For Quick Alerts
ALLOW NOTIFICATIONS  
For Daily Alerts

ಮಕ್ಕಳಾದ ಮೇಲೆ ಪ್ರತಿಯೊಂದು ಚಿಕ್ಕ ಕುಟುಂಬ ಎದುರಿಸುವ ಸವಾಲುಗಳಿವು

|

ನೀವು ಇರುವ ಒಂದು-ಎರಡು ಮಕ್ಕಳನ್ನು ಸಾಕಲು ಕಷ್ಟಪಡುತ್ತೀರಿ, ನಮ್ಮ ಕಾಲದಲ್ಲಿ ಏಳೆಂಟು ಮಕ್ಕಳು ಇರುತ್ತಿದ್ದರು, ನಮಗೆ ಅವರೆಲ್ಲಾ ಹೇಗೆ ಬೆಳೆದು ದೊಡ್ಡವರಾದೆವು ಎಂದು ಗೊತ್ತೇ ಆಗಲಿಲ್ಲ ಎಂದು ಮನೆಯ ಹಿರಿಯರು ಈಗೀನ ಪೋಷಕರನ್ನು ನೋಡಿ ಹೇಳುವುದುಂಟು. ಅವರು ಹೇಳುವುದನ್ನು ಕೇಳುವಾಗ ಹೌದೆಲ್ಲಾ... ಅವರು ಹೇಗೆ ಅಷ್ಟು ಮಕ್ಕಳನ್ನು ಸಾಕಿದರು, ನಮಗೆ ಇಬ್ಬರನ್ನು ನೋಡಿಕೊಳ್ಳುವಷ್ಟರಲ್ಲಿ ಸುಸ್ತಾಗಿ ಬಿಡುತ್ತಿದ್ದೇವೆ ಎಂದು ಈಗೀನ ಪೋಷಕರು ಅಂದುಕೊಳ್ಳುವುದುಂಟು.

ಮಕ್ಕಳನ್ನು ಹಿಂದಿನ ಕಾಲದಲ್ಲಿ ಸಾಕಿರುವುದಕ್ಕೂ, ಈಗೀನ ಕಾಲದಲ್ಲಿ ಸಾಕುತ್ತಿರುವುದಕ್ಕೂ ತುಂಬಾ ವ್ಯತ್ಯಾಸ ಉಂಟು, ಅದಕ್ಕೆ ಪ್ರಮುಖ ಕಾರಣ ಕುಟುಂಬ ವ್ಯವಸ್ಥೆ. ಹವದು ಹಿಂದೆ ಹೆಚ್ಚಾಗಿ ಕೂಡು ಕುಟುಂಬದಲ್ಲಿ ಬೆಳೆಯುತ್ತಿದ್ದರು. ಆದರೆ ಈಗ ಅಪ್ಪ-ಅಮ್ಮ, ಮಕ್ಕಳು ಇಷ್ಟೇ ಒಂದು ಕುಟುಂಬ, ಕೆಲವೇ ಕೆಲವು ಕುಟುಂಬಗಳಲ್ಲಿ ಮಾತ್ರ ಪೋಷಕರ ತಂದೆ-ತಾಯಿ ಜತೆಗಿರುತ್ತಾರೆ. ಈಗೀನ ಕುಟುಂಬ ವ್ಯವಸ್ಥೆ ಇದೆಯೆಲ್ಲಾ ಮಕ್ಕಳ ಬೆಳವಣಿಗೆ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ.

Common Problems That Nuclear Family facing

ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಅಂತೀವಿ, ಆದರೆ ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ನೋಡುವುದಾದರೆ ಕೂಡು ಕುಟುಂಬವೇ ಒಳ್ಳೆಯದು. ತಂದೆ-ತಾಯಿ ಮಕ್ಕಳು ಅಂತ ಚಿಕ್ಕ ಕುಟುಂಬದಲ್ಲಿ ಇರುವವರು ಈ ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತದೆ.

1. ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತದೆ

1. ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತದೆ

ಗಂಡ-ಹೆಂಡತಿ ಮಾತ್ರ ಇರುವಾಗ ಹೆಚ್ಚಿನ ಜವಾಬ್ದಾರಿಯಿಲ್ಲದೆ ಖುಷಿಯಾಗಿ ಇರುತ್ತಾರೆ, ಆದರೆ ಮಕ್ಕಳಾದಾಗ ಮಕ್ಕಳನ್ನು ಸಾಕುವ ನಿಟ್ಟಿನಲ್ಲಿ ಈ ದಂಪತಿ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ. ಇನ್ನು ಗಂಡ-ಹೆಂಡತಿ ಹೊರಗಡೆ ದುಡಿಯುತ್ತಿದ್ದರೆ ಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ಕಷ್ಟವಾಗುವುದು. ಬೇಬಿ ಕೇರ್‌ಗಳಲ್ಲಿ ಬಿಡಬೇಕಾಗುತ್ತದೆ, ಆದರೆ ಅಲ್ಲಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ, ಮಕ್ಕಳು ಸರಿಯಾದ ಸಮಯದಲ್ಲಿ ಆಹಾರ ಸೇವಿಸುತ್ತಿದ್ದಾರೆಯೇ ಎಂಬ ಆತಂಕ ಇದ್ದೇ ಇರುತ್ತದೆ. ಇನ್ನು ಮನೆಯಲ್ಲಿಯೇ ಇರುವವರಿಗೇನು ಸಮಸ್ಯೆ ಇಲ್ಲದೆ ಇರುವುದಿಲ್ಲ, ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಪಕ್ಕದ ಮನೆಯವರೂ ಪರಿಚಯವಿರುವುದಿಲ್ಲ. ಮಕ್ಕಳು ಅಪ್ಪ-ಅಮ್ಮನ ಜತೆ ಮಾತ್ರ ಮಾತನಾಡುವುದು, ಆಟ ಆಡುವುದು ಮಾಡುತ್ತವೆ, ಇದರಿಂದ ಮನೆಯಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಸಹಾಯಕ್ಕೆ ಯಾರನ್ನಾದರೂ ಕರೆಯೋಣ ಎಂದರೆ ಎಲ್ಲರೂ ಪರಿಚಿತರೇ. ಅದೇ ಮನೆಯಲ್ಲಿ ಅಜ್ಜ-ಅಜ್ಜಿ ಇದ್ದರೆ ಮಕ್ಕಳು ಅವರ ಜತೆ ಆಡುತ್ತಾ ಖುಷಿ-ಖುಷಿಯಾಗಿ ಇರುತ್ತವೆ, ಅವರನ್ನು ಬೆಳೆಸುವುದು ಕಷ್ಟವಾಗುವುದೇ ಇಲ್ಲ.

2. ಮಕ್ಕಳಲ್ಲಿ ಒಂಟಿತನ ಬೆಳೆಯುತ್ತದೆ

2. ಮಕ್ಕಳಲ್ಲಿ ಒಂಟಿತನ ಬೆಳೆಯುತ್ತದೆ

ಕೂಡು ಕುಟುಂಬದಲ್ಲಿ ಮಕ್ಕಳಿಗೆ ಒಂಟಿತನದ ಅನುಭವವೇ ಆಗುವುದಿಲ್ಲ, ಯಾರಾದರೂ ಮಾತನಾಡಿಸುವುದು, ಆಡಿಸುವುದು ಮಾಡುತ್ತಾರೆ, ಇನ್ನು ಮನೆಯಲ್ಲಿ ಇತರ ಮಕ್ಕಳಿರುತ್ತಾರೆ, ಅವರ ಜತೆ ಆಡುತ್ತಾ ಮಕ್ಕಳು ಬೆಳೆಯುತ್ತಾರೆ. ಆದರೆ ನಗರ ಪ್ರದೇಶದಲ್ಲಿ ಒಂದೇ ಮಗುವಿದ್ದರಂತೂ ಆ ಮಗುವಿಗೆ ತುಂಬಾ ಒಂಟಿತನ ಕಾಡುವುದು. ಟಿವಿ, ಲ್ಯಾಪ್‌ಟಾಪ್‌, ಮೊಬೈಲ್‌ ಈ ರೀತಿಯ ವಸ್ತುಗಳೇ ಅದರ ಆಟಿಕೆಯಾಗುತ್ತದೆ, ಮಕ್ಕಳು ತಮ್ಮ ಮನಸ್ಸಿನ ಭಾವನೆ ಹಂಚಿಕೊಳ್ಳಲು ಯಾರೂ ಇಲ್ಲದೆ ಒಂಟಿತನ ಕಾಡಲಾರಂಭಿಸುತ್ತದೆ. ಅದೇ ಮನೆಯಲ್ಲಿ ಅಜ್ಜಿ-ಅಜ್ಜ ಇದ್ದರೆ ಮಕ್ಕಳಿಗೆ ಈ ರೀತಿಯ ಒಂಟಿತನ ಕಾಡಲು ಬಿಡುವುದೇ ಇಲ್ಲ.

