Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
ಮಕ್ಕಳನ್ನು ಅಜ್ಜಅಜ್ಜಿ ಜತೆ ಹೆಚ್ಚಾಗಿ ಸಮಯ ಕಳೆಯಲು ಬಿಡಿ-ಯಾಕೆ ಗೊತ್ತೇ?
ಮಕ್ಕಳ ಪರೀಕ್ಷೆಯು ಮುಗಿದು ಇನ್ನು ಬೇಸಿಗೆ ರಜಾ ಆರಂಭ ಆಗುವ ಸಮಯ ಬಂದಿದೆ. ಮಕ್ಕಳು ಇನ್ನು ಬೇಸಿಗೆ ಶಿಬಿರಗಳಲ್ಲಿ ಕಳೆದುಹೋಗಲಿದ್ದಾರೆ. ಹಿಂದೆ ಬೇಸಿಗೆ ರಜಾ ಸಿಕ್ಕಿದ ಕೂಡಲೇ ಅಜ್ಜಿ ಮನೆಗೆ ಮಕ್ಕಳನ್ನು ಕಳುಹಿಸಿ ಕೊಡುವಂತಹ ಸಂಪ್ರದಾಯವಿತ್ತು. ಆದರೆ ಇಂದಿನ ದಿನಗಳಲ್ಲಿ ಬೇಸಿಗೆಯಲ್ಲೂ ಮಕ್ಕಳಿಗೆ ಆರಾಮವಿಲ್ಲ. ಬೇಸಿಗೆ ಶಿಬಿರ, ಆ ತರಗತಿ, ಈ ತರಗತಿ ಎಂದು ಮಕ್ಕಳ ತಲೆ ಮೇಲೆ ಸಾಕಷ್ಟು ಹೊರ ಹಾಕಿಬಿಡುವರು. ತಮ್ಮಿಂದ ಆಗದನ್ನು ಮಕ್ಕಳಾದರೂ ಮಾಡಲಿ ಎನ್ನುವುದು ಪೋಷಕರ ಬಯಕೆ. ಆದರೆ ಮಕ್ಕಳಿಗೆ ಇದು ಇಷ್ಟವಿದೆಯೋ ಇಲ್ಲವೋ ಎನ್ನುವುದು ಮಾತ್ರ ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಇದರಿಂದಾಗಿಯೇ ಮಕ್ಕಳು ಮಾನಸಿಕವಾಗಿ ಕೆಲವೊಂದು ಸಲ ಕುಸಿದು ಹೋಗುವರು.
ಹಿಂದೆ ಅವಿಭಕ್ತ ಕುಟುಂಬವಿದ್ದ ಕಾರಣ ಮನೆಯಲ್ಲಿ ಸಾಕಷ್ಟು ಜನರು ಇರುತ್ತಿದ್ದರು. ಅದರಲ್ಲೂ ಅಜ್ಜಅಜ್ಜಿ ಮಕ್ಕಳಿಗೆ ತುಂಬಾ ಇಷ್ಟವಾಗುತ್ತಿದ್ದರು. ಅವರೊಂದಿಗೆ ಹೆಚ್ಚಿನ ಕಾಲ ಕಳೆದು ಹಲವಾರು ನೀತಿ ಪಾಠಗಳು, ಜೀವನದ ಪಾಠಗಳನ್ನು ಕಲಿಯುತ್ತಿದ್ದರು. ಆದರೆ ಇಂದು ಅಂತಹ ಮನೆಗಳು ಕಾಣ ಸಿಗುವುದು ತುಂಬಾ ಕಡಿಮೆ. ಯಾಕೆಂದರೆ ಅಜ್ಜಅಜ್ಜಿ ಒಂದು ಕಡೆ, ಮಕ್ಕಳು ಮತ್ತೊಂದು ಕಡೆ ಇರುವರು. ಮಕ್ಕಳು ಅಜ್ಜಅಜ್ಜಿ ಜತೆಗೆ ಕಾಲ ಕಳೆಯುವುದು ಎಷ್ಟು ಅಗತ್ಯ ಎಂದು ವೈಜ್ಞಾನಿಕವಾಗಿ ನಡೆದ ಸಂಶೋಧನೆಯೊಂದು ಹೇಳಿದೆ. ಮಕ್ಕಳು ತಮ್ಮ ಅಜ್ಜಅಜ್ಜಿ ಜತೆಗೆ ಬೆಳೆದರೆ ಅದು ಅವರಿಗೆ ತುಂಬಾ ನೆರವಾಗುವುದು ಎಂದು ವಿಜ್ಞಾನವು ಹೇಳಿದೆ. ಈ ಬಗ್ಗೆ ನೀವು ತಿಳಿಯಿರಿ.

