For Quick Alerts
ALLOW NOTIFICATIONS  
For Daily Alerts

ಮಕ್ಕಳ ಎತ್ತರದ ಚಿಂತೆಯೇ? ಇಲ್ಲಿದೆ ಸಿಂಪಲ್ ಜ್ಯೂಸ್!

By Manu
|

ತಮ್ಮ ಮಕ್ಕಳು ಅತ್ಯುತ್ತಮ ಆರೋಗ್ಯ ಹೊಂದಿರಬೇಕು ಎಂದು ಪ್ರತಿ ತಂದೆತಾಯಿಯರೂ ಬಯಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಮಗುವಿಗೆ ಎಲ್ಲವೂ ಅತ್ಯುತ್ತಮವಾದವು ಸಿಗಬೇಕೆಂದೂ ಅದಕ್ಕಾಗಿ ತಮ್ಮ ಸಾಮರ್ಥ್ಯ ಮೀರಿ ಖರ್ಚನ್ನೂ ಮಾಡುತ್ತಾರೆ. ಈ ಮನಃಸ್ಥಿತಿಯನ್ನು ಕಂಡುಕೊಂಡ ಸಂಸ್ಥೆಗಳು ಹಲವಾರು ಪೇಯಗಳನ್ನು ದುಬಾರಿಬೆಲೆಗೆ ಮಾರುಕಟ್ಟೆಗೆ ಪರಿಚಯಿಸಿವೆ. ಇದರಲ್ಲಿ ಮಕ್ಕಳ ಹಿಂದಿನ ಮತ್ತು ಇಂದಿನ ಎತ್ತರವನ್ನು ಹೋಲಿಸುವ ಚಿತ್ರಗಳಿದ್ದು ಹೆಚ್ಚಿನ ತಂದೆತಾಯಿಯರು ಈ ಚಿತ್ರಗಳಿಗೆ ಸೋಲುತ್ತಾರೆ.

ಆದರೆ ವಾಸ್ತವವಾಗಿ ಈ ದುಬಾರಿ ಪೇಯಗಳಲ್ಲಿರುವ ಸಾಮಾಗ್ರಿಗಳು ನಮ್ಮ ಅಡುಗೆ ಮನೆಯಲ್ಲಿ ಇರುವ ಸಾಮಾಗ್ರಿಗಳಿಗಿಂತ ಹೆಚ್ಚು ಭಿನ್ನವಾಗೇನೂ ಇರುವುದಿಲ್ಲ. ಆದರೆ ಯಾವ ಅಂಶ ಎಷ್ಟು ಎಂದು ನಮಗೆ ಗೊತ್ತಾಗಿರುವುದಿಲ್ಲ ಅಷ್ಟೇ.

Want To Make Your Kids Taller? Give Them This Homemade Drink!

ಒಂದು ವೇಳೆ ಇದು ಗೊತ್ತಾದರೆ ಎತ್ತರ ಹೆಚ್ಚಿಸುವ ಪೇಯವನ್ನು ಮನೆಯಲ್ಲಿಯೇ ಸುಲಭದರದಲ್ಲಿ ತಯಾರಿಸಿಬಿಡಬಹುದು. ಇಂತಹ ಒಂದು ಫಲಪ್ರದ, ಮನೆಯಲ್ಲಿಯೇ ತಯಾರಿಸಬಹುದಾದ ಪೇಯವನ್ನು ಇಂದು ಪ್ರಸ್ತುತಪಡಿಸಲಾಗುತ್ತಿದ್ದು ಇದರಿಂದ ಮಕ್ಕಳಿಗೆ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಮಕ್ಕಳಿಗಾಗಿ ಟಾಪ್ 6 ಆರೋಗ್ಯಕರ ಮಿಲ್ಕ್‌ಶೇಕ್‌ಗಳು

ಇದರಲ್ಲಿ ಪ್ರಮುಖವಾದುದೆಂದರೆ ಮಕ್ಕಳ ಎತ್ತರ ಶೀಘ್ರವಾಗಿ ಬೆಳೆಯುವುದು. ಅದರಲ್ಲೂ ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ತೋರಿದರೆ ಇವರ ಎತ್ತರವನ್ನು ಪರಿಗಣಿಸಿ ಉತ್ತಮ ಸ್ಥಾನ ದೊರಕಬಹುದು ಹಾಗೂ ಮಕ್ಕಳ ದೇಹದಾರ್ಢ್ಯವೂ ಉತ್ತಮಗೊಳ್ಳುವುದು ಮಾತ್ರವಲ್ಲದೇ ಆತ್ಮವಿಶ್ವಾಸವೂ ಹೆಚ್ಚುವುದು.