3. ಹಬ್ಬ-ಹರಿದಿನಗಳ ಸಂಭ್ರಮವೂ ಇರಲ್ಲ

3. ಹಬ್ಬ-ಹರಿದಿನಗಳ ಸಂಭ್ರಮವೂ ಇರಲ್ಲ

ಚಿಕ್ಕ ಕುಟುಂಬದಲ್ಲಿ ಹಬ್ಬ ಆಚರಿಸುವ ಸಂಭ್ರಮಕ್ಕೂ, ದೊಡ್ಡ ಕುಟುಂಬದಲ್ಲಿ ಹಬ್ಬ ಆಚರಿಸುವ ಸಂಭ್ರಮಕ್ಕೂ ತುಂಬಾ ವ್ಯತ್ಯಾಸ ಇರುತ್ತದೆ. ಚಿಕ್ಕ ಕುಟುಂಬದಲ್ಲಿ ಹಬ್ಬದ ಅಡುಗೆ ಮಾಡಿ, ಹೊಸ ಬಟ್ಟೆ ತೊಡಿಸಿದರೂ ಮಗುವಿಗೆ ಹೆಚ್ಚು ಸಂಭ್ರಮವಾಗುವುದಿಲ್ಲ, ಅದೇ ಕೂಡು ಕುಟುಂಬದಲ್ಲಿ ವಾರಕ್ಕೆ ಮುಂಚೆಯೇ ಹಬ್ಬದ ಸಂಭ್ರಮ ಕಳೆಗಟ್ಟಿರುತ್ತದೆ. ಮಕ್ಕಳಿಗೆ ಹಬ್ಬದ ವಿಶೇಷತೆ, ಆಚರಣೆ, ಮಹತ್ವ ತಿಳಿಯಬೇಕೆಂದರೆ ಊರಲ್ಲಿ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುವುದೇ ಒಳ್ಳೆಯದು.

4. ಭಾವನಾತ್ಮಕವಾಗಿ ಯಾರ ಬೆಂಬಲವೂ ಸಿಗುವುದಿಲ್ಲ

4. ಭಾವನಾತ್ಮಕವಾಗಿ ಯಾರ ಬೆಂಬಲವೂ ಸಿಗುವುದಿಲ್ಲ

ಮಕ್ಕಳು ಚಿಕ್ಕವರು ಇರುವಾಗ ಅವರನ್ನು ನೋಡಿಕೊಳ್ಳಲು ಯಾರಾದರೂ ಜತೆಗಿದ್ದರೆ ತುಂಬಾ ನೆಮ್ಮದಿ ಸಿಗುವುದು. ಇನ್ನು ದುಡಿಯುವ ದಂಪತಿಗೆ ಮನೆಯಲ್ಲಿ ಪೋಷಕರು ಇದ್ದರೆ ಬಾವನಾತ್ಮಕವಾದ ಬೆಂಬಲ ಸಿಗುವುದು, ಇದರಿಂದ ಮನಸ್ಸಿನ ಒತ್ತಡ ತುಂಬಾ ಕಡಿಮೆಯಾಗುತ್ತದೆ. ಅದೇ ಚಿಕ್ಕ ಕುಟುಂಬ ಇದ್ದರೆ ಮಕ್ಕಳ ಸಮಪೂರ್ಣ ಜವಾಬ್ದಾರಿ ಅವರಿಬ್ಬರ ಮೇಲೆ ಇರುತ್ತದೆ, ನಿದ್ದೆ, ವಿಶ್ರಾಂತಿ ಎನ್ನುವುದು ಮರೆತು ಹೋಗುತ್ತದೆ, ಇನ್ನು ದಂಪತಿ ನಡುವೆ ಏನಾದರೂ ಜಗಳ ನಡೆದರೆ ಅವರಿಬ್ಬರಿಗೆ ತಿಳುವಳಿಕೆ ಹೇಳಲು ಮನೆಯಲ್ಲಿ ಹಿರಿಯರು ಬೇಕು. ತಾವು, ತಮ್ಮ ಮಕ್ಕಳು ಅಂತ ಇದ್ದರೆ ಯಾವುದೇ ಭಾವನಾತ್ಮಕವಾದ ಬೆಂಬಲ ಸಿಗದೆ ಮಾನಸಿಕ ಒತ್ತಡ ಅಧಿಕವಾಗುವುದು.