ಅಜ್ಜಅಜ್ಜಿಯಿಂದ ಸಿಗುವ ಪ್ರಶಂಸೆ
ಇಂದಿನ ದಿನಗಳಲ್ಲಿ ತಂದೆತಾಯಿ ಇಬ್ಬರು ಉದ್ಯೋಗ ಮಾಡುವರು. ಇದರಿಂದಾಗಿ ಮಕ್ಕಳನ್ನು ತಮ್ಮ ಕೆಲಸದವರ ಕೈಗೋ ಅಥವಾ ಬೇಬಿಸಿಟ್ಟಿಂಗ್ ನಲ್ಲಿ ಬಿಡುತ್ತಾರೆ. ಇವರು ನಿಜವಾಗಿಯೂ ಮಕ್ಕಳನ್ನು ನೋಡಿಕೊಳ್ಳುವರು. ಆದರೆ ನಾವು ಇವರ ಮೇಲೆ ಕಣ್ಣು ಮುಚ್ಚಿಕೊಂಡು ನಂಬಿಕೆ ಇಡುವಂತಿಲ್ಲ.
ಮಕ್ಕಳು ಎಲ್ಲಾ ಸಮಯದಲ್ಲಿ ತಮ್ಮ ಅಜ್ಜಅಜ್ಜಿ ಜತೆಗೆ ಇರುವುದು ದೊಡ್ಡ ಉಡುಗೊರೆ. ವೈಜ್ಞಾನಿಕವಾಗಿಯು ಮಕ್ಕಳು ತಮ್ಮ ಅಜ್ಜಅಜ್ಜಿ ಜತೆಗೆ ಕಾಲ ಕಳೆಯುವುದು ಎಷ್ಟು ಒಳ್ಳೆಯದು ಎಂದು ಹೇಳಲಾಗಿದೆ. ಇದನ್ನು ನೀವು ತಿಳಿಯಿರಿ.

ಚೇತರಿಕೆ
ತಮ್ಮ ಕುಟುಂಬದ ಇತಿಹಾಸದ ಬಗ್ಗೆ ಮಕ್ಕಳು ತುಂಬಾ ತಿಳಿದುಕೊಂಡಾಗ, ಅವರು ತಮ್ಮ ಭಾವನೆಗಳನ್ನು ಅಜ್ಜಅಜ್ಜಿಯ ಜತೆಗೆ ಹಂಚಿಕೊಳ್ಳುವರು. ಇವರು ತುಂಬಾ ಚೇತರಿಕೆ ಮತ್ತು ತೀಕ್ಷ್ಣ ಬುದ್ಧಿಯನ್ನು ಹೊಂದಿರುವರು. ಈ ವೇಳೆ ಅವರು ಬೇರೆ ಮಕ್ಕಳಿಗಿಂತ ಹೆಚ್ಚು ಜಾಣ ಹಾಗೂ ಪ್ರೌಢರಂತೆ ಕಾಣಿಸುವರು. ಯಾಕೆಂದರೆ ಇವರು ತಮ್ಮ ಕುಟುಂಬದ ಇತಿಹಾಸ ಮತ್ತು ಸಂಕಷ್ಟದ ಬಗ್ಗೆ ಕಲಿತಾಗ , ಸಮಸ್ಯೆಗಳ ವಿರುದ್ಧ ಹೋರಾಡುವುದು ಹೇಗೆ ಮತ್ತು ಅದರಿಂದ ಮರಳಿ ಬರುವುದು ಹೇಗೆ ಎಂದು ತಿಳಿಯುವರು.