ಯಾವುದೇ ಮಗುವಿನ ಎತ್ತರ ಆತನ ವಂಶವಾಹಿನಿಯನ್ನು ಬಲವಾಗಿ ಅವಲಂಬಿಸಿರುತ್ತದೆ. ಆದರೆ ಈ ಮೂಲಕ ಪಡೆಯಬಹುದಾಗಿದ್ದ ಎತ್ತರಕ್ಕೂ ಕೊಂಚ ಹೆಚ್ಚಿನ ಎತ್ತರವನ್ನು ಪಡೆಯಲು ಸಾಧ್ಯವಿದೆ. ಇದಕ್ಕಾಗಿ ಕೆಳಗಿನ ಪೇಯವನ್ನು ನಿಯಮಿತವಾಗಿ ಮಕ್ಕಳಿಗೆ ಕುಡಿಸುತ್ತಾ ಬಂದರೆ ಸಾಕು. ಬನ್ನಿ, ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ಕಲಿಯೋಣ:

ಅಗತ್ಯವಿರುವ ಸಾಮಾಗ್ರಿಗಳು:
*ಬೆಚ್ಚನೆಯ ಹಾಲು: ಒಂದು ಕಪ್
*ಬೇಯಿಸಿದ ಮೊಟ್ಟೆ : ಒಂದು
*ಜೇನು: ಒಂದು ದೊಡ್ಡ ಚಮಚ ಮಕ್ಕಳ ಬೆಳವಣಿಗಾಗಿ ಒಣ ಹಣ್ಣುಗಳ ಉಂಡೆ

ಹಾಲು, ಬೇಯಿಸಿದ ಮೊಟ್ಟೆ ಮತ್ತು ಜೇನು ಮೂರೂ ಸೇರಿದರೆ ಮಕ್ಕಳ ಎತ್ತರ ಹೆಚ್ಚಿಸುವ ಅದ್ಭುತ ಪೇಯ ತಯಾರಾಯಿತೆಂದೇ ಲೆಕ್ಕ. ಇದರಲ್ಲಿ ಅತಿಹೆಚ್ಚು ಪ್ರೋಟೀನುಗಳು, ವಿಟಮಿನ್ನುಗಳೂ ಇದ್ದು ಮಕ್ಕಳ ಎತ್ತರ

ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳುವಂತೆ ಮಾಡಲು ಜೇನು ನೆರವಾಗುತ್ತದೆ. ಇದರಿಂದ ಮಕ್ಕಳ ಎತ್ತರ ಹೆಚ್ಚುವ ಜೊತೆಗೇ ಮೂಳೆಗಳೂ ದೃಢವಾಗಿರುತ್ತವೆ.

ಅಲ್ಲದೇ ಮೊಟ್ಟೆಯಲ್ಲಿರುವ ಪ್ರೋಟೀನುಗಳು ಪ್ರತಿ ಜೀವಕೋಶ ಮತ್ತು ಅಂಗಾಂಶಗಳು ಬೇಗನೇ ವೃದ್ಧಿಗೊಳ್ಳಲು ಸಹಾಯ ಮಾಡುತ್ತವೆ. ಅಲ್ಲದೇ ಆರೋಗ್ಯಕರ ಮೂಳೆಗಳು ಮತ್ತು ಮೂಳೆಸಂಧಿಗಳು ಬೆಳೆಯುವಂತೆ ಮಾಡುತ್ತದೆ. ಜೇನು ಸಿಹಿಯಾಗಿರುವ ಕಾರಣ ಮಕ್ಕಳು ಈ ಹಾಲನ್ನು ಕುಡಿಯಲು ತಕರಾರನ್ನೂ ಮಾಡುವುದಿಲ್ಲ.

ಈ ಅದ್ಭುತ ಪೇಯವನ್ನು ತಯಾರಿಸುವ ವಿಧಾನ
1) ಮೊದಲು ಮಿಕ್ಸಿಯ ದೊಡ್ಡ ಜಾರ್‌ನಲ್ಲಿ ಹಾಲು ಮತ್ತು ಬೇಯಿಸಿದ ಮೊಟ್ಟೆಯನ್ನು ಕೊಂಚಹೊತ್ತು ಕಡೆದು ದಪ್ಪನೆಯ ದ್ರವವಾಗುವಂತೆ ಮಾಡಿ.


2) ಈ ದ್ರವವನ್ನು ಒಂದು ದೊಡ್ಡ ಲೋಟದಲ್ಲಿ ಸಂಗ್ರಹಿಸಿ ಈ ದ್ರವಕ್ಕೆ ಜೇನು ಸೇರಿಸಿ ಚೆನ್ನಾಗಿ ಕಲಕಿ.
3) ಈ ಪೇಯವನ್ನು ಪ್ರತಿದಿನ ಮುಂಜಾನೆಯ ಉಪಾಹಾರದ ನಂತರ ಕಾಫಿ ಟೀ ಬದಲಿಗೆ ಕುಡಿಯಲು ನೀಡಿ. ಕೆಲವೇ ದಿನಗಳಲ್ಲಿ ಇದರ ಪರಿಣಾಮವನ್ನು ಗಮನಿಸುತ್ತೀರಿ.
English summary

Want To Make Your Kids Taller? Give Them This Homemade Drink!

All parents want their children to have the best of everything. It is the same even when it comes to their children's health and physique! Most parents would want their kids to grow healthy, strong and also have a good height! Having an ideal height can be beneficial in many ways, above all, it makes the person look great! When a kid is taller than average, he/she can get involved in certain sports that require the players to come with a good height!
X
Desktop Bottom Promotion