5. ನಿರ್ಲಕ್ಷ್ಯ ಮಾಡಿದಂತೆ ಅನಿಸುವುದು

5. ನಿರ್ಲಕ್ಷ್ಯ ಮಾಡಿದಂತೆ ಅನಿಸುವುದು

ಮಕ್ಕಳನ್ನು ನೋಡಿ ಕೊಳ್ಳುವುದು, ಮನೆ ಕೆಲಸ ಅಂತ ಹೆಂಡತಿ ಬ್ಯುಸಿಯಾದರೆ ಗಂಡನಿಗೆ ಹೆಂಡತಿ ನನ್ನ ನಿರ್ಲಕ್ಷ್ಯ ಮಾಡುತ್ತಿದ್ದಾಳೆ ಅನಿಸಬಹುದು. ಇನ್ನು ಗಂಡ ಎಲ್ಲಾದರೂ ಆಕೆಗೆ ಮನೆ ಕೆಲಸ, ಮಕ್ಕಳ ನಿರ್ವಹಣೆಗೆ ಸಹಾಯ ಮಾಡದಿದ್ದರೆ ಆತನಿಗೆ ಈಗ ಪ್ರೀತಿಯೇ ಇಲ್ಲ, ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದು ಅನಿಸಬಹುದು. ಇಬ್ಬರಲ್ಲಿ ಈ ರೀತಿಯ ಭಾವನೆ ಮೂಡಿದರೆ ಕೌಟಂಬಿಕ ಕಲಹ ಉಂಟಾಗುವುದು.

ಆದರೆ ಈ ರೀತಿಯ ಸಮಸ್ಯೆಗಳು ಉಂಟಾದಾಗ ಯಾರಾದರೂ ಸರಿಯಾದ ಮಾರ್ಗದರ್ಶನ ನೀಡಿದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮನೆ ಕೆಲಸದಲ್ಲಿ ಅಥವಾ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಗಂಡನೂ ಸ್ವಲ್ಪ ಜವಾಬ್ದಾರಿ ತೆಗೆದುಕೊಂಡರೆ ಹೆಂಡತಿಗೆ ಗಂಡ ನನ್ನ ನಿರ್ಲಕ್ಷ್ಯ ಮಾಡುತ್ತಿದ್ದಾನೆ ಎಂದು ಅನಿಸುವುದಿಲ್ಲ.

6. ಹಣಕಾಸಿನ ತೊಂದರೆ

6. ಹಣಕಾಸಿನ ತೊಂದರೆ

ಮಧ್ಯಮವರ್ಗದವರಲ್ಲಿ ಮಕ್ಕಳಾದ ಮೇಲೆ ಇಬ್ಬರು ಹೊರಗಡೆ ದುಡಿಯಲು ಹೋದರೆ ಮಕ್ಕಳನ್ನು ನೋಡಿಕೊಳ್ಳುವುದು ಯಾರು ಎಂಬ ಸಮಸ್ಯೆ ಉಂಟಾಗಬಹುದು, ಅದಕ್ಕಾಗಿ ಹೆಂಡತಿ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಾ ಇದ್ದು, ಗಂಡ ಮಾತ್ರ ದುಡಿಯುತ್ತಿದ್ದರೆ ಬಾಡಿಗೆ, ಮಕ್ಕಳ ಖರ್ಚು, ಆಸ್ಪತ್ರೆ ಖರ್ಚು ಅಂತೆಲ್ಲಾ ಬಂದಾಗ ಹಣಕಾಸಿನ ತೊಂದರೆ ಉಂಟಾಗಬಹುದು. ಇಲ್ಲಿ ಮನೆ ನಿರ್ವಹಣೆಗೆ ಬೇರೆ ಯಾರೂ ಸಹಾಯಕ್ಕೆ ಬರುವುದಿಲ್ಲ. ಅದೇ ಕೂಡು ಕುಟುಂಬದಲ್ಲಿ ಈ ರೀತಿಯ ಹಣಕಾಸಿನ ತೊಂದರೆ ಬಂದರೆ ನಿಭಾಯಿಸುವುದು ಕಷ್ಟವಾಗುವುದಿಲ್ಲ.