ಒಳಗಡೆ ಬೆಂಬಲದ ವ್ಯವಸ್ಥೆ ನಿರ್ಮಾಣ
ಮಕ್ಕಳು ತಮ್ಮ ಅಜ್ಜಅಜ್ಜಿಯ ಜತೆಗೆ ಹೆಚ್ಚಿನ ಸಮಯ ಕಳೆಯುವ ವೇಳೆ ಅವರು ಭಾವನಾತ್ಮಕ ಹಾಗೂ ನಡವಳಿಕೆಯಲ್ಲಿ ಬರುವಂತಹ ಕೆಲವೊಂದು ಸಮಸ್ಯೆಗಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುವರು. ಇದರಿಂದಾಗಿ ಅವರು ಯಾವುದೇ ಆಘಾತದಿಂದ ಮೇಲೆದ್ದು ಬರಬಹುದು. ಆಕ್ಸ್ ಫರ್ಡ್ ಯೂನಿವರ್ಸಿಟಿಯು ಈ ಬಗ್ಗೆ ನಡೆಸಿರುವಂತಹ ಅಧ್ಯಯನವು ಇದನ್ನು ಸಾಬೀತು ಮಾಡಿದೆ.

ವಯಸ್ಸಾಗುವುದು
ಪ್ರತಿಯೊಬ್ಬರಿಗೂ ವಯಸ್ಸಾಗುವುದು ಮತ್ತು ಇದರ ಬಗ್ಗೆ ಭೀತಿ ಪಡಬೇಕಾಗಿರುವಂತಹ ಅಗತ್ಯವೇ ಇಲ್ಲ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ಅತೀ ಅಗತ್ಯವಾಗಿರುವುದು. ಆದರೆ ಮಕ್ಕಳಿಗೆ ಇಷ್ಟೊಂದು ಜಾಣ್ಮೆಯು ಇರುವುದಿಲ್ಲ ಮತ್ತು ತಮ್ಮ ಅಜ್ಜಅಜ್ಜಿಯ ಜತೆಗೆ ಅವರು ಸಮಯ ಕಳೆದರೆ ಆಗ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ತಮ್ಮ ಅಜ್ಜಅಜ್ಜಿಯ ಜತೆಗೆ ಕಾಲ ಕಳೆಯುವಂತಹ ಮಕ್ಕಳು ಭವಿಷ್ಯದಲ್ಲಿ ವಯಸ್ಸಾದವರೊಂದಿಗೆ ತುಂಬಾ ಗೌರವಯುತವಾಗಿ ನಡೆದುಕೊಳ್ಳುವರು ಎಂದು ಅಧ್ಯಯನಗಳು ಹೇಳಿವೆ.

ಅಜ್ಜಅಜ್ಜಿಗೂ ಇದರಿಂದ ಲಾಭ
ಅಜ್ಜಅಜ್ಜಿಯ ಜತೆಗೆ ಕಾಲ ಕಳೆಯುವುದು ಮಕ್ಕಳಿಗೆ ತುಂಬಾ ಒಳ್ಳೆಯದು. ಆದರೆ ಇದು ಬೇರೆ ರೀತಿಯಿಂದಲೂ ನೆರವಾಗುವುದು. ತಮ್ಮ ಮೊಮ್ಮಕ್ಕಳ ಜತಗೆ ಕಾಲ ಕಳೆಯುವಂತಹ ವಯೋವೃದ್ಧರು ಐದು ವರ್ಷ ಹೆಚ್ಚು ಕಾಲ ಬದುಕುವರು. ಇವರಲ್ಲಿ ಏಕಾಂಗಿತನ ಮತ್ತು ಆತಂಕದ ಸಮಸ್ಯೆಯು ಕಾಡುವುದಿಲ್ಲ ಎಂದು ವರದಿಗಳು ಹೇಳಿವೆ.

ಮಕ್ಕಳಿಗೂ ಖಿನ್ನತೆ ಕಾಡದು
ಅಜ್ಜಅಜ್ಜಿಯ ಜತೆಗೆ ಕಾಲ ಕಳೆಯುವಂತಹ ಮಕ್ಕಳು ಒಂದು ಭಾವನಾತ್ಮಕ ವ್ಯವಸ್ಥೆ ನಿರ್ಮಿಸಿಕೊಳ್ಳುವರು. ಅವರೊಂದಿಗೆ ಸ್ನೇಹ ಬೆಳೆಸುವರು ಮತ್ತು ಇದರಿಂದ ತಮ್ಮ ಸಣ್ಣ ವಯಸ್ಸಿನಲ್ಲಿ ಆಗಿರುವಂತಹ ಯಾವುದೇ ರೀತಿಯ ಮಾನಸಿಕ ಆಘಾತದಿಂದ ಮೇಲೆದ್ದು ಬರಲು ಅವರಿಗೆ ಸಾಧ್ಯವಾಗುವುದು. ಜೀವನದ ಸಲಹೆ ಹಾಗೂ ಅನ್ಯೋನ್ಯತೆ ಅನುಭವ ಪಡೆಯುವ ಜತೆಗೆ ಮಕ್ಕಳು ತಮ್ಮ ಅಜ್ಜಅಜ್ಜಿ ಜತೆಗೆ ಬೆಳೆದರೆ ಅವರಿಗೆ ಖಿನ್ನತೆಯು ಕಾಡುವುದಿಲ್ಲ.

