ಸ್ ಆಗುತ್ತಾರೆ. ಕೆಲವು ಅಧ್ಯಯನಗಳು ಪ್ರಾಣಿ ಪ್ರೋಟೀನ್ ಮತ್ತು ಹಾಲಿನ ಸೇವನೆಯು ಬಹಳ ಬೇಹ ಪಿರಿಯಡ್ಸ್ ಆಗಲು ಕಾರಣವಾಗಬಹುದು. ಕೆಲವು ಅಧ್ಯಯನಗಳಲ್ಲಿ ನಗರಗಳಲ್ಲಿನ ಬಾಲಕಿಯರು ಗ್ರಾಮೀಣ ಪ್ರದೇಶದ ಹುಡುಗಿಯರಿಗಿಂತ ಬೇಗ ಆಗುತ್ತಾರೆ.

ಪೋಷಕರು ಋತುಚಕ್ರದ ಬಗ್ಗೆ ಹೇಗೆ ಮಕ್ಕಳನ್ನು ಸಿದ್ಧಪಡಿಸಬೇಕು?:

ಪೋಷಕರು ಋತುಚಕ್ರದ ಬಗ್ಗೆ ಹೇಗೆ ಮಕ್ಕಳನ್ನು ಸಿದ್ಧಪಡಿಸಬೇಕು?:

ಮುಟ್ಟಿನ ಬಗ್ಗೆ ಗ್ರಾಮೀಣ ಭಾಗ ಅಥವಾ ನಗರ ಪ್ರದೇಶಗಳಲ್ಲಿ, ಒಟ್ಟಾರೆ ಭಾರತದ ಬಹುಪಾಲು ಭಾಗದಲ್ಲಿ ಮುಕ್ತವಾಗಿ ಮಾತನಾಡುವ ಹಾಗಿಲ್ಲ. 71% ಭಾರತೀಯ ಹುಡುಗಿಯರು ತಾವು ಮೊದಲು ಪಿರಿಯಡ್ಸ್ ಆಗುವವರೆಗೆ ಮುಟ್ಟಿನ ಬಗ್ಗೆ ತಿಳಿದಿರುವುದಿಲ್ಲ. ಜ್ಞಾನದ ಕೊರತೆಯಿಂದಾಗಿ ಋತುಸ್ರಾವವು ವಿವಿಧ ಮಾನಸಿಕ ಮತ್ತು ಧಾರ್ಮಿಕ ಅಡೆತಡೆಗಳಿಂದ ತುಂಬಿದೆ. ಋತುಚಕ್ರದ ಸಮಯದಲ್ಲಿ ನಿಜವಾಗಿ ಏನಾಗುತ್ತದೆ ಎಂದು ಅನೇಕ ಹುಡುಗಿಯರಿಗೆ ತಿಳಿದಿಲ್ಲ. ಮುಟ್ಟಿನ ಸಮಯದ ನೈರ್ಮಲ್ಯವು ಹೆಣ್ಣುಮಕ್ಕಳ ಜೀವನದ ಅತ್ಯಂತ ಪ್ರಮುಖ ಮತ್ತು ಅನಿವಾರ್ಯ ಭಾಗವಾಗಿದೆ. ಮುಟ್ಟಿನ ಸಮಯದಲ್ಲಿ ಅಸಮರ್ಪಕ ನೈರ್ಮಲ್ಯವು ಸೋಂಕುಗಳಿಗೆ ಕಾರಣವಾಗಬಹುದು.

ಅದಕ್ಕಾಗಿ ಪೋಷಕರು ಅದರಲ್ಲೂ ತಾಯಿಯಾದವಳು ಹೆಣ್ಣುಮಕ್ಕಳು ಋತುಮತಿ ಆಗುವ ಮೊದಲು ಅದರ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಿ ಮತ್ತು ಅದರ ಬಗ್ಗೆ ಕೇವಲ ಒಂದು ಬಾರಿ ಅಲ್ಲ, ಆಗಾಗ್ಗೆ ಮಾತನಾಡಿ. ಮುಟ್ಟು ಎಂದರೇನು, ಅದು ಯಾವಾಗ ಪ್ರಾರಂಭವಾಗುತ್ತದೆ, ಅದು ನೋವುಂಟು ಮಾಡುತ್ತದೆಯಾ, ಅದು ಎಷ್ಟು ಕಾಲ ಇರುತ್ತದೆ, ಮುಟ್ಟಿನ ನೈರ್ಮಲ್ಯ ವಿಧಾನಗಳು ಕುರಿತು ಅವರಿಗೆ ಪ್ರಾಯೋಗಿಕ ಸಲಹೆ ನೀಡಿ. ಮುಟ್ಟಿನ ಉತ್ಪನ್ನಗಳನ್ನು ಸೂಕ್ತವಾಗಿ ಮತ್ತು ಆರೋಗ್ಯಕರವಾಗಿ ಬದಲಾಯಿಸುವ ಬಗ್ಗೆ ಅವರಿಗೆ ತಿಳಿಸಿ.

​ಮುಟ್ಟಿನ ನೈರ್ಮಲ್ಯಕ್ಕಾಗಿ ಸಲಹೆಗಳು:

​ಮುಟ್ಟಿನ ನೈರ್ಮಲ್ಯಕ್ಕಾಗಿ ಸಲಹೆಗಳು:

ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರು ಉತ್ತಮವಾದ ಪ್ಯಾಡ್, ಟ್ಯಾಂಪ್ಯೂ ಅಥವಾ ಕಪ್ ಅನ್ನು ಬಳಸಬೇಕು. ಜೊತೆಗೆ ಸರಿಯಾಗಿ ವಿಲೇವಾರಿ ಮಾಡಬೇಕು. ಅದು ರಕ್ತವನ್ನು ಹೀರಿಕೊಳ್ಳಲು ಅಥವಾ ಸಂಗ್ರಹಿಸಲು ಅವಕಾಶ ಮಾಡಿಕೊಡುತ್ತದೆ. ಮುಟ್ಟಿನ ಅವಧಿ ಮುಗಿಯುವವರೆಗೆ ಸಾಕಷ್ಟು ಬಾರಿ ಸೋಪು ಮತ್ತು ನೀರನ್ನು ತೊಳೆಯಲು ಬಳಸಿ.

Read more about: babies health kids parenting tips
English summary

Average Age of First Menstruation and How Parents Should Handle it in Kannada

Here we talking about Average age of first menstruation and how parents should handle it in kannada, read on
Story first published: Saturday, June 5, 2021, 15:15 [IST]
X
Desktop Bottom Promotion