7. ಕೆಲಸ ಅಧಿಕವಿರುತ್ತದೆ

7. ಕೆಲಸ ಅಧಿಕವಿರುತ್ತದೆ

ಕೂಡು ಕುಟುಂಬದಲ್ಲಿ ಕೆಲಸ ಅಧಿಕವಿದ್ದರೂ ಎಲ್ಲರೂ ಸೇರಿ ಮಾಡುವಾಗ ಬೇಗ ಮುಗಿಯುತ್ತದೆ, ಅದೇ ಚಿಕ್ಕ ಕುಟುಂಬದಲ್ಲಿ ಎಲ್ಲಾ ಕೆಲಸ ಒಬ್ಬರೇ ಮಾಡಬೇಕಾಗಿ ಬರುವುದರಿಂದ ಕೆಲಸದ ಒತ್ತಡ ಅಧಿಕವಾಗುವುದು. ಕೂಡು ಕುಟುಂಬದಲ್ಲಿ ಎಷ್ಟೇ ಕೆಲಸವಿದ್ದರೂ ಮಕ್ಕಳನ್ನು ಮೆನೆಯವರು ನೋಡಿಕೊಳ್ಳುವುದರಿಂದ ಹೆಚ್ಚು ಚಿಂತೆಯಾಗುವುದಿಲ್ಲ, ಅದರೆ ಗಂಡ-ಹೆಂಡತಿ ಮಕ್ಕಳು ಮಾತ್ರವಿರುವ ಕುಟುಂಬದಲ್ಲಿ ಗಂಡ ಹೊರಗಡೆ ದುಡಿಯಲು ಹೋದಾಗ ಮಕ್ಕಳನ್ನು ನಿಭಾಯಿಸುತ್ತಾ ಮನೆ ಕೆಲಸ ಮುಗಿಸುವುದು ಸುಲಭದ ಕೆಲಸವಲ್ಲ, ಇದರಿಂದ ಕೆಲವೊಮ್ಮೆ ಸಿಟ್ಟು, ಹತಾಶೆ ಉಂಟಾಗಬಹುದು.

 8. ಸುರಕ್ಷತೆ ಪ್ರಶ್ನೆ ಮೂಡುತ್ತದೆ

8. ಸುರಕ್ಷತೆ ಪ್ರಶ್ನೆ ಮೂಡುತ್ತದೆ

ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಪಕ್ಕದ ಅಂಗಡಿಗೂ ಹೋಗಿ ಬರಲು ಸಾಧ್ಯವಾಗುವುದಿಲ್ಲ. ಮಕ್ಕಳು ಎಲ್ಲಿ ಆಡುತ್ತಾರೆ, ಏನು ಮುಟ್ಟುತ್ತಾರೆ, ಹೊರಗಡೆ ಆಡಲು ಹೋದರೆ ಯಾರ ಜತೆ ಆಡುತ್ತಾರೆ ಹೀಗೆ ಪ್ರತಿಯೊಂದು ವಿಷಯದಲ್ಲಿ ಕಣ್ಣಿಟ್ಟರಬೇಕು, ಮನೆಯಲ್ಲಿ ಹಿರಿಯರು ಇದ್ದರೆ ಅವರು ಮಕ್ಕಳನ್ನು ನೋಡಿಕೊಳ್ಳುತ್ತಾರೆ, ಅದರೆ ಚಿಕ್ಕ ಕುಟುಂಬದಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಬೇಕಾಗುತ್ತದೆ.

ಇನ್ನು ಮಕ್ಕಳನ್ನು ಒಂಟಿಯಾಗಿ ಬಿಟ್ಟು ಎಲ್ಲಿಗೂ ಹೋಗಲು ಸಾಧ್ಯವಿಲ್ಲ, ಹೋದ ಕಡೆಯೆಲ್ಲಾ ಕರೆದುಕೊಂಡು ಹೋಗಬೇಕು, ಇನ್ನು ಮಕ್ಕಳ ಪೋಷಕರನ್ನು ಹೆಚ್ಚು ಅವಲಂಭಿಸಿ ಇರುವುದರಿಂದ ಅವರಲ್ಲಿ ಸ್ವತಂತ್ರವಾಗಿ ಬೆಳೆಯುವ ಗುಣ ಕಡಿಮೆಯಾಗುವುದು. ಅದೇ ಹಳ್ಳಿಯ ಶಾಲೆಯ ಮಕ್ಕಳನ್ನು ನೊಡಿ, ಶಾಲೆಗೆ ಅವರೇ ಹೋಗಿ ಬರುತ್ತಾರೆ, ಆದರೆ ನಗರ ಪ್ರದೇಶದಲ್ಲಿ ಮಕ್ಕಳು ಹೈಸ್ಕೂಲ್‌ ತಲುಪಿದರೂ ಪೋಷಕರಿಗೆ ಭಯ ತಪ್ಪಿದ್ದಲ್ಲ.

English summary

8 Common Problems That Nuclear Family facing

Due to the changing needs of urban lifestyle, many opt for nuclear families, but it also has its own set of pros and cons. We have listed some common problems that have made people living in nuclear families face.
Story first published: Monday, November 18, 2019, 17:48 [IST]
X
Desktop Bottom Promotion