ಸ್ಥಿರತೆ
ಬೆಳೆಯುತ್ತಿರುವಂತಹ ಮಕ್ಕಳಿಗೆ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಸ್ಥಿರತೆಯು ತುಂಬಾ ಮುಖ್ಯವಾಗಿ ಬೇಕಾಗಿರುವುದು. ತಂದೆತಾಯಿ ಇಬ್ಬರು ಉದ್ಯೋಗದಲ್ಲಿದ್ದರೆ ಆಗ ಅವರೊಂದಿಗೆ ಅಷ್ಟಾಗಿ ಮಾತುಕತೆ ನಡೆಸಲು ಸಾಧ್ಯವಾಗುವುದಿಲ್ಲ. ಈ ಅಂತರವನ್ನು ಅಜ್ಜಅಜ್ಜಿಯು ಕಡಿಮೆ ಮಾಡುವರು.
Most Read:ರಾತ್ರಿ ಮಲಗುವ ಮುನ್ನ ಈ ಫೇಸ್ ಮಾಸ್ಕ್ ಬಳಸಿ-ಬೆಳಿಗ್ಗೆ ಎದ್ದಾಗ ಮುಖ ಇನ್ನಷ್ಟು ಸುಂದರವಾಗಿ ಕಾಣುತ್ತೆ

ನೈತಿಕ ಮೌಲ್ಯಗಳು
ಮಕ್ಕಳಲ್ಲಿ ಮೊದಲಾಗಿ ನೈತಿಕ ಮೌಲ್ಯವನ್ನು ಕಲಿಸುವಂತಹ ಜವಾಬ್ದಾರಿಯು ಅವರ ಪೋಷಕರದ್ದಾಗಿರುವುದು. ಸಹಾನುಭೂತಿ ಮತ್ತು ದಯೆ ಬಗ್ಗೆ ಪೋಷಕರು ಮಕ್ಕಳಿಗೆ ಹೇಳಿಕೊಡಬೇಕು. ಆದರೆ ಈ ವಿಚಾರದಲ್ಲಿ ಅಜ್ಜಅಜ್ಜಿಯು ತುಂಬಾ ನೆರವಾಗುವರು. ಇವರು ಯಾವಾಗಲೂ ಬೆಂಬಲವಾಗಿ, ಪ್ರೀತಿ ಮತ್ತು ಪೋಷಣೆ ನೀಡುವರು. ಇದರೊಂದಿಗೆ ನೈತಿಕ ಮೌಲ್ಯಗಳು ಇರುವಂತಹ ಕಥೆ, ಸ್ವತಂತ್ರದ ಮಹತ್ವ ಹೇಳುವರು. ಇದರಿಂದ ಮಕ್ಕಳ ಜೀವನದ ಮೇಲೆ ಪ್ರಭಾವ ಬೀರುವುದು. ಅಜ್ಜಅಜ್ಜಿಯ ಜತೆಗೆ ಇದ್ದರೆ ಮಕ್ಕಳು ತುಂಬಾ ಸುಂದರ, ಗೌರವಯುತವಾಗಿ ಬೆಳೆಯುವರು. ಇದರಿಂದ ನೀವು ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸಿಕೊಡುವ ಬದಲು ಅವರನ್ನು ಅಜ್ಜಅಜ್ಜಿಯೊಂದಿಗೆ ಸಮಯ ಕಳೆಯಲು ಬಿಡಿ. ಇದರಿಂದ ಮಕ್ಕಳು ಖಂಡಿತವಾಗಿಯೂ ಭವಿಷ್ಯದಲ್ಲಿ ಒಬ್ಬ ಒಳ್ಳೆಯ ಪ್ರಜೆಯಾಗುವರು.



Click it and Unblock the Notifications











